More

    Choose Your Language

    ಸಾವಿನ ನಂತರದ ಜೀವನ ಸತ್ಯವೇ?

    ಈ ಜಗತ್ತಿನಲ್ಲಿ ಯಾರಾದರೂ, ಎಂದಾದರೂ ಸಂಪೂರ್ಣವಾಗಿ ನ್ಯಾಯವನ್ನು ಸ್ಥಾಪಿಸಬಹುದೇ? ಹಿಟ್ಲರ್ ಆರು ಮಿಲಿಯನ್ ಮುಗ್ಧ ಜನರನ್ನು ಕೊಂದನು. ಮಾನವ ಕಾನೂನು ಹಿಟ್ಲರನಿಗೆ ಯಾವ ಶಿಕ್ಷೆಯನ್ನು ನೀಡಬಲ್ಲದು? ಅವರು ಒಬ್ಬ ನಿರಪರಾಧಿಯ ಹತ್ಯೆಗೆ ಶಿಕ್ಷೆಯಾಗಿ ಮರಣದಂಡನೆಯನ್ನು ನೀಡಬಹುದು. ಉಳಿದವರ ಸಾವಿಗೆ ಬೆಲೆಯಿಲ್ಲವೇ?

    ಸಾವಿನ ನಂತರ ಜೀವನವಿದೆಯೇ ಎಂದು ಕಂಡುಹಿಡಿಯುವ ಮೊದಲು, ನಮಗೆ ಸಾವಿನ ನಂತರದ ಜೀವನ ಅಗತ್ಯವಿದೆಯೇ ಎಂದು ಅರ್ಥಮಾಡಿಕೊಳ್ಳೋಣ.

    ನಮಗೆ ಸಾವಿನ ನಂತರದ ಜೀವನದ ಅಗತ್ಯವಿದೆಯೇ?

    ಸಾವು – ಒಂದು ಆರಂಭವೇ ಅಥವಾ ಅಂತ್ಯವೇ?

    ನಮ್ಮ ದೇಶ, ಧರ್ಮ, ಜನಾಂಗ ಯಾವುದೇ ಆದರೂ ಮನುಷ್ಯರಾದ ನಾವು ನ್ಯಾಯವನ್ನು ಬಯಸುತ್ತೇವೆ. ಅದಕ್ಕಾಗಿಯೇ ಜಗತ್ತಿನ ಪ್ರತಿ ದೇಶ ನ್ಯಾಯವನ್ನು ಸ್ಥಾಪಿಸುವ ವ್ಯವಸ್ಥೆ ಹೊಂದಿದೆ. ಉದಾಹರಣೆಗೆ ಪೊಲೀಸ್ ಪಡೆ, ಸೇನೆ, ನ್ಯಾಯಾಲಯಗಳು ಇತ್ಯಾದಿ.

    ಈ ಜಗತ್ತಿನಲ್ಲಿ ನ್ಯಾಯವನ್ನು ಸಂಪೂರ್ಣವಾಗಿ ಸ್ಥಾಪಿಸಬಹುದೇ? ಸ್ವಲ್ಪ ಇದರ ಬಗ್ಗೆ ವಿಮರ್ಶಿಸೋಣ.

    ಹಿಟ್ಲರ್ ತನ್ನ ಭಯೋತ್ಪಾದನೆಯ ಆಳ್ವಿಕೆಯಲ್ಲಿ ಆರು ಮಿಲಿಯನ್ ಮುಗ್ಧ ಜನರನ್ನು ಕೊಂದನು. ಪೋಲೀಸರು ಅವನನ್ನು ಬಂಧಿಸಿದ್ದರೂ, ಮಾನವ ರೂಪಿತ ಕಾನೂನು ಹಿಟ್ಲರ್‌ಗೆ ಯಾವ ಶಿಕ್ಷೆಯನ್ನು ನೀಡಬಹುದು? ಅವರು ಹೆಚ್ಚೆಂದರೆ ಅವನಿಗೆ ಮರಣದಂಡನೆ ವಿಧಿಸ ಬಹುದು. ಅದು ಒಬ್ಬ ಅಮಾಯಕನ ಹತ್ಯೆಯ ಬದಲಾಗಿ ಮಾತ್ರ ಶಿಕ್ಷೆಯಾಗುತ್ತದೆ. ಉಳಿದ ಐದು ಮಿಲಿಯನ್, ಒಂಬೈನೂರ ತೊಂಬತ್ತೊಂಬತ್ತು ಸಾವಿರ, ಒಂಬೈನೂರ ತೊಂಬತ್ತೊಂಬತ್ತು ಜನರ ಬಗ್ಗೆ ಏನು ಮಾಡುವುದು?

    ತನ್ನನ್ನು ತಾನು ಕೊಂದು ನೂರಾರು ಅಮಾಯಕರನ್ನು ಕೊಂದ ಆತ್ಮಹತ್ಯಾ ಬಾಂಬರ್ ಅನ್ನು ನಾವು ಹೇಗೆ ಶಿಕ್ಷಿಸುತ್ತೇವೆ? ಅವನು ಈಗಾಗಲೇ ಸತ್ತಿರುವುದರಿಂದ ಅವನನ್ನು ಶಿಕ್ಷಿಸಲೂ ನಮಗೆ ಸಾಧ್ಯವಾಗುವುದಿಲ್ಲ.

    ಶಿಕ್ಷೆಗೊಳಗಾದ ಅಪರಾಧಿಗಳಿಗೆ 100 ವರ್ಷಗಳವರೆಗೂ ಹೋಗಬಹುದಾದ ಅನೇಕ ಜೀವಾವಧಿ ಶಿಕ್ಷೆಗಳನ್ನು ನ್ಯಾಯಾಧೀಶರು ಬರೆಯುವುದನ್ನು ನಾವು ಕೇಳಿದ್ದೇವೆ. ಅಪರಾಧಿಯು ಇಷ್ಟು ವರ್ಷಗಳ ಶಿಕ್ಷೆಗೆ ಅರ್ಹನಾಗಿರುವುದು ಇದಕ್ಕೆ ಕಾರಣವಾದರೂ, 100 ವರ್ಷಗಳ ಶಿಕ್ಷೆಯ ಅವಧಿಯನ್ನು ಅಪರಾಧಿಯೊಬ್ಬ ಪೂರ್ಣಗೊಳಿಸುವುದು ಎಂದಾದರೂ ನೋಡಿದ್ದೀರಾ?

    ಸ್ಪಷ್ಟ, ಸಂಪೂರ್ಣ ಮತ್ತು ಪರಿಪೂರ್ಣ ನ್ಯಾಯ ಎಂದರೆ ಸಂತ್ರಸ್ತ ಜನರ ಕಡೆಗೂ ಸಹ ಗಮನವಹಿಸ ಬೇಕಾಗುತ್ತದೆ. ಹಿಟ್ಲರ್ ಮತ್ತು ಆತ್ಮಹತ್ಯಾ ಬಾಂಬರ್‌ಗಳಂತಹ ಜನರಿಂದ ಕೊಲ್ಲಲ್ಪಟ್ಟ ಅಮಾಯಕರಿಗೆ ನಾವು ಏನು ಪರಿಹಾರವನ್ನು ನೀಡಬಹುದು? ಅವರು ಈಗಾಗಲೇ ಸತ್ತಿರುವ ಕಾರಣ ನಾವು ಅವರಿಗೆ ಪರಿಹಾರ ನೀಡಲು ಸಾಧ್ಯವೇ ಇಲ್ಲ.

    ಹಲವಾರು ಒಳ್ಳೆಯ ಜನರು ಚಿತ್ರಹಿಂಸಿಸಲಾಗುತ್ತಾರೆ ಹಾಗೂ ಅವರಲ್ಲಿ ಹಲವರು ಕೊಲ್ಲಲ್ಪಡುತ್ತಾರೆ. ಆ ಒಳ್ಳೆಯ ಜನರಿಗೆ ಅವರ ಒಳ್ಳೆಯತನಕ್ಕೆ ಪ್ರತಿಫಲ ಸಿಗಬೇಕೆಂದು ನಿಮಗನ್ನಿಸುವುದಿಲ್ಲವೇ?

    ತಾರ್ಕಿಕವಾಗಿ ಯೋಚಿಸಿದರೆ, ಈ ಜಗತ್ತಿನಲ್ಲಿ ಜನರು ಮಾಡಿದ್ದನ್ನು ಸರಿದೂಗಿಸಲು ಖಂಡಿತವಾಗಿಯೂ ಸಾವಿನ ನಂತರ ಶಾಶ್ವತ ಜೀವನದ ಅಗತ್ಯವಿದೆ ಎಂಬ ತೀರ್ಮಾನಕ್ಕೆ ನಾವು ಬರುತ್ತೇವೆ.

    ಸಾವಿನ ನಂತರದ ಜೀವನದ ಇಸ್ಲಾಮಿ ಪರಿಕಲ್ಪನೆ

    ಹುಟ್ಟಿದ ಅಥವಾ ಪ್ರಾರಂಭವಿರುವ ಪ್ರತಿಯೊಂದಕ್ಕೂ ಅಂತ್ಯವಿರುವಂತೆ ಈ ಜಗತ್ತಿಗೂ ಅಂತ್ಯವಿದೆ. ಅಂತೆಯೇ ಈ ಇಡೀ ಜಗತ್ತು ಒಂದು ದಿನ ಅಂತ್ಯಗೊಳ್ಳಲಿದೆ ಎಂದು ಇಸ್ಲಾಂ ತಿಳಿಸುತ್ತದೆ. ಈ ಜಗತ್ತಿನಲ್ಲಿ ಬಂದು ಹೋದಂತಹ ಪ್ರತಿಯೊಬ್ಬರ ಜೀವನದ ಲೆಕ್ಕ ಆಗಲೆಂದೇ, ಜಗತ್ತಿನ ಅಂತ್ಯದ ನಂತರ ಒಂದು ನಿಗದಿತ ದಿನದ ಅವಶ್ಯಕತೆಯಿದೆ. ಆ ಲೆಕ್ಕಾಚಾರದ ಅಥವಾ ತೀರ್ಪಿನ ದಿನದಂದು ಮೊದಲ ಮನುಷ್ಯನಿಂದ ಕೊನೆಯವರೆಗೆ ಎಲ್ಲಾ ಮಾನವರನ್ನು ಮತ್ತೆ ಜೀವಂತಗೊಳಿಸಲಾಗುವುದು (ಪುನರುತ್ಥಾನ) ಮತ್ತು ಅವರು ಮಾಡಿದ ಕೆಲಸಗಳ ಬಗ್ಗೆ ಪ್ರಶ್ನಿಸಲಾಗುವುದು. ದೇವರು ಆಜ್ಞಾಪಿಸಿದಂತೆಯೇ ಸತ್ಕಾರ್ಯಗಳನ್ನು ಮಾಡಿದ ಮತ್ತು ಜೀವನವನ್ನು ನಡೆಸಿದ ಜನರು ಅದಕ್ಕೆ ತಕ್ಕಂತೆ ಪ್ರತಿಫಲವನ್ನು ಪಡೆಯುವರು ಮತ್ತು ದೇವರಿಗೆ ಅವಿಧೇಯರಾದ ಜನರು ಶಿಕ್ಷೆಗೆ ಒಳಗಾಗುವರು. ಪ್ರತಿಫಲವು ಸ್ವರ್ಗ ಹಾಗೂ ಶಿಕ್ಷೆಯು ನರಕವಾಗಿರುವುದು. ಸ್ವರ್ಗ ಮತ್ತು ನರಕದಲ್ಲಿನ ಜೀವನವು ಶಾಶ್ವತವಾಗಿರುವುದು ಹಾಗೂ ಅದಕ್ಕೆ ಎಂದಿಗೂ ಅಂತ್ಯವಿಲ್ಲ.

    ಸ್ವರ್ಗ ಮತ್ತು ನರಕದಲ್ಲಿನ ಜೀವನವು ಶಾಶ್ವತ ಮತ್ತು ಎಂದಿಗೂ ಅಂತ್ಯವಿಲ್ಲದ ಕಾರಣ, ದೇವರು ಹಿಟ್ಲರ್ ಮತ್ತು ಆತ್ಮಹತ್ಯಾ ಬಾಂಬರ್‌ಗಳನ್ನು ಆರು ಮಿಲಿಯನ್ ಬಾರಿ ಅಥವಾ ಅದಕ್ಕಿಂತ ಹೆಚ್ಚು ಬಾರಿ ನರಕಾಗ್ನಿಯಲ್ಲಿ ಶಿಕ್ಷಿಸಬಹುದು. ಅಂತೆಯೇ, ದೇವರು ಕೊಲ್ಲಲ್ಪಟ್ಟ ಒಳ್ಳೆಯವರಿಗೆ ಮತ್ತು ಮುಗ್ಧ ಜನರಿಗೆ ತನ್ನ ಇಚ್ಛೆಯಂತೆ ಪ್ರತಿಫಲ ನೀಡಬಹುದು ಮತ್ತು ಪರಿಹಾರವನ್ನೂ ನೀಡಬಹುದು.

    ನಾವು ಸತ್ತ ನಂತರ ಪುನರುತ್ಥಾನ ಸಾಧ್ಯವೇ?

    ದೇವರು ಕುರಾನ್‌ನ ಅಧ್ಯಾಯ 36ರ ಸೂಕ್ತಿ 79 ರಲ್ಲಿ ಹೇಳುತ್ತಾನೆ:

    ಹೇಳಿರಿ, “ಅವರನ್ನು ಮೊದಲ ಬಾರಿಗೆ ಸೃಷ್ಟಿಸಿದ ಅವನು, ಅವರಿಗೆ (ಮತ್ತೆ) ಜೀವವನ್ನು ಕೊಡುವನು; ಮತ್ತು ಅವನು ಎಲ್ಲಾ ಸೃಷ್ಟಿಯ ಬಗ್ಗೆ ತಿಳಿದಿದ್ದಾನೆ.”

    ಮೊದಲ ಬಾರಿಗೆ ಏನನ್ನಾದರೂ ರಚಿಸುವುದು ಅಥವಾ ಮಾಡುವುದು ಕಷ್ಟ ಎಂದು ನಮಗೆಲ್ಲರಿಗೂ ತಿಳಿದಿದೆ. ಮತ್ತೆ ಅದೇ ಸೃಷ್ಟಿಯನ್ನು ಪುನರಾವರ್ತಿಸುವುದು, ಮೊದಲ ಬಾರಿಯಷ್ಟು ಕಷ್ಟವಾಗುವುದಿಲ್ಲ. ಮೊದಲ ಬಾರಿಗೆ ನಮ್ಮನ್ನು ಸೃಷ್ಟಿಸಲು ದೇವರಿಗೆ ಕಷ್ಟವಾಗಲಿಲ್ಲ, ನಾವು ಸತ್ತ ನಂತರ ನಮ್ಮನ್ನು ಪುನಃ ಬದುಕಿಸಲು ಕಷ್ಟವಾಗ ಬೇಕೆ? ನಮ್ಮನ್ನು ಮೊದಲ ಬಾರಿ ಸೃಷ್ಟಿಸಿದ ದೇವರು ನಾವು ಸತ್ತ ನಂತರ ಎರಡನೇ ಬಾರಿಗೆ ಜೀವವನ್ನು ನೀಡುವನು. ನಾವು ಸತ್ತ ನಂತರ ನಮ್ಮನ್ನು ಜೀವಂತವಾಗಿ ಹಿಂತರುವುದು ನಿಜವಾಗಿಯೂ ದೇವರಿಗೆ ತುಂಬಾ ಸುಲಭ.

    ಸಾವಿನ ನಂತರದ ಜೀವನದ ಇಸ್ಲಾಮಿ ಪರಿಕಲ್ಪನೆಯಲ್ಲಿನ ನ್ಯಾಯದ ಅಂಶಗಳು:

    ದೇವರು ಕುರಾನ್‌ನ ಅಧ್ಯಾಯ 18ರ ಸೂಕ್ತಿ 49 ರಲ್ಲಿ ಹೇಳುತ್ತಾನೆ:

    ಮತ್ತು [ಕರ್ಮಗಳ] ದಾಖಲೆಯನ್ನು [ತೆರೆದು] ಇರಿಸಲಾಗುತ್ತದೆ ಮತ್ತು ಅದರಲ್ಲಿರುವುದರ ಬಗ್ಗೆ ಅಪರಾಧಿಗಳು ಭಯಪಡುವುದನ್ನು ನೀವು ನೋಡುವಿರಿ ಮತ್ತು ಅವರು ಹೇಳುತ್ತಾರೆ, “ಅಯ್ಯೋ! ಚಿಕ್ಕದಾಗಲೀ ದೊಡ್ಡದಾಗಲೀ ಏನನ್ನೂ ಬಿಡದೇ ಎಲ್ಲವನ್ನೂ ಎಣಿಸಿರುವ ಈ ಪುಸ್ತಕ ಯಾವುದು?” ಮತ್ತು ಅವರು ಮಾಡಿದ್ದನ್ನು [ಅವರ ಮುಂದೆ] ಕಂಡುಕೊಳ್ಳುತ್ತಾರೆ. ಮತ್ತು ನಿಮ್ಮ ಪ್ರಭು ಯಾರಿಗೂ ಅನ್ಯಾಯ ಮಾಡುವುದಿಲ್ಲ.

    ಗಮನವಿಡಿ: ಆದ್ದರಿಂದ ಪ್ರತಿ ಅಪರಾಧಿಗೆ ಅವನು ಏನು ಮಾಡಿದ್ದಾನೆ ಮತ್ತು ಅವನು ಯಾವುದಕ್ಕಾಗಿ ಶಿಕ್ಷೆ ಅನುಭವಿಸುವನೆಂದು ತಿಳಿದಿರುತ್ತಾನೆ.

    ದೇವರು ಕುರಾನ್‌ನ ಅಧ್ಯಾಯ 3ರ ಸೂಕ್ತಿ 185 ರಲ್ಲಿ ಹೇಳುತ್ತಾನೆ:

    ಪ್ರತಿಯೊಂದು ಆತ್ಮವೂ ಮರಣದ ರುಚಿಯನ್ನು ಅನುಭವಿಸುತ್ತದೆ ಮತ್ತು ಪುನರುತ್ಥಾನದ ದಿನದಂದು ನಿಮಗೆ ನಿಮ್ಮ [ಪೂರ್ಣ] ಪರಿಹಾರವನ್ನು ನೀಡಲಾಗುವುದು. ಆದ್ದರಿಂದ ಯಾರು ನರಕಾಗ್ನಿಯಿಂದ ಕಾಪಾಡಲ್ಪಡುತ್ತಾರೋ ಮತ್ತು ಸ್ವರ್ಗ ಪ್ರವೇಶಿಸುತ್ತಾರೋ ಅವರು [ತಮ್ಮ ಬಯಕೆಯನ್ನು] ಸಾಧಿಸಿದ್ದಾರೆ. ಮತ್ತು ಈ ಪ್ರಪಂಚದ ಜೀವನವು ಕೇವಲ ಭ್ರಮೆಯ ಆನಂದವಲ್ಲದೇ ಬೇರೇನೂ ಅಲ್ಲ.

    ಗಮನವಿಡಿ: ಸಂತ್ರಸ್ತರು ಹತಾಶೆ ಅಥವಾ ಭರವಸೆ ಕಳೆದುಕೊಳ್ಳುವ ಅಗತ್ಯವಿಲ್ಲ ಏಕೆಂದರೆ ಅವರಿಗೆ ಸಂಪೂರ್ಣ ಪರಿಹಾರವನ್ನು ತೀರ್ಪಿನ ದಿನದಂದು ನೀಡಲಾಗುವುದು.

    ದೇವರು ಕುರಾನ್‌ನ ಅಧ್ಯಾಯ 99ರ 7 ಮತ್ತು 8ನೇ ಸೂಕ್ತಿಗಳಲ್ಲಿ ಹೇಳುತ್ತಾನೆ:

    ಆದ್ದರಿಂದ ಯಾರಾದರೂ ಅಣುವಿನ ತೂಕದ ಒಳ್ಳೆಯದನ್ನು ಮಾಡಿದ್ದರೆ ಅದನ್ನೂ ನೋಡುವರು ಮತ್ತು ಅಣುವಿನ ತೂಕದ ಕೆಟ್ಟದ್ದನ್ನು ಮಾಡಿದ್ದರೆ ಅದನ್ನೂ ನೋಡುವರು.

    ದೇವರು ಕುರಾನ್‌ನ ಅಧ್ಯಾಯ 3ರ 30ನೇ ಸೂಕ್ತಿಯಲ್ಲಿ ಹೇಳುತ್ತಾನೆ:

    ಪ್ರತಿ ಆತ್ಮವು ವರ್ತಮಾನದಿಂದ [ತನ್ನ ಮುಂದೆ] ತಾನು ಮಾಡಿರುವ ಒಳ್ಳೆಯದು ಮತ್ತು ಕೆಟ್ಟದ್ದನ್ನು ಕಂಡುಕೊಳ್ಳುವ ದಿನ, ಅದು ತನ್ನ ಮತ್ತು [ತನ್ನ ಕೆಟ್ಟ ಕರ್ಮಗಳ] ನಡುವೆ ಬಹು ದೂರವಿರಬೇಕೆಂದು ಬಯಸುವುದು. ಮತ್ತು ದೇವರು ತನ್ನ ಬಗ್ಗೆ ನಿಮ್ಮನ್ನು ಎಚ್ಚರಿಸುತ್ತಾನೆ ಮತ್ತು ದೇವರು [ತನ್ನ] ಸೇವಕರಿಗೆ ದಯೆ ತೋರುವವನಾಗಿದ್ದಾನೆ.

    ಗಮನವಿಡಿ: ಯಾರೂ ಕೂಡ ತಾವು ಮಾಡಿದ ಪ್ರತಿಯೊಂದು ಕಾರ್ಯಕ್ಕೂ ಪ್ರಶ್ನಿಸಲ್ಪಪಡುವುದಾಗಲಿ ಹಾಗೂ ಪ್ರತಿಫಲ ಅಥವಾ ಶಿಕ್ಷೆಯಿಂದ ತಪ್ಪಿಸಿಕೊಳ್ಳವುದಾಗಲಿ ಸಾಧ್ಯವಿಲ್ಲ.

    ದೇವರು ಕುರಾನ್‌ನ ಅಧ್ಯಾಯ 4ರ 40 ನೇ ಸೂಕ್ತಿಯಲ್ಲಿ ಹೇಳುತ್ತಾನೆ:

    ವಾಸ್ತವವಾಗಿ, ಅಣುವಿನ ತೂಕದಷ್ಟು [ಸಹ] ದೇವರು ಅನ್ಯಾಯ ಮಾಡುವುದಿಲ್ಲ; ಒಂದು ಒಳ್ಳೆಯ ಕಾರ್ಯವಿದ್ದರೆ, ಅವನು ಅದನ್ನು ಗುಣಿಸುತ್ತಾನೆ ಮತ್ತು ಅವನಿಂದಲೇ ದೊಡ್ಡ ಪ್ರತಿಫಲವನ್ನು ನೀಡುತ್ತಾನೆ.

    ಗಮನವಿಡಿ: ಯಾವುದೇ ಅನ್ಯಾಯವನ್ನು ಮಾಡಲಾಗುವುದಿಲ್ಲ ಮತ್ತು ಜನರು ತಮ್ಮ ಸತ್ಕಾರ್ಯಗಳಿಗಾಗಿ ಅನೇಕ ಪಟ್ಟು ಪರಿಹಾರವನ್ನು ಪಡೆಯುವರು, ಇದು ಪ್ರತಿಯೊಬ್ಬ ಮನುಷ್ಯನನ್ನು ಸಾಧ್ಯವಾದಷ್ಟೂ ಸತ್ಕಾರ್ಯಗಳನ್ನು ಮಾಡಲು ಪ್ರೋತ್ಸಾಹಿಸುತ್ತದೆ.

    ಅಂಗವಿಕಲ ಮಕ್ಕಳು, ಅಕಾಲಿಕ ಮರಣ ಇತ್ಯಾದಿಗಳ ವಿವರಣೆ:

    ಈ ಇಡೀ ಜೀವನವು ಒಂದು ಪರೀಕ್ಷೆಯಾಗಿದೆ ಮತ್ತು ಎಲ್ಲಾ ಮಾನವರ ಅಸ್ತಿತ್ವದ ತಾತ್ಕಾಲಿಕ ಸ್ಥಳವಾಗಿದೆ ಎಂದು ಕುರಾನ್ ತಿಳಿಸುತ್ತದೆ.

    ದೇವರು ಕುರಾನ್‌ನ ಅಧ್ಯಾಯ 67 ರ 2ನೇ ಸೂಕ್ತಿಯಲ್ಲಿ ಹೇಳುತ್ತಾನೆ:

    [ಅವನು] ನಿಮ್ಮಲ್ಲಿ ಯಾರು ಕರ್ಮಗಳಲ್ಲಿ ಉತ್ತಮರು ಎಂದು ನಿಮ್ಮನ್ನು ಪರೀಕ್ಷಿಸಲು ಮರಣ ಮತ್ತು ಜೀವನವನ್ನು ಸೃಷ್ಟಿಸಿದವನು – ಮತ್ತು ಅವನು ಪ್ರಬಲನು, ಕ್ಷಮಿಸುವವನು

    ಜನರನ್ನು ವಿವಿಧ ರೀತಿಯಲ್ಲಿ ಪರೀಕ್ಷಿಸಲಾಗುತ್ತದೆ. ಅದು ಸಂಪತ್ತು, ಆರೋಗ್ಯ, ದೀರ್ಘಾಯುಷ್ಯ ಇತ್ಯಾದಿಗಳ ಮೂಲಕ ಆಗಿರಬಹುದು.

    ಉದಾಹರಣೆಗೆ: ತೀರ್ಪಿನ ದಿನದಂದು, ಶ್ರೀಮಂತ ವ್ಯಕ್ತಿ ತನ್ನ ಸಂಪತ್ತನ್ನು ಹೇಗೆ ಖರ್ಚು ಮಾಡಿದನೆಂದು ಪ್ರಶ್ನಿಸಲಾಗುವುದು. ಮತ್ತೊಂದೆಡೆ, ಬಡವರು ಬಡತನವನ್ನು ಅನುಭವಿಸಬೇಕಾಗಿದ್ದರಿಂದ ಸಂಪತ್ತಿನ ವಿಷಯದಲ್ಲಿ ಪೂರ್ಣ ಅಂಕಗಳನ್ನು ಪಡೆಯುವರು.

    ತೀರ್ಪಿನ ದಿನದಂದು, ನಾವು ಈ ಭೂಮಿಯ ಮೇಲೆ ನಮ್ಮ ಕಣ್ಣುಗಳನ್ನು ಹೇಗೆ ಬಳಸಿದೆವು ಎಂದು ಪ್ರಶ್ನಿಸಲಾಗುವುದು. ಮತ್ತೊಂದೆಡೆ, ಅಂಧ ವ್ಯಕ್ತಿಯು ಕಣ್ಣುಗಳ ಬಳಕೆಯ ವಿಷಯದಲ್ಲಿ ಪೂರ್ಣ ಅಂಕಗಳನ್ನು ಪಡೆಯುವನು.

    ತೀರ್ಪಿನ ದಿನದಂದು, ನಾವು ನಮ್ಮ ಅಂಗಗಳನ್ನು ಹೇಗೆ ಬಳಸಿದೆವು ಎಂದು ಪ್ರಶ್ನಿಸಲಾಗುವುದು. ಮತ್ತೊಂದೆಡೆ, ಅಂಗವಿಕಲ ವ್ಯಕ್ತಿ ಅಂಗಗಳ ಬಳಕೆಯ ವಿಷಯದಲ್ಲಿ ಪೂರ್ಣ ಅಂಕಗಳನ್ನು ಪಡೆಯುವನು.

    ತೀರ್ಪಿನ ದಿನದಂದು ಎಲ್ಲಾ ವಿಷಯಗಳ ಲೆಕ್ಕಾಚಾರ ಹೇಗೆ ನಡೆಯುತ್ತದೆ ಎಂಬುದನ್ನು ನೀವು ನೋಡಬಹುದು.

    ಯಾವ ಮನುಷ್ಯನಿಗೂ ಅನ್ಯಾಯವಾಗುವುದಿಲ್ಲ

    ದೇವರು ಕುರಾನ್‌ನ ಅಧ್ಯಾಯ 4ರ 40ನೇ ಸೂಕ್ತಿಯಲ್ಲಿ ಹೇಳುತ್ತಾನೆ:

    ನಿಜವಾಗಿ, ಅಣುವಿನ ತೂಕದಷ್ಟು [ಸಹ] ದೇವರು ಅನ್ಯಾಯ ಮಾಡುವುದಿಲ್ಲ:

    ಕುರಾನ್ ಅಧ್ಯಾಯ 4 ಸೂಕ್ತಿ 40

    ನಿಮಗೆ ಇಷ್ಟವಾಗ ಬಹುದಾದಂತಹ ಲೇಖನಗಳು

    WHAT OTHERS ARE READING

    Most Popular