ಮನುಷ್ಯನು ದೇವರ ಬಗ್ಗೆ ಸ್ಪಷ್ಟವಾದ ಮತ್ತು ಕಲಬೆರಕೆಯಿಲ್ಲದ ಪರಿಕಲ್ಪನೆ ಮತ್ತು ಮರಣಾನಂತರದ ಜೀವನದ ಬಗ್ಗೆ ಖಚಿತತೆಯನ್ನು ಹೊಂದಿದ್ದಾಗ ಮಾತ್ರ, ಅವನು ಸ್ಥಿರವಾಗಿರಲು ಮತ್ತು ಪಾಪಗಳಿಂದ ದೂರವಿರಲು ಸಾಧ್ಯ.
ನಾವು ಸೂರ್ಯ ಅಥವಾ ಗಾಳಿ ಅಥವಾ ಮಳೆ ಇಲ್ಲದೆ ಬದುಕಬಹುದೇ? ಖಂಡಿತ ಇಲ್ಲ.
ಹಿಂದೂಗಳಿಗೆ ಅವರದೇ ದೇವರಿದ್ದರೆ, ಕ್ರೈಸ್ತರಿಗೆ ಅವರದೇ ಆದ ದೇವರಿದ್ದರೆ, ಮುಸ್ಲಿಮರಿಗೆ ಅವರದೇ ಆದ ದೇವರಿದ್ದರೆ, ಏನಾಗುತ್ತದೆ ಎಂದು ಊಹಿಸಿ? ಜನರಿಗೆ ತಮ್ಮದೇ ಆದ ದೇವರುಗಳು ಇದ್ದಲ್ಲಿ, ಬಿಸಿಲು, ಉಸಿರಾಡುವ ಗಾಳಿ ಮತ್ತು ಮಳೆಯಿಂದ ಯಾರು ಹೆಚ್ಚು ಪ್ರಯೋಜನ ಪಡೆಯಬೇಕೆಂದು ದೇವರುಗಳಲ್ಲಿ ತಾರತಮ್ಯ ಮತ್ತು ಜಗಳಗಳು ನಡೆಯುವುದಿಲ್ಲವೇ? ಈ ಬಗ್ಗೆ ಯೋಚಿಸಿ. ಖಂಡಿತವಾಗಿಯೂ, ತಾರತಮ್ಯ ಮತ್ತು ಹೋರಾಟ ಇರುತ್ತಿತ್ತು.
ಆದರೆ, ನಾವು ಯಾವುದೇ ತಾರತಮ್ಯವನ್ನು ಅನುಭವಿಸುತ್ತಿಲ್ಲ. ಇದರಿಂದ ನಾವೇನು ತಿಳಿಯಬಹುದು? ಜನರು ಯಾವುದೇ ನಂಬಿಕೆಯನ್ನು ಅನುಸರಿಸುತ್ತಿದ್ದರೂ, ಅವರೆಲ್ಲಾರನ್ನೂ ಒಬ್ಬನೇ ದೇವರು ಸೃಷ್ಟಿಸಿರುವನು. ಅದಕ್ಕಾಗಿಯೇ, ನಾವೆಲ್ಲರೂ ಯಾವುದೇ ತಾರತಮ್ಯವಿಲ್ಲದೆ ಎಲ್ಲಾ ನೈಸರ್ಗಿಕ ಸಂಪನ್ಮೂಲಗಳ ಪ್ರಯೋಜನಗಳನ್ನು ಆನಂದಿಸಲು ಸಮರ್ಥರಾಗಿದ್ದೇವೆ.
ಆಕಾಶಗಳಲ್ಲಿ ಅಥವಾ ಭೂಮಿಯಲ್ಲಿ ದೇವರನ್ನು ಹೊರತುಪಡಿಸಿ ಇತರ ದೈವಗಳು ಇದ್ದಿದ್ದರೆ, ಖಂಡಿತವಾಗಿ ಎರಡೂ (ಆಕಾಶ ಮತ್ತು ಭೂಮಿ) ಭ್ರಷ್ಟವಾಗುತ್ತಿದ್ದವು.
ಕುರಾನ್ ಅಧ್ಯಾಯ 21: ಸೂಕ್ತಿ 22.