More

  Choose Your Language

  ನಿಜವಾಗಿಯೂ ಸಂತೋಷವಾಗಿರುವುದು ಹೇಗೆ?

  ಸಂತೋಷವೆನ್ನುವುದು ನಮ್ಮ ಹುಟ್ಟಿನೊಂದಿಗೇ ಬರುವುದಿಲ್ಲ; ಅದನ್ನು ನಮ್ಮ ಕರ್ಮಗಳ ಮೂಲಕ ನಾವೇ ಸೃಷ್ಟಿಸಿಕೊಳ್ಳುತ್ತೇವೆ. ಸಂಪತ್ತು, ಸುಪ್ಪತ್ತಿಗೆ ಇಂತಹ ಬಾಹ್ಯ ಮೂಲಗಳಿಂದ ನಮಗೆ ಸಂತೋಷ ಸಿಗುವುದೆಂದು ತಿಳಿಸಿಕೊಡಲಾಗಿದೆ, ಅಲ್ಲವೇ? ಆದರೆ, ಒಂದು ವೇಳೆ ಸಂತೋಷವೆನ್ನುವುದು ಒಳಗಿನಿಂದ ಬರಬಹುದಾದರೆ?

  ಸಂತೋಷವೆನ್ನುವುದು ನಮ್ಮ ಹುಟ್ಟಿನೊಂದಿಗೇ ಬರುವುದಿಲ್ಲ; ಅದನ್ನು ನಮ್ಮ ಕರ್ಮಗಳ ಮೂಲಕ ನಾವೇ ಸೃಷ್ಟಿಸಿಕೊಳ್ಳುತ್ತೇವೆ. ಸಂಪತ್ತು, ಸುಪ್ಪತ್ತಿಗೆ ಇಂತಹ ಬಾಹ್ಯ ಮೂಲಗಳಿಂದ ನಮಗೆ ಸಂತೋಷ ಸಿಗುವುದೆಂದು ತಿಳಿಸಿಕೊಡಲಾಗಿದೆ, ಅಲ್ಲವೇ? ಆದರೆ, ಒಂದು ವೇಳೆ ಸಂತೋಷವೆನ್ನುವುದು ಒಳಗಿನಿಂದ ಬರಬಹುದಾದರೆ?

  ಮನುಷ್ಯ ಒಬ್ಬ ಸಾಮಾಜಿಕ ಜೀವಿ ಹಾಗೂ ನಾವು ಮನುಷ್ಯರು ಏಕೆ ಚಿಂತಿಸುತ್ತೇವೆ ಮತ್ತು ಅದರಿಂದಾಗಿ ನಮ್ಮ ನಡವಳಿಕೆಯಲ್ಲಿ ಬದಲಾವಣೆ ಬರುತ್ತದೆ ಎಂಬುದು, ಒಂದು ಯೋಚನಾಗ್ರಸ್ತ ಮನಸ್ಸಿಗೆ ಖಂಡಿತವಾಗಿಯೂ ಸವಾಲೊಡ್ಡುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನಗಳು ಎಷ್ಟೇ ಮುಂದುವರಿದಿದ್ದರೂ, ನಾವು ಮನುಷ್ಯರು ಸಾಮಾಜಿಕ, ಆರ್ಥಿಕ ಮತ್ತು ನೈತಿಕ ಸಂಗತಿಗಳಲ್ಲಿ ಬಹಳಷ್ಟು ಸವಾಲುಗಳನ್ನು ಎದುರಿಸುತ್ತಿದ್ದೇವೆ. ಬಹುತೇಕ ಜನರು ನಿಜವಾದ ಸಂತೋಷ ಅನುಭವಿಸಲು ಶತಪ್ರಯತ್ನ ಮಾಡುತ್ತಲೇ ಇರುತ್ತಾರೆ. ಆದರೆ ಇದೆಲ್ಲಾ ಪ್ರಯಾಸ ಫಲಕಾರಿಯಾಗಿಲ್ಲ, ಏಕೆ? ಸ್ವಲ್ಪ ಯೋಚಿಸಿ ನೋಡೋಣ.

  ಪ್ರಪಂಚದ ಮೋಹ ಹಾಗೂ ಸಂತೋಷ:

  ನಿಮ್ಮನ್ನು ಏನು ಸಂತೋಷಗಳಿಸುವುದು ಎಂದು ಒಬ್ಬ ಸಾಮಾನ್ಯ ಮನುಷ್ಯನನ್ನು ಕೇಳಿದರೆ, ಸಾಮಾನ್ಯವಾಗಿ, ಬಹಳಷ್ಟು ಹಣ, ದೊಡ್ಡ ಮನೆ, ಕಣ್ಣು ಕೋರೈಸುವ ಕಾರ್, ಮನ ತಣಿಸುವ ಟ್ರಿಪ್ ಇಂಥದ್ದನ್ನು ಹೇಳಬಹುದು. ಆದರೆ ಈ ಪ್ರಾಪಂಚಿಕ ವಸ್ತುಗಳು ಮನುಷ್ಯನಿಗೆ ಸದಾಕಾಲ ಸಂತೋಷ ತರುತ್ತವೆಯೇ? ಖಂಡಿತ ಇಲ್ಲ.

  ಕೋಟ್ಯಾಧೀಶರಲ್ಲಿ ಸಂತೋಷದ ಬಗ್ಗೆ ಪ್ರಶ್ನೆ ಮಾಡಲಾದಾಗ, ಇದರಿಂದ ಹೊರಬಂದಿದ್ದೇನೆಂದರೆ, ಹಣ ಆರ್ಥಿಕ ಭದ್ರತೆ ಕೊಟ್ಟರೂ, ಅದು ನಿಮಗೆ ಜೇವನದಲ್ಲಿ ಸಂತೋಷ ತರಬಲ್ಲದಾದಂತಹ ಪ್ರೀತಿಸುವ ಸಂಸಾರವಾಗಲಿ, ನಲ್ಮೆಯ ಗೆಳೆಯರಾಗಲಿ ಅಥವಾ ಉತ್ತಮ ಚಟುವಟಿಕೆಗಳಾಗಲಿ ಕೊಡಲಾಗುವುದಿಲ್ಲ. ಈ ಪ್ರಶ್ನೋತ್ತರದಿಂದ ಹೊರಬಂದಂತಹ ಒಂದು ಮಾತೇನೆಂದರೆ,

  ಇನ್ನೊಮ್ಮೆ ಒಬ್ಬ ಕೋಟ್ಯಾಧೀಶ್ವರನನ್ನು ನೋಡಿದಾಗ, ತಿಳಿಯಿರಿ ಕಾಣುವಷ್ಟು ಸಂತೋಷವಾಗಿ ಅವರಿರುವುದಿಲ್ಲ.

  https://www.psychologytoday.com/us/blog/psychology-money-and-happiness/202203/how-happy-are-millionaires

  ಸಂತೋಷದ ಸೂಚ್ಯಂಕದಲ್ಲಿ ಭಾರತ 146 ದೇಶಗಳಲ್ಲಿ 136 ನೇ ಸ್ಥಾನದಲ್ಲಿದೆ

  2022ರ ಪ್ರಪಂಚದಾದ್ಯಂತದ ಸಂತೋಷದ ವರದಿಯಂತೆ, ಭಾರತ 146 ದೇಶಗಳಲ್ಲಿ 136 ನೇ ಸ್ಥಾನದಲ್ಲಿದೆ.

  https://www.indiatimes.com/trending/social-relevance/world-happiness-report-2022-india-rank-over-the-years-564851.html

  ಈ ಮಾಪನದಲ್ಲಿ ಪ್ರಥಮ ಸ್ತಾನ ಫಿನ್ಲ್ಯಾಂಡ್ ಪಡೆದರೆ, ಸ್ವಿಟ್ಜರ್ಲ್ಯಾಂಡ್ ಮತ್ತು ಐಸ್ ಲ್ಯಾಂಡ್ ಅದರ ನಂತರದ ಸ್ಥಾನ ಪಡೆದವು. ಯೂರೋಪಿನ ಈ ದೇಶಗಳು ಮೊದಲ 7 ಸ್ಥಾನಗಳನ್ನು ಗಳಿಸಿ, “ಸಂತುಷ್ಟ ದೇಶಗಳು” ಎಂದು ಕರೆಯಲ್ಪಟ್ಟಿವೆ. 

  ಆದರೆ, ನಿಜವಾಗಿಯೂ “ಸಂತುಷ್ಟ ದೇಶಗಳು” ಸಂತೋಷವಾಗಿದವೆಯೇ?

  ಈ  ದೇಶಗಳು ಪ್ರಪಂಚದಲ್ಲಿ ಅತ್ಯಂತ ಸಂತುಷ್ಟವೆಂದು ಕರೆಯಲ್ಪಟ್ಟರೂ, “happiness research institute” ನಡೆಸಿದ ಸಂಶೋಧನೆಯಲ್ಲಿ ಕಂಡು ಬಂದಿದ್ದೇನೆಂದರೆ, ಹಲವಾರು ಯುವ ಜನರು ಅಸಂತುಷ್ಟರಾಗಿದ್ದು, ಬಳಲುತ್ತಿದ್ದಾರೆ. 

  https://www.theguardian.com/world/2018/aug/25/nordic-countries-happy-reputation-masks-sadness-of-young-says-report

  ಇದರಿಂದ ನೀವು ಗೊಂದಲಕ್ಕೊಳಗಾಗ ಬಹುದು ಹಾಗೂ ನಿಮ್ಮ ಮುಂದಿರುವ ಅತ್ಯಂತ ದೊಡ್ಡ ಪ್ರಶ್ನೆ – ಒಬ್ಬ ಮನುಷ್ಯನನ್ನು ಏನು ಸಂತುಷ್ಟಗೊಳಿಸಬಹುದು? ಉತ್ತರ, ಮನುಷ್ಯನ ಸ್ವಭಾವ ತಿಳಿಯುವುದರಲ್ಲಿದೆ. 

  ಮನುಷ್ಯನ ಸ್ವಭಾವ ತಿಳಿಯುವ ಅವಶ್ಯಕತೆ ಏನು?

  ಮನುಷ್ಯರ ಸ್ವಭಾವ ನೇರವಾದದ್ದಲ್ಲ ಹಾಗಾಗಿ, ಮನುಷ್ಯರು ಹೇಗೆ ಸಂತುಷ್ಟರಾಗುವರು ಎಂದು ತಿಳಿಯಲು ಅವರ ಸ್ವಭಾವವನ್ನು ನಾವು ತಿಳಿಯಬೇಕಾಗಿದೆ. ನಾವು ಮನುಷ್ಯನನ್ನು ತಿಳಿಯದೆ, ಮನುಷ್ಯ ಹೇಗೆ ಬದುಕ ಬೇಕೆಂಬುದನ್ನು ಅರ್ಥ ಮಾಡಿಕೊಳ್ಳಲಾಗುವುದಿಲ್ಲ. ಬಹಳಷ್ಟು ವಿಜ್ಞಾನಿಗಳು, ಚಿಂತಕರು, ತತ್ವಜ್ಞಾನಿಗಳು ಮತ್ತು ಧಾರ್ಮಿಕ ಮುಖಂಡರು ಮನುಷ್ಯನ ಸ್ವಭಾವದ ಹಿಂದಿರುವ ರಹಸ್ಯವನ್ನು ಭೇದಿಸಿ, ಸಂತೋಷದ ಮೂಲವನ್ನು ತಿಳಿಯಲು ಪ್ರಯತ್ನಿಸಿದ್ದಾರೆ. 

  ಮನುಷ್ಯನ ಮೂಲ ಸ್ವಭಾವವನ್ನು ತಿಳಿಯಲು ನಡೆದಿರುವ ಪ್ರಯತ್ನಗಳು

  ಮನುಷ್ಯನ ಸ್ವಭಾವ ಅರಿಯುವ ನಿಟ್ಟಿನಲ್ಲಿ, ಹಲವರು ಭೌತಿಕ ಅಂಶಗಳಾದ ದೇಹ ಮತ್ತು ಅದರ ರೂಪ, ಆಕಾರದ ಮೇಲೆ ಗಮನ ತೋರಿದರು – ಹಾಗಾಗಿ ಅವರ ಪ್ರಕಾರ ಎಲ್ಲಿಯವರೆಗೂ ದೇಹದ ಆಗತ್ಯತೆಗಳನ್ನು ಪೂರೈಸಲಾಗುತ್ತದೆಯೋ ಮನುಷ್ಯ ಸಂತೋಷ ಗಳಿಸಬಲ್ಲ. 

  ಇನ್ನೂ ಕೆಲವರು ಮನುಷ್ಯ ಯಾವ ಕೆಲಸ ಅಥವಾ ಸಮಾಜದಲ್ಲಿನ ಅವನ ಪಾತ್ರದ ಮೇರೆಗೆ ನೋಡಿ, ಮನುಷ್ಯನು ಪ್ರಾಣಿ  ವಿಕಸನದ (evolution) ಫಲವಾಗಿ ಕಂಡರು. ಹೀಗಾಗಿ, ಮನುಷ್ಯ ಎಷ್ಟು ಸಫಲನೋ ಅಷ್ಟೇ ಸಂತುಷ್ಟ ಮತ್ತು ಸಂತೃಪ್ತ ಎಂದು ನಿರ್ಧರಿಸಿದರು. 

  ಇನ್ನೂ ಕೆಲವು ಚಿಂತಕರ ಗಮನ ಮನುಷ್ಯನ ಹೊಟ್ಟೆಪಾಡಿನ ಕಡೆಗೆ ಸೆಳೆಯಿತು ಮತ್ತು ಅವರು ಎಲ್ಲವನ್ನೂ ಅದಕ್ಕೆ ಕೂಡಿಸಿದರು. ಅವರ ಪ್ರಕಾರ ಎಲ್ಲವೂ ಹೊಟ್ಟೆಪಾಡಿಗಾಗಿಯೇ ಆಗಿದ್ದು, ಹಸಿವೇ ಎಲ್ಲಾ ಸಮಸ್ಯೆಗಳ ಜಡವೆಂದು ನಿರ್ಧರಿಸಿದರು. ಇದೊಂದು ಸಮಸ್ಯೆಯನ್ನು ನಿವಾರಿಸಿದರೆ, ಎಲ್ಲವೂ ಸರಿಯಾಗಿ ಮನುಷ್ಯ ಸಂತುಷ್ಟನಾಗುತ್ತಾನೆಂದು ಭಾವಿಸಿದರು. 

  ಮತ್ತೂ ಕೆಲವರು ಮನುಷ್ಯನನ್ನು ಲೈಂಗಿಕತೆಯ ಬಿಂಬದಿಂದ ವೀಕ್ಷಿಸುತ್ತಾ, ಅದುವೇ ಎಲ್ಲಕ್ಕಿಂತ ಪ್ರಮುಖ ವಿಷಯವೆಂದು ಪ್ರತಿಪಾದಿಸಿದರು. ಅವರ ಪ್ರಕಾರ ಸಕಲ ಮನುಷ್ಯ ಕ್ರಿಯೆಯೂ ಲೈಂಗಿಕತೆಯಲ್ಲೇ ಕೇಂದ್ರೀಕೃತವಾಗಿದ್ದು, ಲೈಂಗಿಕತೆಯ ಮೇಲಿನ ಕಟ್ಟಾಚಾರಗಳನ್ನು ನಿವಾರಿಸಿದಂತೆ ಮನುಷ್ಯ ಸಂತುಷ್ಟನಾಗುತ್ತಾನೆಂದು ನಂಬಿದರು. 

  ಹಲವರು ಆಧ್ಯಾತ್ಮಿಕತೆಯೊಂದಕ್ಕೇ ಹೆಚ್ಚು ಒತ್ತು ಕೊಟ್ಟು, ದೈಹಿಕ ಆಗತ್ಯತೆಗಳನ್ನು ನಿರ್ಲಕ್ಷಿಸಿದರು. ಅವರ ಪ್ರಕಾರ ದೇಹ ದಂಡನೆಯಿಂದ ಆತ್ಮ ಉತ್ಕೃಷ್ಟತೆ ಪ್ರಾಪ್ತಿಸಿ ಸಂತೋಷದೆಡೆಗೆ ದೂಡುವುದೆಂದು ಪ್ರತಿಪಾದಿಸಿದರು. 

  ಸಂತೋಷ – ಕೈಗೆಟಕದ ಮರೀಚಿಕೆಯೇ?

  ನೀವು ಗಮನಿಸುವಂತೆ, ಯಾವ ಪ್ರಯತ್ನವೂ ಮನುಷ್ಯ ಸ್ವಭಾವವನ್ನು ಸಂಪೂರ್ಣವಾಗಿ ಸೆರೆಹಿಡಿಯುವುದಿಲ್ಲ. ಇವೆಲ್ಲವೂ ಅಂಧರು ತಮ್ಮದೇ ಆದ ರೀತಿಯಲ್ಲಿ ಆನೆಯೊಂದನ್ನು ಅಪೂರ್ಣವಾಗಿ ತಿಳಿಯುವ ಪ್ರಯತ್ನದಂತಿದೆ. ಎಲ್ಲರೂ ಅಪೂರ್ಣ ಮತ್ತು ದೋಷಪೂರಿತ ನಿಲುವುಗಳನ್ನು ಪ್ರತಿಪಾದಿಸಿದರು. 

  ಮೂಲತಃ, ಮನುಷ್ಯ ಸ್ವಭಾವವನ್ನು ಅರಿಯಲು ವಿಫಲರಾದಂತೆಲ್ಲಾ,  ಮನುಷ್ಯ ಸಂತೋಷ ಕಾಣುವ ದಾರಿಯೂ ಆಗೋಚರವಾಗುತ್ತದೆ. 

  ಹಾಗಿದ್ದರೆ, ಮನುಷ್ಯ ಸ್ವಭಾವವನ್ನು ಯಾರು ತಿಳಿಸಬಲ್ಲರು?

  ದೇವರು. ಹೌದು,, ಕೇವಲ ದೇವರೇ ಮನುಷ್ಯನ ನಿಜ ಸ್ವಭಾವವನ್ನು ತಿಳಿಸಬಹುದು. 

  ಯಾವುದೇ ವಸ್ತುವನ್ನು ತಯಾರು ಮಾಡಿದವರಿಗೇ ಅ ವಸ್ತುವಿನ ಬಗ್ಗೆ ಅತ್ಯುತ್ತಮ ಅರಿವಿರುತ್ತದೆ. ಉದಾಹರಣೆಗೆ, ವಾಹನಗಳು ವಾಹನ ಉತ್ಪಾದಕರು ತಿಳಿಸಿರುವ ತೈಲ, ಬಿಡಿ ಭಾಗಗಳೊಂದಿಗೇ ಅತ್ಯತ್ತಮವಾಗಿ ಕೆಲಸ ಮಾಡುತ್ತವೆ. ಸಣ್ಣ ವಿಷಯ ಎಂದೆನಿಸಬಹುದಾದ ಚಕ್ರಗಳಲ್ಲಿನ ಗಾಳಿ ಒತ್ತಡವೂ  (ಪ್ರೆಷರ್) ನಾವು ಉತ್ಪಾದಕರು ಹೇಳಿದಷ್ಟೇ ಇಡುತ್ತೇವೆ, ಯೋಚನೆ ಮಾಡಿದ್ದೀರಾ ಏಕೆ? ಅದು ನಮ್ಮ ವಾಹನ, ನಾವು ಆದರ ಮಾಲೀಕರು ಮತ್ತು ಅದನ್ನು ನಾವೇ ಬಳಸುತ್ತೇವೆ. ಅದನ್ನು ನಮ್ಮ ಮನ ಬಂದಂತೆ ಏಕೆ ಉಪಯೋಗಿಸುವುದಿಲ್ಲ? ದಿನದ ನಮ್ಮ ಮನಸ್ಥಿತಿಯಂತೆ ಚಕ್ರದ ಗಾಳಿ ಒತ್ತಡ ಬದಲಾಯಿಸಬಾರದೇಕೆ?

  ನಮ್ಮ ಮನ ಬಂದಂತೆ ಅದನ್ನು ಬದಲಾಯಿಸುವುದಿಲ್ಲ ಏಕೆಂದರೆ ವಾಹನ ಉತ್ಪಾದಕರಿಗೆ ವಾಹನಕ್ಕೆ ಏನು ಉತ್ತಮವೆಂದು ತಿಳಿದಿದೆ, ಎಂದು ನಾವು ಅವರ ಮೇಲೆ ಭರವಸೆ ಇಟ್ಟಿರುತ್ತೇವೆ. ಅಂತೆಯೇ ಸಣ್ಣ ಪುಟ್ಟ ವಿಷಯಗಳಲ್ಲೂ ನಾವು ಉತ್ಪಾದಕರನ್ನೇ ನಂಬಿರುತ್ತೇವೆ. ಹೀಗಿರುವಾಗ, ನಮ್ಮ ಜೀವನದ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನಮ್ಮ ಸೃಷ್ಟಿಕರ್ತನಾದ ದೇವರಿಂದ ಮಾರ್ಗದರ್ಶನವಿಲ್ಲದೇ ಮುಂದುವರೆಯುವುದು ಎಷ್ಟರ ಮಟ್ಟಿಗೆ ಸರಿ?

  ನಮ್ಮ ಸೃಷ್ಟಿಕರ್ತನಾದ ದೇವರು, ಮನುಷ್ಯನ ಸ್ವಭಾವವನ್ನು ಸ್ಪಷ್ಟವಾಗಿ ಬಲ್ಲವನು ಮತ್ತು ಸುಖ, ಶಾಂತಿ ಭರಿತ ಜೀವನ ನಡೆಸುವ ದಾರಿಯನ್ನು ನಮಗೆ ತಿಳಿಸಿದ್ದಾನೆ. ದೇವರ ಮಾರ್ಗದರ್ಶನದಿಂದ ದೂರ ಸರಿಯುವುದರಿಂದ ಅತೃಪ್ತಿ, ಅಸಂತೋಷವೇ ಖಾತ್ರಿ.

  ಪ್ರತಿ ಮನುಷ್ಯನಿಗೂ ತನ್ನ ಜೀವನದ ಅರ್ಥ, ಜೀವನದ ಉದ್ದೇಶ ಮತ್ತು ಪ್ರಪಂಚದಲ್ಲಿ ಹೇಗಿರ ಬೇಕೆಂಬುದರ ಮೂಲ ಜ್ಞಾನವಿರಬೇಕು. ಇದರ ಅರಿವು ಕೇವಲ ದೇವರ ದಿವ್ಯ ವಾಣಿಯಿಂದ ಮಾತ್ರವೇ ಸಾಧ್ಯ. 

  ಈ ಪ್ರಪಂಚ ಮತ್ತು ಮರಣ ನಂತರ ಜೀವನದಲ್ಲೂ, ಮನುಷ್ಯ ಸುಖ, ಶಾಂತಿ ಪ್ರಾಪ್ತಿ ಮಾಡಲು ದೇವರು ಮನುಷ್ಯರಿಗೆ ಅವತೀರ್ಣ ಮಾಡಿರುವ (ಇಳಿಸಿ ಕೊಟ್ಟಿರುವ) ಸಹಜ, ಸಮಸ್ತ, ಸಂಪೂರ್ಣ ಜೀವನ ಪ್ರಕ್ರಿಯೆಯೇ ಇಸ್ಲಾಮ್. ಇಸ್ಲಾಮ್ ಪ್ರವಾದಿ ಮುಹಮ್ಮದ್ ರವರು ಪ್ರಾರಂಭಿಸಿದ ಹೊಸದೊಂದು ಧರ್ಮವಲ್ಲ. ದೇವರು ತನ್ನ ಎಲ್ಲಾ ಪ್ರವಾದಿಗಳ ಮೂಲಕ ಮನುಜಕುಲಕ್ಕೆ ತಿಳಿಸಿಕೊಟ್ಟಿರುವ ದಾರಿ ಇಸ್ಲಾಮ್ ಆಗಿದೆ. ಈ ರೀತಿ ದೇವರು ಮನುಜಕುಲಕ್ಕೆ ಕಳಿಸಿಕೊಟ್ಟ ಪ್ರವಾದಿಗಳಲ್ಲಿ ಕಡೆಯ ಹಾಗೂ ಅಂತಿಮ ಪ್ರವಾದಿ, ಪ್ರವಾದಿ ಮುಹಮ್ಮದ್ ಆಗಿದ್ದಾರೆ.

  ದೇವರು ಮನುಜಕುಲಕ್ಕೆ ಕಳಿಸಿರುವ ತನ್ನ ಕಟ್ಟಕಡೆಯ ಮಾರ್ಗದರ್ಶನದ ಗ್ರಂಥವಾದ ಕುರಾನಿನಲ್ಲಿ ಹೇಳುತ್ತಾರೆ:

  ಆ ಅವಧಿಯು ಬರುವ ದಿನದಂದು ಅವನ (ಅಲ್ಲಾಹನ) ಅನುಮತಿಯಿಲ್ಲದೆ ಯಾವೊಬ್ಬ ವ್ಯಕ್ತಿಯೂ ಮಾತನಾಡಲಾರನು. ಆಗ ಅವರ ಪೈಕಿ ಕೆಲವರು ದುಃಖಗ್ರಸ್ತರು ಹಾಗೂ ಕೆಲವರು ಸಂತುಷ್ಟರೂ ಇರುವರು.

  ಕುರಾನ್ 11:105

  ಸಂತುಷ್ಟರಾಗಿರುವವರು ಸ್ವರ್ಗದಲ್ಲಿರುವರು, ಆಕಾಶಗಳು ಮತ್ತು ಭೂಮಿ ಆಸ್ತಿತ್ವದಲ್ಲಿರುವವರೆಗೂ ಅವರು ಅದರಲ್ಲಿಯೇ (ಸ್ವರ್ಗದಲ್ಲಿಯೇ) – ತಮ್ಮ ಒಡೆಯನ ಇಚ್ಛೆಯ ಹೊರತು – ಶಾಶ್ವತವಾಗಿ ವಾಸಿಸುವರು,. ಅದು ಆನಂತವಾದಂತ ಒಂದು ಉಡುಗೊರೆಯಾಗಿರುವುದು.

  ಕುರಾನ್ 11:108.

  ಕೊನೆಗೊಂದು ಮಾತು:

  ನಾವು ನೋಡಿದಂತೆ ಮನುಷ್ಯ ಸಂತೋಷದ ರಹಸ್ಯ ಬೇಧಿಸುವ ಅನೇಕ ಪ್ರಯತ್ನಗಳನ್ನು ಮಾಡಿದ್ದಾನೆ. ಹಾಗಿದ್ದರೆ, ಈ ನಿರಂತರ ಸಂತೋಷವನ್ನು ಪಡೆಯಲು ಇಸ್ಲಾಮ್ ಕೀಲಿಕೈ ಕೊಡಬಹುದಾದರೆ, ಇದನ್ನು ತಿಳಿಯಲು ಒಂದು ಪ್ರಾಮಾಣಿಕ ಪ್ರಯತ್ನ ಏಕೆ ಮಾಡಬಾರದು? ಸಂತೋಷವನ್ನು ಆರೈಸುವ ನಿಮ್ಮನ್ನು ನಾವು – ಮನುಷ್ಯ ಜೀವನದ ಸಕಲ ಬಿಂದುಗಳನ್ನು ಪರಿಪೂರ್ಣವಾಗಿ ಉತ್ತರಿಸುವ – ಇಸ್ಲಾಮಿನ ಬೋಧನೆಗಳನ್ನು ತಿಳಿಯಲು ವಿನಂತಿಸುತ್ತೇವೆ.

  WHAT OTHERS ARE READING

  Most Popular