ಸಾಮಾನ್ಯ ಪ್ರಶ್ನೆಗಳು
ALL POSTS
ಭಾರತೀಯ ಮುಸ್ಲಿಮರು ದೇಶದ್ರೋಹಿಗಳೇ?
ಭಾರತೀಯ ಮುಸ್ಲಿಮರು ದೇಶದ್ರೋಹಿಗಳು ಎಂದು ದ್ವೇಷ ಹರಡುವವರು ಮತ್ತು ಅಪಪ್ರಚಾರಕರು ಹೇಳುತ್ತಾರೆ. ದೇಶದ್ರೋಹಿಗಳ ನಿಜವಾದ ಪಟ್ಟಿಯನ್ನು ನೋಡಿದರೆ ನೀವು ಬೆಚ್ಚಿಬೀಳುತ್ತೀರಿ.
ಮುಸ್ಲಿಂ ರಾಷ್ಟ್ರಗಳಲ್ಲಿ ಹಿಂದೂಗಳ ಹಕ್ಕುಗಳು
ಮಲೇಷ್ಯಾ ಮತ್ತು ಇಂಡೋನೇಷ್ಯಾದಲ್ಲಿ ಮುಸ್ಲಿಮರು ಮತ್ತು ಹಿಂದೂಗಳು ಶಾಂತಿ ಮತ್ತು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಪ್ರಪಂಚದ ಕೆಲವು ಸುಂದರವಾದ ದೇವಾಲಯಗಳು ಮಲೇಷ್ಯಾ ಮತ್ತು ಇಂಡೋನೇಷ್ಯಾದಲ್ಲಿ ಕಂಡುಬರುತ್ತವೆ. ಮುಸ್ಲಿಂ ರಾಷ್ಟ್ರಗಳು ತಮ್ಮ ಮುಸ್ಲಿಮೇತರ ನಾಗರಿಕರಿಗೆ ಹಕ್ಕುಗಳು ಮತ್ತು ಸ್ವಾತಂತ್ರ್ಯ ನೀಡಿವೆ ಎಂದು ಇದು ಸ್ಪಷ್ಟವಾಗಿ ತೋರಿಸುತ್ತದೆ.
ಮುಸ್ಲಿಮರು ತಮ್ಮ ವಿರುದ್ಧ ಲಿಂಗದವರೊಂದಿಗೆ ಏಕೆ ಕೈಕುಲುಕುವುದಿಲ್ಲ?
ಶುಭಾಶಯ ಕೋರುವ ರೂಪಗಳು ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತವೆ. ಶುಭಾಶಯ ಕೋರುವ ಕ್ರಮ ವ್ಯಕ್ತಿಯು ಬೆಳೆದು ಬಂದ ರೀತಿ ಮತ್ತು ಅವರ ಸಂವೇದನೆಗಳ (ಸರಿ ತಪ್ಪು ಎನ್ನುವುದರ ಪರಿಚಯ) ಮೇಲೆ ಅವಲಂಬಿತವಾಗಿರುತ್ತದೆ. ಮುಸ್ಲಿಮರಿಗೆ, ಅವರ ಸಂವೇದನೆಗಳು ಅವರ ನಂಬಿಕೆಯಿಂದ ರೂಪುಗೊಂಡಿವೆ. ವಿದೇಶಿಯರು ನಮ್ಮನ್ನು ಅಭಿನಂದಿಸಿದಾಗ ನಮ್ಮ ಸಂವೇದನೆಯನ್ನು ಗೌರವಿಸಬೇಕೆಂದು ನಾವು ನಿರೀಕ್ಷಿಸುವಂತೆ, ನಾವು ಸಹ ನಮ್ಮ ಸಹ ಭಾರತೀಯರ ಸಂವೇದನೆಗಳನ್ನು ಗೌರವಿಸಬೇಕು.
ಮುಸ್ಲಿಮರು ಏಕೆ “ಪ್ರಸಾದ” ತಿನ್ನುವುದಿಲ್ಲ?
ಮುಸ್ಲಿಮರು ತಮ್ಮ ಸೈದ್ಧಾಂತಿಕ ನಿಲುವಿನಿಂದಾಗಿ "ಪ್ರಸಾದ" ತಿನ್ನುವುದಿಲ್ಲ. ಇದು ಮಾಂಸಾಹಾರವನ್ನು ತಿನ್ನಲು ನಿರಾಕರಿಸುವ ಸಸ್ಯಾಹಾರಿಗಳ ಸೈದ್ಧಾಂತಿಕ ನಿಲುವನ್ನು ಹೋಲುತ್ತದೆ. ಸಸ್ಯಾಹಾರಿಗಳಿಗೆ ಬಳಸುವ ಮಾನದಂಡ ಮತ್ತು ನೀಡುವ ಪರಿಗಣನೆಯನ್ನೇ ಮುಸ್ಲಿಮರಿಗೂ ಅನ್ವಯಿಸಬೇಕು.