ಹಲವರು ಮುಸ್ಲಿಮರಲ್ಲಿ ದೇಶಪ್ರೇಮವಿಲ್ಲವೆಂದು ಭಾವಿಸುತ್ತಾರೆ ಮತ್ತು ಎಲ್ಲಾ ಭಾರತೀಯ ಮುಸ್ಲಿಮರನ್ನು ದಗಾಕೋರರೆಂದು ಬಿಂಬಿಸಲು ಪ್ರಯತ್ನಿಸುತ್ತಾರೆ. ಈ ಅಪಾರವಾದ ಆರೋಪವನ್ನು ಸ್ವಲ್ಪ ಪರೀಕ್ಷಿಸೋಣ.
ಭಾರತೀಯ ಮುಸ್ಲಿಮರ ಬಳಿ ತಮ್ಮ ದೇಶಪ್ರೇಮದ ಪುರಾವೆಯಿದೆ
ಭಾರತದಲ್ಲಿನ ಎಲ್ಲಾ ಸಮುದಾಯಗಳಲ್ಲಿ ಕೇವಲ ಭಾರತೀಯ ಮುಸ್ಲಿಮರೊಬ್ಬರೇ ಪುರಾವೆಯೊಂದಿಗೆ ದೇಶಪ್ರೇಮದ ಹಕ್ಕು ಜಮಾಯಿಸಬಹುದು. ಅದು ಹೇಗೆ ಗೊತ್ತೆ? ಭಾರತೀಯ ಮುಸ್ಲಿಮ್ ಸಮುದಾಯವೊಂದಕ್ಕೆ ಮಾತ್ರ ಭಾರತ ಹಾಗೂ ಪಾಕಿಸ್ತಾನಗಳ ನಡುವೆ ಆಯ್ಕೆ ಇತ್ತು. ಮುಸ್ಲಿಮರಲ್ಲಿ ಬಹುತೇಕರು (ಕೋಟ್ಯಾಂತರ) ಭಾರತದಲ್ಲೇ ಉಳಿಯಲು ನಿರ್ಧರಿಸಿದರು. ದೇಶಪ್ರೇಮಕ್ಕೆ ಇದಕ್ಕಿಂತ ದೊಡ್ಡ ಪುರಾವೆ ಇರಲಿಕ್ಕೆ ಸಾಧ್ಯವೇ?
ಭಾರತದ ಸ್ವಾತಂತ್ರ್ಯದಲ್ಲಿ ಮುಸ್ಲಿಮರ ಯೋಗದಾನ
ನಮ್ಮ ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಬಹಳಷ್ಟು ಮುಸ್ಲಿಮರು ತಮ್ಮ ಜೀವದಾನ ಮಾಡಿದ್ದಾರೆ.
ಇದು ನಿಮಗೆ ತಿಳಿದಿತ್ತೆ?
1. ಸ್ವಾತಂತ್ರ್ಯ ಚಳುವಳಿಯ ಎರಡು ಉತ್ಕೃಷ್ಟ ಘೋಷಣೆಗಳಾದ, “Quit India – ಭಾರತ ಬಿಟ್ಟು ತೊಲಗಿ” ಮತ್ತು “Simon, Go Back – ಗೋ ಬ್ಯಾಕ್, ಸೈಮನ್” ಘೋಷಿಸಿದವರು ಮುಸ್ಲಿಮ್ ಸ್ವಾತಂತ್ರ್ಯ ಹೋರಾಟಗಾರ, ಯೂಸುಫ್ ಮೆಹೆರಲಿ. ನೋಡಿ:
https://scroll.in/article/846450/who-coined-the-slogan-quit-india-it-wasnt-gandhi
2. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರಖ್ಯಾತ ಕರೆ “ಜೈ ಹಿಂದ್” ಅನ್ನು ಘೋಷಿಸಿದವರು ಜೈನುಲ್ ಆಬಿದೀನ್ ಹಸನ್ ಎಂಬ ಒಬ್ಬ ಮುಸ್ಲಿಮ್. ಹಸನ್ ರವರು ನೇತಾಜಿ ಸುಭಾಷ್ ಚಂದ್ರ ಬೋಸ್ ಸ್ಥಾಪಿಸಿದ ಇಂಡಿಯನ್ ನ್ಯಾಷನಲ್ ಆರ್ಮಿ (INA)ಯ ಒಬ್ಬ ಮುಖಂಡರೂ ಆಗಿದ್ದರು. ನೋಡಿ:
https://www.thehindu.com/todays-paper/tp-in-school/who-coined-jai-ind/article5723442.ece
3. ಶಹೀದ್ ಭಗತ್ ಸಿಂಗರನ್ನು ಪ್ರೇರೇಪಿಸಿದ “ಇಂಕಿಲಾಬ್ ಜಿಂದಾಬಾದ್” ಎಂದು ಘೋಷಿಸಿದವರು ಒಬ್ಬ ಮುಸ್ಲಿಮ್, ಮೌಲಾನ ಹಸರತ್ ಮೊಹಾನಿ. ನೋಡಿ:
https://sabrangindia.in/ann/inquilab-zindabad-who-coined-term
4. ಸ್ವಾತಂತ್ರ್ಯ ಚಳುವಳಿಯಲ್ಲಿ ಎಲ್ಲರೂ ಹಾಡುತ್ತಿದ್ದ “ಸಾರೆ ಜಹಾನ್ ಸೆ ಅಚ್ಚ, ಹಿಂದೂಸ್ತಾನ್ ಹಮಾರ”, ಇದನ್ನು ಬರೆದವರು ಒಬ್ಬ ಮುಸ್ಲಿಮ್ ಕವಿ, ಮುಹಮ್ಮದ್ ಇಕ್ಬಾಲ್. ನೋಡಿ:
ಇಂದಿಗೂ ಈ ದೇಶಪ್ರೇಮದ ಗೀತೆಯನ್ನು ಭಾರತೀಯ ಸೇನಾ ಮತ್ತು ನೌಕಾ ಪಡೆಯ ಬ್ಯಾಂಡ್ ಗಳು ನುಡಿಸುತ್ತವೆ.
ಭಾರತೀಯ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ ಮುಸ್ಲಿಮರ ಪಟ್ಟಿ
ಭಾರತೀಯ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ ಮುಸ್ಲಿಮರ ಪಟ್ಟಿ ಎಷ್ಟು ದೊಡ್ಡದೆಂದರೆ ಅದಕ್ಕೆ ಒಂದು ಪುಸ್ತಕವೇ ಬೇಕಿದೆ. ಈ ವಿಷಯದಲ್ಲಿ “ಸ್ವಾತಂತ್ರ್ಯ ಚಳುವಳಿ ಮತ್ತು ಭಾರತೀಯ ಮುಸ್ಲಿಮರು” ಎಂಬ ಹೆಸರಿನಲ್ಲಿ ಶಾಂತಿಮೊಯ ರಾಯ್ ಒಂದು ಪುಸ್ತಕ ಬರೆದಿದ್ದು, ಅದನ್ನು ನ್ಯಾಷನಲ್ ಬುಕ್ ಟ್ರಸ್ಟ್, ದೆಹಲಿ ಪ್ರಕಾಶಿಸಿದೆ.

ಜಲಿಯಾನ್ ವಾಲ ಬಾಗ್ ಹುತಾತ್ಮರ ಪಟ್ಟಿ – ನಮಗೆ ತಿಳಿಸುವುದೇನು?
ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿನ ಒಂದು ಮರೆಯಲಾಗದ ಹಾಗೂ ಬರ್ಬರ ಕೃತ್ಯವೆಂದರೆ, ಜಲಿಯಾನ್ ವಾಲ ಬಾಗ್ ಹತ್ಯಾಕಾಂಡ. ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಮುಸ್ಲಿಮರ ಅನುದಾನವನ್ನು ಪ್ರಶ್ನಿಸುವವರು, ಈ ಹತ್ಯಾಕಾಂಡದ ಹುತಾತ್ಮರ ಪಟ್ಟಿಯನ್ನು ನೋಡಬೇಕು.
ಪಂಜಾಬಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬ್ರಿಟಿಷ್ ಅಧಿಕಾರಿಗಳು ಜಲಿಯಾನ್ ವಾಲ ಬಾಗ್ ನಲ್ಲಿ ಹುತಾತ್ಮರ ಮತ್ತು ಗಾಯಗೊಂಡವರ ಪಟ್ಟಿ ಸಿದ್ಧಪಡಿಸಿದ್ದರು. ಈ ಪಟ್ಟಿಯನ್ನು ಪಂಜಾಬಿನಲ್ಲಿನ ಬ್ರಿಟಿಷ್ ಸರ್ಕಾರದ ಗೃಹ ಸಚಿವಾಲಯದ ನಾಲ್ಕು ಕಡತಗಳಲ್ಲಿ ಪತ್ತೆಮಾಡಲಾಯಿತು. ಈ ಪಟ್ಟಿ ಹಿಂದೂ, ಮುಸ್ಲಿಮ್ ಮತ್ತು ಸಿಖ್ಖರ ಹೆಸರುಗಳಿಂದ ತುಂಬಿದೆ.

ಜಲಿಯಾನ್ ವಾಲಾ ಬಾಗ್ ಘಟನೆ, ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹಿಂದೂ ಮತ್ತು ಮಸ್ಲಿಮರು ಒಗ್ಗಟ್ಟಿನಿಂದ ಹೋರಾಡಿದ್ದನ್ನು ತೋರಿಸುತ್ತದೆ. ಇದೇ ದೇಶಪ್ರೇಮ! ಇದನ್ನು ಬ್ರಿಟಿಷರಿಗೆ ಕ್ಷಮಾಯಾಚನಾ ಪತ್ರಗಳನ್ನು ಬರೆದಂತವರ ಕೃತ್ಯಗಳಿಗೆ ಹೋಲಿಸಿನೋಡಿ.
ನೋಡಿ: https://thewire.in/history/bhagat-singh-and-savarkar-a-tale-of-two-petitions
ಭಾರತೀಯ ಮುಸ್ಲಿಮರು ಪಾಕಿಸ್ತಾನವನ್ನು ಪ್ರೀತಿಸುತ್ತಾರೆಯೇ?
ಹಲವರು ಭಾರತೀಯ ಮುಸ್ಲಿಮರು ಪಾಕಿಸ್ತಾನವನ್ನು ಬೆಂಬಲಿಸುತ್ತಾರೆಂದು ಭಾವಿಸುತ್ತಾರೆ. ಯಾವುದೇ ಅವಕಾಶವಿದ್ದಲ್ಲಿ ಪಾಕಿಸ್ತಾನ ಮತ್ತು ಭಾರತೀಯ ಮುಸ್ಲಿಮರ ನಡುವೆ ಸಂಬಂಧ ಕಲ್ಪಿಸಿ, ಇಸ್ಲಾಮಿನ ಕಾರಣದಿಂದಾಗಿ ಭಾರತೀಯ ಮುಸ್ಲಿಮರಿಗೆ ಪಾಕಿಸ್ತಾನದ ಪರವಾಗಿ ಒಲವಿದೆಯೆಂಬ ದೃಶ್ಯ ಬಿಂಬಿಸಲಾಗುತ್ತದೆ. ಅದಷ್ಟೇ ಅಲ್ಲದೆ, ಹಲವರು “ಪಾಕಿಸ್ತಾನಕ್ಕೆ ಹೋಗಿ” ಎಂದು ಪದೇ ಪದೇ ಹೇಳುವುದನ್ನೂ ಕೇಳಬಹುದು.
ಭಾರತೀಯ ಮುಸ್ಲಿಮರಿಗೆ ಪಾಕಿಸ್ತಾನದ ಒಲವಿದ್ದರೆ, ಭಾರತದಲ್ಲಿದ್ದುಕೊಂಡು ಇಲ್ಲಿನ ತೆರಿಗೆ ಏಕೆ ಕಟ್ಟುತ್ತಿರುವರು?
ಭಾರತೀಯ ಮುಸ್ಲಿಮರು ಮತ್ತು ಪಾಕಿಸ್ತಾನದಲ್ಲಿನ ಬಹಳಷ್ಟರು ಇಸ್ಲಾಮ್ ಅನುಯಾಯಿಗಳು, ಆದರೆ, ಭಾರತದಲ್ಲಿನ ಮುಸ್ಲಿಮರು ಭಾರತೀಯ ಮುಸ್ಲಿಮರು ಮತ್ತು ಪಾಕಿಸ್ತಾನದಲ್ಲಿನ ಮುಸ್ಲಿಮರು ಪಾಕಿಸ್ತಾನಿ ಮುಸ್ಲಿಮರು.
ಕೇವಲ ಇಸ್ಲಾಮಿನಿಂದಾಗಿ, ಒಬ್ಬ ಭಾರತೀಯ ಮುಸ್ಲಿಮ್ ಮತ ಚಲಾಯಿಸುವುದಾಗಲಿ ಅಥವಾ ಪಾಕಿಸ್ತಾನದಲ್ಲಿ ಜಮೀನು ಖರೀದಿಸುವುದಾಗಲಿ ಅಥವಾ ಪಾಕಿಸ್ತಾನಿ ಪ್ರಜೆಯಂತೆ ಬೇರೆ ಯಾವುದೇ ಹಕ್ಕುಗಳನ್ನು ಹೊಂದಿರುವುದಿಲ್ಲ. ಪಾಕಿಸ್ತಾನಿ ವಾಯು ಸೈನ್ಯೆಯಿಂದ ಹಾಕಲಾಗುವ ಬಾಂಬ್, ಭಾರತೀಯ ಮುಸ್ಲಿಮರ ಇಸ್ಲಾಮ್ ನಿಂದಾಗಿ ಅವರನ್ನು ಹೊರತುಗೊಳಿಸುವುದಿಲ್ಲ. ಪ್ರತಿಯೊಬ್ಬ ವಿವೇಚನೆಯುಳ್ಳ ಭಾರತೀಯ ಮುಸ್ಲಿಮ್ ಇದನ್ನು ಚೆನ್ನಾಗಿ ಅರಿತಿದ್ದು, ಯಾವಾಗಲೂ ಭಾರತವನ್ನೇ ಬೆಂಬಲಿಸುವರು.
ನಂಬಿಕೆ ಮತ್ತು ದೇಶಪ್ರೇಮ
ನಂಬಿಕೆ ಮತ್ತು ದೇಶಪ್ರೇಮವನ್ನು ಒಂದುಗೂಡಿಸುವುದು, ಒಂದು ದೊಡ್ಡ ತಪ್ಪು. ಉದಾಹರಣೆಗೆ, ನೇಪಾಳ ಪ್ರಪಂಚದಲ್ಲಿನ ಏಕಮಾತ್ರ ಹಿಂದೂ ದೇಶವಾಗಿದೆ. ಹಾಗಾಗಿ ನೇಪಾಳ ಭಾರತದೊಂದಿಗೆ ಅತ್ಯಂತ ಆತ್ಮೀಯ ಸಂಬಂಧವಿರಬೇಕೆಂದು ನಿರೀಕ್ಷಿಸಬೇಕು. ಆದರೆ ವಾಸ್ತವ ಏನು? ನೇಪಾಳ ಪದೇ ಪದೇ ಭಾರತವನ್ನು ನಿರ್ಲಕ್ಷಿಸುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಕೆಲವು ಮುಖ್ಯಾಂಶಗಳನ್ನು ನೋಡೋಣ.
1. “ನೇಪಾಳ ಭಾರತವನ್ನು ಅಲ್ಲಗಣಿಸಿ, ಚೀನಾದೊಂದಿಗೆ ಜಂಟಿ ಸೇನಾ ಅಭ್ಯಾಸ ನಡೆಸಲಿದೆ”
ನೋಡಿ: https://eurasiantimes.com/nepal-snubs-india-military-exercise-china/
2. “ನೇಪಾಳ ಭಾರತವನ್ನು ಅಲ್ಲಗಣಿಸಿ, ಪ್ರತಿಭಟನೆಗಳ ನಡುವೆ ಸಂವಿಧಾನ ಅಳವಡಿಸಿಕೊಂಡಿದೆ”
3. “ಭಾರತಕ್ಕೆ ಹಿಮಾಲಯ ಅಲ್ಲಗಣಿಕೆ. ನೇಪಾಳ ಚೀನಾದೊಂದಿಗೆ ರೈಲ್ವೆ ಒಪ್ಪಂದ ಸಹಿಮಾಡಿದೆ“
4. “ನೇಪಾಳ ಪಿಎಂ ಭಾರತ ಅಲ್ಲಗಣಿಸಿ, ಮೊದಲು ಚೀನಾ ಪ್ರವಾಸ ಕೈಗೊಳ್ಳುವರು”
ನೋಡಿ: http://www.rediff.com/news/report/nepal-pm-snubs-india-to-visit-china-first/20151230.htm
ನಿಮಗೆ ಇಂತೆಯೇ ಹಲವಾರು ಸುದ್ದಿ ಮುಖ್ಯಾಂಶಗಳು ದೊರೆಯುತ್ತವೆ. ಈ ಮುಖ್ಯಾಂಶಗಳಿಂದ ನೇಪಾಳ ಭಾರತಕ್ಕಿಂತ ಹೆಚ್ಚು ಚೀನಾವನ್ನು ಬಯಸುವುದು ಸ್ಪಷ್ಟವಾಗುತ್ತದೆ. ಹಿಂದೂ ದೇಶವಾದ ನೇಪಾಳ ಭಾರತದ ಬದಲಾಗಿ ಕಮ್ಯೂನಿಸ್ಟ್ (ಚೀನಾ) ದೇಶವನ್ನು ಬಯಸುವುದಾದರೂ ಏಕೆ? ಇದುವೇ ರಾಜಕೀಯ ಮತ್ತು ದೇಶದ ಹಿತಚಿಂತನೆ! ವಿಶ್ವಾಸವೇ ಬೇರೆ ಮತ್ತು ದೇಶದ ಹಿತಚಿಂತನೆಯೇ ಬೇರೆ. ಭಾರತೀಯ ಮುಸ್ಲಿಮರು ಮತ್ತು ಪಾಕಿಸ್ತಾನಕ್ಕೆ ಇದೇ ಅನ್ವಯವಾಗುತ್ತದೆ.
ಭಾರತೀಯ ಮುಸ್ಲಿಮರು ಮತ್ತು ಕ್ರಿಕೆಟ್
ಹಲವರು ತಿಳಿದಿದ್ದಾರೆ, ಭಾರತೀಯ ಮುಸ್ಲಿಮರು ಕ್ರಿಕೆಟ್ ನಲ್ಲಿ ಎಂದಿಗೂ ಪಾಕಿಸ್ತಾನವನ್ನು ಬೆಂಬಲಿಸುತ್ತಾರೆ ಮತ್ತು ಹಾಗಾಗಿ ಅವರು ದೇಶಪ್ರೇಮಿಗಳಲ್ಲ. ನಾವು ತಿಳಿಯಬೇಕಾದ್ದು ಒಂದು ಕ್ರೀಡೆ ಎಂದಿಗೂ ದೇಶಪ್ರೇಮದ ಅಳತೆಯಾಗಲು ಸಾಧ್ಯವಿಲ್ಲ. ಆಟಗಾರರು ತಮ್ಮ ಉತ್ಸಾಹ ಮತ್ತು ಧನರಾಶಿಗಾಗಿ ಆಟವಾಡುತ್ತಾರೆ ಹಾಗೂ ಅಭಿಮಾನಿಗಳು ಮನರಂಜನೆ ಮತ್ತು ಮೋಜಿಗೆ ಕ್ರೀಡೆ ನೋಡುತ್ತಾರೆ. ಹೀಗಿದ್ದಲ್ಲಿ ಕ್ರಿಕೆಟ್ ಏಕೆ ಭಿನ್ನವಾಗಬೇಕು? ಖಂಡಿತ ಇಲ್ಲ!
ಆಶ್ಚರ್ಯಯವೆಂದರೆ ಕೇವಲ ಕ್ರಿಕೆಟನ್ನು ದೇಶಪ್ರೇಮ ಅಳಿಯಲು ಬಳಸಲಾಗುತ್ತದೆ. ಬೇರೆ ಕ್ರೀಡೆಗಳೇಕಲ್ಲ? ಎಫ್ 1 ಕಾರ್ ರೇಸಿಂಗ್ ನಲ್ಲಿ ಫೋರ್ಸ್ ಇಂಡಿಯಾ ಬದಲಾಗಿ ರೆಡ್ ಬುಲ್ ಅಥವಾ ಮೆಕಲಾರೆನ್ ಮರ್ಸಿಡೀಸ್ ಬೆಂಬಲಿಸುವ ಹಿಂದೂಗಳ ಬಗ್ಗೆ ಏನು ಹೇಳಬೇಕು? ನಾವೀಗ ಈ ಎಲ್ಲಾ ಹಿಂದೂಗಳನ್ನು ದೇಶಪ್ರೇಮಿಗಳಲ್ಲವೆಂದು ಕರೆಯಬೇಕೆ?
ಪಾಕಿಸ್ತಾನಕ್ಕೆ ಸಂಬಂಧಪಟ್ಟಂತೆ ಎಲ್ಲವನ್ನೂ ಅಲ್ಲಗಳೆಯ ಬೇಕಾದಲ್ಲಿ, ನುಸ್ರತ್ ಫತೆಹ್ ಅಲಿ ಖಾನ್, ಆತಿಫ್ ಅಸ್ಲಮ್ ಮುಂತಾದವರ ಹಿಂದೂ ಸಂಗೀತ ಅಭಿಮಾನಿಗಳ ಬಗ್ಗೆ ಏನು ಹೇಳಬೇಕು? ಅವರೂ ದೇಶಪ್ರೇಮಿಗಳಲ್ಲವೆನ್ನ ಬೇಕೆ? ಭಾರತದಲ್ಲಿನ ಹಿಂದೂಗಳು ನುಸ್ರತ್ ಫತೆಹ್ ಅಲಿ ಖಾನ್, ಆತಿಫ್ ಅಸ್ಲಮ್ ಮುಂತಾದವರ ಸಂಗೀತದ ಅಭಿಮಾನಿಗಳಾಗಿದ್ದು ದೇಶಪ್ರೇಮಿಳಲ್ಲವಾದರೆ, ಇವರನ್ನು ಮತ್ತು ಈ ಸಂಗೀತವನ್ನು ಹೊರತುಪಡಿಸುವುದಾದರೂ ಏಕೆ? ಸಂಗೀತ, ಕ್ರೀಡೆ, ಕಲೆ ಇವೆಲ್ಲವೂ ಸರಹದ್ದುಗಳನ್ನು ಮೀರಿದವು ಮತ್ತು ಎಂದಿಗೂ ದೇಶಪ್ರೇಮದ ಅಳತೆಯಾಗಿ ಬಳಸಬಾರದು.
ಭಾರತೀಯ ಮುಸ್ಲಿಮರು ಮತ್ತು ಅವರ ದೇಶಪ್ರೇಮದ ಬಗ್ಗೆ ಪ್ರಚಾರ ಮಾಡಲಾಗುವ ಪ್ರಶ್ನೆಗಳಲ್ಲಿ ಕಿಂಚಿತ್ತೂ ಸತ್ಯವಿಲ್ಲ ಎಂದು ನಿಮಗೆ ಈಗ ಸ್ಪಷ್ಟವಾಗಿರಬೇಕೆಂದು ನಾವು ಭಾವಿಸುತ್ತೇವೆ.