More

    Choose Your Language

    ಕರ್ಮ ಎನ್ನುವುದು ನಿಜವಾಗಲೂ ಇದೆಯೇ? ಪುನರ್ಜನ್ಮ – ಸಂಸಾರ ಇದೆಷ್ಟರ ಮಟ್ಟಿಗೆ ಸತ್ಯ?

    ಕರ್ಮದ ಆಧಾರದ ಮೇಲೆ ನಿಜವಾಗಿಯೂ ಜನರು ಪುನರ್ಜನ್ಮ ಪಡೆಯುತ್ತಾರೆಯೇ? ನಿಜವಾಗಿಯೂ ಕೆಲವರಿಗೆ ತಮ್ಮ ಹಿಂದಿನ ಜನ್ಮದ ನೆನಪಿರುತ್ತದೆಯೇ? ಸಂಸಾರ ಅಥವಾ ಪುನರ್ಜನ್ಮಗಳ ಪರಿಕಲ್ಪನೆಯಲ್ಲಿ ಎಷ್ಟರ ಮಟ್ಟಿಗೆ ನ್ಯಾಯದ ಮೂಲಾಂಶಗಳಿವೆ? ಇವು ಮತ್ತು ಇನ್ನಷ್ಟು ಪ್ರಶ್ನೆಗಳಿಗೆ ಉತ್ತರ ಪಡೆಯಲು ಮುಂದೆ ಓದಿ.

    ಕರ್ಮ ಎಂದರೇನು?

    ಕರ್ಮ ಎನ್ನುವುದು, ಕಾರಣ ಮತ್ತು ಪರಿಣಾಮದ (ಮಾಡಿದ್ದುಣ್ಣೋ ಮಾರಾಯ!) ನಿಯಮವನ್ನು ಆಧರಿಸಿದ ನಂಬಿಕೆಯಾಗಿದೆ. ಕರ್ಮದ ಮೂಲ ಬುನಾದಿಯೆಂದರೆ – ನಮ್ಮ ಆಲೋಚನೆಗಳು, ಮಾತುಗಳು ಮತ್ತು ಕಾರ್ಯಗಳು ನಮ್ಮ ಭವಿಷ್ಯದ ಜೀವನದ ಮೇಲೆ ಪರಿಣಾಮ ಬೀರುತ್ತವೆ. ನಾವು ಏನಾದರೂ ಒಳ್ಳೆಯದನ್ನು ಮಾಡಿದರೆ, ನಾವು ದಯೆಯನ್ನು ಮರಳಿ ಪಡೆಯುತ್ತೇವೆ; ನಾವು ಏನನ್ನಾದರೂ ಕ್ರೂರವಾಗಿ ಮಾಡಿದರೆ, ನಾವು ಕ್ರೌರ್ಯವನ್ನು ಮರಳಿ ಪಡೆಯುತ್ತೇವೆ. ಕೆಲವು ಜನರು ಬಡತನ, ಅನಾರೋಗ್ಯ ಅಥವಾ ಸಾವಿನಂತಹ ದುರದೃಷ್ಟವನ್ನು ಏಕೆ ಅನುಭವಿಸುತ್ತಾರೆ ಎಂಬುದಕ್ಕೆ ಬಹಳಷ್ಟು ಬಾರಿ ಕರ್ಮವನ್ನು ವಿವರಣೆಯಾಗಿ ಬಳಸಲಾಗುತ್ತದೆ.

    ಸಂಸಾರ ಎಂದರೇನು?

    ಸಂಸಾರ ಎನ್ನುವುದು ಜನನ, ಮರಣ ಮತ್ತು ಪುನರ್ಜನ್ಮದ ಚಕ್ರವಾಗಿದೆ. ಈ ಜಗತ್ತಿನಲ್ಲಿ ನಮ್ಮ ಪ್ರತಿಯೊಂದು ಕ್ರಿಯೆಗೂ ಒಂದು ಪರಿಣಾಮವಿದೆ. ಇವುಗಳು ನಮ್ಮ ಕರ್ಮಕ್ಕೆ ಸೇರಿ ಪರಿಣಾಮ ಬೀರುತ್ತವೆ. ಕರ್ಮಫಲದಿಂದಾಗಿ ಮನುಷ್ಯರು ಸತ್ತ ನಂತರ ಮತ್ತೆ ಈ ಲೋಕದಲ್ಲಿ ಹುಟ್ಟುತ್ತಾರೆ. ಅವರ ಹೊಸ ಜನ್ಮದಲ್ಲಿನ ಕಾರ್ಯಗಳು ಅವರ ಕರ್ಮವನ್ನು ನಿರ್ಧರಿಸುತ್ತವೆ ಮತ್ತು ಅವರ ಕರ್ಮವನ್ನು ಅವಲಂಬಿಸಿ, ಅವರು ಸತ್ತ ನಂತರ ಈ ಜಗತ್ತಿನಲ್ಲಿ ಮತ್ತೆ ಹುಟ್ಟುತ್ತಾರೆ. ಈ ಜನನ, ಮರಣ ಮತ್ತು ಪುನರ್ಜನ್ಮದ ಚಕ್ರವು ಒಬ್ಬ ವ್ಯಕ್ತಿ ಯಾವುದೇ ಕರ್ಮವನ್ನು ಗಳಿಸದವರೆಗೆ ಮುಂದುವರಿಯುತ್ತದೆ.

    ಮೋಕ್ಷ ಎಂದರೇನು?

    ಮೋಕ್ಷ ಎಂದರೆ “ವಿಮೋಚನೆ” ಎಂದರ್ಥ. ಆದ್ದರಿಂದ, ಮೋಕ್ಷವು ಜನ್ಮ ಮತ್ತು ಪುನರ್ಜನ್ಮದ ಚಕ್ರದಿಂದ ಮುಕ್ತಿ ಪಡೆಯುವುದಾಗಿದೆ. ಆತ್ಮವು “ಮೋಕ್ಷ” ವನ್ನು ಪಡೆಯುತ್ತದೆ ಮತ್ತು ಅದರೊಂದಿಗೆ ಯಾವುದೇ ಕರ್ಮವಿಲ್ಲದಿದ್ದಾಗ ಜನ್ಮ ಮತ್ತು ಪುನರ್ಜನ್ಮದ ಚಕ್ರದಿಂದ ವಿಮೋಚನೆಗೊಳ್ಳುತ್ತದೆ.

    ಸಂಸಾರ ಅಥವಾ ಪುನರ್ಜನ್ಮಗಳು ಮತ್ತು ನ್ಯಾಯದ ಪರಿಕಲ್ಪನೆ

    ಸಂಸಾರ ಅಥವಾ ಬಹು ಪುನರ್ಜನ್ಮಗಳ ಪರಿಕಲ್ಪನೆಯು ನ್ಯಾಯದಂತಹ ಮೂಲ ವಿಷಯದೊಂದಿಗೆ ಸಂಬಂಧ ಹೊಂದಿದೆ ಹಾಗೂ ಇದನ್ನು ಕೆಲವರೇಕೆ ಕುರುಡರು, ಅಂಗವಿಕಲರು, ಬಡವರು ಮತ್ತು ಕೆಲವರೇಕೆ ಉತ್ತಮ ಮತ್ತು ಐಷಾರಾಮಿ ಜೀವನ ಆನಂದಿಸುತ್ತಾರೆ ಎಂಬುದನ್ನು ವಿವರಿಸಲು ಬಳಸಲಾಗುತ್ತದೆ. ಮೇಲ್ನೋಟಕ್ಕೆ, ಈ ವಿವರಣೆಯು ಸೂಕ್ತವಾಗಿ ಕಾಣುತ್ತದೆ ಆದರೆ ನಾವು ಸಂಸಾರ ಅಥವಾ ಬಹು ಪುನರ್ಜನ್ಮಗಳ ಪರಿಕಲ್ಪನೆಯನ್ನು ಆಳವಾಗಿ ಕೆದಕಿದರೆ, ಸಂಸಾರ ವ್ಯವಸ್ಥೆಯು ಪರಿಪೂರ್ಣ ನ್ಯಾಯವನ್ನು ನೀಡುತ್ತದೆ ಎನ್ನುವ ತೀರ್ಮಾನಕ್ಕೆ ನಾವು ಬರಬಹುದೇ? ಬನ್ನಿ ಕಂಡುಹಿಡಿಯೋಣ.

    ತನಗೆ ಶಿಕ್ಷೆಯಾಗಲೀ ಅಥವಾ ಮೆಚ್ಚುಗೆಯ ಪುರಸ್ಕಾರಗಲೀ ಏಕೆಂದು ಆ ವ್ಯಕ್ತಿಗೆ ತಿಳಿದಿರಬೇಕು

    ನೀವು ಗಾಢ ನಿದ್ದೆಯಲ್ಲಿರುವಾಗ ಕಾಲಿಂಗ್ ಬೆಲ್ ಶಬ್ದದಿಂದ ನೀವು ಎಚ್ಚರಗೊಂಡಿದ್ದೀರಿ. ನೀವು ಬಾಗಿಲು ತೆರೆಯಲು ಪೊಲೀಸರು ನಿಂತಿರುವುದನ್ನು ನೀವು ಕಾಣುತ್ತೀರಿ. ನಿಮ್ಮನ್ನು ಬಂಧಿಸಲಿದ್ದೇವೆ ಎನ್ನುತ್ತಾರೆ ಪೊಲೀಸರು. ಅವರಿಗೆ ನಿಮ್ಮ ಮೊದಲ ಪ್ರಶ್ನೆ ಏನಾಗಿರಲಿದೆ? ಅವರನ್ನು “ನೀವು ನನ್ನನ್ನು ಏಕೆ ಬಂಧಿಸುತ್ತಿದ್ದೀರಿ?” ಎಂದು ಕೇಳಲಿದ್ದೀರಿ ಅಲ್ಲವೇ?

    “ಏಕೆ” ಎಂದು ಪ್ರಶ್ನಿಸುವುದು ತುಂಬಾ ಸಹಜವಾದ ಮತ್ತು ಬಹಳ ಮುಖ್ಯವಾದ ಪ್ರತಿಕ್ರಿಯೆ. ನಿಮ್ಮನ್ನು ಬಂಧಿಸಲು ಕಾರಣವನ್ನು ನೀಡದಿದ್ದರೆ ಮತ್ತು ಪೊಲೀಸರು ನಿಮ್ಮನ್ನು ಅವರೊಂದಿಗೆ ಕರೆದೊಯ್ದರೆ, ನೀವು ಇದನ್ನು ಅನ್ಯಾಯವೆಂದು ಕರೆಯುವುದಿಲ್ಲವೇ? ಖಂಡಿತ, ಹೌದು. ಯಾವ ವಿವೇಕಿಯೂ ಶಿಕ್ಷೆಯ ಕಾರಣವನ್ನು ತಿಳಿಯದೆ ಅದನ್ನು ಒಪ್ಪುವುದಿಲ್ಲ.

    ತನಗೆ ಶಿಕ್ಷೆ ಏಕೆ ವಿಧಿಸಲಾಗುತ್ತಿದೆ ಎಂದು ಆ ವ್ಯಕ್ತಿಗೆ ಅರ್ಥಮಾಡಿಸುವುದು ನ್ಯಾಯಯುತವಾಗಿ ನಡೆದುಕೊಳ್ಳುವುದರ ಪ್ರಮುಖ ಅಂಶವಾಗಿದೆ. ಅದಕ್ಕಾಗಿಯೇ ಅಪರಾಧಿ ಹುಚ್ಚನಾಗಿದ್ದರೆ ನ್ಯಾಯಾಲಯ ಅವನನ್ನು ಗಲ್ಲಿಗೇರಿಸುವುದಿಲ್ಲ. ನ್ಯಾಯಾಲಯವು ಅವನು ಗುಣಮುಖನಾಗಲು ಮತ್ತು ವಿವೇಚಿತನಾಗಲು ಕಾಯುತ್ತದೆ, ಏಕೆಂದರೆ ಅಪರಾಧಿಯು ತನ್ನ ಅಪರಾಧಕ್ಕಾಗಿ ಶಿಕ್ಷೆಗೆ ಒಳಗಾಗುತ್ತಾನೆ ಎಂದು ಅರ್ಥಮಾಡಿಕೊಳ್ಳಬೇಕು ಆವಶ್ಯಕ.

    ಈಗ ನಿಮ್ಮನ್ನು ನೀವು ಕೇಳಿಕೊಳ್ಳಿ:

    1. ಈ ಜಗತ್ತಿನಲ್ಲಿ ನನ್ನ ಜನ್ಮ, ನನ್ನ ಮೊದಲನೆಯದ್ದೇ ಅಥವಾ ಎರಡನೆಯದ್ದೇ ಅಥವಾ ಮೂರನೆಯದ್ದೇ ಅಥವಾ ಎಷ್ಟನೆಯದೆಂದು ನನಗೆ ತಿಳಿದಿದೆಯೇ?
    2. ನನ್ನ ಹಿಂದಿನ ಯಾವ ಕ್ರಿಯೆಗಳಿಗಾಗಿ ಈ ಜನ್ಮದಲ್ಲಿ ನನಗೆ ಸೂಕ್ತ ಪ್ರತಿಫಲ ಅಥವಾ ಶಿಕ್ಷೆಯಾಗುತ್ತಿದೆ ಎಂದು ನನಗೆ ತಿಳಿದಿದೆಯೇ?

    ಮೇಲಿನ ಎರಡೂ ಪ್ರಶ್ನೆಗಳಿಗೆ ನಿಮ್ಮ ಉತ್ತರ ಇಲ್ಲ ಎಂದಾದರೆ, ಅದರರ್ಥ ನಿಜವಾದ ಕಾರಣ ನೀವು ತಿಳಿಯದೆಯೇ ನಿಮಗೆ ಶಿಕ್ಷೆ ಅಥವಾ ಪ್ರತಿಫಲ ನೀಡಲಾಗುತ್ತದೆ. ಇದನ್ನು ನಾವು ಹೇಗೆ ನ್ಯಾಯ ಎಂದು ಕರೆಯಬಹುದು?

    ನಮ್ಮ ಹಿಂದಿನ ಜನ್ಮಗಳು ಮತ್ತು ಕ್ರಿಯೆಗಳ ಬಗ್ಗೆ ನಮಗೆ ತಿಳಿದಿಲ್ಲ, ಆದರೆ ಅದರ ಕಾರಣವನ್ನು ತಿಳಿಯದೆ ನಾವು ಈ ಜೀವನದಲ್ಲಿ ಕಷ್ಟಗಳನ್ನು ಅನುಭವಿಸುತ್ತೇವೆ. ನಮ್ಮ ನ್ಯಾಯಾಂಗ ವ್ಯವಸ್ಥೆಯು ಒಬ್ಬ ವ್ಯಕ್ತಿಗೆ ಶಿಕ್ಷೆಯ ಕಾರಣವನ್ನು ತಿಳಿಸದೆ ಶಿಕ್ಷಿಸದಿರುವಾಗ, ಅತ್ಯಂತ ನ್ಯಾಯಯುತ ಮತ್ತು ಅತ್ಯಂತ ಜ್ಞಾನಮಯಿ ದೇವರು ಮನುಷ್ಯರನ್ನು, ಅವರನ್ನು ಏಕೆ ಶಿಕ್ಷೆಗೆ ಗುರಿಪಡಿಸುತ್ತಾನೆಂದು ಅವರಿಗೆ ತಿಳಿಸದೆ, ಶಿಕ್ಷಿಸುತ್ತಾನೆ ಎಂದು ನಾವು ಹೇಗೆ ಊಹಿಸಬಹುದು? ಯೋಚಿಸಿ.

    ನ್ಯಾಯ ಸ್ಥಾಪನೆಗೆ ಸಾಕ್ಷಿಯಿರಬೇಕು

    ಕೇವಲ ನ್ಯಾಯ ಒದಗಿಸುವುದು ಸಾಕಿಲ್ಲ, ನ್ಯಾಯ ಒದಗಿಸಿರುವಂತೆ ಕಾಣಬೇಕು

    ಲಾರ್ಡ್ ಹೇವರ್ಟ್, ಮಾಜಿ ಮುಖ್ಯ ನ್ಯಾಯಾಧೀಶರು, ಇಂಗ್ಲೆಂಡ್.

    ನ್ಯಾಯ ಮಾಡಲಾದಾಗ , ಆಕ್ರಮಣಕಾರಿಗೆ ಶಿಕ್ಷೆಯಾಗಿದೆ ಎಂದು ಸಂತ್ರಸ್ತರಿಗೆ ತಿಳಿಯಬೇಕು. ಉದಾಹರಣೆಗೆ: ಒಬ್ಬ ಪುರುಷ ಒಬ್ಬ ಮಹಿಳೆಯ ಅತ್ಯಾಚಾರ ಮಾಡುತ್ತಾನೆ. ಪುರುಷನು ಆಕ್ರಮಿ ಮತ್ತು ಮಹಿಳೆ ಸಂತ್ರಸ್ತೆ. ಮಹಿಳೆಯನ್ನು ನ್ಯಾಯಾಲಯಕ್ಕೆ ಕರೆಸಲಾಗುತ್ತದೆ ಮತ್ತು ಆ ಅಕ್ರಮಿಗೆ ತೀರ್ಪಿನ (ಶಿಕ್ಷೆ) ಸಾಕ್ಷಿಯಾಗುವಂತೆ ಮಾಡಲಾಗುತ್ತದೆ. ಏಕೆ? ಯಾಕೆಂದರೆ ಸಂತ್ರಸ್ತೆ ತನಗೆ ನ್ಯಾಯ ದೊರಕಿತೆಂದು ತಿಳಿಯಬೇಕು.

    ಸಂಸಾರ ಅಥವಾ ಬಹು ಪುನರ್ಜನ್ಮಗಳ ಪರಿಕಲ್ಪನೆಯಲ್ಲಿ ನ್ಯಾಯದ ಈ ಅಂಶವು ಸಂಪೂರ್ಣವಾಗಿ ಇರುವುದೇ ಇಲ್ಲ.

    6 ಮಿಲಿಯನ್ ಅಮಾಯಕರನ್ನು ಕೊಂದ ಹಿಟ್ಲರನ ಉದಾಹರಣೆಯನ್ನು ತೆಗೆದುಕೊಳ್ಳೋಣ.

    ಹಿಟ್ಲರ್‌ಗೆ ಏನಾಯಿತು? ಅವನಿಗೆ ಶಿಕ್ಷೆಯಾಗಿದೆಯೇ? ಹೌದಾದರೆ, ಅವನು ಎಷ್ಟು ಜನ್ಮಗಳನ್ನು ತೆಗೆದುಕೊಂಡಿದ್ದಾನೆ? (ಯೋಚಿಸಿದರೆ, ಅವನು 6 ಮಿಲಿಯನ್ ಜನ್ಮಗಳನ್ನು ತೆಗೆದುಕೊಳ್ಳಬೇಕಿದೆ).

    1. ಹಿಟ್ಲರ್‌ನಿಂದ ಕೊಲ್ಲಲ್ಪಟ್ಟ ಜನರಿಗೆ, ಅವನಿಗೆ ಹೇಗೆ ಶಿಕ್ಷೆಯಾಯಿತು ಎಂದು ತಿಳಿದಿದೆಯೇ?
    2. ಹಿಟ್ಲರನ ದಬ್ಬಾಳಿಕೆಗೆ ಬಲಿಯಾದವರಿಗೆ ಪರಿಹಾರ ನೀಡಲಾಗಿದೆಯೇ?
    3. ಈ ಪ್ರಶ್ನೆಗಳಿಗೆ ನಮ್ಮಲ್ಲಿ ಯಾವದೇ ಉತ್ತರವಿಲ್ಲ. ನೆನಪಿಡಿ, ಹಿಟ್ಲರ್ ಕೇವಲ ಒಂದು ಉದಾಹರಣೆ. ಹಿಟ್ಲರ್‌ನಂತಹ ಲಕ್ಷಾಂತರ ದಬ್ಬಾಳಿಕೆಗಾರರನ್ನು ಮತ್ತು ಅಪರಾಧಿಗಳನ್ನು ಜಗತ್ತು ಕಂಡಿದೆ. ಅವರಿಗೆ ಏನಾಯಿತು? ಅವರಿಗೆ ಬಲಿಯಾದ ಸಂತ್ರಸ್ತರಿಗೆ ಏನಾಯಿತು?

    ನ್ಯಾಯಾಂಗ ವ್ಯವಸ್ಥೆಯಲ್ಲಿ ಇಂತಹ ಒಂದು ದೊಡ್ಡ ದೋಷವನ್ನು ನಾವು ಹೇಗೆ ನಿರೀಕ್ಷಿಸಬಹುದು?

    ಸಂಪೂರ್ಣ ಮತ್ತು ಪರಿಪೂರ್ಣ ನ್ಯಾಯಕ್ಕಾಗಿ ಜಗತ್ತು ಕೊನೆಗೊಳ್ಳಬೇಕು

    ಮಾನವರಿಗೆ ಸಂಪೂರ್ಣ ಮತ್ತು ಪರಿಪೂರ್ಣ ನ್ಯಾಯವನ್ನು ಒದಗಿಸಲು ಜಗತ್ತು ಕೊನೆಗೊಳ್ಳಬೇಕು. ಇದನ್ನು ಒಂದು ಉದಾಹರಣೆಯ ಮೂಲಕ ಅರ್ಥಮಾಡಿಕೊಳ್ಳೋಣ.

    ಒಬ್ಬ ವ್ಯಕ್ತಿಯು ಮರವನ್ನು ನೆಟ್ಟು, ಮರವನ್ನು ನೆಟ್ಟ ಕೆಲವು ವರ್ಷಗಳ ನಂತರ ಸಾಯುತ್ತಾನೆ. ಮರವು ಇನ್ನೂ 100 ವರ್ಷಗಳವರೆಗೆ ಬದುಕುತ್ತದೆ ಮತ್ತು ಹಣ್ಣುಗಳು ಮತ್ತು ನೆರಳು ನೀಡುವ ಮೂಲಕ ಜನರಿಗೆ ಪ್ರಯೋಜನವನ್ನು ನೀಡುತ್ತದೆ. ಮರವನ್ನು ನೆಟ್ಟ ವ್ಯಕ್ತಿಗೆ ಅದರ ಪ್ರತಿಫಲವನ್ನು ನೀಡಬೇಕು ಎಂದು ನೀವು ಒಪ್ಪುತ್ತೀರಿ, ಅಲ್ಲವೇ? ಆ ವ್ಯಕ್ತಿಯು 100 ವರ್ಷಗಳ ಮೊದಲು ಮತ್ತೆ ಜನಿಸಿದರೆ, ಆ ಮರವನ್ನು ನೆಟ್ಟಿದ್ದಕ್ಕಾಗಿ ಅವನು ಸಂಪೂರ್ಣವಾಗಿ ಪ್ರತಿಫಲವನ್ನು ಪಡೆಯುವುದಿಲ್ಲ ಏಕೆಂದರೆ ಮರದ ಪ್ರಯೋಜನಗಳು ಇನ್ನೂ ಮುಂದುವರೆದಿವೆ. ಆದ್ದರಿಂದ ಆ ಮರವನ್ನು ನೆಟ್ಟಿದ್ದಕ್ಕಾಗಿ ಪೂರ್ಣ ಪ್ರತಿಫಲವನ್ನು ಪಡೆಯಲು ವ್ಯಕ್ತಿಯು 100 ವರ್ಷಗಳವರೆಗೆ – ಮರವು ಸಾಯುವವರೆಗೆ ಕಾಯಬೇಕಾಗುತ್ತದೆ.

    ಇದು ನಾವು ಪ್ರಾರಂಭಿಸಿದ ಒಂದು ಒಳ್ಳೆಯ ಕೆಲಸದ ಬಗ್ಗೆಯಾಗಿದೆ. ಅನಾಥಾಶ್ರಮವನ್ನು ಪ್ರಾರಂಭಿಸುವುದನ್ನು ಕಲ್ಪಿಸಿಕೊಳ್ಳಿ. ಅನಾಥಾಶ್ರಮ ಕಾರ್ಯ ನಿರ್ವಹಿಸುವವರೆಗೆ ನಮಗೆ ಪೂರ್ಣ ಪ್ರತಿಫಲ ಸಿಗುವುದೇ ಇಲ್ಲ.

    ಕೆಟ್ಟ ಕೆಲಸದ ವಿಷಯದಲ್ಲೂ ಇದೇ ಆಗಿದೆ. ಉದಾಹರಣೆಗೆ: ಹಿರೋಷಿಮಾ ಮತ್ತು ನಾಗಾಸಾಕಿಯಲ್ಲಿ ಅಣುಬಾಂಬ್ ಹಾಕಿದ ಉದಾಹರಣೆಯನ್ನು ತೆಗೆದುಕೊಳ್ಳಿ. ಆ ಬಾಂಬ್‌ನ ಪರಿಣಾಮ ಇಂದಿಗೂ ಕಾಣಸಿಗುತ್ತದೆ ಎನ್ನುತ್ತಾರೆ ವೈದ್ಯರು. ಅದರ ಪರಿಣಾಮಗಳು ಅಸ್ತಿತ್ವದಲ್ಲಿ ಇರುವವರೆಗೂ, ಬಾಂಬ್ ಬೀಳುವಿಕೆಯ ಹಿಂದೆ ಇದ್ದ ಜನರನ್ನು ಎಂದಿಗೂ ಸಂಪೂರ್ಣವಾಗಿ ಶಿಕ್ಷಿಸಲು ಸಾಧ್ಯವಿಲ್ಲ.

    ಹೀಗೆ ನಾವು ನೋಡುವಂತೆ, ಜಗತ್ತು ಕೊನೆಗೆ ಬಾರದ ಹೊರತು, ಅನೇಕ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಪರಿಣಾಮಗಳು ಕೊನೆಗೊಳ್ಳುವುದಿಲ್ಲ. ಆದ್ದರಿಂದ ತಾರ್ಕಿಕವಾಗಿ, ಸಂಪೂರ್ಣ ಮತ್ತು ಪರಿಪೂರ್ಣ ನ್ಯಾಯವನ್ನು ಒದಗಿಸಲು ಜಗತ್ತು ಕೊನೆಗೊಳ್ಳಬೇಕು.

    ಜನ್ಮ-ಪುನರ್ಜನ್ಮದ ಪರಿಕಲ್ಪನೆಯಲ್ಲಿ ನ್ಯಾಯದ ಈ ಅಂಶವು ಸಂಪೂರ್ಣವಾಗಿ ಇಲ್ಲವೇ ಇಲ್ಲ.

    ಕೆಲವರಿಗೆ ತಮ್ಮ ಹಿಂದಿನ ಜನ್ಮದ ನೆನಪುಗಳಿವೆಯೇ?

    ಕೆಲವರು ತಮ್ಮ ಹಿಂದಿನ ಜನ್ಮಗಳ ನೆನಪುಗಳನ್ನು ಹೊಂದಿರುವುದರಿಂದ ಸಂಸಾರ ಅಥವಾ ಬಹು ಪುನರ್ಜನ್ಮಗಳು ನಿಜವಾಗಿರಬೇಕು ಎಂದು ಹಲವರು ವಾದಿಸುತ್ತಾರೆ. ಈ ವಿಷಯವನ್ನು ವಿವಿಧ ಮನೋವೈದ್ಯರು ಕಾಲಕಾಲಕ್ಕೆ ಅಧ್ಯಯನ ಮಾಡಿದ್ದಾರೆ.

    ಈ ವಿಷಯದ ಮೇಲೆ ಪ್ರಯೋಗವನ್ನು ಮಾಡಿದ ಒಬ್ಬ ವ್ಯಕ್ತಿ: ನಿಕೋಲಸ್ ಸ್ಪಾನೋಸ್, ಅವರು ಕೆನಡಾದ ಕಾರ್ಲೆಟನ್ ವಿಶ್ವವಿದ್ಯಾಲಯದಲ್ಲಿ ಸೈಕಾಲಜಿ ಪ್ರೊಫೆಸರ್ ಮತ್ತು ಪ್ರಾಯೋಗಿಕ ಸಂಮೋಹನ (experimental hypnosis) ಪ್ರಯೋಗಾಲಯದ ನಿರ್ದೇಶಕರಾಗಿದ್ದರು.

    ಸ್ಪಾನೋಸ್ ರವರ ಸಂಶೋಧನೆಯು ಅವರನ್ನು ಹಿಂದಿನ ಜೀವನಗಳು ನೆನಪುಗಳಲ್ಲ ಎಂಬ ತೀರ್ಮಾನಕ್ಕೆ ಕರೆದೊಯ್ಯುತ್ತದೆ, ಆದರೆ ವಾಸ್ತವವಾಗಿ ರೋಗಿಗಳು ಬೇರೊಬ್ಬರಂತೆ ವರ್ತಿಸುವ ಸಾಮಾಜಿಕ ರಚನೆಗಳನ್ನು ಆಧರಿಸಿವೆ, ಅವು ನಿಜವಾದ ನೆನಪುಗಳಿಂದ ನಿರೀಕ್ಷಿಸಲಾಗದ ಗಮನಾರ್ಹ ನ್ಯೂನತೆಗಳೊಂದಿಗೆ ಇರುತ್ತವೆ. ಈ ನೆನಪುಗಳನ್ನು ರಚಿಸಲು, ಸ್ಪಾನೋಸ್‌ ಪರೀಕ್ಷಿಸಿದ ಜನರು, ಈ ಪ್ರಯೋಗದ ಹೊರಗೆ ಪ್ರಭಾವ ಬೀರುವಂತಹರಿಂದ ಸ್ಥಾಪಿಸಲ್ಪಟ್ಟ ನಿರೀಕ್ಷೆಗಳು ಮತ್ತು ದೂರದರ್ಶನ, ಕಾದಂಬರಿಗಳು, ಜೀವನದ ಅನುಭವಗಳು ಮತ್ತು ಅವರ ಸ್ವಂತ ಆಸೆಗಳಂತಹ ಮಾಹಿತಿಗಳಿಂದ ಪಡೆಯುತ್ತಾರೆ.

    ಈ ಮಾಹಿತಿಯ ವಿವರಗಳನ್ನು “ಮಲ್ಟಿಪಲ್ ಐಡೆಂಟಿಟೀಸ್ & ಫಾಲ್ಸ್ ಮೆಮೊರೀಸ್: ಎ ಸೋಶಿಯೋಕಾಗ್ನಿಟಿವ್ ಪರ್ಸ್ಪೆಕ್ಟಿವ್. ವಾಷಿಂಗ್ಟನ್: ಅಮೇರಿಕನ್ ಸೈಕಲಾಜಿಕಲ್ ಅಸೋಸಿಯೇಷನ್” ಪುಸ್ತಕದಲ್ಲಿ ಕಾಣಬಹುದು.

    ಮಲ್ಟಿಪಲ್ ಐಡೆಂಟಿಟೀಸ್ & ಫಾಲ್ಸ್ ಮೆಮೊರೀಸ್: ಎ ಸೋಶಿಯೋಕಾಗ್ನಿಟಿವ್ ಪರ್ಸ್ಪೆಕ್ಟಿವ್. ವಾಷಿಂಗ್ಟನ್: ಅಮೇರಿಕನ್ ಸೈಕಲಾಜಿಕಲ್ ಅಸೋಸಿಯೇಷನ್

    ಕೇವಲ ವಾದದ ಸಲುವಾಗಿ, ಕೆಲವರು ತಮ್ಮ ಹಿಂದಿನ ಜನ್ಮಗಳನ್ನು ನೆನಪಿಸಿಕೊಳ್ಳುವುದರಿಂದ ಮರುಜನ್ಮವು ಸಾಬೀತಾಗಿದೆ ಎಂದು ನಾವು ಒಪ್ಪಿಕೊಂಡರೂ, ಜನ್ಮ ಮತ್ತು ಪುನರ್ಜನ್ಮದ ಪರಿಕಲ್ಪನೆಯಲ್ಲಿ ನ್ಯಾಯ ಹೇಗೆ ದೊರಕಿಸಲಾಗುತ್ತದೆ ಎಂಬ ಸಮಸ್ಯೆಗೆ ಇನ್ನೂ ಉತ್ತರವಿಲ್ಲ.

    ಸಾರಾಂಶದ ಮಾತು

    ಸಂಸಾರ ಅಥವಾ ಬಹು ಪುನರ್ಜನ್ಮಗಳ ಪರಿಕಲ್ಪನೆಯಲ್ಲಿ ನ್ಯಾಯದ ಮೂಲಭೂತ ಅಂಶಗಳು ಸಂಪೂರ್ಣವಾಗಿ ಇರುವುದಿಲ್ಲವಾದ್ದರಿಂದ ಅದು ನಿಜವಾಗಲು ಸಾಧ್ಯವಿಲ್ಲ. ಸಂಸಾರದ ಪರಿಕಲ್ಪನೆಯ ಬಗ್ಗೆ ಮಾತನಾಡುವ ಸಾಹಿತ್ಯವನ್ನು ಓದಿದರೆ, ಕೆಲವರು ಹಿಂದಿನ ಜನ್ಮದಲ್ಲಿ ಸಂಪಾದಿಸಿದ ಕರ್ಮದಿಂದ ಕೆಳಜಾತಿಯಲ್ಲಿ ಹುಟ್ಟುತ್ತಾರೆ ಹಾಗೂ ಇನ್ನೂ ಕೆಲವರು ಅವರ ಕರ್ಮದಿಂದ ಬ್ರಾಹ್ಮಣ ಅಥವಾ ಮೇಲ್ಜಾತಿಯಲ್ಲಿ ಹುಟ್ಟುತ್ತಾರೆ ಎಂದು ವಾದಿಸುತ್ತಾರೆ. ಆದ್ದರಿಂದ, ನ್ಯಾಯದ ಅಂಶಕ್ಕಿಂತ ಹೆಚ್ಚಾಗಿ, ಸಂಸಾರದ ಪರಿಕಲ್ಪನೆಯನ್ನು ಜಾತಿ ವ್ಯವಸ್ಥೆಯ (ವರ್ಣ ವ್ಯವಸ್ಥೆ) ತಾರತಮ್ಯ ಸ್ವರೂಪವನ್ನು ಸಮರ್ಥಿಸಿಕೊಳ್ಳಲು ಬಳಸಲಾಗುತ್ತದೆ.

    ಹಾಗಾದರೆ ನೀವು ಕೇಳಬಹುದು: ಅಂಗವಿಕಲ ಮತ್ತು ಅಂಧ ಮಕ್ಕಳ ಜನನವನ್ನು ಹೇಗೆ ಸ್ಪಷ್ಟೀಕರಿಸಬಹುದು? ತುಳಿತಕ್ಕೊಳಗಾದವರಿಗೆ ಮತ್ತು ಕೊಲೆಯಾದವರಿಗೆ ನ್ಯಾಯ ಹೇಗೆ ದೊರಕಿಸುವುದು? ಇವುಗಳೆಲ್ಲವೂ ಮಾನ್ಯವಾದ ಪ್ರಶ್ನೆಗಳೇ ಮತ್ತು ಈ ಲೇಖನದಲ್ಲಿ ಅವುಗಳಿಗೆ ಉತ್ತರಗಳನ್ನು ನೀಡಲಾಗಿದೆ.


    ನಿಮಗೆ ಇಷ್ಟವಾಗ ಬಹುದಾದಂತಹ ಲೇಖನಗಳು

    WHAT OTHERS ARE READING

    Most Popular