ಇಂದು ಒಬ್ಬರಿಗೊಬ್ಬರು ಶುಭ ಕೋರಲು ಹಸ್ತಲಾಘವ ಮಾಡುವುದು ಸರ್ವೇಸಾಮಾನ್ಯ. ಆದ್ದರಿಂದ, ಸ್ವಾಭಾವಿಕವಾಗಿ ಅನೇಕರು “ಮುಸ್ಲಿಮರು ವಿರುದ್ಧ ಲಿಂಗದವರೊಂದಿಗೆ ಏಕೆ ಕೈಕುಲುಕುವುದಿಲ್ಲ?” ಎಂದು ಆಶ್ಚರ್ಯಪಡುತ್ತಾರೆ. ಮುಸ್ಲಿಮರು ತಮ್ಮೊಂದಿಗೆ ಕೈಕುಲುಕಲು ನಿರಾಕರಿಸಿದಾಗ ಕೆಲವರು ತಪ್ಪಾಗಿ ತಿಳಿದುಕೊಂಡದ್ದೂ ಇದೆ. ಆದ್ದರಿಂದ ಈ ಸಮಸ್ಯೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳೋಣ.
ಮುಸ್ಲಿಮರು ವಿರುದ್ಧ ಲಿಂಗದವರೊಂದಿಗೆ ಕೈಕುಲುಕುವುದನ್ನು ನಿಷೇಧಿಸಲಾಗಿದೆ
ಪ್ರವಾದಿ ಮುಹಮ್ಮದ್ ಹೇಳಿದರು:
ನಿಮ್ಮಲ್ಲಿ ಒಬ್ಬನ ತಲೆಗೆ ಕಬ್ಬಿಣದ ಸೂಜಿಯಿಂದ ಹೊಡೆಯಲ್ಪಡುವುದು, ಅವನಿಗೆ ಅನುಮತಿಯಿಲ್ಲದ ಮಹಿಳೆಯನ್ನು ಮುಟ್ಟುವುದಕ್ಕಿಂತ, ಉತ್ತಮವಾಗಿರುತ್ತದೆ.
ಸಹೀಹ್ ಜಾಮಿಹ್ ಹದೀಸ್ # 5045
ಇಸ್ಲಾಂ ಧರ್ಮದ ಪ್ರಕಾರ, ಮುಸ್ಲಿಂ ಪುರುಷ ಅಥವಾ ಮಹಿಳೆ ವಿರುದ್ಧ ಲಿಂಗದವರೊಂದಿಗೆ ಕೈಕುಲುಕಲು ಅನುಮತಿಯಿಲ್ಲ. ಈ ನಿಯಮಕ್ಕಿರುವ ವಿನಾಯಿತಿಯೆಂದರೆ, ಯಾರೊಂದಿಗೆ ಮದುವೆಗೆ ಅನುಮತಿಯಿಲ್ಲ ಎಂದು ಪರಿಗಣಿಸಲಾಗುತ್ತದೋ ಅಂತಹ ವಿರುದ್ಧ ಲಿಂಗದ ಅವರದೇ ಕುಟುಂಬದ ಸದಸ್ಯರು. ಉದಾಹರಣೆ: ಪೋಷಕರು, ಒಡಹುಟ್ಟಿದವರು ಇತ್ಯಾದಿ.
ವಿರುದ್ಧ ಲಿಂಗದವರೊಂದಿಗೆ ಕೈಕುಲುಕುವುದು ಅಷ್ಟೊಂದು ದೊಡ್ಡ ವಿಷಯವೇ?
ಶುಭಾಶ ಕೋರುವ ವಿವಿಧ ರೂಪಗಳು
“ಕೈ ಕುಲುಕುವುದು” ಶುಭಾಶ ಕೋರುವ ಏಕೈಕ ರೂಪವೇ? ಖಂಡಿತ ಇಲ್ಲ. ಈ ಲೇಖನವು ವಿವಿಧ ದೇಶಗಳಲ್ಲಿನ ವಿವಿಧ ರೀತಿಯ ಶುಭಾಶಯದ ವಿಧಾನಗಳ ಬಗ್ಗೆ ವಿವರಗಳನ್ನು ನೀಡುತ್ತದೆ.
ಅಪ್ಪಿಕೊಳ್ಳುವುದು
ಅನೇಕ ಯುರೋಪಿಯನ್ ದೇಶಗಳಲ್ಲಿ ಮತ್ತು ಅಮೆರಿಕಾದಲ್ಲಿ, ಶುಭಾಶಯ ಕೋರಲು ಅಪ್ಪಿಕೊಳ್ಳುವುದು ಸರ್ವೇ ಸಾಮಾನ್ಯ.
ಕೆನ್ನೆಯ ಮೇಲೆ ಚುಂಬನ
ಫ್ರಾನ್ಸ್‌ನಂತಹ ಕೆಲವು ದೇಶಗಳಲ್ಲಿ, ಕೆನ್ನೆಯ ಮೇಲೆ ಮುತ್ತಿಟ್ಟು ಶುಭಾಶಯ ಕೋರುವುದು ಸರ್ವೇ ಸಾಮಾನ್ಯ. ಈ ರೀತಿಯ ಶುಭಾಶಯವನ್ನು “ಲಾ ಬೈಸ್” ಎಂದು ಕರೆಯಲಾಗುತ್ತದೆ.
ಮಡಚಿದ ಕೈಗಳು
ಭಾರತದ ಅನೇಕ ಭಾಗಗಳಲ್ಲಿ, ಜನರು ಇತರ ವ್ಯಕ್ತಿಯನ್ನು ಮುಟ್ಟದೆ ಕೇವಲ ತಮ್ಮ ಮಡಚಿದ ಕೈಗಳಿಂದ ಸ್ವಾಗತಿಸಲು ಇಷ್ಟಪಡುತ್ತಾರೆ.

ಶುಭಾಶಯ ಮತ್ತು ಸಂವೇದನೆಗಳ ಆಯ್ಕೆ
ಶುಭಾಶಯ ಕೋರುವ ಕ್ರಮ ವ್ಯಕ್ತಿಯು ಬೆಳೆದು ಬಂದ ರೀತಿ ಮತ್ತು ಅವರ ಸಂವೇದನೆಗಳ (ಸರಿ ತಪ್ಪು ಎನ್ನುವುದರ ಪರಿಚಯ) ಮೇಲೆ ಅವಲಂಬಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಳ್ಳಬೇಕು. ಸಂವೇದನೆಗಳು ಸ್ಥಳೀಯ ಸಂಸ್ಕೃತಿ, ಪದ್ಧತಿಗಳು ಮತ್ತು ನಂಬಿಕೆಯಿಂದ ರೂಪುಗೊಂಡಿವೆ. ಮುಸ್ಲಿಮರ ಸಂವೇದನೆಗಳು ಅವರ ನಂಬಿಕೆಗಳಿಂದ ರೂಪುಗೊಂಡಿವೆ. ಈ ಕಾರಣಕ್ಕಾಗಿಯೇ ಮುಸ್ಲಿಮರು ವಿರುದ್ಧ ಲಿಂಗದವರೊಂದಿಗೆ ಕೈಕುಲುಕುವುದಿಲ್ಲ.
ಉದಾಹರಣೆಗೆ, ಭಾರತದಲ್ಲಿ, ಯಾರಾದರೂ ಮಹಿಳೆಯನ್ನು ಸ್ವಾಗತಿಸಲು ತಬ್ಬಿಕೊಳ್ಳುವುದು ಸಾಮಾನ್ಯವಾಗಿ ಒಪ್ಪಿಕೊಳ್ಳುವಂತಹ ಅಭ್ಯಾಸವಲ್ಲ. ಕೆನ್ನೆಗೆ ಮುತ್ತಿಟ್ಟು ಶುಭಾಶಯ ಕೋರುವುದೂ ಅಪರೂಪ.
ಅನೇಕ ಪಾಶ್ಚಿಮಾತ್ಯ ದೇಶಗಳಲ್ಲಿ ಅಪ್ಪಿಕೊಳ್ಳುವುದು ಅಥವಾ ಕೆನ್ನೆಯ ಮೇಲೆ ಮುತ್ತಿಡುವುದು ದೊಡ್ಡ ವಿಷಯವಲ್ಲವಾದರೂ, ನಮ್ಮ ಸಂವೇದನೆಗಳ ಕಾರಣದಿಂದಾಗಿ, ಸಾಮಾನ್ಯವಾಗಿ ಹೇಳುವುದಾದರೆ, ನಾವು ಭಾರತದಲ್ಲಿ ಈ ಶುಭಾಶಯದ ವಿಧಾನಗಳನ್ನು ಅಳವಡಿಸಿಕೊಳ್ಳುವುದಿಲ್ಲ. ಆದ್ದರಿಂದ, ಪಾಶ್ಚಿಮಾತ್ಯರಿಗೆ ದೊಡ್ಡ ವಿಷಯವಲ್ಲದ ಶುಭಾಶಯದ ವಿಧಾನಗಳು ನಮಗೆ ನಿಜವಾಗಿಯೂ ದೊಡ್ಡ ವಿಷಯವಾಗಿ ಕಂಡುಬರುತ್ತವೆ.
ಅಮೆರಿಕನ್ನರು ಅಥವಾ ಫ್ರೆಂಚರು ಭಾರತದಲ್ಲಿ ನಮ್ಮನ್ನು ಭೇಟಿ ಮಾಡಿದಾಗ, ನಾವು ತಬ್ಬಿಕೊಳ್ಳಲು ಅಥವಾ ಕೆನ್ನೆಯ ಮೇಲೆ ಚುಂಬನವನ್ನು ಸ್ವೀಕರಿಸಲು ನಿರಾಕರಿಸಿದಾಗ ಅವರು ಮನನೊಂದಿಸಕೊಳ್ಳಬೇಕೇ? ಇಲ್ಲ. ಇದಕ್ಕೆ ವಿರುದ್ಧವಾಗಿ, ಅವರು ಸ್ಥಳೀಯ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಅದನ್ನು ಗೌರವಿಸುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ.
ಜನರ ಆಯ್ಕೆಯನ್ನು ಗೌರವಿಸಿ
ಸಂಕ್ಷಿಪ್ತವಾಗಿ ಹೇಳುವುದಾದರೆ, ಕೆಲವರು ಕೇವಲ ಮಡಚಿದ ಕೈಗಳಿಂದ ಶುಭಾಶಯ ಕೋರುತ್ತಾರೆ, ಕೆಲವರು ಹಸ್ತಲಾಘವ ಮಾಡುವುದಕ್ಕೆ ಸೈ, ಆದರೆ ತಬ್ಬಿಕೊಳ್ಳುವುದಿಲ್ಲ, ಇನ್ನೂ ಕೆಲವರು ತಬ್ಬಿಕೊಳ್ಳುವುದರಲ್ಲಿ ಆರಾಮವಾಗಿರುತ್ತಾರೆ ಆದರೆ ಅದಕ್ಕಿಂತ ಹೆಚ್ಚೇನೂ ಅಲ್ಲ. ವಿದೇಶಿಯರು ನಮ್ಮನ್ನು ಅಭಿನಂದಿಸಿದಾಗ ನಮ್ಮ ಸಂವೇದನೆಯನ್ನು ಗೌರವಿಸಬೇಕೆಂದು ನಾವು ನಿರೀಕ್ಷಿಸುವಂತೆ, ನಾವು ಸಹ ನಮ್ಮ ಸಹ ಭಾರತೀಯರ ಸಂವೇದನೆಗಳನ್ನು ಗೌರವಿಸಬೇಕು.
ಸಾರಾಂಶ
- ಶುಭಾಶಯ ಕೋರುವ ರೂಪಗಳು ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತವೆ.
- ಒಂದು ಸ್ಥಳದಲ್ಲಿ ಶುಭಾಶಯದ ಸಾಮಾನ್ಯ ರೂಪವೆಂದು ಪರಿಗಣಿಸಲ್ಪಟ್ಟಿರುವುದನ್ನು ಇತರ ಸ್ಥಳಗಳಲ್ಲಿ ಸ್ವೀಕಾರಾರ್ಹವೆಂದು ಪರಿಗಣಿಸಲಾಗುವುದಿಲ್ಲ.
- ಶುಭಾಶಯ ಕೋರುವ ಕ್ರಮ ವ್ಯಕ್ತಿಯು ಬೆಳೆದು ಬಂದ ರೀತಿ ಮತ್ತು ಅವರ ಸಂವೇದನೆಗಳ (ಸರಿ ತಪ್ಪು ಎನ್ನುವುದರ ಪರಿಚಯ) ಮೇಲೆ ಅವಲಂಬಿತವಾಗಿರುತ್ತದೆ.
- ಮುಸ್ಲಿಮರಿಗೆ, ಅವರ ಸಂವೇದನೆಗಳು ಅವರ ನಂಬಿಕೆಗಳಿಂದ ರೂಪುಗೊಂಡಿವೆ. ಈ ಕಾರಣಕ್ಕಾಗಿಯೇ ಮುಸ್ಲಿಮರು ವಿರುದ್ಧ ಲಿಂಗದವರೊಂದಿಗೆ ಕೈಕುಲುಕುವುದಿಲ್ಲ.
- ವಿದೇಶಿಯರು ನಮ್ಮನ್ನು ಅಭಿನಂದಿಸಿದಾಗ ನಮ್ಮ ಸಂವೇದನೆಯನ್ನು ಗೌರವಿಸಬೇಕೆಂದು ನಾವು ನಿರೀಕ್ಷಿಸುವಂತೆ, ನಾವು ಸಹ ನಮ್ಮ ಸಹ ಭಾರತೀಯರ ಸಂವೇದನೆಗಳನ್ನು ಗೌರವಿಸಬೇಕು.