ಮುಸ್ಲಿಮರು ರಂಜಾನ್ ತಿಂಗಳಲ್ಲಿ ಏಕೆ ಉಪವಾಸವಿರುತ್ತಾರೆ?

ಇಸ್ಲಾಂ ಧರ್ಮದ ಐದು ಸ್ತಂಭಗಳಲ್ಲಿ ಉಪವಾಸವೂ ಒಂದು. ರಂಜಾನ್ ತಿಂಗಳಲ್ಲಿ ಮುಸ್ಲಿಮರು ಉಪವಾಸವಿರುತ್ತಾರೆ. ದೇವರು ಮಾನವಕುಲಕ್ಕೆ ಕುರಾನ್ ಅನ್ನು ಇಳಿಸಿದ ತಿಂಗಳೇ ರಂಜಾನ್. ಮುಸ್ಲಿಮರು ದೇವರಿಗೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಲು ಹಾಗೂ ತಾಳ್ಮೆ ಮತ್ತು ಧರ್ಮನಿಷ್ಠೆಯ ಉದಾತ್ತ ಗುಣಗಳನ್ನು ಸಾಧಿಸಲು ಉಪವಾಸದಲ್ಲಿ ತೊಡಗುತ್ತಾರೆ.

ವಿಷಯದ ಪರಿಚಯ

ಮುಸ್ಲಿಮರು ಉಪವಾಸವಿರುತ್ತಾರೆ, ಏಕೆಂದರೆ ಇದು ಇಸ್ಲಾಂ ಧರ್ಮದ ಐದು ಸ್ತಂಭಗಳಲ್ಲಿ ಒಂದಾಗಿದೆ. ಇಸ್ಲಾಂ ಧರ್ಮದ ಐದು ಸ್ತಂಭಗಳು ಹೀಗಿವೆ:

  1. ಎಲ್ಲರ ಹಾಗೂ ಎಲ್ಲದರ ಸೃಷ್ಟಿಕರ್ತನಾದ ದೇವರನ್ನು ಮಾತ್ರ ಪೂಜಿಸುವುದು ಮತ್ತು ದೇವರನ್ನು
  2. ದಿನಕ್ಕೆ ಐದು ಬಾರಿ ಪ್ರಾರ್ಥಿಸುವುದು
  3. ಬಡವರಿಗೆ ದಾನವಾಗಿ ಪಾವತಿಸಲು ತೆರಿಗೆಯನ್ನು ಕಟ್ಟುವುದು
  4. ಹಜ್ ಯಾತ್ರೆಯನ್ನು ನಿರ್ವಹಿಸುವುದು ಮತ್ತು
  5. ರಂಜಾನ್ ತಿಂಗಳಲ್ಲಿ ಉಪವಾಸವಿರುವುದು.

ರಂಜಾನ್ ಎಂದರೇನು ಮತ್ತು ಅದರ ವಿಶೇಷವೇನು?

ರಂಜಾನ್ ಇಸ್ಲಾಮಿ ಕ್ಯಾಲೆಂಡರ್‌ನಲ್ಲಿರುವ ಹನ್ನೆರಡು ತಿಂಗಳುಗಳಲ್ಲಿ ಒಂದಾಗಿದೆ. ದೇವರು ಮಾನವಕುಲಕ್ಕೆ ಕುರಾನ್ ಅನ್ನು ಇಳಿಸಿದ ತಿಂಗಳು ರಂಜಾನ್. ಮುಸ್ಲಿಮರು ರಂಜಾನ್ ತಿಂಗಳಲ್ಲಿ ದೇವರಿಗೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಲು ಮತ್ತು ತಾಳ್ಮೆ ಮತ್ತು ಧರ್ಮನಿಷ್ಠೆಯ ಉದಾತ್ತ ಗುಣಗಳನ್ನು ಸಾಧಿಸಲು ಉಪವಾಸವಿರುತ್ತಾರೆ.

ಕುರಾನ್ ಎಂದರೇನು?

ಕುರಾನ್ ಇಡೀ ಮಾನವಕುಲಕ್ಕೆ ದೇವರು ಕಳುಹಿಸಿದ ಅಂತಿಮ ಗ್ರಂಥವಾಗಿದೆ. ಕುರಾನ್ ಅನ್ನು ಪ್ರವಾದಿ ಮುಹಮ್ಮದ್ (ಅವರ ಮೇಲೆ ದೇವರ ವತಿಯಿಂದ ಶಾಂತಿ ಇರಲಿ) ರವರು ರಚಿಸಲಿಲ್ಲ. ಇಡೀ ಕುರಾನ್ ದೇವರ ನುಡಿಯಾಗಿದೆ, ಇದು ಪ್ರವಾದಿ ಮುಹಮ್ಮದ್ ರವರಿಗೆ ದೇವದೂತ ಗೇಬ್ರಿಯಲ್ ಮೂಲಕ ತಿಳಿಸಲಾಯಿತು. ಕಳೆದ 14 ಶತಮಾನಗಳಿಂದ ಕುರಾನ್ ಯಾವುದೇ ತಿದ್ದುಪಡಿಗಳು, ಸೇರ್ಪಡೆಗಳು ಅಥವಾ ಅಳಿಸುವಿಕೆಗಳಿಲ್ಲದೆ ಸ್ವಲ್ಪವೂ ಬದಲಾಗದೆ ಉಳಿದಿದೆ.

ಕುರಾನ್ ಮುಸ್ಲಿಮರಿಗೆ ಮಾತ್ರವೇ?

ಇಲ್ಲ! ಕುರಾನ್ ತನ್ನನ್ನು ತಾನು ಇಡೀ ಮಾನವಕುಲಕ್ಕೆ ದೇವರು ಕಳುಹಿಸಿದ ಮಾರ್ಗದರ್ಶನದ ಸಂದೇಶವಾಗಿ ಪರಿಚಯಿಸುತ್ತದೆ. ಒಳ್ಳೆಯದು ಮತ್ತು ಕೆಟ್ಟದ್ದನ್ನು ಗುರುತಿಸಲು ಕುರಾನ್ ನಮಗೆ ಸಹಾಯ ಮಾಡುತ್ತದೆ.

ಖಂಡಿತ, ಇದು (ಕುರಾನ್) ಇಡೀ ಜಗತ್ತಿಗೆ ಸಂದೇಶವಾಗಿದೆ!

ಕುರಾನ್ ಅಧ್ಯಾಯ 81: ಸೂಕ್ತಿ 27

ಕುರಾನ್ ಏನನ್ನು ಕಲಿಸುತ್ತದೆ?

ಕುರಾನ್ ನಮಗೆ ಮೂರು ಪ್ರಮುಖ ವಿಷಯಗಳನ್ನು ಕಲಿಸುತ್ತದೆ. ಅವುಗಳೇನೆಂದರೆ:

1. ನಮ್ಮ ಅಸ್ತಿತ್ವದ ಉದ್ದೇಶ

ನಮ್ಮ ಅಸ್ತಿತ್ವದ ಉದ್ದೇಶದ ಕುರಿತು ಕುರಾನ್ ಸಂದೇಶವನ್ನು ನಾಲ್ಕು ಅಂಶಗಳಲ್ಲಿ ಸರೆಹಿಡಿಯಬಹುದು. ಅವು:

  1. ನಮ್ಮೆಲ್ಲರ ಸೃಷ್ಟಿಕರ್ತನನ್ನು ಮಾತ್ರ ಪೂಜಿಸಿ ಹಾಗೂ ವಿಗ್ರಹಗಳು, ಚಿತ್ರಗಳು, ಸೂರ್ಯ, ನಕ್ಷತ್ರ, ಗ್ರಹಗಳು ಮುಂತಾದ ಸೃಷ್ಟಿಗಳನ್ನು ಪೂಜಿಸಬೇಡಿ
  2. ಯಾರನ್ನೂ ಅಥವಾ ಯಾವುದನ್ನೂ ದೇವರ ಸ್ಥಾನಕ್ಕೆ ಏರಿಸಬೇಡಿ.
  3. ದೇವರ ಅಸ್ತಿತ್ವವನ್ನು ಅಲ್ಲಗಳೆಯಬೇಡಿ.
  4. ದೇವರು ಕೊಟ್ಟ ಜೀವನ ಕ್ರಮವನ್ನು ಅನುಸರಿಸಿ ದೇವರಿಗೆ ವಿಧೇಯನಾಗಿ ಜೀವನ ನಡೆಸಿ.

2. ದೇವರ ಗುಣಲಕ್ಷಣಗಳು

  1. ದೇವರು ಏಕಮಾತ್ರನು ಮತ್ತು ದೇವರಿಗೆ ಸಮಾನರು ಯಾರೂ ಇಲ್ಲ
  2. ದೇವರು ಸರ್ವಶಕ್ತಿಶಾಲಿ ಹಾಗೂ ಅವನ ಸೃಷ್ಟಿಗಳಂತಿಲ್ಲ.
  3. ದೇವರಿಗೆ ಆಹಾರ, ನಿದ್ರೆ, ಕುಟುಂಬ, ಹೆಂಡತಿ, ಮಕ್ಕಳು ಇತ್ಯಾದಿ ಯಾವುದರ ಅಗತ್ಯವೂ ಇಲ್ಲ, ಆದ್ದರಿಂದ ದೇವರು ಮಲಗುವುದಿಲ್ಲ, ತಿನ್ನುವುದಿಲ್ಲ ಅಥವಾ ದೇವರಿಗೆ ಪೋಷಕರು, ಹೆಂಡತಿ ಮತ್ತು ಮಕ್ಕಳಿಲ್ಲ.
  4. ದೇವರಿಗೆ ಯಾವುದೇ ದೌರ್ಬಲ್ಯಗಳಿಲ್ಲ. ದೇವರು ಆಯಾಸಗೊಳ್ಳುವುದಿಲ್ಲ ಅಥವಾ ಮರೆಯುವುದಿಲ್ಲ ಅಥವಾ ತಪ್ಪುಗಳನ್ನು ಮಾಡುವುದಿಲ್ಲ.
  5. ದೇವರು ಎಲ್ಲಾ ಮಾನವರನ್ನು ಪ್ರೀತಿಸುತ್ತಾನೆ ಹಾಗೂ ಲಿಂಗ, ಜಾತಿ, ಬಣ್ಣ, ಜನಾಂಗ ಅಥವಾ ವಂಶ(ಗೋತ್ರ) ದ ಆಧಾರದ ಮೇಲೆ ಭೇದಿಸುವುದಿಲ್ಲ.

3. ಸಾವಿನ ನಂತರ ಜೀವನ

ಜಗತ್ತು ಒಂದು ದಿನ ಕೊನೆಗೊಳ್ಳಲಿದೆ ಹಾಗೂ ಎಲ್ಲರಿಗೂ ನ್ಯಾಯ ಕೊಡಲಿಕ್ಕಾಗಿ ತೀರ್ಪಿನ ದಿನವನ್ನು ಸ್ಥಾಪಿಸಲಾಗುವುದು. ಮೊದಲ ಮನುಷ್ಯನಿಂದ ಕೊನೆಯವರೆಗೆ ಎಲ್ಲಾ ಮಾನವರು ತೀರ್ಪಿನ ದಿನದಂದು ಮತ್ತೆ ಜೀವಂತಗೊಳಿಸಲಾಗುವರು ಮತ್ತು ಅವರ ಮಾಡಿದ ಕಾರ್ಯಗಳಿಗಾಗಿ ಪ್ರಶ್ನಿಸಲಾಗುವರು. ಏಕಮಾತ್ರ ನಿಜವಾದ ದೇವರನ್ನು ಪೂಜಿಸಿದ ಮತ್ತು ಒಳ್ಳೆಯ ಕಾರ್ಯಗಳನ್ನು ಮಾಡಿದ ಜನರು ಒಳ್ಳೆಯ ಪ್ರತಿಫಲವನ್ನು ಪಡೆಯುವರು ಮತ್ತು ದೇವರಿಗೆ ಅವಿಧೇಯರಾದ ಜನರು ಶಿಕ್ಷೆಗೆ ಒಳಗಾಗುವರು. ಒಳ್ಳೆಯ ಪ್ರತಿಫಲವು ಸ್ವರ್ಗವಾಗಿರುತ್ತದೆ ಮತ್ತು ಶಿಕ್ಷೆಯು ನರಕವಾಗಿರುತ್ತದೆ. ಸ್ವರ್ಗ ಮತ್ತು ನರಕದಲ್ಲಿನ ಜೀವನವು ಶಾಶ್ವತವಾಗಿರಲಿದೆ ಮತ್ತು ಎಂದಿಗೂ ಅಂತ್ಯವಾಗುವುದಿಲ್ಲ

ದಯವಿಟ್ಟು ನಮ್ಮ “ಸಾವಿನ ನಂತರ ಜೀವನವಿದೆಯೇ” ಮತ್ತು “ನಮಗೆ ಜನ್ಮ ಮತ್ತು ಪುನರ್ಜನ್ಮ ಚಕ್ರಗಳಿವೆಯೇ?” ಲೇಖನಗಳನ್ನು ಕೂಡ ಓದಿ.

ಕುರಾನ್‌ನಲ್ಲಿನ ವಿಶಿಷ್ಟತೆ ಏನು?

ಕುರಾನ್‌ನ ವಿಶಿಷ್ಟತೆಯೆಂದರೆ ಅದು ಎಲ್ಲಾ ಮಾನವ ಸಮಸ್ಯೆಗಳ ಮೂಲ ಕಾರಣವನ್ನು ತಿಳಿಸುತ್ತದೆ ಹಾಗೂ ಅರ್ಥಶಾಸ್ತ್ರ, ಕಾನೂನು, ವ್ಯಾಪಾರ, ರಾಜಕೀಯ, ಮನೋವಿಜ್ಞಾನ, ಮದುವೆ, ವಿಚ್ಛೇದನ, ಲಿಂಗಗಳ ನಡುವಿನ ಸಮಸ್ಯೆ, ಉತ್ತರಾಧಿಕತೆ, ಸಮಾಲೋಚನೆ, ಪಾಲನೆ-ಪೋಷಣೆ ಇತ್ಯಾದಿ, ಮಾನವ ಜೀವನದ ಪ್ರತಿಯೊಂದು ಅಂಶಕ್ಕೂ ಸಂಪೂರ್ಣ ಮಾರ್ಗದರ್ಶನ ಮತ್ತು ಮಾನದಂಡವನ್ನು ಒದಗಿಸುವ ಮೂಲಕ ಪ್ರಾಯೋಗಿಕ ಪರಿಹಾರಗಳನ್ನು ಒದಗಿಸುತ್ತದೆ. ಕುರಾನ್ ನ ಸಂದೇಶವು ಶಾಶ್ವತ ಮತ್ತು ಸಾರ್ವತ್ರಿಕವಾಗಿದೆ ಹಾಗೂ ಜನಾಂಗ, ಬಣ್ಣ, ಜನಾಂಗೀಯತೆ ಮತ್ತು ರಾಷ್ಟ್ರೀಯತೆಯಲ್ಲಿನ ನಮ್ಮ ವ್ಯತ್ಯಾಸಗಳನ್ನು ಮೀರಿದೆ.

ಮುಸ್ಲಿಮರು ಉಪವಾಸವನ್ನು ಹೇಗೆ ಆಚರಿಸುತ್ತಾರೆ?

ಮುಸ್ಲಿಮರು ತಿನ್ನುವುದಿಲ್ಲ ಅಥವಾ ಕುಡಿಯುವುದಿಲ್ಲ ಮತ್ತು ಮುಂಜಾನೆಯಿಂದ ಸೂರ್ಯಾಸ್ತದವರೆಗೆ ವೈವಾಹಿಕ ಸಂಬಂಧಗಳನ್ನು ತಪ್ಪಿಸುತ್ತಾರೆ. ಆದಾಗ್ಯೂ, ಇದು ಕೇವಲ ಉಪವಾಸದ ದೈಹಿಕ ಅಂಶವಾಗಿದೆ; ಉಪವಾಸದ ಆಧ್ಯಾತ್ಮಿಕ ಅಂಶಗಳೆಂದರೆ, ದುಷ್ಟ ಕೃತ್ಯಗಳಿಂದ ದೂರವಿರುವ ಮೂಲಕ ನಮ್ಮ ಎಲ್ಲಾ ಇಂದ್ರಿಯಗಳನ್ನು ನಿಯಂತ್ರಿಸುವುದನ್ನು ಒಳಗೊಂಡಿರುತ್ತದೆ.

ನಾಲಿಗೆ ಸುಳ್ಳು, ನಿಂದನೆ ಅಥವಾ ಚಾಡಿ ಹೇಳುವುದಿಲ್ಲ; ಕಣ್ಣುಗಳು ನ್ಯಾಯಸಮ್ಮತವಲ್ಲದ ವಿಷಯಗಳನ್ನು ನೋಡುವುದಿಲ್ಲ; ಕೈಗಳು ದುಷ್ಟ ಕೃತ್ಯಗಳನ್ನು ಮಾಡುವುದಿಲ್ಲ; ಕಿವಿಗಳು ದುಷ್ಟ ಮತ್ತು ಕೊಳಕು ಮಾತುಗಳನ್ನು ಕೇಳುವುದಿಲ್ಲ; ಮತ್ತು ಪಾದಗಳು ಪಾಪದ ಸ್ಥಳಗಳಿಗೆ ಹೋಗುವುದಿಲ್ಲ. ಹೀಗಾಗಿ, ದೇಹದ ಪ್ರತಿಯೊಂದು ಭಾಗವೂ ಉಪವಾಸವಿರುವುದರೊಂದಿಗೆ, ಆಲೋಚನೆಗಳು ಮತ್ತು ಕ್ರಿಯೆಗಳಲ್ಲಿ ಶುದ್ಧತೆಯನ್ನು ಗಮನಿಸುತ್ತದೆ.

ಪ್ರವಾದಿ ಮುಹಮ್ಮದ್ (ದೇವರ ವತಿಯಿಂದ ಶಾಂತಿ ಇರಲಿ) ಹೇಳಿದ್ದಾರೆ:

(ಉಪವಾಸದ ಸಮಯದಲ್ಲಿ) ಅಸಭ್ಯ ಭಾಷೆ ಮತ್ತು ಕೆಟ್ಟ ಕಾರ್ಯಗಳಿಂದ ದೂರವಿರದವನು, ದೇವರಿಗೆ ಅವನು ಆಹಾರ ಮತ್ತು ನೀರನ್ನು ತ್ಯಜಿಸುವುದರ ಅಗತ್ಯವಿಲ್ಲ

Bukhari # 6057

ನೀವು ಕುರಾನ್ ಅನ್ನು ಏಕೆ ಓದಬೇಕು?

ನಾವು ಆಚರಿಸುವ ಧರ್ಮವನ್ನು ಲೆಕ್ಕಿಸದೆ, ನಾವೆಲ್ಲರೂ ನಮ್ಮ ಕರುಣಾಮಯಿ ದೇವರಿಂದ ಪಾಲಿಸಲ್ಪಡುತ್ತೇವೆ. ನಾವು ಪ್ರತಿ ಕ್ಷಣವನ್ನು ಆನಂದಿಸುವ ದೇವರ ಅನುಗ್ರಹಗಳು ಅಸಂಖ್ಯಾತವಾಗಿವೆ. ಪ್ರತಿಯಾಗಿ ನಾವು ಮಾಡಬಹುದಾದ ಕನಿಷ್ಠ ಕೆಲಸವೆಂದರೆ ನಮಗೆ ತುಂಬಾ ಕೊಟ್ಟಿರುವ ನಮ್ಮ ಸೃಷ್ಟಿಕರ್ತನಿಗೆ ಕೃತಜ್ಞರಾಗಿರಬೇಕು ಮತ್ತು ಆ ಕೃತಜ್ಞತೆಯನ್ನು ಹೇಗೆ ವ್ಯಕ್ತಪಡಿಸಬೇಕೆಂದು ಕುರಾನ್ ನಮಗೆ ಕಲಿಸುತ್ತದೆ. ನಮ್ಮ ಸೃಷ್ಟಿಕರ್ತನಿಗೆ ವಿಧೇಯತೆಯ ಜೀವನವನ್ನು ನಡೆಸಲು ಮತ್ತು ಈ ಜಗತ್ತಿನಲ್ಲಿ ಮತ್ತು ಮರಣಾನಂತರದ ಜೀವನದಲ್ಲಿ ಶಾಂತಿಯನ್ನು ಸಾಧಿಸಲು ಅದು ನಮ್ಮೆಲ್ಲರನ್ನು ಆಹ್ವಾನಿಸುತ್ತದೆ. ಖುರಾನ್ ಅನ್ನು ನಿಮ್ಮ ಸ್ವಂತ ಭಾಷೆಯಲ್ಲಿ ಓದಲು, ಇಲ್ಲಿ ಕ್ಲಿಕ್ ಮಾಡಿ.


You may be interested in

WHAT OTHERS ARE READING

Most Popular