ನೀವು ಒಂದು ಹಿಂದೂ ಕುಟುಂಬದಲ್ಲಿ ಹುಟ್ಟಿದ್ದರಿಂದಲೇ ಒಬ್ಬ ಹಿಂದೂ ಆಗಿದ್ದೀರಾ?
ನೀವು ಒಂದು ಮುಸ್ಲಿಮ್ ಕುಟುಂಬದಲ್ಲಿ ಹುಟ್ಟಿದ್ದರಿಂದಲೇ ಒಬ್ಬ ಮುಸ್ಲಿಮ್ ಆಗಿದ್ದೀರಾ?
ನೀವು ಒಂದು ಕ್ರೈಸ್ತ ಕುಟುಂಬದಲ್ಲಿ ಹುಟ್ಟಿದ್ದರಿಂದಲೇ ಒಬ್ಬ ಕ್ರೈಸ್ತನಾಗಿದ್ದೀರಾ?
ನಮ್ಮಲ್ಲಿ ಬಹಳಷ್ಟರಿಗೆ ಮೇಲಿನ ಪ್ರಶ್ನೆಗೆ “ಹೌದು” ಎಂದೇ ಉತ್ತರ. ನಮ್ಮಲ್ಲಿ ಬಹಳಷ್ಟರು ತಮ್ಮ ತಂದೆ ತಾಯಿಯಿಂದ ಧರ್ಮವನ್ನು ಬಳುವಳಿಯಾಗಿ ಪಡೆದಿರುವ ಕಾರಣ ಈ ಉತ್ತರ ಆಶ್ಚರ್ಯಕರವೇನೂ ಅಲ್ಲ. ಯಾವುದೇ ಧರ್ಮವನ್ನು ಅನುಸರಿಸುವುದು ಒಂದು ಆಚಾರಣೆಯಾಗಿಬಿಟ್ಟಿದೆ. ಇಂದಿನ ದಿನ ಧರ್ಮ ಕೇವಲ ಹುಟ್ಟು, ಮದುವೆ, ಪಿತ್ರಾರ್ಜಿತ ಆಸ್ತಿ, ಅಂತ್ಯಕ್ರಿಯೆ ಹೀಗೆ ಕೆಲವು ಪದ್ಧತಿ ಮತ್ತು ಆಚಾರಣೆಗಳಿಗೆ ಮೀಸಲಾಗಿದ್ದು, ನಮ್ಮ ಮೇಲೆ ಯಾವುದೇ ನೈತಿಕ ಪ್ರಭಾವ ಬೀರುತ್ತಿಲ್ಲ. ನೀವು ಕೇಳಬಹುದು, “ಆದರೇನು, ಇದರಲ್ಲಿ ಸಮಸ್ಯೆಯೇನು?”, ನಡೆಯಿರಿ, ಸ್ವಲ್ಪ ಯೋಚಿಸೋಣ.
ಮನುಷ್ಯ ಮತ್ತು ಔನ್ಯತೆಯ ಹಂಬಲ
ಉನ್ನತೆಯೆಡೆಗೆ ನಡೆಯುವುದು ಮನುಷ್ಯನ ಸಹಜ ಸ್ವಭಾವ – ಉನ್ನತ ಕೆಲಸ, ಮನೆ, ಉಡುಪು. ಸಮಾಜದಲ್ಲಿಯೂ ಕೂಡ, ನಾವು ಉನ್ನತೆಯನ್ನು ಅರಸುತ್ತೇವೆ, ಹೀಗಾಗಿಯೇ ನಾವು ಇಂದಿನ ಮಟ್ಟಿಗೆ ಇಷ್ಟೆಲ್ಲಾ ಪ್ರಗತಿ ಗಳಿಸಿದ್ದೇವೆ. ಈ ಸ್ವಭಾವವದರೂ ಏಕೆ? ಯಾಕೆಂದರೆ, ನಮ್ಮ ಮನಸ್ಸಿನಲ್ಲಿ ಉನ್ನತ ವಸ್ತುಗಳಿಂದ ಉನ್ನತ ಜೀವಶೈಲಿಯ ಅಪೇಕ್ಷೆಯಿದೆ – ಇದರಿಂದಾಗಿಯೇ, ನಮ್ಮ ಬಳಿ ಈಗಾಗಲೇ ಇರುವ ವಸ್ತುಗಳಿಂದ ನಾವು ತೃಪ್ತರಾಗಿರುವುದು, ಅಪರೂಪ. ವಿಪರ್ಯಾಸವೆಂದರೆ, ಧರ್ಮದ ವಿಷಯದಲ್ಲಿ ತದ್ವಿರುದ್ಧವಾಗಿ ನಾವು ಅತ್ಯಂತ ತೃಪ್ತರಾಗಿ, ನಮ್ಮ ಪೂರ್ವಜರು ಪಾಲಿಸಿದ್ದನ್ನೇ ಸಂತೋಷವಾಗಿ ಪಾಲಿಸುತ್ತೇವೆ. ಪ್ರಶ್ನೆಯೆಂದರೆ ಏಕೆ?
ವಾಸ್ತವಕ್ಕೆ ಕನ್ನಡಿ ಹಿಡಿಯೋಣ
ನಮಗನಿಸುತ್ತದೆ, ಜೀವನ ಸಂಪೂರ್ಣವಾಗಿ ನಮ್ಮ ಹಿಡಿತದಲ್ಲಿದೆ. ನಿಜವೆಂದರೆ, ನಾವು ನಮ್ಮದೇ ದೇಹದಲ್ಲಿರುವ ಅಂಗಾಂಗಗಳಾದ ಹೃದಯ, ಮೂತ್ರಪಿಂಡ, ಶ್ವಾಸಕೋಶಗಳನ್ನೂ ನಿಯಂತ್ರಿಸಲಾಗುವುದಿಲ್ಲ. ಇದರಿಂದ ಎಲ್ಲವೂ ನಮ್ಮ ಹಿಡಿತದಲ್ಲಿಲ್ಲ ಎಂದು ತಿಳಿಯುವುದಿಲ್ಲವೇ? ಎಲ್ಲವನ್ನೂ ನಿಯಂತ್ರಿಸುವ ಮತ್ತು ಆಜ್ಞಾಪಿಸುವ ಒಂದು ಉನ್ನತ ಶಕ್ತಿಯೊಂದಿದೆ ಎಂದು ಇದು ತಿಳಿಸುವುದಿಲ್ಲವೇ?
ನಾವು ಈ ಭೂಮಿಗೆ ನಾವಾಗಿಯೇ ಬಂದಿಲ್ಲ. ನಮ್ಮ ತಂದೆ ತಾಯಿಯನ್ನೂ ನಾವು ಆರಿಸಿಕೊಂಡಿಲ್ಲ. ನಾವು ಯಾವಾಗ ಸಾಯುವಿರಿ ಎಂದೂ ನಮಗೆ ತಿಳಿದಿಲ್ಲ. ಹೀಗಿರುವಾಗ ನಾವು ಈ ಭೂಮಿಯ ಮೇಲೆ ಏಕಿದ್ದೇವೆ ಎಂದು ಯೋಚಿಸಬಾರದೇ? ನಮ್ಮನ್ನು ಇಲ್ಲಿ ಹಾಕಿದವರು ಯಾರು? ದೇವರು ಯಾರು? ಸತ್ತ ನಂತರ ಏನಾಗುತ್ತದೆ?
ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು, ಒಬ್ಬ ಅತ್ಯುತ್ತಮ ಮನುಷ್ಯ, ದೇವರ ಪ್ರವಾದಿಯಾದ ಅಬ್ರಹಾಮರ ಜೀವನದಿಂದ ತಿಳಿಯೋಣ.
ಪ್ರವಾದಿ ಅಬ್ರಹಾಮರ ಹಿನ್ನೆಲೆ
ಪ್ರವಾದಿ ಅಬ್ರಹಾಮರು ಒಂದು ಪ್ರಭಾವಿ ಕುಟುಂಬದಲ್ಲಿ ಜನಿಸಿದ್ದರು. ಅವರ ತಂದೆ ಮೂರ್ತಿ ಕೆತ್ತುವ ಶಿಲ್ಪಿಯಾಗಿದ್ದರು ಹಾಗೂ ಸಮಾಜದಲ್ಲಿ ಉನ್ನತ ಸ್ಥಾನ ಹೊಂದಿದ್ದರು. ಮೋಜು, ಮನೋರಂಜನೆಯಲ್ಲಿ ಮುಳುಗಿ ಹೋಗುವ ಇತರೆ ಯುವಕರಂತಿಲ್ಲದೆ, ಅಬ್ರಹಾಮರು ಒಬ್ಬ ಯೋಚನಾಶೀಲ ಯುವಕರಾಗಿದ್ದರು. ಪ್ರಪಂಚದ ಬಗ್ಗೆ ಬಹಳ ಆಳವಾಗಿ ಯೋಚಿಸುತ್ತದ್ದ ಅವರು ತನ್ನ ಅಸ್ತಿತ್ವದ ಉದ್ದೇಶದ ಬಗ್ಗೆ ಆಲೋಚಿಸುತ್ತಿದ್ದರು. ತಾನಾಗಿಯೇ ಈ ಭೂಮಿಗೆ ಬಂದಿಲ್ಲದ ಕಾರಣ, ಯಾವುದೋ ಉನ್ನತ ಶಕ್ತಿಯೊಂದಿದೆ ಎಂದು ತಿಳಿದಿದ್ದರು. ಹಾಗಾಗಿ ತನ್ನನ್ನು ಸೃಷ್ಟಿಸಿದ ದೇವರನ್ನು ಕಂಡುಕೊಳ್ಳುವ ಹುಡುಕಾಟ ಪ್ರಾರಂಭಿಸಿದರು.
ಅಬ್ರಹಾಮರ ಸತ್ಯದೆಡೆಗಿನ ಪ್ರಯಾಣ
ಅಬ್ರಹಾಮರ ಸತ್ಯಾನ್ವೇಷಣೆಯನ್ನು ದೇವರು ಕುರಾನ್ ನಲ್ಲಿ ಸೆರೆಹಿಡಿಯುತ್ತಾರೆ.
ರಾತ್ರಿಯು ಆತನನ್ನು (ಅಂಧಕಾರದಿಂದ) ಮುಚ್ಚಿದಾಗ ಆತ (ಅಬ್ರಹಾಂ) ಒಂದು ನಕ್ಷತ್ರವನ್ನು ಕಂಡರು, ಅವರು ಹೇಳಿದರು: ‘ಇದು ನನ್ನ ಪ್ರಭು!’ ತರುವಾಯ ಅದು ಅಸ್ತಮಿಸಿದಾಗ ಆತ ಹೇಳಿದರು: ‘ಅಸ್ತಮಿಸಿ ಹೋಗುವವರನ್ನು ನಾನು ಮೆಚ್ಚಲಾರೆನು.
ಕುರಾನ್ ಅಧ್ಯಾಯ 6: ಸೂಕ್ತಿ 76
ತರುವಾಯ ಚಂದ್ರ ಉದಾಯವಾಗುವುದನ್ನು ಕಂಡಾಗ ಆತ ಹೇಳಿದರು: ‘ಇದು ನನ ಪ್ರಭು!’ ತರುವಾಯ ಅದೂ ಅಸ್ತಮಿಸಿದಾಗ ಆತ ಹೇಳಿದರು: ‘ನನ್ನ ಪ್ರಭು ನನಗೆ ಸನ್ಮಾರ್ಗವನ್ನು ತೋರಿಸಿಕೊಡದಿದ್ದರೆ ಖಂಡಿತವಾಗಿಯೂ ನಾನು ಪಥಭ್ರಷ್ಟ ಜನತೆಯೊಂದಿಗೆ ಸೇರಿದವನಾಗುವೆನು.
ಕುರಾನ್ ಅಧ್ಯಾಯ 6: ಸೂಕ್ತಿ 77
ತರುವಾಯ ಸೂರ್ಯ ಉದಾಯವಾಗುವುದನ್ನು ಕಂಡಾಗ ಆವರು ಹೇಳಿದರು: ‘ಇದು ನನ್ನ ಪ್ರಭು. ಇದು ಅತ್ಯಂತ ದೊಡ್ಡದಾಗಿದೆ.’ ತರುವಾಯ ಅದೂ ಕೂಡ ಅಸ್ತಮಿಸಿದಾಗ ಅವರ ಹೇಳಿದರು: ‘ಓ ನನ್ನ ಜನರೇ! ಖಂಡಿತವಾಗಿಯೂ ನೀವು (ಅಲ್ಲಾಹನೊಂದಿಗೆ) ಸಹ್ಯಭಾಗಿಯನ್ನಾಗಿ ಮಾಡುತಿರುವ ಎಲ್ಲರಿಂದಲೂ ನಾನು ಸಂಬಂಧಮುಕ್ತನಾಗಿರುವೆನು.
ಕುರಾನ್ ಅಧ್ಯಾಯ 6: ಸೂಕ್ತಿ 78
ಸೂರ್ಯ, ಚಂದ್ರ, ವಿಗ್ರಹಗಳು ಹೀಗೆ ಪ್ರಪಂಚದಲ್ಲಿರುವ ಪ್ರತಿಯೊಂದೂ ಕೂಡ ತಾತ್ಕಾಲೀನ ಮತ್ತು ನಶ್ವರ ಎಂದು ಅಬ್ರಹಾಮರು ತಿಳಿದುಕೊಂಡರು. ಹೀಗೆ ನಶ್ವರವಾಗುವ ವಸ್ತುವೊಂದು ಎಂದಿಗೂ, ಸದಾಕಾಲವಿರುವ ದೇವರಾಗಲಿಕ್ಕೆ ಸಾಧ್ಯವಿಲ್ಲ ಎಂದು ಅವರು ಅರಿತುಕೊಂಡರು. ಹೀಗಾಗಿ ಈ ಭವ್ಯ ಪ್ರಪಂಚವನ್ನು ಸೃಷ್ಟಿಸಿದವನೇ ದೇವರೆಂದು ಅವರು ನಿರ್ಧರಿಸಿದರು.
ಖಂಡಿತವಾಗಿಯೂ ನಾನು ಸತ್ಯಮಾರ್ಗದಲ್ಲಿ ದೃಢವಾಗಿ ನಿಂತವನಾಗಿ ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದವನೆಡೆಗೆ ನನ್ನ ಮುಖವನ್ನು ತಿರುಗಿಸಿರುವೆನು. ನಾನು ದೇವರನ್ನು ಹೊರತು ಪಡಿಸಿ ಬೇರೆ ವಸ್ತುಗಳನ್ನೂ ಆರಾಧಿಸುವವರಲ್ಲಿ ಒಬ್ಬವನಲ್ಲ.
ಕುರಾನ್ ಅಧ್ಯಾಯ 6: ಸೂಕ್ತಿ 79
ಅಬ್ರಹಾಮರು ತಮ್ಮ ಜನರು ಏನನ್ನು ಆರಾಧಿಸುತ್ತಾರೆಂದು ಪ್ರಶ್ನಿಸುತ್ತಾರೆ
ದೇವರು, ಭವ್ಯ ಕುರಾನಿನಲ್ಲಿ ಹೇಳುತ್ತಾರೆ:
ಅಬ್ರಹಾಮರ ವೃತ್ತಾಂತವನ್ನು ಅವರಿಗೆ ತಿಳಿಸಿರಿ. ‘ನೀವು ಏನನ್ನು ಆರಾಧಿಸುತ್ತಿರುವಿರಿ?’ ಎಂದು ಅವರು ತಮ್ಮ ತಂದೆ ಮತ್ತು ತಮ್ಮ ಜನರನ್ನು ಕೇಳಿದಾಗ, ಅವರು ಹೇಳಿದರು: ‘ನಾವು ಕೆಲವು ವಿಗ್ರಹಗಳನ್ನು ಆರಾಧಿಸುತ್ತಿರುವೆವು. ಅವುಗಳ ಮುಂದೆ ಆರಾಧಮಗ್ನರಾಗಿ ಕೂರುವೆವು.’ ಅಬ್ರಹಾಮರು ಕೇಳಿದರು: ‘ನೀವು ಪ್ರಾರ್ಥಿಸುವಾಗ ಅವರು ಅದನ್ನು ಆಲಿಸುವರೇ? ಅಥವಾ ನಿಮಗೆ ಲಾಭವನ್ನಾಗಲಿ, ಹಾನಿಯನ್ನಾಗಲಿ ಮಾಡುವರೇ?’. ಅವರು ಹೇಳಿದರು: ‘ಇಲ್ಲ, ನಮ್ಮ ಪೂರ್ವಿಕರು ಹೀಗೆ ಮಾಡುತ್ತಿರುವುದನ್ನು ನಾವು ಕಂಡಿರುವೆವು’. ಅಬ್ರಹಾಮರು ಕೇಳಿದರು: ‘ನೀವು ಮತ್ತು ನಿಮ್ಮ ಪೂರ್ವಿಕರು ಆರಾಧಿಸುತ್ತಿರುವುದಾದರೂ ಏನನ್ನು ಎಂದು ನೀವು ಆಲೋಚಿಸಿರುವಿರಾ?
ಕುರಾನ್ ಅಧ್ಯಾಯ 26: ಸೂಕ್ತಿ 69 – 76
ಅಬ್ರಹಾಮರು ತಮ್ಮ ಜನರಿಗೆ ದೇವರ ಬಗ್ಗೆ ತಿಳಿಯ ಹೇಳುತ್ತಾರೆ
ದೇವರು ನನ್ನನ್ನು ಸೃಷ್ಟಿಸಿ ನನಗೆ ಮಾರ್ಗದರ್ಶನ ನೀಡುತ್ತಿರುವವನು. ನನಗೆ ಊಟವನ್ನೂ ಮತ್ತು ಪಾನೀಯವನ್ನೂ ಒದಗಿಸುವವನು. ನಾನು ರೋಗಿಯಾದರೆ ಅವನು ನನಗೆ ಸೌಖ್ಯವನ್ನು ನೀಡುವನು. ನನಗೆ ಸಾವು ಕೊಡುವವನು ಮತ್ತು ತರುವಾಯ ನನಗೆ ಜೀವ ನೀಡುವವನು. ಪ್ರತಿಫಲ ದಿನದಂದು ಯಾರು ನನ್ನ ಪಾಪಗಳನ್ನು ಕ್ಷಮಿಸುವನೆಂದು ನಾನು ನಿರೀಕ್ಷಿಸುತ್ತಿರುವೆನೋ ಅವನು.
ಕುರಾನ್ ಅಧ್ಯಾಯ 26: ಸೂಕ್ತಿ 78-82
ಈ ಮೇಲಿನ ಸೂಕ್ತಿಗಳಿಂದ ನಾವು ತಿಳಿಯುವುದೇನೆಂದರೆ:
- ಅಬ್ರಹಾಮರು ದೇವರೇ ತನ್ನ ಸೃಷ್ಟಿಕರ್ತ ಮತ್ತು ದೇವನೊಬ್ಬನೇ ತನಗೆ ಮಾರ್ಗದರ್ಶನ ನೀಡಬಹುದು ಎಂದು ತಿಳಿದುಕೊಂಡರು
- ದೇವರು ತನ್ನ ಸೃಷ್ಟಿಯನ್ನು ಅತ್ಯಂತ ಪ್ರೀತಿಸಿ, ಪಾಲನೆ ಮಾಡುತ್ತಾನೆ ಮತ್ತು ನಮಗೆ ಜೀವನಾಂಶ ಕೊಡುವ ಮೂಲಕ ಹಾಗೂ ಅನಾರೋಗ್ಯದಲ್ಲಿ ಸೌಖ್ಯ ಕೂಡುವ ಮೂಲಕ ತನ್ನ ಪ್ರೀತಿಯನ್ನು ತೋರಿಸುತ್ತಾನೆ
- ತನ್ನಿಷ್ಟ ಬಂದಂತೆ ಈ ಪ್ರಪಂಚದಲ್ಲಿ ಜೀವಿಸಲಿಕ್ಕಾವುದಿಲ್ಲ ಎಂದು ಅಬ್ರಹಾಮರು ತಿಳಿದುಕೊಂಡರು, ಏಕೆಂದರೆ ಮರಣ ನಂತರ ಅವರನ್ನು ಪುನರುತ್ಥಾನಗೊಳಿಸಲಾಗಿ, ದೇವರು ಅವರ ಕರ್ಮಗಳ ಬಗ್ಗೆ ಪ್ರಶ್ನಿಸುವನು.
ಇದು ಅಬ್ರಹಾಮರ ಸತ್ಯಾನ್ವೇಷಣೆಯ ಪ್ರಯಾಣ. ಇನ್ನು ನಿಮ್ಮ ಪ್ರಯಾಣ?