ಸಾಕ್ರೆಟೀಸ್
ನಮ್ಮ ಬಗ್ಗೆ
ಸಾಕ್ರೆಟೀಸ್
ಶಾಂತಿ ದ್ವೀಪ – ಮಾನವೀಯತೆಯ ಕುರಿತ ಹಲವಾರು ವಿಷಯಗಳ ಬಗ್ಗೆ ಪ್ರಶ್ನೆಗಳು ಹಾಗೂ ಕಾಳಜಿ ಹೊಂದಿರುವ ಕುತೂಹಲಕಾರಿ ಮನಸ್ಸಿನ ಬಾಯಾರಿಕೆಯನ್ನು ನೀಗಿಸಲು ಮಾಹಿತಿಯನ್ನು ಪ್ರಸ್ತುತಪಡಿಸುವ ವೇದಿಕೆಯಾಗಿದೆ.
ತಿಳಿಯ ಬಯಸಿರಿ. ತಿಳಿಯಿರಿ. ಯೋಚಿಸಿರಿ – ಶಾಂತಿ ದ್ವೀಪ ಈ ಮೂರು ಅಡಿಪಾಯಗಳ ಮೇಲೆ ನಿಂತಿದೆ. ನಮ್ಮ ಉದ್ದೇಶ, ನಮ್ಮ ಸಹೋದರ ಸಹೋದರಿಯರಲ್ಲಿ ಜ್ಞಾನಾರ್ಜನೆಯ ಕುತೂಹಲ ಬೆಳೆಸಿ, ಅದನ್ನು ಅರ್ಥಮಾಡಿಕೊಂಡು ಅದರ ಬಗ್ಗೆ ಆಳವಾಗಿ ಮತ್ತು ತರ್ಕಬದ್ಧವಾಗಿ ಯೋಚಿಸುವಂತೆ ಪ್ರೋತ್ಸಾಹಿಸುವುದಾಗಿದೆ.
ವಿಭಿನ್ನ ಸಿದ್ಧಾಂತಗಳ ಜನರ ನಡುವೆ ಆಲೋಚನೆಗಳ ವಿನಿಮಯ ಶಾಂತಿ, ತಿಳುವಳಿಕೆ ಮತ್ತು ಸಹಿಷ್ಣುತೆಯ ವಾತಾವರಣವನ್ನು ಬೆಳೆಸುವಲ್ಲಿ ಪ್ರಮುಖವಾಗಿದೆ. ನಿಮಗೆ ಹಿಂದೆ ತಿಳಿದಿಲ್ಲದಂತಹ ಮಾಹಿತಿ, ಆಲೋಚನೆಗಳು ಮತ್ತು ದೃಷ್ಟಿಕೋನಗಳೊಂದಿಗೆ ನಿಮನ್ನು ಸಶಕ್ತರನ್ನಾಗಿ ಮಾಡುವ ವೇದಿಕೆ ನಮ್ಮದಾಗಿದೆ. ನಾವು ಹೇಳಿದ್ದನ್ನೆಲ್ಲ ನೀವು ಒಪ್ಪುವ ಅಗತ್ಯವಿಲ್ಲ, ಆದರೆ ನಮ್ಮ ದೃಷ್ಟಿಕೋನವನ್ನು ನೀವೂ ತಿಳಿದು, ಅರ್ಥಮಾಡಿಕೊಳ್ಳಲು ಪ್ರಯತ್ನಿಸಬಹುದು ಎಂದು ನಾವು ಭಾವಿಸುತ್ತೇವೆ.
ತಮಸೋ ಮಾ ಜ್ಯೋತಿರ್ಗಮಯ
ನನ್ನನ್ನು (ಸುಳ್ಳಿನ) ಕತ್ತಲೆಯಿಂದ ದೂರ ಮಾಡಿ, (ಸತ್ಯದ) ಬೆಳಕಿನ ಕಡೆಗೆ ನಡೆಯುವಂತೆ ಮಾಡು!
ಸುಳ್ಳು ಕತ್ತಲೆಯಂತೆ ಹಾಗೂ ಸತ್ಯ ಬೆಳಕಾಗಿದೆ. ಕತ್ತಲೆಯಲ್ಲಿ ನಾವು ಏನನ್ನೂ ಕಾಣಲಾಗುವುದಿಲ್ಲ. ನಮಗೆ ಕತ್ತಲೆಯಲ್ಲಿ ವಾಸ್ತವದ ಅನುಭವ ಸಾಧ್ಯವಿಲ್ಲ. ವಾಸ್ತವವನ್ನು ನೋಡಲು ಮತ್ತು ಅನುಭವಿಸಲು, ನಮಗೆ ಸತ್ಯದ ಬೆಳಕು ಬೇಕು. ಆದ್ದರಿಂದ ನಾವು ಸತ್ಯ ಎಂದು ತಿಳಿದಿರುವ ದೃಷ್ಟಿಕೋನದಿಂದ ಮಾಹಿತಿಯನ್ನು ಪ್ರಸ್ತುತಪಡಿಸಲು ಪ್ರಯತ್ನಿಸುತ್ತೇವೆ. ಈ ನಿಟ್ಟಿನಲ್ಲಿ ನಮ್ಮ ಸಹೋದರ ಸಹೋದರಿಯರ ನಡುವೆ ಭಿನ್ನಾಭಿಪ್ರಾಯ ಅಥವಾ ದ್ವೇಷ ಮೂಡದಂತೆ ನೋಡಿಕೊಳ್ಳುವುದು ನಮ್ಮ ಸತತ ಪ್ರಯತ್ನವಾಗಿರುತ್ತದೆ.
ಶಾಂತಿ ದ್ವೀಪದಲ್ಲಿ, ಕೇವಲ ಸತ್ಯದಿಂದ ಬೆಂಬಲಿತವಾದ ಮಾಹಿತಿಯನ್ನು ಪ್ರಸ್ತುತಪಡಿಸಲು ನಾವು ಬದ್ಧರಾಗಿದ್ದೇವೆ.

ಕುರಾನ್ ಅಧ್ಯಾಯ 39: ಸೂಕ್ತಿ 9