More

  Choose Your Language

  ಅಲ್ಲಾಹ್ ಯಾರು?

  "ದೇವರು" ಎನ್ನಲು ನಾವು ವಿವಿಧ ಭಾಷೆಗಳಲ್ಲಿ ವಿಭಿನ್ನ ಪದಗಳನ್ನು ಬಳಸುತ್ತೇವೆ. ಅರಬಿ ಭಾಷೆಯಲ್ಲಿ, ನಾವು ದೇವರನ್ನು "ಅಲ್ಲಾಹ್" ಎಂದು ಕರೆಯುತ್ತೇವೆ. ಮುಸ್ಲಿಮರು "ಅಲ್ಲಾಹ್" ಎಂಬ ಪದವನ್ನು ಉಚ್ಚರಿಸಿದಾಗ, ಅವರು ಕರೆಯುತ್ತಿರುವುದು ತಮ್ಮ ವೈಯಕ್ತಿಕ ದೇವರನ್ನಲ್ಲ, ಬದಲಿಗೆ ಅವರು ನಮ್ಮೆಲ್ಲರನ್ನೂ ಮತ್ತು ಅಸ್ತಿತ್ವದಲ್ಲಿರುವ ಎಲ್ಲವನ್ನೂ ಸೃಷ್ಟಿಸಿದ ದೇವರನ್ನೇ ಕರೆಯುತ್ತಿರುತ್ತಾರೆ.

  “ಅಲ್ಲಾಹ್” ಮುಸ್ಲಿಮರ ವೈಯಕ್ತಿಕ ದೇವರು ಎಂದು ಹಲವರು ಭಾವಿಸಿದ್ದಾರೆ. ಹೇಗೆ ಹಿಂದೂಗಳು ಶಿವನನ್ನು, ಕ್ರೈಸ್ತರು ಯೇಸುವನ್ನು, ಹಾಗೆಯೇ ಮುಸ್ಲಿಮರು ಅಲ್ಲಾಹನನ್ನು ಆರಾಧಿಸುತ್ತಾರೆ ಎಂದು ಜನರು ಭಾವಿಸಿದ್ದಾರೆ.

  ಅಲ್ಲಾಹ್ ಯಾರು?

  ಅಲ್ಲಾಹ್ ಎಂದರೆ ದೇವರು

  ಅಲ್ಲಾಹ್, ಒಂದು ಅರಬಿ ಪದ, ಇದರರ್ಥ “ದೇವರು” ಎಂದು. “ದೇವರು” ಎನ್ನಲು ನಾವು ವಿವಿಧ ಭಾಷೆಗಳಲ್ಲಿ ವಿಭಿನ್ನ ಪದಗಳನ್ನು ಬಳಸುತ್ತೇವೆ. ಕೆಲವು ಉದಾಹರಣೆಗಳನ್ನು ನೋಡೋಣ.

  ಹಿಂದಿಯಲ್ಲಿ ದೇವರನ್ನು “ಈಶ್ವರ್” ಎನ್ನುತ್ತೇವೆ.

  ತೆಲುಗಿನಲ್ಲಿ ದೇವರನ್ನು “ದೇವುಡು” ಎನ್ನುತ್ತೇವೆ.

  ಕನ್ನಡದಲ್ಲಿ ದೇವರನ್ನು “ದೇವರು” ಎನ್ನುತ್ತೇವೆ.

  ಮಲಯಾಳಂನಲ್ಲಿ ದೇವರನ್ನು “ದೈವಂ” ಎನ್ನುತ್ತೇವೆ.

  ಅರಬಿ ಭಾಷೆಯಲ್ಲಿ ದೇವರನ್ನು “ಅಲ್ಲಾಹ್” ಎನ್ನುತ್ತೇವೆ.

  ಗೂಗಲ್ ಅನುವಾದ (Google Translate)

  ಅಲ್ಲಾಹ್ ಎಂದರೆ ದೇವರು

  ಗೂಗಲ್ ಅನುವಾದದಲ್ಲಿ “ದೇವರು” ಎಂಬ ಪದದ ಅರಬಿ ಅನುವಾದವನ್ನು ನೋಡಿದರೆ, ಅದು “ಅಲ್ಲಾಹ್” ಎಂದು ತೋರಿಸುತ್ತದೆ. “ಅಲ್ಲಾಹ್” ಎಂಬ ಅರಬಿ ಪದಕ್ಕೆ “ದೇವರು” ಎಂದರ್ಥ ಮತ್ತು ಇದು ಮುಸ್ಲಿಮರ ವಿಶೇಷ ದೇವರೇನಲ್ಲ ಎಂದೀಗ ಸ್ಪಷ್ಟವಾಗಿರಬೇಕು.

  ಒಂದೇ ವಿಷಯ – ವಿಭಿನ್ನ ಪದಗಳು

  ನಾವು ನೀರನ್ನು ಹಿಂದಿಯಲ್ಲಿ “ಪಾನಿ” ಎಂದು ಕರೆಯುತ್ತೇವೆ, ಕನ್ನಡದಲ್ಲಿ “ನೀರು”, ತೆಲುಗಿನಲ್ಲಿ “ನೀಳು”, ಮಲಯಾಳಂನಲ್ಲಿ “ವೆಲ್ಲಮ್” ಮತ್ತು ಅರಬಿಯಲ್ಲಿ “ಮೋಯಾ” ಎಂದು ಕರೆಯುತ್ತೇವೆ. ವಿವಿಧ ಭಾಷೆಗಳಲ್ಲಿನ ವಿಭಿನ್ನ ಪದಗಳು ಹೇಗೆ ನೀರನ್ನೇ ಉಲ್ಲೇಖಿಸುತ್ತವೆ ಅಂತೆಯೇ ದೇವರಿಗೆ ಉಪಯೋಗಿಸುವ ವಿವಿಧ ಭಾಷೆಗಳಲ್ಲಿನ ವಿಭಿನ್ನ ಪದಗಳು ಅದೇ ದೇವರಿಗೆ ಅನ್ವಯಿಸುತ್ತವೆ.

  ಸಾರಾಂಶ

  ನೆನಪಿಡಿ, ಮುಸ್ಲಿಮರು “ಅಲ್ಲಾಹ್” ಎಂಬ ಪದವನ್ನು ಉಚ್ಚರಿಸಿದಾಗ, ಅವರು ಕರೆಯುತ್ತಿರುವುದು ತಮ್ಮ ವೈಯಕ್ತಿಕ ದೇವರನ್ನಲ್ಲ, ಬದಲಿಗೆ ಅವರು ನಮ್ಮೆಲ್ಲರನ್ನೂ ಮತ್ತು ಅಸ್ತಿತ್ವದಲ್ಲಿರುವ ಎಲ್ಲವನ್ನೂ ಸೃಷ್ಟಿಸಿದ ದೇವರನ್ನೇ ಕರೆಯುತ್ತಿರುತ್ತಾರೆ.

  WHAT OTHERS ARE READING

  Most Popular