More

    Choose Your Language

    ಸಮಾಜಕ್ಕೆ ಒಳಿತುಮಾಡಿರಿ

    ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸ್ವಾರ್ಥ ಮತ್ತು ಸ್ವ-ಕೇಂದ್ರಿತ ಜಗತ್ತಿನಲ್ಲಿ ನಾವು ವಾಸಿಸುತ್ತಿದ್ದೇವೆ – ಇಲ್ಲಿ ವೈಯಕ್ತಿಕ ಹಿತಾಸಕ್ತಿಗಳೇ ಹೆಚ್ಚು ಪ್ರಾಮುಖ್ಯತೆ ಪಡೆದಿವೆ. ಜನರು ನಿಧಾನವಾಗಿ ನಿರ್ದಯಿಗಳಾತ್ತಿದ್ದಾರೆ ಮತ್ತು ಇತರ ಜನರ ಸಮಸ್ಯೆಗಳ ಬಗ್ಗೆ ನಿರಾಸಕ್ತರಾಗಿದ್ದಾರೆ. ಇದಕ್ಕೆ ಪರಿಹಾರವಿದೆಯೇ? ಬನ್ನಿ, ನಾವು ಪ್ರವಾದಿ ಜೋಸೆಫ್ ಅವರ ಜೀವನದಿಂದ ಸ್ಫೂರ್ತಿ ಪಡೆಯೋಣ.

    ಪರಿಚಯ

    ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸ್ವಾರ್ಥ ಮತ್ತು ಸ್ವ-ಕೇಂದ್ರಿತ ಜಗತ್ತಿನಲ್ಲಿ ನಾವು ವಾಸಿಸುತ್ತಿದ್ದೇವೆ – ಇಲ್ಲಿ ವೈಯಕ್ತಿಕ ಹಿತಾಸಕ್ತಿಗಳೇ ಹೆಚ್ಚು ಪ್ರಾಮುಖ್ಯತೆ ಪಡೆದಿವೆ. ಜನರು ನಿಧಾನವಾಗಿ ನಿರ್ದಯಿಗಳಾತ್ತಿದ್ದಾರೆ ಮತ್ತು ಇತರ ಜನರ ಸಮಸ್ಯೆಗಳ ಬಗ್ಗೆ ನಿರಾಸಕ್ತರಾಗಿದ್ದಾರೆ. ಇದಕ್ಕೆ ಪರಿಹಾರವಿದೆಯೇ?

    ನಿದರ್ಶನಗಳು ಜನರನ್ನು, ಅವರ ಮನಸ್ಥಿತಿಯನ್ನು ಬದಲಾಯಿಸುತ್ತವೆ ಮತ್ತು ಅವರನ್ನು ನಿರಾಸಕ್ತಿಯಿಂದ ಸಾಧನೆಗಳತ್ತ ಕೊಂಡೊಯ್ಯುವ ಶಕ್ತಿ ಹೊಂದಿರುತ್ತವೆ. ಹಾಗಾದರೆ ಸಮಾಜಕ್ಕೆ ಒಳ್ಳೆಯದನ್ನು ಮಾಡಲು ಪ್ರೇರೇಪಿಸುವ ಒಂದು ಮಾದರಿ ನಮ್ಮಲ್ಲಿದೆಯೇ? ಖಂಡಿತ ಹೌದು.

    ಈ ಲೇಖನದಲ್ಲಿ, ಸರ್ವಶಕ್ತ ದೇವರಿಂದ ಕುರಾನ್‌ನಲ್ಲಿ ಉಲ್ಲೇಖಿಸಲಾದ ಒಬ್ಬ ಸ್ಫೂರ್ತಿದಾಯಕ ವ್ಯಕ್ತಿತ್ವದ ಜೀವನದಿಂದ ನಾವು ಒಂದು ಘಟನೆಯನ್ನು ನೋಡೋಣ. ಅವರು ಬೇರೆ ಯಾರೂ ಅಲ್ಲ ಪ್ರವಾದಿ ಜೋಸೆಫ್ (ಅವರ ಮೇಲೆ ದೇವರ ವತಿಯಿಂದ ಶಾಂತಿ ಇರಲಿ).

    ಹಿನ್ನೆಲೆ

    ನಾವು ಈ ಘಟನೆಯನ್ನು ಪರಿಶೀಲಿಸುವ ಮೊದಲು ಅದರ ಹಿನ್ನೆಲೆ ತಿಳಿಯೋಣ. ಸೋದರರಲ್ಲಿ ಅತ್ಯಂತ ಕಿರಿಯಯರಾದ ಪ್ರವಾದಿ ಜೋಸೆಫ್ ತನ್ನ ಸ್ವಂತ ಒಡಹುಟ್ಟಿದವರ ಕುತಂತ್ರದಿಂದ ತನ್ನ ತಂದೆಯಿಂದ ಬೇರ್ಪಡಲಾಗುತ್ತಾರೆ. ಅವರನ್ನು ಗುಲಾಮನಂತೆ ತೆಗೆದುಕೊಳ್ಳಲಾಗಿ, ನಂತರ ಒಂದು ದೂರದ ದೇಶದಲ್ಲಿರುವ ಮಂತ್ರಿಯೊಬ್ಬನ ಅರಮನೆಯಲ್ಲಿ ಕೆಲಸಕ್ಕೆ ಹಾಕಲಾಗುತ್ತದೆ . ಆ ಮಂತ್ರಿಯ ಪತ್ನಿಯ ಅನೈತಿಕ ಕರ್ಮಗಳತ್ತ ಅವರನ್ನು ಸೆಳೆಯಲು ಪ್ರಯತ್ನಿಸಲು ಅವರು ನಿರಾಕರಿಸಿದಾಗ, ಅವರನ್ನು ಅನ್ಯಾಯವಾಗಿ ಸೆರೆಮನೆಗೆ ತಳ್ಳಲಾಗುತ್ತದೆ.

    ಅವರ ಜೈಲು ವಾಸದ ಸಮಯದಲ್ಲಿ, ಅವರ ಇಬ್ಬರು ಜೈಲು ಸಂಗಾತಿಗಳು ತಾವು ಕಂಡ ಕನಸುಗಳನ್ನು ಹಂಚಿಕೊಳ್ಳುತ್ತಾರೆ. ಈ ಕನಸುಗಳ ಆಧಾರದ ಮೇಲೆ ಖೈದಿಗಳಲ್ಲಿ ಒಬ್ಬರು ಕೊಲ್ಲಲ್ಪಡುತ್ತಾರೆ ಮತ್ತು ಇನ್ನೊಬ್ಬರು ರಾಜನಿಗೆ ಸೇವೆ ಸಲ್ಲಿಸುವವನಾಗುತ್ತಾನೆ ಎಂದು ಪ್ರವಾದಿ ಜೋಸೆಫ್ ಕನಸುಗಳನ್ನು ಸರಿಯಾಗಿ ವಿವರಿಸುತ್ತಾರೆ. ಪ್ರವಾದಿ ಜೋಸೆಫ್ ಬಿಡುಗಡೆಗೊಳ್ಳುವ ಖೈದಿಯನ್ನು ರಾಜನಲ್ಲಿ ತನ್ನ ಬಗ್ಗೆ ಪ್ರಸ್ತಾಪಿಸಲು ವಿನಂತಿಸುತ್ತಾರೆ. ಆದರೆ ಆ ಖೈದಿ ಜೋಸೆಫ್ ಅನ್ನು ಮರೆತುಬಿಡುತ್ತಾನೆ ಮತ್ತು ಅವರು ಜೈಲಿನಲ್ಲಿಯೇ ಉಳಿಯುತ್ತಾರೆ.

    ಜೋಸೆಫರು ಬಿಡುಗಡೆ ಹೊಂದುವನೆಂದು ತಿಳಿದಿದ್ದವನಿಗೆ, ‘ನನ್ನ ಬಗ್ಗೆ ನಿನ್ನ ಯಜಮಾನನಿಗೆ ತಿಳಿಸು’ ಎಂದು ಹೇಳಿದರು, ಆದರೆ ಶೈತಾನನು ಅವನು ಮರೆಯುವಂತೆ ಮಾಡಿದನು ಮತ್ತು ಆದ್ದರಿಂದ ಜೋಸೆಫರು ಹಲವಾರು ವರ್ಷಗಳ ಕಾಲ ಸೆರೆಮನೆಯಲ್ಲಿಯೇ ಉಳಿದರು.

    ಕುರಾನ್ ಅಧ್ಯಾಯ 12: ಸೂಕ್ತಿ 42

    ರಾಜನಿಗೆ ಕಂಡ ಕನಸು

    ರಾಜನು (ಸಭಿಕರಿಗೆ) ಹೇಳಿದನು, ‘ಏಳು ಕೊಬ್ಬಿದ ಹಸುಗಳನ್ನು ಏಳು ತೆಳ್ಳಗಿನ ಹಸುಗಳು ತಿನ್ನುತ್ತವೆ; ಏಳು ಹಸಿರು ಧಾನ್ಯಗಳು ಮತ್ತು [ಏಳು] ಇತರೆ ಒಣಗಿದವು ಎಂದು ನಾನು ಕನಸು ಕಂಡೆ. ಮಂತ್ರಿಗಳೇ, ನೀವು ಕನಸುಗಳನ್ನು ಅರ್ಥೈಸಬಲ್ಲವರಾಗಿದ್ದರೆ ನನ್ನ ಕನಸಿನ ಅರ್ಥವನ್ನು ಹೇಳಿ.

    ಕುರಾನ್ ಅಧ್ಯಾಯ 12: ಸೂಕ್ತಿ 43

    ಅವರು (ಮಂತ್ರಿಗಳು) ಉತ್ತರಿಸಿದರು, “ಇವು ಗೊಂದಲಮಯವಾಗಿವೆ ಮತ್ತು ಅಂತಹ ಕನಸುಗಳ ವ್ಯಾಖ್ಯಾನವು ನಮಗೆ ತಿಳಿದಿಲ್ಲ”.

    ಕುರಾನ್ ಅಧ್ಯಾಯ 12: ಸೂಕ್ತಿ 44

    ಬಿಡುಗಡೆಗೊಂಡ ಖೈದಿ ಜೋಸೆಫ್ ಬಗ್ಗೆ ತಿಳಿಸುತ್ತಾನೆ

    ಕೊನೆಗೆ ಬಿಡುಗಡೆಗೊಂಡ ಮಾಜಿ ಖೈದಿ, [ಜೋಸೆಫರನ್ನು] ನೆನಪಿಸಿಕೊಂಡನು ಹಾಗೂ ಹೇಳಿದನು, ‘ಇದರ ಅರ್ಥವನ್ನು ನಾನು ನಿಮಗೆ ಹೇಳುತ್ತೇನೆ. ಆದ್ದರಿಂದ, ನನ್ನನ್ನು (ಜೋಸೆಫ್ ಬಳಿ) ಗೆ ಕಳುಹಿಸಿ.

    ಕುರಾನ್ ಅಧ್ಯಾಯ 12: ಸೂಕ್ತಿ 45

    ಮಾಜಿ ಖೈದಿ ಜೋಸೆಫ್ ಅವರನ್ನು ಭೇಟಿಯಾಗುತ್ತಾನೆ ಮತ್ತು ರಾಜನ ಕನಸನ್ನು ತಿಳಿಸುತ್ತಾನೆ. ಪ್ರವಾದಿ ಜೋಸೆಫ್ ಮಾಜಿ ಖೈದಿಗೆ ಕನಸನ್ನು ವಿವರಿಸುತ್ತಾರೆ. 7 ವರ್ಷಗಳ ಸಮೃದ್ಧಿ ಮತ್ತು 7 ವರ್ಷಗಳ ತೀವ್ರ ಬರಗಾಲದ ನಂತರ ಒಂದು ವರ್ಷ ಸಮೃದ್ಧ ಮಳೆಯಾಗುತ್ತದೆ ಎಂದು ಅವರು ಮಾಜಿ ಖೈದಿಗೆ ಹೇಳುತ್ತಾರೆ. ರಾಜನು ಕನಸಿನ ಅರ್ಥವನ್ನು ಕೇಳಿದಾಗ, ಅವನು ಜೋಸೆಫ್ ಅನ್ನು ಭೇಟಿಯಾಗಲು ಬಯಸುತ್ತಾನೆ.

    ರಾಜ ಜೋಸೆಫರನ್ನು ಭೇಟಿಯಾಗುತ್ತಾನೆ

    ಜೋಸೆಫರ ಮುಗ್ಧತೆಯ ಬಗ್ಗೆ ತಿಳಿದ ನಂತರ ರಾಜನು ಜೋಸೆಫರನ್ನು ಭೇಟಿಯಾಗುತ್ತಾನೆ.

    ರಾಜನು, ‘ಅವರನ್ನು (ಜೋಸೆಫ್) ನನ್ನ ಬಳಿಗೆ ತನ್ನಿ: ಅವರು ನನಗೆ ವೈಯಕ್ತಿಕವಾಗಿ ಸಹಾಯ ಮಾಡಬೇಕೆಂದು ನಾನು ಬಯಸುತ್ತೇನೆ,’ ಮತ್ತು ಒಮ್ಮೆ ರಾಜನು ಅವರೊಂದಿಗೆ ಮಾತನಾಡಿದ ನಂತರ (ಹೇಳಿದರು), ‘ಇಂದಿನಿಂದ ನಿಮಗೆ ನನ್ನ ನಂಬಿಕೆ ಮತ್ತು ರಾಜ ಕೃಪೆ ಇರಲಿದೆ.’

    ಕುರಾನ್ ಅಧ್ಯಾಯ 12: ಸೂಕ್ತಿ 54

    ಈ ಪರಿಸ್ಥಿತಿಯಲ್ಲಿ ನೀವು ಏನು ಮಾಡುತ್ತೀರಿ?

    ಪ್ರವಾದಿ ಜೋಸೆಫ್ ಅವರ ಸ್ಥಾನದಲ್ಲಿ ನಿಮ್ಮನ್ನು ಕಲ್ಪಿಸಿಕೊಳ್ಳಿ. ಇಂತಹ ಸನ್ನಿವೇಶದಲ್ಲಿ ನೀವು ಅವರಿಗೆ ಸಹಾಯ ಮಾಡಬೇಕೆಂದು ರಾಜನು ಬಯಸುತ್ತಾನೆ.

    1. ನೀವು ಚಿಕ್ಕ ವಯಸ್ಸಿನಲ್ಲೇ ತಂದೆಯಿಂದ ಬೇರ್ಪಟ್ಟಿದ್ದೀರಿ
    2. ನೀವು ಅನೇಕ ವರ್ಷಗಳಿಂದ ಗುಲಾಮರಾಗಿ ಕೆಲಸ ಮಾಡಿದ್ದೀರಿ
    3. ನೈತಿಕ ನಡವಳಿಕೆ ಪ್ರದರ್ಶಿಸಿದ್ದಕ್ಕಾಗಿ ನಿಮ್ಮನ್ನು ಅನ್ಯಾಯವಾಗಿ ಜೈಲಿಗೆ ಹಾಕಲಾಗಿದೆ
    4. ನೀವು ಹಲವಾರು ವರ್ಷಗಳನ್ನು ಜೈಲಿನಲ್ಲಿ ಕಳೆಯುತ್ತೀರಿ
    5. ಬಿಡುಗಡೆಗೊಂಡ ಖೈದಿ ನಿಮ್ಮ ಬಗ್ಗೆ ರಾಜನಿಗೆ ತಿಳಿಸಲು ಮರೆಯುತ್ತಾನೆ
    6. ನೀವು ಇನ್ನೂ ಕೆಲವು ವರ್ಷಗಳ ಕಾಲ ಜೈಲಿನಲ್ಲಿ ಇರುತ್ತೀರಿ
    7. ನಿಮ್ಮ ಮುಗ್ಧತೆ ರಾಜನ ಮುಂದೆ ಸಾಬೀತಾಗಿದೆ
    8. ನೀವು ಕನಸನ್ನು ವಿವರಿಸಿದ್ದೀರಿ ಮತ್ತು ರಾಜನಿಗೆ ಏನು ಮಾಡಬೇಕೆಂದು ಸಲಹೆ ನೀಡಿದ್ದೀರಿ

    ಮೇಲೆ ತಿಳಿಸಿದ ಎಲ್ಲಾ ಕಷ್ಟಗಳನ್ನು ದಾಟಿದ ನಂತರ, ಈಗ ನೀವು ಸ್ವತಂತ್ರವಾಗಿ ಹೋಗಿ ನಿಮ್ಮ ತಂದೆಯೊಂದಿಗೆ ಮತ್ತೆ ಒಂದಾಗಲು ಅವಕಾಶ ನಿಮ್ಮ ಮುಂದಿದೆ. ನಿಮ್ಮ ಜೀವನದುದ್ದಕ್ಕೂ ನೀವು ಕಾಯುತ್ತಿರುವ ಅವಕಾಶ. ನೀವು ಹಿಂದುಳಿಯಲು ಮತ್ತು ಸಹಾಯ ಮಾಡಲು ನಿರ್ಧರಿಸಿದರೆ, ನೀವು ಇನ್ನೂ ಕನಿಷ್ಟ 14 ವರ್ಷಗಳನ್ನು ಈ ರಾಜ್ಯದಲ್ಲೇ ಕಳೆಯಬೇಕಾಗುತ್ತದೆ. ನೆನಪಿಡಿ, ಕನಸನ್ನು ಅರ್ಥೈಸುವ ಮೂಲಕ ಮತ್ತು ರಾಜನಿಗೆ ಏನು ಮಾಡಬೇಕೆಂದು ಸಲಹೆ ನೀಡುವ ಮೂಲಕ ನೀವು ನಿಮ್ಮ ಭಾಗವನ್ನು ಮಾಡಿದ್ದೀರಿ.

    ನೀವೇನು ಮಾಡುವಿರಿ?

    ಪ್ರವಾದಿ ಜೋಸೆಫ್ ಏನು ಮಾಡಿದರು?

    ಪ್ರವಾದಿ ಜೋಸೆಫ್ ಅವರ ಪ್ರತಿಕ್ರಿಯೆ ಅತ್ಯದ್ಭುತ ಮತ್ತು ಸ್ಪೂರ್ತಿದಾಯಕವಾಗಿದೆ.

    ಜೋಸೆಫ್ ಹೇಳಿದರು, ‘ನನಗೆ ರಾಜ್ಯದ ಉಗ್ರಾಣಗಳ ಉಸ್ತುವಾರಿ ವಹಿಸಿ: ನಾನು ಅವುಗಳನ್ನು ಸಮರ್ಥವಾಗಿ ಮತ್ತು ಎಚ್ಚರಿಕೆಯಿಂದ ನಿರ್ವಹಿಸುತ್ತೇನೆ.

    ಕುರಾನ್ ಅಧ್ಯಾಯ 12: ಸೂಕ್ತಿ 55

    ಸೆರೆಯಿಂದ ಸ್ವತಂತ್ರ ಮನುಷ್ಯನಾಗಿ ಹೊರಹೋಗಲು ಅವಕಾಶವಿದ್ದರೂ ಪ್ರವಾದಿ ಜೋಸೆಫ್ ರಾಜ್ಯದ ವ್ಯವಹಾರಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊರಲು ಮುಂದೆ ಬರುತ್ತಾರೆ. ದೇಶ ಅವರ ದೇಶವಾಗಿರಲಿಲ್ಲ ಮತ್ತು ಜನರು ಅವರ ಜನರಾಗಿರಲಿಲ್ಲ. ಅವರ ಧರ್ಮವನ್ನೂ ಅನುಸರಿಸುತ್ತಿರಲಿಲ್ಲ. ಹಾಗಾದರೆ ಪ್ರವಾದಿ ಜೋಸೆಫ್ ರಾಜ ಮತ್ತು ಅವನ ಜನರಿಗೆ ಸಹಾಯ ಮಾಡಲು ಈ ತ್ಯಾಗವನ್ನು ಏಕೆ ಮಾಡಿದರು?

    ಜನರ ಬಗ್ಗೆ ಕಾಳಜಿ

    ಬರಗಾಲದ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸದಿದ್ದರೆ, ಅನೇಕ ಅಮಾಯಕರು (ಪುರುಷರು, ಮಹಿಳೆಯರು ಮತ್ತು ಮಕ್ಕಳು) ಮತ್ತು ಜಾನುವಾರುಗಳು ಸಾಯುತ್ತವೆ ಎಂದು ಪ್ರವಾದಿ ಜೋಸೆಫ್ ತಿಳಿದಿದ್ದರು. ಈ ದುರಂತವನ್ನು ತಡೆಯುವ ಅರಿವು ಮತ್ತು ಸಾಮರ್ಥ್ಯ ಅವರಲ್ಲಿದೆ ಎಂದು ಅವರು ಚೆನ್ನಾಗಿ ತಿಳಿದಿದ್ದರು ಮತ್ತು ತಮ್ಮ ಪರಿಣತಿಯ ಅವಶ್ಯಕತೆ ಅತ್ಯಂತ ಹೆಚ್ಚು ಇರುವ ಸಮಯದಲ್ಲಿ ರಾಜ ಮತ್ತು ಜನರನ್ನು ತ್ಯಜಿಸಲು ಅವರ ಉತ್ತಮ ಸ್ವಭಾವ ಅವಕಾಶ ನೀಡಲಿಲ್ಲ,.

    ಪ್ರವಾದಿ ಜೋಸೆಫ್ ಅವರಿಂದ ಸ್ಫೂರ್ತಿ ಪಡೆಯೋಣ

    ಅಪಘಾತಕ್ಕೀಡಾದವರು ರಸ್ತೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವುದನ್ನು ನೋಡಿಯೂ ಪ್ರಯಾಣ ಮುಂದುವರಿಸುವಷ್ಟು ಜನ ಕರುಣೆಯಿಲ್ಲದಿರುವ ಈ ಕಾಲದಲ್ಲಿ ನೀವು ಪ್ರವಾದಿ ಜೋಸೆಫ್ ಅವರನ್ನು ಅನುಸರಿಸಿ ದೇವರು ನಿಮಗೆ ನೀಡಿರುವ ಸಾಮರ್ಥ್ಯದಿಂದ ಸಮಾಜಕ್ಕೆ ಒಳಿತು ಮಾಡಬಹುದೇ? ಖಂಡಿತ ಹೌದು!

    ನಿಮ್ಮ ಸಮಾಜಕ್ಕೆ ನಿಮ್ಮ ಅವಶ್ಯಕತೆಯಿದೆ! ನಿಮ್ಮ ಜನರಿಗೆ ನಿಮ್ಮ ಅವಶ್ಯಕತೆಯಿದೆ! ಸಮಾಜಕ್ಕೆ ಒಳಿತುಮಾಡಿರಿ!

    WHAT OTHERS ARE READING

    Most Popular