More

  Choose Your Language

  ಅತ್ಯಾಚಾರವೆಂಬ ಪಿಡುಗಿಗೆ ಪರಿಹಾರದ ಹುಡುಕಾಟ

  ಅತ್ಯಾಚಾರಗಳ ಸಂಖ್ಯೆಯಲ್ಲಿ ಭಾರತವು ವಿಶ್ವದಲ್ಲಿ #3 ನೇ ಸ್ಥಾನದಲ್ಲಿದೆ. ಭಾರತದಲ್ಲಿ ಪ್ರತಿ 22 ನಿಮಿಷಕ್ಕೆ ಒಬ್ಬ ಮಹಿಳೆ ಅತ್ಯಾಚಾರಕ್ಕೊಳಗಾಗುತ್ತಾಳೆ. ಭಾರತದಲ್ಲಿ ಪ್ರತಿದಿನ ಸರಿಸುಮಾರು 65 ಮಹಿಳೆಯರು ಅತ್ಯಾಚಾರಕ್ಕೊಳಗಾಗುತ್ತಿದ್ದಾರೆ. ಇದಕ್ಕೆ ಸೂಕ್ತ ಪರಿಹಾರವಿದೆಯೇ? ಬನ್ನಿ ಹುಡುಕೋಣ.

  ಇದು ನಿಮಗೆ ಗೊತ್ತೆ?

  • ವಾರ್ಷಿಕ ಅತ್ಯಾಚಾರಗಳ ಸಂಖ್ಯೆಯಲ್ಲಿ ಭಾರತವು ವಿಶ್ವದಲ್ಲಿ # 3 ನೇ ಸ್ಥಾನದಲ್ಲಿದೆ, ಕೇವಲ USA ಮತ್ತು ದಕ್ಷಿಣ ಆಫ್ರಿಕಾದ ನಂತರ.
  • ಭಾರತದಲ್ಲಿ ಪ್ರತಿ 22 ನಿಮಿಷಕ್ಕೆ ಒಬ್ಬ ಮಹಿಳೆ ಅತ್ಯಾಚಾರಕ್ಕೊಳಗಾಗುತ್ತಾಳೆ. ಭಾರತದಲ್ಲಿ ಪ್ರತಿದಿನ ಸರಿಸುಮಾರು 65 ಮಹಿಳೆಯರು ಅತ್ಯಾಚಾರಕ್ಕೊಳಗಾಗುತ್ತಿದ್ದಾರೆ.
  • ಭಾರತದ ಕೆಲವು ಭಾಗದಲ್ಲಿ ಪ್ರತಿದಿನ 3 ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ.
  • ಸ್ವಾತಂತ್ರ್ಯ ನಂತರ ಕೊಲೆ, ದರೋಡೆ ಮತ್ತು ಅಪಹರಣದಂತಹ ಅಪರಾಧಗಳು ಕ್ರಮವಾಗಿ 106%, 27% ಮತ್ತು 298% ರಷ್ಟು ಹೆಚ್ಚಾಗಿದ್ದರೆ, ಅತ್ಯಾಚಾರದ ದರಗಳು ದಿಗ್ಭ್ರಮೆಗೊಳಿಸುವ 792% ಹೆಚ್ಚಾಗಿದೆ. ಇದರರ್ಥ 1947 ರಿಂದ ಅತ್ಯಾಚಾರದ ಪ್ರಮಾಣ ಸುಮಾರು 9 ಬಾರಿ ಹೆಚ್ಚಾಗಿದೆ.

  ಉಲ್ಲೇಖ: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ

  ಪರಿಹಾರವೇನು?

  ಯಾವುದೇ ರೋಗ ಸಾಮಾಜಿಕವಾಗಿರಲಿ ಅಥವಾ ಶಾರೀರಿಕವಾಗಿರಲಿ, ಸಮಸ್ಯೆಯ ಮೂಲ ಕಾರಣಗಳನ್ನು ಪರಿಗಣನೆಗೆ ತೆಗೆದುಕೊಂಡು ವಿಶ್ಲೇಷಿಸಿದರೆ ಮಾತ್ರ ಪರಿಹಾರಗಳು ಪರಿಣಾಮಕಾರಿಯಾಗುತ್ತವೆ. ತಲೆನೋವಿನ ಉದಾಹರಣೆಯನ್ನು ತೆಗೆದುಕೊಳ್ಳೋಣ. ತಲೆನೋವು ವಿವಿಧ ಕಾರಣಗಳಿಂದ ಉಂಟಾಗಬಹುದು: ನೆಗಡಿ, ಕಣ್ಣಿನ ದೋಷ, ಮೆದುಳಿನ ಗೆಡ್ಡೆ, ಸೈನುಟಿಸ್, ನಿದ್ರೆಯ ಕೊರತೆ, ಹಸಿವು ಅಥವಾ ಬಾಯಾರಿಕೆ ಇತ್ಯಾದಿ. ಉತ್ತಮ ವೈದ್ಯರು ತಲೆ ನೋವಿನ ಕಾರಣವನ್ನು ಚಿಕಿತ್ಸೆಗೆ ಪ್ರಯತ್ನಿಸುವ ಮೊದಲು ನಿರ್ಧರಿಸುತ್ತಾರೆ. ಅಂತೆಯೇ, ಅತ್ಯಾಚಾರಗಳಿಗೆ ಪರಿಣಾಮಕಾರಿ ಪರಿಹಾರಗಳನ್ನು ಕಂಡುಹಿಡಿಯಲು, ನಾವು ಮೂಲ ಕಾರಣಗಳನ್ನು ಗುರುತಿಸಬೇಕು ಮತ್ತು ಅವುಗಳನ್ನು ತೊಡೆದುಹಾಕಬೇಕು.

  ವಿವಿಧ ರೀತಿಯ ಅತ್ಯಾಚಾರಗಳು

  ಅತ್ಯಾಚಾರಗಳ ಪರಿಹಾರದ ಹುಡುಕಾಟವನ್ನು ನಾವು ಪ್ರಾರಂಭಿಸುವ ಮೊದಲು, ವಿವಿಧ ರೀತಿಯ ಅತ್ಯಾಚಾರಗಳ ತಿಳುವಳಿಕೆಯು ಅತ್ಯಾವಶ್ಯಕ. ಈ ಹೀನ ಕೃತ್ಯದ ಹಿಂದಿನ ಉದ್ದೇಶವನ್ನು ಆಧರಿಸಿ ಅತ್ಯಾಚಾರಗಳನ್ನು ಸಾಮಾನ್ಯವಾಗಿ ಕೆಳಗಿನ ವಿಧಗಳಾಗಿ ವರ್ಗೀಕರಿಸಲಾಗಿವೆ.

  1. ಪವರ್ ರೇಪ್ – ಸಂತ್ರಸ್ತೆಯ ಮೇಲೆ ಪ್ರಾಬಲ್ಯ ಸ್ಥಾಪಿಸಲು ಅಧಿಕಾರದಲ್ಲಿರುವ ಜನರು ಮಾಡಿದ ಅತ್ಯಾಚಾರ. ಉದಾಹರಣೆ: ಪೋಲೀಸ್, ಮಿಲಿಟರಿ ಪಡೆಗಳಿಂದ ಅತ್ಯಾಚಾರ, ಗಲಭೆಗಳ ಸಮಯದಲ್ಲಿ ಅತ್ಯಾಚಾರ ಇತ್ಯಾದಿ.
  2. ಕೋಪ ಅತ್ಯಾಚಾರ – ಕೋಪವನ್ನು ತೋರಿಸಲು ಅಥವಾ ಸಂತ್ರಸ್ತೆಯ ಮೇಲೆ ಕೋಪದ ಭಾವನೆಗಳನ್ನು ಹೊರಹಾಕಲು ಕೈಗೊಂಡ ಅತ್ಯಾಚಾರ.
  3. ಸ್ಯಾಡಿಸ್ಟಿಕ್ ಅತ್ಯಾಚಾರ – ಸಂತ್ರಸ್ತೆಯ ಸಂಕಟದಿಂದ ಸಂತೋಷವನ್ನು ಪಡೆಯಲು ಮಾಡಿದ ಅತ್ಯಾಚಾರ.
  4. ಲೈಂಗಿಕ ಅತ್ಯಾಚಾರ – ಸಂತ್ರಸ್ತೆಯ ವೆಚ್ಚದಲ್ಲಿ ಲೈಂಗಿಕ ಬಯಕೆಯನ್ನು ಪೂರೈಸಲು ಮಾಡಿದ ಅತ್ಯಾಚಾರ.

  ಲೈಂಗಿಕ ಬಯಕೆ ಅಥವಾ ಕಾಮಾಸಕ್ತಿಯು ಸಾಮಾನ್ಯವಾಗಿ ನಂಬಿರುವಂತೆ ಯಾವಾಗಲೂ ಅತ್ಯಾಚಾರಗಳು ಅಥವಾ ಲೈಂಗಿಕ ಅಕ್ರಮಗಳ ಹಿಂದಿನ ಉದ್ದೇಶವಾಗಿರುವುದಿಲ್ಲ ಎಂಬುದು ಮೇಲಿನಿಂದ ಸ್ಪಷ್ಟವಾಗುತ್ತದೆ. ಲೈಂಗಿಕ ಬಯಕೆಯ ಪರಿಣಾಮವಾಗಿ ಮಾಡಿದ ಲೈಂಗಿಕ ಅಪರಾಧವು ಅಕ್ರಮವನ್ನು ಪ್ರಚೋದಿಸುವ ನಾಲ್ಕು ಕಾರಣಗಳಲ್ಲಿ ಕೇವಲ ಒಂದಾಗಿದೆ.

  ಅತ್ಯಾಚಾರವನ್ನು ಪ್ರಚೋದಿಸುವ ಪ್ರಾಥಮಿಕ ಕಾರಣಗಳು

  ಅತ್ಯಾಚಾರಕ್ಕೆ ಕಾರಣವೇನು ಎಂದು ತಿಳಿಯದೆ ನಾವು ಅದನ್ನು ಪರಿಹರಿಸಲು ಸಾಧ್ಯವಿಲ್ಲ. ಅತ್ಯಾಚಾರದ ಪ್ರಚೋದಕಗಳು:

  ಮದ್ಯ

  ಅತ್ಯಾಚಾರಿಯು ಮದ್ಯದ ಅಮಲಿನಲ್ಲಿದ್ದಾಗ ಅತ್ಯಾಚಾರದ ಅನೇಕ ಘಟನೆಗಳು ಸಂಭವಿಸಿವೆ ಎಂದು ಸಾಮಾನ್ಯವಾಗಿ ತಿಳಿದಿದೆ, ಇದು ಲೈಂಗಿಕ ಅಪರಾಧಗಳ ಅತ್ಯಂತ ಗಂಭೀರವಾದ ಪ್ರಚೋದಕಗಳಲ್ಲಿ ಒಂದಾಗಿದೆ. ಮದ್ಯಪಾನವು ವ್ಯಕ್ತಿಯ ಸಾಮಾನ್ಯ ನಡವಳಿಕೆಯನ್ನು ಬದಲಾಯಿಸುತ್ತದೆ ಎಂಬುದು ಸಾಮಾನ್ಯ ಜ್ಞಾನ. ಮದ್ಯದ ಅಮಲಿನಲ್ಲಿರುವ ವ್ಯಕ್ತಿಯು ಯೋಚಿಸಲಾಗದ ಕೆಲಸಗಳನ್ನೂ ಮಾಡಬಹುದು. ಏಕೆಂದರೆ (ಮದ್ಯದಲ್ಲಿರುವ) ಆಲ್ಕೋಹಾಲ್ ಚಲನೆ, ಸಹಜಾತ್ಮಕ, ಭಾವನಾತ್ಮಕ, ಅರಿವಿನ ಮತ್ತು ಗ್ರಹಿಕೆಯ ಅಂಶಗಳ ಮೇಲೆ ಪರಿಣಾಮ ಬೀರುವ ಮೂಲಕ ಮೆದುಳಿನಲ್ಲಿ “disinhibition” (ಸಂಯಮದ ಕೊರತೆ) ಯನ್ನು ಉಂಟುಮಾಡುತ್ತದೆ. ಈ ನಿಷೇಧದ ಕೊರತೆ ಮೂರು ನಡವಳಿಕೆಗಳ ಮೂಲಕ ಹೊರಹೊಮ್ಮುತ್ತದೆ:

  1. ಹೈಪರ್ಸೆಕ್ಸುಆಲಿಟಿ – ಲೈಂಗಿಕ ಪ್ರಚೋದನೆಯಲ್ಲಿ ಹಠಾತ್ ಹೆಚ್ಚಳ
  2. ಹೈಪರ್ಫೇಜಿಯಾ – ಹೆಚ್ಚಿದ ಲೈಂಗಿಕ ಹಸಿವು
  3. ಆಕ್ರಮಣಶೀಲತೆ

  ಈ ಸಂಯಮದ ಕೊರತೆಯ ನಡವಳಿಕೆಯ ಲಕ್ಷಣಗಳನ್ನು ಓದುವ ಯಾರಾದರೂ ಮದ್ಯ (ಆಲ್ಕೊಹಾಲ್) ಮತ್ತು ಲೈಂಗಿಕ ಅಪರಾಧಗಳ ನಡುವಿನ ಸಂಪರ್ಕವನ್ನು ಸುಲಭವಾಗಿ ಗ್ರಹಿಸಬಹುದು. ಮದ್ಯದ ಪ್ರಭಾವದಲ್ಲಿ ಲೈಂಗಿಕ ಅಪರಾಧಗಳ ಅಪಾಯವು ಹೆಚ್ಚುತ್ತದೆ ಹಾಗೂ ಈ ಕಾರಣದಿಂದ ಮದ್ಯ, ಅತ್ಯಾಚಾರ ಮತ್ತು ಇತರ ಲೈಂಗಿಕ ಅಪರಾಧಗಳ ದೊಡ್ಡ ಪ್ರಚೋದಕಗಳಲ್ಲಿ ಒಂದಾಗಿದೆ.

  ಅಶ್ಲೀಲತೆ

  ರಾಬಿನ್ ಮೋರ್ಗನ್ ಅವರ ಹೇಳಿಕೆ, “ಅಶ್ಲೀಲತೆಯು ಸಿದ್ಧಾಂತವಾಗಿದೆ (theory) -ಅತ್ಯಾಚಾರವು ಪ್ರಾಯೋಗಿಕ ಕ್ರಿಯೆ (practical) ಆಗಿದೆ”, ಅಶ್ಲೀಲತೆ ಮತ್ತು ಮಹಿಳೆಯರ ವಿರುದ್ಧದ ಲೈಂಗಿಕ ಅಪರಾಧಗಳ ನಡುವಿನ ಸ್ಪಷ್ಟ ಸಂಪರ್ಕವನ್ನು ಸೆರೆಹಿಡಿಯುತ್ತದೆ. ಮನೋ ವಿಜ್ಞಾನಿಗಳ ಅಧ್ಯಯನಗಳು ಅಶ್ಲೀಲತೆಯ ವೀಕ್ಷಣೆಯು “vivid sexual fantasy” (ಲೈಂಗಿಕ ಭ್ರಮೆ) ಯ ಮೂಲವಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸುವುದಲ್ಲದೆ, ಇದು ಪುರುಷರಲ್ಲಿ ವಿಕೃತತೆಗೆ ಕಾರಣವಾಗಬಹುದು ಮತ್ತು ಅನೇಕ ನಕಾರಾತ್ಮಕ ಸಾಮಾಜಿಕ ಪರಿಣಾಮಗಳನ್ನು ಉಂಟುಮಾಡಬಹುದು. ಇದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ಈ ಪುಸ್ತಕಗಳನ್ನು ಓದಬಹುದು: “Effects of Prolonged Consumption of Pornography” and “Sexual Deviation as Conditioned Behavior: A Hypothesis”.

  ಸಮಾಜದಲ್ಲಿ ಅಶ್ಲೀಲತೆಯ ಸ್ಪಷ್ಟ ಹೆಚ್ಚಳವಿದೆ ಎಂದು ನಮಗೆ ತಿಳಿದಿದೆ. ಚಲನಚಿತ್ರಗಳು ಮತ್ತು ಟಿವಿ, ಪತ್ರಿಕೆಗಳು, ನಿಯತಕಾಲಿಕೆಗಳು ಮತ್ತು ರಸ್ತೆಯ ಹೋರ್ಡಿಂಗ್‌ಗಳಲ್ಲಿ ಜಾಹೀರಾತುಗಳನ್ನೂ ಇದರಿಂದ ಹೊರತುಪಡಿಸಿಲ್ಲ. ಎಲ್ಲೆಡೆ ಅಶ್ಲೀಲತೆಯ ನಿರಂತರ ಸರಬರಾಜಿಂದಾಗಿ , ಜನರ, ವಿಶೇಷವಾಗಿ ಯುವಜನರ ಮನಸ್ಸು ಕಲುಷಿತಗೊಂಡಿದೆ.

  ಸಾಮಾನ್ಯ ಮತ್ತು ಆರೋಗ್ಯಕರ ಲೈಂಗಿಕ ನಡವಳಿಕೆಯ ದೃಷ್ಟಿಕೋನವನ್ನು ಬದಲಾಯಿಸುವ ಅಶ್ಲೀಲತೆಯಿಂದ, ತಕ್ಷಣದ ಅಪಾಯಗಳು ತಪ್ಪಿದ್ದಲ್ಲ. ಲೈಂಗಿಕತೆಯ ವಿಕೃತ ಮತ್ತು ಅನಾರೋಗ್ಯಕರ ದೃಷ್ಟಿಕೋನಗಳು ರೂಢಿಯಾದಾಗ, ಅದರ ಅನಪೇಕ್ಷಿತ ಪರಿಣಾಮಗಳಿಂದ ನಾವು ಆಶ್ಚರ್ಯಪಡಬೇಕಾಗಿಲ್ಲ.

  ಮಹಿಳೆಯರ ಬಗೆಗಿನ ದೃಷ್ಟಿಕೋನ

  ಲೈಂಗಿಕ ಅಪರಾಧಗಳಿಗೆ ಸಂಬಂಧಪಟ್ಟಂತೆ ಪ್ರಮುಖ ಸಾಮಾಜಿಕ ಅಂಶವೆಂದರೆ ಮಹಿಳೆಯರ ಬಗೆಗಿನ ಸಮಾಜದ ದೃಷ್ಟಿಕೋನ. ನಮ್ಮ ಸಮಾಜದಲ್ಲಿ ಅನೇಕರು ಮಹಿಳೆಯರನ್ನು ಕೆಳತರ ಜೀವಿಗಳು ಮತ್ತು ಕಾಮದ ವಸ್ತುಗಳಂತೆ ನೋಡುತ್ತಾರೆ. ಮಹಿಳೆಯರ ಮೇಲಿನ ಈ ಅವಹೇಳನಕಾರಿ ದೃಷ್ಟಿಕೋನಗಳ ಜೊತೆಗೆ, ಅತ್ಯಾಚಾರದ ಸಂತ್ರಸ್ತರನ್ನು ಅತ್ಯಾಚಾರಕ್ಕೆ ದೂಷಿಸುವುದನ್ನೂ ನಾವು ನೋಡುತ್ತೇವೆ. “ಮಹಿಳೆ ಈ ರೀತಿಯ ಬಟ್ಟೆ ಧರಿಸದಿದ್ದರೆ ಅಥವಾ ಇದನ್ನು ಮಾಡದಿದ್ದರೆ, ಅವಳು ಅತ್ಯಾಚಾರಕ್ಕೆ ಒಳಗಾಗುತ್ತಿರಲಿಲ್ಲ” ಎಂದು ಹೇಳುವುದು ಹೇಗಿದೆಯೆಂದರೆ, “ಅಂಗಡಿ-ಮಾಲೀಕನ ಬಳಿ ಮಾರಲಿಕ್ಕಿಟ್ಟಿರುವ ವಸ್ತುಗಳಾಗಲಿ ಅಥವಾ ಹಣವಿಲ್ಲದಿದ್ದರೆ ಅವನು ದರೋಡೆಗೆ ಒಳಗಾಗುತ್ತಿರಲಿಲ್ಲ” ಎಂದು ಹೇಳುವುದಕ್ಕೆ ಸಮನಾಗಿರುತ್ತದೆ.

  ದುರದೃಷ್ಟವಶಾತ್, ಮಹಿಳೆಯರ ಮೇಲಿನ ಅವಮಾನಕರ ದೃಷ್ಟಿಕೋನ ಮತ್ತು ಲೈಂಗಿಕ ಅಪರಾಧಗಳ ಸಂಕುಚಿತ ತಿಳುವಳಿಕೆ ಸಮಾಜದ ಎಲ್ಲಾ ಹಂತಗಳಲ್ಲಿ ಕಂಡುಬರುತ್ತದೆ. ಉನ್ನತ ಸಾಮಾಜಿಕ ಶ್ರೇಣಿಯ ವಿದ್ಯಾವಂತರೂ ಕೂಡ ಮಹಿಳೆಯರು ಮತ್ತು ಮಹಿಳೆಯರ ಮೇಲೆ ಪರಿಣಾಮ ಬೀರುವ ಲೈಂಗಿಕ ಅಪರಾಧಗಳ ಬಗ್ಗೆ ಬೇಜವಾಬ್ದಾರಿ ಮತ್ತು ಅಸಹ್ಯಕರ ಹೇಳಿಕೆಗಳನ್ನು ನೀಡುವುದನ್ನು ನೋಡುವುದು ಆಘಾತಕಾರಿಯಾಗಿದೆ. ಮನರಂಜನಾ ಉದ್ಯಮವು “ಅತ್ಯಾಚಾರ” ವನ್ನು ಗೇಲಿ ಮಾಡುವ ಚಲನಚಿತ್ರಗಳನ್ನು ಮಾಡುವ ಮೂಲಕ ಮಹಿಳೆಯರ ಮೇಲಿನ ಅಗೌರವದ ದೃಷ್ಟಿಕೋನಕ್ಕೆ ತನ್ನ ಕೊಡುಗೆ ನೀಡುತ್ತದೆ ಮತ್ತು ಅದನ್ನು ಪ್ರಣಯದ ಕ್ರಿಯೆಯಾಗಿ ಚಿತ್ರಿಸುವ ಮೂಲಕ “stalking” (ಮಹಿಳೆಯರನ್ನು ಹಿಂಬಾಲಿಸುವುದನ್ನು) ಸಮರ್ಥಿಸುತ್ತದೆ.

  ನಮ್ಮ ಸಮಾಜವು ಅತ್ಯಾಚಾರ ಸಂತ್ರಸ್ತೆಗೆ ಅಂಟಿಸುವ ಸಾಮಾಜಿಕ ಕಳಂಕವು ಅನೇಕ ಸಂತ್ರಸ್ತರು ಮುಂದೆ ಬಂದು ಅತ್ಯಾಚಾರಿಯ ವಿರುದ್ಧ ದೂರು ದಾಖಲಿಸುವುದನ್ನು ತಡೆಯುತ್ತದೆ. ಸಾಮಾಜಿಕ ಕಳಂಕ ಎಷ್ಟು ಕೆಟ್ಟದಾಗಿದೆ ಎಂದರೆ ಅತ್ಯಾಚಾರ ಸಂತ್ರಸ್ತೆಯ ಹೆಸರನ್ನು ಮಾಧ್ಯಮಗಳು ವರದಿ ಮಾಡುವುದನ್ನು ಸರ್ಕಾರ ಕಾನೂನುಬಾಹಿರವಾಗಿಸಿದೆ. ಅತ್ಯಾಚಾರ ಸಂತ್ರಸ್ತೆಯನ್ನು ದೂಷಿಸುವ ಮತ್ತು ಅವಮಾನಿಸುವ ಅನುಕಂಪವಿಲ್ಲದ ಮನೋಭಾವ ಬದಲಾಗಬೇಕು. ಅಪರಾಧ ಮತ್ತು ಅವಮಾನದ ಹೊರೆ ಕೇವಲ ಅತ್ಯಾಚಾರಿಯ ಮೇಲೆ ಬೀಳಬೇಕು ಮತ್ತು ಸಂತ್ರಸ್ತೆಯ ಮೇಲಲ್ಲ. ಮಹಿಳೆಯರ ವಿರುದ್ಧದ ಅಪರಾಧಗಳ ನಿರಂತರ ಹೆಚ್ಚಳವನ್ನು ತಡೆಗಟ್ಟಲು ಸಮಾಜದಲ್ಲಿ ಮಹಿಳೆಯರ ಬಗೆಗಿನ ದೃಷ್ಟಿಕೋನವನ್ನು ಬದಲಾಯಿಸಬೇಕಾಗಿದೆ.

  ಕಾನೂನು

  ಕಾನೂನು ಅತ್ಯಾಚಾರವನ್ನು ಅಪರಾಧ ಮತ್ತು ಅತ್ಯಾಚಾರಿಯನ್ನು ಅಪರಾಧಿ ಎಂದು ಪರಿಗಣಿಸುತ್ತದೆಯಾದರೂ, ಅತ್ಯಾಚಾರಕ್ಕೆ ಪ್ರತಿಬಂಧಕವಾಗದ ಕಾನೂನಿನ ಪ್ರಮಾಣ ಅತ್ಯಂತ ಲಘುವಾಗಿದೆ. ಭಾರತದಲ್ಲಿನ ಅತ್ಯಾಚಾರ ಅಪರಾಧಗಳ ಅಂಕಿಅಂಶಗಳು ಅದನ್ನು ಬಹಿರಂಗಪಡಿಸುತ್ತವೆ. 1971 ರಲ್ಲಿ ಭಾರತದಲ್ಲಿ ಅತ್ಯಾಚಾರಕ್ಕೆ ಶಿಕ್ಷೆಯ ಪ್ರಮಾಣವು ಕೇವಲ 41% ಆಗಿತ್ತು. ಅದು ಕಡಿಮೆ ಎಂದು ಯಾರಾದರೂ ಭಾವಿಸಿದರೆ, ಅತ್ಯಾಚಾರದ ಶಿಕ್ಷೆಯ ಪ್ರಮಾಣವು ಹದಗೆಟ್ಟಿದೆ ಮತ್ತು 2010 ರಲ್ಲಿ ಕೇವಲ 26% ಆಗಿತ್ತು ಎಂಬುದನ್ನು ಗಮನಿಸಿ. ದಲಿತ ಮಹಿಳೆಯರ ಮೇಲಿನ ಅತ್ಯಾಚಾರಗಳಿಗೆ ಶಿಕ್ಷೆಯ ಪ್ರಮಾಣವು ಕೇವಲ 3% ಎಂದು ತಿಳಿಯುವುದು ಆಘಾತಕಾರಿ ವಿಷಯ. ಅತ್ಯಾಚಾರ ಎಸಗಲು ಯೋಚಿಸುವವರಿಗೆ ಈ ಲಘು ಶಿಕ್ಷೆಯ ಪ್ರಮಾಣಗಳು ಯಾವ ಸಂದೇಶವನ್ನು ನೀಡುತ್ತವೆ ಎಂದು ನಾವು ಯೋಚಿಸಬೇಕು.

  “ಜಸ್ಟೀಸ್ ಡಿಲೇಡ್ ಈಸ್ ಜಸ್ಟಿಸ್ ಡಿನೈಡ್” (ನ್ಯಾಯದಲ್ಲಿ ವಿಳಂಬ ನ್ಯಾಯ ನಿರಾಕರಿಸಿದಂತೆ) ಎಂಬುದು ಕಾನೂನಿನ ಪ್ರಸಿದ್ಧ ತತ್ವವಾಗಿದೆ. ಶಿಕ್ಷೆಯ ಪ್ರಮಾಣವು ಸಾಕಷ್ಟು ಕೆಟ್ಟದಾಗಿರುವ ಜೊತೆಗೆ, ವಿಚಾರಣೆಯ ತೀವ್ರ ನಿಧಾನಗತಿ ಮತ್ತು ವಿಳಂಬವಾದ ತೀರ್ಪುಗಳು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಇಂತಹ ಕಡಿಮೆ ಶಿಕ್ಷೆಯ ಪ್ರಮಾಣ ಮತ್ತು ವಿಳಂಬವಾದ ನ್ಯಾಯದೊಂದಿಗೆ, ಅತ್ಯಾಚಾರ ದರಗಳು ಕಡಿಮೆಯಾಗುವುದನ್ನು ನಾವು ಹೇಗಾದರೂ ನಿರೀಕ್ಷಿಸಬಹುದು?

  ದೇವಪ್ರಜ್ಞೆಯ ಕೊರತೆ

  ಅತ್ಯಾಚಾರದ ಕಾರಣಗಳಲ್ಲಿ “ದೇವಪ್ರಜ್ಞೆಯ ಕೊರತೆ” ಎಂದು ಓದಿ ಅನೇಕರು ಆಶ್ಚರ್ಯಗೊಳ್ಳಬಹುದು. ಸತ್ಯವೇನೆಂದರೆ, ಲೈಂಗಿಕ ಅಪರಾಧಗಳನ್ನು ಮಾಡುವ ಸಾಮರ್ಥ್ಯವಿರುವ ಯಾರಾದರೂ ಕಾನೂನಿಗೆ ಅಥವಾ ಸಮಾಜಕ್ಕೆ ಭಯಪಡಬೇಕಾಗಿಲ್ಲವೆಂದರೆ, ಈ ದುಷ್ಟ ಕೃತ್ಯ ಮಾಡುವುದರಿಂದ ಏನೂ ತಡೆಯುವುದಿಲ್ಲ. ಉದಾಹರಣೆಗೆ: ಪವರ್ ರೇಪ್. ಅಂತಹ ಅತ್ಯಾಚಾರದ ಅಪರಾಧಿಗಳು ಕಾನೂನು ಅಥವಾ ಸಮಾಜಕ್ಕೆ ಭಯಪಡಬೇಕಾಗಿಲ್ಲ, ಏಕೆಂದರೆ ಅವರು ಶಿಕ್ಷೆಗೆ ಒಳಗಾಗದೆ, ಇತರರಂತೆ ಸಾಮಾನ್ಯ ಜೀವನವನ್ನು ಮುಂದುವರಿಸುತ್ತಾರೆ. ಹಾಗಾದರೆ ಅಂತಹ ಜನರು ಅತ್ಯಾಚಾರ ಮಾಡುವುದನ್ನು ತಡೆಯುವುದಾದರೂ ಏನು? ಈ ಜನರು ತಮ್ಮ ಕಾರ್ಯಗಳಿಗೆ ದೇವರಿಗೆ ಉತ್ತರ ನೀಡುವ ನಂಬಿಕೆಯ ಹೊರತು, ಅವಕಾಶ ಒದಗಿದಾಗ ಅತ್ಯಾಚಾರದಂತಹ ದುಷ್ಕೃತ್ಯ ಮಾಡುವುದನ್ನು ಏನೂ ತಡೆಯುವುದಿಲ್ಲ.

  ಪರಿಹಾರ ಹುಡುಕಲು ಹಿಂದಿನ ಪ್ರಯತ್ನಗಳು

  ಕಳೆದ ಐದು ದಶಕಗಳಲ್ಲಿ, ಹಲವಾರು ವಿದ್ವಾಂಸರು ಅತ್ಯಾಚಾರವೆಂಬ ಘೋರ ಅಪರಾಧ ಮತ್ತು ಸಾಮಾಜಿಕ ಪಿಡುಗನ್ನು ನಿರ್ಮೂಲನೆ ಮಾಡಲು ಪರಿಹಾರಗಳನ್ನು ಹುಡುಕಲು ಪ್ರಯತ್ನಿಸಿದ್ದಾರೆ. ಪ್ರಸ್ತಾಪಿಸಿದ ಪರಿಹಾರಗಳು ಕಠಿಣ ಕಾನೂನುಗಳಿಂದ ಹಿಡಿದು ಮಹಿಳೆಯರಿಗೆ ಕರಾಟೆ ಕಲಿಸುವವರೆಗೆ ವಿಭಿನ್ನವಾಗಿವೆ. ವರ್ಮಾ ಆಯೋಗದ ವರದಿಯನ್ನು ಮಾಜಿ ಮಾನ್ಯ ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ, ದಿವಂಗತ ಶ್ರೀ ವರ್ಮಾರವರಿಂದ ಸಲ್ಲಿಸಲಾಗಿದೆ.

  ಪ್ರಸ್ತಾವಿತ ಪರಿಹಾರಗಳನ್ನು ನಾವು ಎಚ್ಚರಿಕೆಯಿಂದ ವಿಶ್ಲೇಷಿಸಿದರೆ, ಅವೆಲ್ಲವೂ ಅತ್ಯಾಚಾರದ ಮೂಲ ಕಾರಣಗಳನ್ನು ಮತ್ತು ವಿವಿಧ ರೀತಿಯ ಅತ್ಯಾಚಾರಗಳನ್ನು ಎದುರಿಸುವ ಮಾರ್ಗಗಳನ್ನು ನಿರ್ಲಕ್ಷಿಸಿರುವುದನ್ನು ನಾವು ನೋಡಬಹುದು. ವರ್ಮಾ ಆಯೋಗದ 600 ಪುಟಗಳ ವರದಿಯು ಮದ್ಯ, ಅಶ್ಲೀಲತೆಯಂತಹ ಅತ್ಯಾಚಾರ ಪ್ರಚೋದಕಗಳನ್ನು ನಿರ್ಮೂಲನೆ ಮಾಡುವ ಬಗ್ಗೆ ಮಾತನಾಡುವುದಿಲ್ಲ.

  ಅತ್ಯಾಚಾರವನ್ನು ನಿರ್ಮೂಲನೆ ಮಾಡುವ ಪ್ರತಿಯೊಂದು ಪ್ರಯತ್ನವು ಮೆಚ್ಚುಗೆಗೆ ಅರ್ಹವಾಗಿದೆ ಎಂದು ನಾವು ಒಪ್ಪುತ್ತೇವೆ, ಆದರೆ ಉದ್ದೇಶಿತ ಪರಿಹಾರವು ಅತ್ಯಾಚಾರದ ಮೂಲ ಕಾರಣಗಳನ್ನು ಉದ್ದೇಶಿಸದಿದ್ದರೆ, ಪರಿಹಾರವು ರೋಗದ ಮೂಲ ಕಾರಣಗಳನ್ನು ನಿರ್ಲಕ್ಷಿಸಿ ವೈದ್ಯರು ಸೂಚಿಸಿದ ಔಷಧಿಯಷ್ಟೇ ಪರಿಣಾಮಕಾರಿಯಾಗಿರುತ್ತದೆ ಎಂದು ನಾವು ಅರಿತುಕೊಳ್ಳಬೇಕು.

  ನಮ್ಮ ಬಳಿ ಪರಿಹಾರವಿದೆಯೇ?

  “ಅತ್ಯಾಚಾರಕ್ಕೆ ನಮ್ಮಲ್ಲಿ ಸರಿಯಾದ ಪರಿಹಾರವಿದೆಯೇ?” ಎಂದು ನೀವು ಕೇಳಬಹುದು. ಹೌದು! ಅತ್ಯಾಚಾರವನ್ನು ನಿರ್ಮೂಲನೆ ಮಾಡಲು ಇಸ್ಲಾಮ್ ಪರಿಹಾರವನ್ನು ಒದಗಿಸುತ್ತದೆ. “ಇಸ್ಲಾಮ್ ಕೇವಲ ಒಂದು ಧರ್ಮ, ಅದಕ್ಕೂ ಅತ್ಯಾಚಾರದ ಪರಿಹಾರಕ್ಕೂ ಏನು ಸಂಬಂಧ?” ಎಂದು ನೀವು ಯೋಚಿಸಬಹುದು. ಉತ್ತರ: ಇಸ್ಲಾಮ್ ಒಂದು ಜೀವನ ಪ್ರಕ್ರಿಯೆಯಾಗಿದೆ – ಇಡೀ ಮಾನವಕುಲಕ್ಕೆ ದೇವರು ನೀಡಿದ ಜೀವನ ವಿಧಾನ ಮತ್ತು ಈ ಜೀವನ ವಿಧಾನವು ಅತ್ಯಾಚಾರ ಸೇರಿದಂತೆ ಮಾನವೀಯತೆ ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಪರಿಹಾರಗಳನ್ನು ಒಳಗೊಂಡಿದೆ. ನಾವು ಇಸ್ಲಾಮಿನ ಮೂಲಭೂತ ಅಂಶಗಳನ್ನು ನಿಮ್ಮ ಮುಂದಿಡಲು ಬಯಸುತ್ತೇವೆ.

  ಇಸ್ಲಾಮ್ ಎಂದರೇನು?

  ಇಸ್ಲಾಮ್ ಪ್ರವಾದಿ ಮುಹಮ್ಮದ್ ಸ್ಥಾಪಿಸಿದ ಒಂದು ಹೊಸ ಧರ್ಮವಲ್ಲ. ಇಸ್ಲಾಮ್ ಎಂಬುದು ಅರಬಿ ಪದವಾಗಿದ್ದು, ಇದರರ್ಥ ದೇವರಿಗೆ ಸಂಪೂರ್ಣ ವಿಧೇಯತೆ ಮತ್ತು ಸಲ್ಲಿಕೆ (ಕನ್ನಡದಲ್ಲಿ ‘ಶರಣಾಗತಿ’). ಭೂಮಿಯ ಮೇಲಿನ ಮೊದಲ ಮಾನವನಿಗೆ ದೇವರು ನೇಮಿಸಿದ ಅದೇ ಧರ್ಮ – ಜೀವನ ವಿಧಾನ. ಇದು ಎಲ್ಲಾ ದೇವರ ಪ್ರವಾದಿಗಳು – ಅಂದರೆ ಮಹಾ ಋಷಿಗಳು, ಕಲಿಸಿದ ಜೀವನ ವಿಧಾನವಾಗಿದೆ. ಪ್ರವಾದಿ ಮುಹಮ್ಮದ್ ದೇವರ ಕೊನೆಯ ಪ್ರವಾದಿಯಾಗಿದ್ದು, ಅವರು ದೇವರಿಂದ ನೇಮಿಸಲ್ಪಟ್ಟ ಜೀವನ ವಿಧಾನವನ್ನು ಪುನರುಜ್ಜೀವನಗೊಳಿಸಿದರು.

  ಮುಸ್ಲಿಮ್ ಎಂದರೆ ಯಾರು?

  ದೇವರಿಗೆ ವಿಧೇಯರಾಗಿ ಬದುಕುವ ಯಾರಾದರನ್ನು ಅರಬಿ ಭಾಷೆಯಲ್ಲಿ ಮುಸ್ಲಿಮ್ ಎಂದು ಕರೆಯುತ್ತಾರೆ. ಒಬ್ಬ ವ್ಯಕ್ತಿಯು ತನ್ನ ಹೆಸರಿನಿಂದ ಅಥವಾ ನಿರ್ದಿಷ್ಟ ಕುಟುಂಬದಲ್ಲಿ ಜನಿಸಿದ ಕಾರಣದಿಂದ ಮುಸ್ಲಿಮ್ ಆಗುವುದಿಲ್ಲ. ನೀವು ದೇವರನ್ನು ಪಾಲಿಸಿದರೆ ಮತ್ತು ಆತನನ್ನು ಮಾತ್ರ ಪೂಜಿಸಿದರೆ, ನಿಮ್ಮನ್ನು ಅರಬಿ ಭಾಷೆಯಲ್ಲಿ ಮುಸ್ಲಿಮ್ ಎಂದು ಕರೆಯಲಾಗುತ್ತದೆ.

  ಅಲ್ಲಾಹ್ ಯಾರು?

  ಅಲ್ಲಾಹ್ ಮುಸ್ಲಿಮ್ ದೇವರಲ್ಲ. ಅರಬಿ ಭಾಷೆಯಲ್ಲಿ “ಅಲ್ಲಾಹ್” ಎಂದರೆ “ದೇವರು” ಎಂದು. ಉದಾಹರಣೆಗೆ: ವಾಟರ್ (water) ಇಂಗ್ಲಿಷ್ ಆಗಿದ್ದರೆ, ಪಾನಿ ಹಿಂದಿ, ನೀರು ಕನ್ನಡ, ಮೋಯ ಅರಬಿ. ಅದೇ ರೀತಿ ಗಾಡ್ (God) ಇಂಗ್ಲಿಷ್, ಈಶ್ವರ ಹಿಂದಿ, ದೇವರು ಕನ್ನಡ ಮತ್ತು ಅಲ್ಲಾಹ್ ಅರಬಿ.

  ಅತ್ಯಾಚಾರದ ಪರಿಹಾರವನ್ನು ದೇವರೇಕೆ ನೀಡಬೇಕು?

  ಕೆಲವರು ಕೇಳಬಹುದು: “ಬುದ್ಧಿವಂತ ಜೀವಿಗಳಾದ ಮನುಷ್ಯರು ಯಾವುದು ಸರಿ ಮತ್ತು ಯಾವುದು ತಪ್ಪು ಎಂದು ಸ್ವತಃ ನಿರ್ಧರಿಸಲು ಮತ್ತು ನಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಿಲ್ಲವೇ? ಅತ್ಯಾಚಾರದಂತಹ ವಿಷಯಗಳಿಗೆ ಪರಿಹಾರವನ್ನು ಕಂಡುಹಿಡಿಯಲು ನಾವು ದೇವರ ಮೇಲೆ ಏಕೆ ಅವಲಂಬಿತರಾಗಬೇಕು?” ಇದು ಬಹಳ ಸಮಂಜಸವಾದ ಪ್ರಶ್ನೆಯಾಗಿದೆ. ನಾವು ಈ ಬಗ್ಗೆ ಯೋಚಿಸೋಣ.

  ದೇವರು ಮಾತ್ರ ನಮಗೆ ಪರಿಪೂರ್ಣ ಮಾರ್ಗದರ್ಶನವನ್ನು ನೀಡಬಲ್ಲನು

  ತಯಾರಕನು ತಾನು ತಯಾರಿಸುವ ಉತ್ಪನ್ನದ ಬಗ್ಗೆ ಅತ್ಯಂತ ಚೆನ್ನಾಗಿ ತಿಳಿದಿರುತ್ತಾನೆ. ಉದಾಹರಣೆಗೆ: ವಾಹನ ತಯಾರಕರು ಶಿಫಾರಸು ಮಾಡಿದ ತೈಲ, ಬಿಡಿಭಾಗಗಳು ಇತ್ಯಾದಿಗಳೊಂದಿಗೆ ವಾಹನಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಇದು ಚಕ್ರಗಳ ಗಾಳಿಯ ಒತ್ತಡದಂತಹ ಸರಳ ವಿಷಯವಾಗಿದ್ದರೂ, ತಯಾರಕರು ಸೂಚಿಸಿರುವದನ್ನು ನಾವು ಅನುಸರಿಸುತ್ತೇವೆ. ಏಕೆಂದು ಯೋಚಿಸಿದ್ದೀರಾ? ಅದು ನಮ್ಮ ವಾಹನ. ಅದು ನಮ್ಮ ಓಡೆತನದಲ್ಲಿದೆ ಮತ್ತು ಅದನ್ನು ನಾವು ಬಳಸುತ್ತೇವೆ. ನಮಗೆ ಬೇಕಾದ ರೀತಿಯಲ್ಲಿ ಅದನ್ನು ಏಕೆ ಬಳಸಬಾರದು? ಆ ದಿನದ ನಮ್ಮ ಮನಸ್ಥಿತಿಗೆ ಅನುಗುಣವಾಗಿ ಚಕ್ರದ ಗಾಳಿಯ ಒತ್ತಡವನ್ನು ಏಕೆ ಬದಲಾಯಿಸಬಾರದು?

  ವಾಹನ ತಯಾರಕರಿಗೆ ವಾಹನಕ್ಕೆ ಯಾವುದು ಉತ್ತಮ ಎಂದು ತಿಳಿದಿದೆ ಎಂದು ನಾವು ನಂಬುತ್ತೇವೆ. ಕ್ಷುಲ್ಲಕ ವಿಷಯಗಳಿಗೂ ಉತ್ಪನ್ನಗಳ ತಯಾರಕರನ್ನು ನಾವು ನಂಬುತ್ತೇವೆ. ಮಾನವ ನಿರ್ಮಿತ ಉತ್ಪನ್ನಗಳ ವಿಷಯವೇ ಹೀಗಾದರೆ, ಮನುಷ್ಯರಂತಹ ಸಂಕೀರ್ಣ ಜೀವಿಯ ವಿಷಯದಲ್ಲಿ ಏನು ಹೇಳಬಹುದು?

  ನಾವು ಮನುಷ್ಯರನ್ನು ಯಂತ್ರ ಎಂದು ಕರೆದರೆ, ನಮ್ಮ ಭಾವನೆಗಳು ಮತ್ತು ಯೋಚಿಸುವ ಸಾಮರ್ಥ್ಯದಿಂದಾಗಿ ನಾವು ಭೂಮಿಯ ಮೇಲಿನ ಅತ್ಯಂತ ಸಂಕೀರ್ಣ ಯಂತ್ರವಾಗಿದ್ದೇವೆ. ದೇವರು ನಮ್ಮ ಸೃಷ್ಟಿಕರ್ತನಾಗಿರುವುದರಿಂದ, ನಮಗೆ ಯಾವುದು ಒಳ್ಳೆಯದು ಎಂದು ಅವನಿಗೆ ನಿಖರವಾಗಿ ತಿಳಿದಿದೆ ಹಾಗೂ ದೇವರ ಸಂದೇಶವಾಹಕರು ಮತ್ತು ಆತನು ಅವತೀರ್ಣಗೊಳಿಸಿದ ಧರ್ಮಗ್ರಂಥಗಳ ಮೂಲಕ ನಮಗೆ ಜೀವನ ವಿಧಾನವನ್ನು ಸೂಚಿಸಿದ್ದಾನೆ. ದೇವರ ಮಾರ್ಗದರ್ಶನದಿಂದ ದಾರಿ ತಪ್ಪಿದರೆ, ಅವ್ಯವಸ್ಥೆ ಮತ್ತು ವಿನಾಶಕ್ಕೆ ಕಾರಣವಾಗುತ್ತದೆ ಮತ್ತು ಅದನ್ನೇ ನಾವು ಇಂದು ಅನುಭವಿಸುತ್ತಿದ್ದೇವೆ.

  ಅತ್ಯಾಚಾರಕ್ಕೆ ಇಸ್ಲಾಮಿನ ಪರಿಹಾರ

  ಇಸ್ಲಾಮ್ ಪ್ರಸ್ತಾಪಿಸಿರುವ ಪರಿಹಾರವು ಅತ್ಯಾಚಾರ ಮತ್ತು ಇತರ ಲೈಂಗಿಕ ಅಪರಾಧಗಳ ಎಲ್ಲಾ ಮೂಲ ಕಾರಣಗಳನ್ನು ಪರಿಗಣಿಸುತ್ತದೆ. ಅದಕ್ಕಾಗಿಯೇ ಇದು ಅತ್ಯುತ್ತಮ ಪರಿಹಾರವಾಗಿದೆ. ಪ್ರಪಂಚದಾದ್ಯಂತ ಮಾನವ ಸಮಾಜ ಅಳವಡಿಸಿಕೊಂಡರೆ, ಇಸ್ಲಾಮಿ ಪರಿಹಾರವು ಈ ಭಯಾನಕ ಅಪರಾಧಗಳನ್ನು ಆಳವಾದ ರೀತಿಯಲ್ಲಿ ಕಡಿಮೆ ಮಾಡುತ್ತದೆ. ನೀವು ಈ ಕೆಳಗೆ ನೋಡುವಂತೆ, ಅತ್ಯಾಚಾರಕ್ಕೆ ಇಸ್ಲಾಮಿನ ಪರಿಹಾರವು ಅತ್ಯಾಚಾರದ ಎಲ್ಲಾ ಪ್ರಚೋದಕಗಳನ್ನು ನಿವಾರಿಸುತ್ತದೆ.

  1. ಮದ್ಯಪಾನ ನಿಷೇಧ

  ದೇವರು ಕುರಾನ್‌ನಲ್ಲಿ ಮದ್ಯಪಾನವನ್ನು ನಿಷೇಧಿಸಿದ್ದಾನೆ. ದೇವರು ಹೇಳುತ್ತಾನೆ:

  “ಓ ಸತ್ಯವಿಶ್ವಾಸಿಗಳೇ, ಅಮಲಿನ ಪದಾರ್ಥಗಳು, ಜೂಜು, ಕಲ್ಲಿನ ಬಳಿ [ಬಲಿ] ಮತ್ತು ಭವಿಷ್ಯ ಹೇಳುವ ಬಾಣಗಳು ಶೈತಾನನ ಕೆಲಸದಿಂದ ಅಪವಿತ್ರವಾದವು, ಆದ್ದರಿಂದ ನೀವು ಯಶಸ್ವಿಯಾಗಲು ಅದನ್ನು ತಪ್ಪಿಸಿ”

  ಕುರಾನ್ ಅಧ್ಯಾಯ 5 ಸೂಕ್ತಿ 90

  ಪ್ರವಾದಿ ಮುಹಮ್ಮದ್ (ಸ) ಹೇಳಿದರು:

  “ಮದ್ಯ ಎಲ್ಲಾ ಕೆಡುಕುಗಳಿಗೆ ಕೀಲಿಯಾಗಿದೆ.”

  ಹದೀಸ್

  ದೇವರ ಈ ಧರ್ಮವನ್ನು ಸ್ಥಾಪಿಸಿದ ರಾಜ್ಯ ಅಥವಾ ದೇಶದಲ್ಲಿ ಮದ್ಯಕ್ಕೆ ಯಾವುದೇ ಸ್ಥಳವಿಲ್ಲ.

  2. ಅಶ್ಲೀಲತೆಯ ನಿಷೇಧ

  ದೇವರು ಎಲ್ಲಾ ನಾಚಿಕೆಗೇಡಿನ ಕಾರ್ಯಗಳನ್ನು ನಿಷೇಧಿಸುತ್ತಾನೆ ಮತ್ತು ಇಸ್ಲಾಮಿನಲ್ಲಿ ಅಶ್ಲೀಲತೆಗೆ ಸ್ಥಳವಿಲ್ಲ. ಅಶ್ಲೀಲತೆಯನ್ನು ನೋಡುವುದು ಅಥವಾ ಯಾವುದೇ ಅಶ್ಲೀಲತೆಯ ಭಾಗವಾಗುವುದು, ನೋಡುವುದು, ಕೇಳುವುದು ಅಥವಾ ಮಾತನಾಡುವುದನ್ನು ಇಸ್ಲಾಮಿನಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

  ದೇವರು ಕುರಾನ್‌ನಲ್ಲಿ ಹೇಳುತ್ತಾನೆ:

  “ವಾಸ್ತವವಾಗಿ, ಅಲ್ಲಾಹನು ನ್ಯಾಯ ಮತ್ತು ಉತ್ತಮ ನಡತೆ ಮತ್ತು ಸಂಬಂಧಿಕರಿಗೆ ನೀಡುವಂತೆ ಆದೇಶಿಸುತ್ತಾನೆ ಮತ್ತು ಅನೈತಿಕತೆ ಮತ್ತು ಕೆಟ್ಟ ನಡವಳಿಕೆ ಮತ್ತು ದಬ್ಬಾಳಿಕೆಯನ್ನು ನಿಷೇಧಿಸುತ್ತಾನೆ.”

  ಕುರಾನ್ ಅಧ್ಯಾಯ 16 ಸೂಕ್ತಿ 90

  3. ಮಹಿಳೆಯರ ಪ್ರತಿ ಗೌರವಯುತ ದೃಷ್ಟಿಕೋನ

  ಇಸ್ಲಾಮ್ ಧರ್ಮವು ಮಹಿಳೆಯರನ್ನು ಗೌರವಿಸಲು ಮಾನವೀಯತೆಗೆ ತಿಳಿಸುತ್ತದೆ. ಇಸ್ಲಾಮಿನಲ್ಲಿ ಮಹಿಳೆಯರು ತುಳಿತಕ್ಕೊಳಗಾಗಿದ್ದಾರೆ ಎಂದು ಹೇಳುವ ಟೀಕಾಕಾರರಿದ್ದಾರೆ. ಇದಕ್ಕೆ ತದ್ವಿರುದ್ಧವಾಗಿ, ಕುರಾನ್ ಮತ್ತು ಪ್ರವಾದಿ ಮುಹಮ್ಮದ್ (ಸ) ಅವರ ಬೋಧನೆಗಳನ್ನು ಎಚ್ಚರಿಕೆಯಿಂದ ಓದಿದರೆ ಇಸ್ಲಾಮ್ ಮಹಿಳೆಯರನ್ನು ವಿಮೋಚನೆಗೊಳಿಸಿ, ಅವರಿಗೆ 14 ಶತಮಾನಗಳ ಹಿಂದೆ ಯೋಚಿಸಿಯೂ ಇರದ ಹಕ್ಕುಗಳನ್ನು ನೀಡಿದೆ ಎಂದು ತೋರಿಸುತ್ತದೆ.

  ಹೆಣ್ಣಿನ ಬಗೆಗಿನ ಅವಹೇಳನಕಾರಿ ದೃಷ್ಟಿಕೋನ ಶುರುವಾಗುವುದು ಹೆಣ್ಣು ಮಕ್ಕಳ ಬಗ್ಗೆ ಹೆತ್ತವರಿಗೆ ಇಷ್ಟವಿಲ್ಲದಿರುವಿಕೆಯಿಂದ.

  ಕುರಾನ್‌ನಲ್ಲಿ ದೇವರು ಹೆಣ್ಣು ಮಕ್ಕಳನ್ನು ಇಷ್ಟಪಡದ ಜನರನ್ನು ಎಚ್ಚರಿಸುತ್ತಾನೆ. ದೇವರು ಹೇಳುತ್ತಾನೆ:

  “ಮತ್ತು ಅವರಲ್ಲಿ ಒಬ್ಬರಿಗೆ ಹೆಣ್ಣಿನ ಜನನದ ಬಗ್ಗೆ ತಿಳಿಸಿದಾಗ, ಅವನ ಮುಖವು ಕಪ್ಪಾಗುತ್ತದೆ ಮತ್ತು ಅವನು ದುಃಖವನ್ನು ನಿಗ್ರಹಿಸುತ್ತಾನೆ. ತನಗೆ ತಿಳಿಸಲಾದ ಈ ಸುದ್ದಿಯ ಕಾರಣ ಅವನು ತನ್ನನ್ನು ತಾನು ಜನರಿಂದ ಮರೆಮಾಡುತ್ತಾನೆ. ಅವನು ಅದನ್ನು (ಹೆಣ್ಣು ಮಗುವನ್ನು) ಅವಮಾನದಲ್ಲಿ ಇಡಬೇಕೇ ಅಥವಾ ಅದನ್ನು ನೆಲದಲ್ಲಿ ಹೂತುಹಾಕಬೇಕೇ? ನಿಸ್ಸಂದೇಹವಾಗಿ, ಕೇಡನ್ನೇ ಅವರು ನಿರ್ಧರಿಸುತ್ತಾರೆ.”

  ಕುರಾನ್ ಅಧ್ಯಾಯ 16 ಸೂಕ್ತಿ 58 ಮತ್ತು 59

  ಮಹಿಳೆಯರು ಪುರುಷರಿಗೆ ಪೂರಕವಾಗಿರುತ್ತಾರೆ ಎಂದು ಕುರಾನ್‌ನಲ್ಲಿ ದೇವರು ಕಲಿಸುತ್ತಾನೆ.

  “ಅವರು (ಮಹಿಳೆಯರು) ನಿಮಗೆ ಬಟ್ಟೆ ಮತ್ತು ನೀವು ಅವರಿಗೆ ಬಟ್ಟೆ.”

  ಕುರಾನ್ ಅಧ್ಯಾಯ 2 ಸೂಕ್ತಿ 187

  ಪುರುಷರು ಮತ್ತು ಮಹಿಳೆಯರ ಜವಾಬ್ದಾರಿಗಳು ಮತ್ತು ಕಾರ್ಯಗಳ ಬಗ್ಗೆ ದೇವರು ಸಮಾನ ಪದಗಳಲ್ಲಿ ಮಾತನಾಡುತ್ತಾನೆ.

  “ಗಂಡಾಗಲಿ ಹೆಣ್ಣಾಗಲಿ ನಿಮ್ಮಲ್ಲಿ ಕೆಲಸ ಮಾಡುವವರ ಕೆಲಸವನ್ನು ನಾನು ಎಂದಿಗೂ ವ್ಯರ್ಥವಾಗಲು ಬಿಡುವುದಿಲ್ಲ; ನೀವು ಒಬ್ಬರಿಗೊಬ್ಬರು (ಪೂರಕರು).”

  ಕುರಾನ್ ಅಧ್ಯಾಯ 3 ಸೂಕ್ತಿ 195

  ಮಹಿಳೆಯರ ಹಕ್ಕುಗಳ ಬಗ್ಗೆ, ಪ್ರವಾದಿ ಮುಹಮ್ಮದ್ (ಸ) ಹೇಳಿದರು:

  “ಸ್ತ್ರೀಯರ ವಿಷಯದಲ್ಲಿ ದೇವರ ಭಯವಿರಲಿ. ನೀವು ಅವರ ಮೇಲೆ ಹಕ್ಕುಗಳನ್ನು ಹೊಂದಿದ್ದೀರಿ ಮತ್ತು ಅವರು ನಿಮ್ಮ ಮೇಲೆ ಹಕ್ಕುಗಳನ್ನು ಹೊಂದಿರುತ್ತಾರೆ.”

  ಹದೀಸ್

  ಪ್ರವಾದಿ ಮುಹಮ್ಮದ್ (ಸ) ಘೋಷಿಸಿದರು:

  “ನಿಮ್ಮಲ್ಲಿ ಉತ್ತಮರು ಯಾರೆಂದರೆ ಅವರು ತಮ್ಮ ಮಹಿಳೆಯರೊಂದಿಗೆ ಉತ್ತಮವಾಗಿ ವರ್ತಿಸುತ್ತಾರೆ.”

  ಹದೀಸ್

  4. ಇಸ್ಲಾಮ್ ಪುರುಷರು ಮತ್ತು ಮಹಿಳೆಯರ ಸ್ವಭಾವಕ್ಕೆ ಸರಿಹೊಂದುವ ಕಾನೂನುಗಳನ್ನು ಜಾರಿಗೆ ತಂದಿತು

  ಲಿಂಗಗಳಿಗೆ ಸರಿಹೊಂದುವ ನಿಯಮಗಳು ಮತ್ತು ಕಾನೂನುಗಳನ್ನು ಜಾರಿಗೊಳಿಸುವ ತತ್ವ ಚೆನ್ನಾಗಿ ತಿಳಿದಿರುವ ವಿಷಯ. ಉದಾಹರಣೆಗೆ: 100 ಮೀಟರ್ ಓಟದಲ್ಲಿ ಪುರುಷ ಅಥ್ಲೀಟ್‌ನೊಂದಿಗೆ ಸ್ಪರ್ಧಿಸಲು ನಾವು ಎಂದಿಗೂ ಮಹಿಳಾ ಕ್ರೀಡಾಪಟುವನ್ನು ಒತ್ತಾಯಿಸುವುದಿಲ್ಲ ಅಥವಾ ನಿರೀಕ್ಷಿಸುವುದಿಲ್ಲ. ದೈಹಿಕ ಚಟುವಟಿಕೆಗಳನ್ನು ಒಳಗೊಂಡಿರುವ ಇತರ ಕ್ರೀಡೆಗಳಲ್ಲಿಯೂ ಇದನ್ನೇ ಪಾಲಿಸಲಾಗುತ್ತದೆ. ನಮ್ಮಲ್ಲಿ ಯಾರೂ ಇದನ್ನು ಅಸಮಾನತೆ ಅಥವಾ ಲಿಂಗ ತಾರತಮ್ಯ ಎಂದು ಕರೆಯುವುದಿಲ್ಲ, ಏಕೆಂದರೆ ನಾವೆಲ್ಲರೂ ಪುರುಷರು ಮತ್ತು ಮಹಿಳೆಯರ ದೈಹಿಕ ಸ್ವಭಾವದಲ್ಲಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುತ್ತೇವೆ.

  ದುರದೃಷ್ಟವಶಾತ್, ಮಹಿಳೆಯರನ್ನು ಮುಕ್ತಗೊಳಿಸುವ ಮತ್ತು ಅವರಿಗೆ ಸಮಾನತೆ ನೀಡುವ ಹೆಸರಿನಲ್ಲಿ, ಅನೇಕ ಆಧುನಿಕ ಸಮಾಜಗಳು ಪುರುಷರು ಮತ್ತು ಮಹಿಳೆಯರ ಸ್ವಭಾವದಲ್ಲಿನ ವ್ಯತ್ಯಾಸವನ್ನು ಪರಿಗಣಿಸದ ಕಾನೂನುಗಳನ್ನು ಜಾರಿಗೊಳಿಸುವ ಹಾಗೂ ಅಂತಹ ಪರಿಸರವನ್ನು ಪೋಷಿಸುವ ಮೂಲಕ ಅಜಾಗರೂಕ ಮನೋಭಾವವನ್ನು ತೋರಿಸಿವೆ. ಇದು ಹೆಚ್ಚಿದ ಲೈಂಗಿಕ ಅಪರಾಧಗಳು, ಮುರಿದ ಕುಟುಂಬಗಳು, ಗರ್ಭಪಾತಗಳು, ವೈವಾಹಿಕ ದಾಂಪತ್ಯ ದ್ರೋಹ ಮುಂತಾದ ತೀವ್ರ ಪರಿಣಾಮಗಳಿಗೆ ಕಾರಣವಾಗಿದೆ.

  ಆಮ್ನೆಸ್ಟಿ ಇಂಟರ್‌ನ್ಯಾಶನಲ್ 2004 ರ ವರದಿಯಲ್ಲಿ “ಮಹಿಳೆಯರ ವಿರುದ್ಧ ಹಿಂಸೆಯನ್ನು ನಿಲ್ಲಿಸಿ” ಎಂಬ ಶೀರ್ಷಿಕೆಯಡಿಯಲ್ಲಿ ಆ ವರ್ಷದಲ್ಲಿ ಪ್ರತಿ 90 ಸೆಕೆಂಡಿಗೆ ಮಹಿಳೆಯೊಬ್ಬಳು ಅತ್ಯಾಚಾರಕ್ಕೊಳಗಾಗಿದ್ದಾಳೆ ಎಂದು ಹೇಳಿದೆ. ಲೈಂಗಿಕ ದೌರ್ಜನ್ಯದ ವಿರುದ್ಧದ ಅತಿದೊಡ್ಡ ಅಮೇರಿಕನ್ ರಾಷ್ಟ್ರೀಯ ಸಂಸ್ಥೆಯಾಗಿರುವ RAINN (Rape, Abuse and Incest National Network) ಸಂಘಟನೆಯ ಪ್ರಕಾರ, ಪ್ರತಿ ಎರಡು ನಿಮಿಷಗಳಿಗೆ ಅಮೆರಿಕದಲ್ಲಿ ಒಂದು ಲೈಂಗಿಕ ದೌರ್ಜನ್ಯ ನಡೆಯುತ್ತಿದೆ, ಅಂದರೆ ಒಂದು ವರ್ಷದಲ್ಲಿ ಸುಮಾರು 2,07,754 ಲೈಂಗಿಕ ದೌರ್ಜನ್ಯಗಳು.

  ಇಸ್ಲಾಮ್ ಧರ್ಮವು ಪುರುಷ ಮತ್ತು ಮಹಿಳೆಯ ಸ್ವಭಾವಕ್ಕೆ ಸರಿಹೊಂದುವ ಕಾನೂನುಗಳನ್ನು ಜಾರಿಗೆ ತಂದಿತು. ಇಸ್ಲಾಮ್ ಪುರುಷರು ಮತ್ತು ಮಹಿಳೆಯರನ್ನು ಸಮಾನವಾಗಿ ಪರಿಗಣಿಸುತ್ತದೆ, ಆದರೆ ಅದು ಅವರನ್ನು ಒಂದೇ ಎಂದು ಪರಿಗಣಿಸುವುದಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಪುರುಷರು ಮತ್ತು ಮಹಿಳೆಯರು ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಭಿನ್ನರಾಗಿದ್ದಾರೆ. ಆದ್ದರಿಂದ, ಪ್ರಸಿದ್ಧ ಲೇಖಕ ಜಾನ್ ಗ್ರೇ ” Men are from Mars, Women are from Venus” ಎಂದೇ ತಮ್ಮ ಪುಸ್ತಕ ಪ್ರಕಟಿಸಿದ್ದಾರೆ.

  ದೇವರು ಕುರಾನ್‌ನಲ್ಲಿ ಹೇಳುತ್ತಾನೆ:

  “ಮತ್ತು ಗಂಡು ಹೆಣ್ಣಿನಂತಲ್ಲ”

  ಕುರಾನ್ ಅಧ್ಯಾಯ 3 ಸೂಕ್ತಿ 36

  ಪುರುಷರು ಮತ್ತು ಮಹಿಳೆಯರು ಇಬ್ಬರೂ ಸಮಾನರಾಗಿರುವ ಅಂಶಗಳಲ್ಲಿ, ಇಸ್ಲಾಮ್ ಸಮಾನ ಕಾನೂನುಗಳನ್ನು ಸ್ಥಾಪಿಸುವ ಮೂಲಕ ಅವರನ್ನು ಸಮಾನವಾಗಿ ಪರಿಗಣಿಸುತ್ತದೆ ಹಾಗೂ ಪುರುಷರು ಮತ್ತು ಮಹಿಳೆಯರು ವಿಭಿನ್ನರಾಗಿರುವ ಅಂಶಗಳಲ್ಲಿ, ಇಸ್ಲಾಮ್ ಪುರುಷರು ಮತ್ತು ಮಹಿಳೆಯರ ಸ್ವಭಾವಕ್ಕೆ ಸರಿಹೊಂದುವ ಕಾನೂನುಗಳನ್ನು ಸ್ಥಾಪಿಸಿದೆ ಮತ್ತು ಆ ಮೂಲಕ ಸಮತೋಲನ ಮತ್ತು ಆರೋಗ್ಯಕರ ಸಮಾಜವನ್ನು ಪೋಷಿಸುತ್ತದೆ.

  5. ಪುರುಷರು ಮತ್ತು ಮಹಿಳೆಯರಿಗಾಗಿ ಕಟ್ಟುನಿಟ್ಟಾದ ನೈತಿಕ ಸಂಹಿತೆಗಳು

  ಇಸ್ಲಾಮ್ ಧರ್ಮವು ಪುರುಷ ಮತ್ತು ಮಹಿಳೆಯರಿಬ್ಬರಿಗೂ ಕಟ್ಟುನಿಟ್ಟಾದ ನೈತಿಕ ಸಂಹಿತೆಗಳನ್ನು ಸೂಚಿಸುತ್ತದೆ ಮತ್ತು ಅವರಲ್ಲಿ ಪ್ರತಿಯೊಬ್ಬರೂ ತಮ್ಮ ಪರಿಶುದ್ಧತೆಯನ್ನು ಕಾಪಾಡಲು ಜವಾಬ್ದಾರರಾಗಿರುತ್ತಾರೆ. ದೇವರು ಕುರಾನ್‌ನಲ್ಲಿ ಹೇಳುತ್ತಾನೆ:

  “ನಂಬಿಕೆಯುಳ್ಳ ಪುರುಷರಿಗೆ ತಮ್ಮ ದೃಷ್ಟಿಯನ್ನು ತಗ್ಗಿಸಲು ಮತ್ತು ಅವರ ಖಾಸಗಿ ಅಂಗಗಳನ್ನು (ಜಾರತ್ವ, ಅತ್ಯಾಚಾರ ಮತ್ತು ವ್ಯಭಿಚಾರದಿಂದ) ಕಾಪಾಡಲು ಹೇಳಿ. ಅದು ಅವರಿಗೆ ಹೆಚ್ಚು ಪರಿಶುದ್ಧವಾಗಿದೆ. ವಾಸ್ತವವಾಗಿ, ಅವರು ಏನು ಮಾಡುತ್ತಾರೆ ಎಂಬುದನ್ನು ದೇವರು ಚೆನ್ನಾಗಿ ತಿಳಿದಿದ್ದಾನೆ.”

  ಕುರಾನ್ ಅಧ್ಯಾಯ 24 ಸೂಕ್ತಿ 30

  “ಮತ್ತು ನಂಬಿಕೆಯುಳ್ಳ ಮಹಿಳೆಯರಿಗೆ ತಮ್ಮ ದೃಷ್ಟಿಯನ್ನು ತಗ್ಗಿಸಲು ಮತ್ತು ಅವರ ಖಾಸಗಿ ಅಂಗಗಳನ್ನು ಕಾಪಾಡಲು ಹೇಳಿ ಮತ್ತು [ಅಗತ್ಯವಾಗಿ] ಹೊರಕಾಣುವುದರ ಹೊರತಾಗಿ, ಅವರ ಅಲಂಕಾರವನ್ನು ಬಹಿರಂಗಪಡಿಸಬೇಡಿ ಮತ್ತು ಅವರ ತಲೆಯ ಮೇಲಿನ ವಸ್ತ್ರವನ್ನು ಅವರ ಎದೆಯ ಮೇಲೆ ಕಟ್ಟಿಕೊಳ್ಳಿ ಮತ್ತು ಅವರ ಗಂಡನಿಗೆ, ಅವರ ತಂದೆ, ಅವರ ಗಂಡನ ತಂದೆ, ಅವರ ಪುತ್ರರು, ಅವರ ಗಂಡನ ಮಕ್ಕಳು, ಅವರ ಸಹೋದರರು, ಅವರ ಸಹೋದರರ ಪುತ್ರರು, ಅವರ ಸಹೋದರಿಯರ ಪುತ್ರರು, ಅವರ ಮಹಿಳೆಯರು, ಅವರ ಬಲಗೈ ಹೊಂದಿರುವವರು, ಅಥವಾ ಯಾವುದೇ ದೈಹಿಕ ಬಯಕೆಯಿಲ್ಲದ ಪುರುಷ ಪರಿಚಾರಕರು, ಅಥವಾ ಮಹಿಳೆಯರ ಖಾಸಗಿ ಅಂಶಗಳ ಬಗ್ಗೆ ಇನ್ನೂ ಅರಿವಿಲ್ಲದ ಮಕ್ಕಳನ್ನು ಹೊರತುಪಡಿಸಿ, ತಮ್ಮ ಅಲಂಕಾರವನ್ನು ಬಹಿರಂಗಪಡಿಸಬೇಡಿ.”

  ಕುರಾನ್ ಅಧ್ಯಾಯ 24 ಸೂಕ್ತಿ 31

  ಮೇಲಿನ ಸೂಕ್ತಿಗಳಿಂದ ನೀವು ನೋಡುವಂತೆ, ದೇವರು ಮಹಿಳೆಯರಿಗೆ ಸೂಚಿಸುವ ಮೊದಲು ಪುರುಷರಿಗೆ ಸೂಚನೆ ನೀಡುತ್ತಾನೆ. ವಸ್ತ್ರ ಸಂಹಿತೆ (dress code) ಮಹಿಳೆಯರಿಗೆ ಮಾತ್ರ ಮತ್ತು ಪುರುಷರಿಗೆ ಇಲ್ಲ ಎಂದು ಹಲವರು ಭಾವಿಸುತ್ತಾರೆ. ದೇವರು ಪುರುಷರು ಮತ್ತು ಮಹಿಳೆಯರಿಗೆ ಇಬ್ಬರಿಗೂ ಡ್ರೆಸ್ ಕೋಡ್‌ಗಳನ್ನು ಸೂಚಿಸುತ್ತಾನೆ ಮತ್ತು ಸೂಕ್ತ ಉಡುಗೆ ತೊಡಲು ಅವರಿಗೆ ಸೂಚಿಸುತ್ತಾನೆ.

  ಪುರುಷರು ಮತ್ತು ಮಹಿಳೆಯರಿಗೆ ಡ್ರೆಸ್ ಕೋಡ್

  ದೇವರು ಪುರುಷರು ಮತ್ತು ಮಹಿಳೆಯರಿಬ್ಬರಿಗೂ ಈ ಕೆಳೆಗಿನಂತೆ ಉಡುಪುಗಳನ್ನು ಧರಿಸಲು ಸೂಚಿಸುತ್ತಾನೆ:

  1. ಸಡಿಲವಾದ ಮತ್ತು ಆಕೃತಿಯನ್ನು ಬಹಿರಂಗಪಡಿಸದಿರುವುದು ಅಥವಾ ‘ಚರ್ಮ-ಬಿಗಿಯಾದ ಮತ್ತು ದೇಹವನ್ನು ಅಪ್ಪಿಕೊಳ್ಳುವುದು’.

  2. ಪಾರದರ್ಶಕ (transparent)ವಾಗಿರಬಾರದು.

  3. ವಿರುದ್ಧ ಲಿಂಗದ ಉಡುಗೆಯನ್ನು ಅನುಕರಿಸದಿರುವುದು.

  4. ಯೋಗ್ಯ ಮತ್ತು ಆವರಿಸಬೇಕಾದ ದೇಹದ ಭಾಗಗಳನ್ನು ಆವರಿಸುವುದು.

  ಮೇಲೆ ತಿಳಿಸಿದ ಮೊದಲ ಮೂರು ಅಂಶಗಳು ಪುರುಷರು ಮತ್ತು ಮಹಿಳೆಯರಿಬ್ಬರಿಗೂ ಸಾಮಾನ್ಯವಾಗಿದ್ದರೂ, ಅದನ್ನು ಮುಚ್ಚಲು ಅಗತ್ಯವಿರುವ ದೇಹದ ವ್ಯಾಪ್ತಿಯು (ಪಾಯಿಂಟ್ 4) ಪುರುಷರು ಮತ್ತು ಮಹಿಳೆಯರಿಗೆ ವಿಭಿನ್ನವಾಗಿದೆ. ಪುರುಷನು ಹೊಕ್ಕುಳದಿಂದ ಮೊಣಕಾಲಿನವರೆಗೆ ಕಡ್ಡಾಯವಾಗಿ ಮುಚ್ಚಿಕೊಳ್ಳುವಂತೆ ಸೂಚಿಸಿದರೆ, ಮಹಿಳೆಯು ತನ್ನ ಕೈ ಮತ್ತು ಮುಖವನ್ನು ಹೊರತುಪಡಿಸಿ ತನ್ನ ಇಡೀ ದೇಹವನ್ನು ಕಡ್ಡಾಯವಾಗಿ ಮುಚ್ಚಿಕೊಳ್ಳುವಂತೆ ಸೂಚಿಸಲಾಗಿದೆ.

  ಮಹಿಳೆಯರಿಗೆ (ಹಿಜಾಬ್) ಇಸ್ಲಾಮಿಕ್ ಡ್ರೆಸ್ ಕೋಡ್ ಅನ್ನು ಒಪ್ಪಿಕೊಳ್ಳಲು ಇಷ್ಟವಿಲ್ಲದಿರುವುದು ಏಕೆಂದರೆ ಅನೇಕರು ಇದನ್ನು ಈ ಕೆಳಗಿನಂತೆ ಪರಿಗಣಿಸುತ್ತಾರೆ:

  1) ಮಹಿಳೆಯರ ಮೇಲಿನ ದಬ್ಬಾಳಿಕೆ ಮತ್ತು ಅವರನ್ನು ಕೀಳಾಗಿ ನೋಡುವುದರ ಸಂಕೇತ.

  2) ಮಹಿಳೆಯರ ಪ್ರಗತಿಯನ್ನು ತಡೆಯುವ ಡ್ರೆಸ್ ಕೋಡ್.

  3) ಪುರುಷರು ಮತ್ತು ಮಹಿಳೆಯರ ನಡುವೆ ವಿಭಿನ್ನ ನಡವಳಿಕೆ ಅನುಮತಿಸುವ ಡ್ರೆಸ್ ಕೋಡ್.

  ಎಲ್ಲಾ ಪುರುಷರೂ ಕೆಟ್ಟವರೇ?

  ಕೆಲವರು ವಾದಿಸಬಹುದು, ಮಹಿಳೆಯರು ಅವರು ಬಯಸಿದ ರೀತಿಯಲ್ಲಿ ಧರಿಸುವುದನ್ನು ನಿರ್ಬಂಧಿಸಬಾರದು ಏಕೆಂದರೆ ಎಲ್ಲಾ ಪುರುಷರು ಕೆಟ್ಟವರಲ್ಲ ಮತ್ತು “ಸ್ವೇಚ್ಛೆಯಿಂದ” ಧರಿಸಿರುವ ಎಲ್ಲಾ ಮಹಿಳೆಯರು ಅತ್ಯಾಚಾರಕ್ಕೊಳಗಾಗುವುದಿಲ್ಲ. ನಿಜ, ಎಲ್ಲಾ ಪುರುಷರು ಕೆಟ್ಟವರಲ್ಲ. ಕಡಿಮೆ ಬಟ್ಟೆ ಧರಿಸಿದ ಮಹಿಳೆಯರನ್ನು ನೋಡುವ ಹೆಚ್ಚಿನ ಪುರುಷರು ನೋಟದಲ್ಲೇ ನಿಲ್ಲುತ್ತಾರೆ. ಕೆಲವರು ನೋಟ ಮೀರಿ ಹೋಗಿ ಕಲ್ಪನೆ ಮಾಡಿಕೊಳ್ಳುತ್ತಾರೆ. ಕೆಲವರು ಕೆಲವು ಅಸಭ್ಯ ಕಾಮೆಂಟ್‌ಗಳನ್ನು ಮಾಡಬಹುದು. ಕೆಲವರು ಹಿಂಬಾಲಿಸುವ ಮೂಲಕ ಅದನ್ನು ಮೀರಿ ಹೋಗುತ್ತಾರೆ ಮತ್ತು ಪರಿಸ್ಥಿತಿ ಅವರಿಗೆ ಅನುಕೂಲಕರವಾದರೆ ಕೆಲವರು ಕಿರುಕುಳ ಮತ್ತು ಅತ್ಯಾಚಾರ ಮಾಡುತ್ತಾರೆ. ನಾವು ಚಿಂತಿಸ ಬೇಕಾಗಿರುವುದು ಆ ಕೆಲವೇ ಪುರುಷರ ಬಗೆಗೆ.

  ಉದಾಹರಣೆಗೆ ಹೇಳುವುದಾದರೆ: ಊರಿನಿಂದ ಹೊರಗೆ ಹೋದಾಗ ನಮ್ಮ ಮನೆಗೆ ಬೀಗ ಹಾಕುತ್ತೇವೆ. ನಾವು ಅದನ್ನು ಏಕೆ ಮಾಡುತ್ತೇವೆ? ನಮ್ಮ ನೆರೆಹೊರೆಯವರು ಮತ್ತು ನಮ್ಮ ಬೀದಿಗಳಲ್ಲಿ ನಡೆಯುವವರೆಲ್ಲರೂ ಕಳ್ಳರು ಎಂದು ನಾವು ಭಾವಿಸುತ್ತೇವೆಯೇ? ಬಹುಪಾಲು ಜನರು ಒಳ್ಳೆಯವರು ಮತ್ತು ದರೋಡೆಕೋರರು ಕಡಿಮೆ ಎಂದು ನಮಗೆಲ್ಲರಿಗೂ ತಿಳಿದಿದೆ, ಆದರೂ ಆ ಕೆಲವು ದರೋಡೆಕೋರರಿಂದ ಮನೆಯನ್ನು ರಕ್ಷಿಸಲು ನಾವು ನಮ್ಮ ಮನೆಗೆ ಬೀಗ ಹಾಕುತ್ತೇವೆ. “ಕೆಲವು ದರೋಡೆಕೋರರಿಂದ ನನ್ನ ಮನೆಯನ್ನು ರಕ್ಷಿಸಲು ನಾನು ಬೀಗಗಳ ಮೇಲೆ ಏಕೆ ಖರ್ಚು ಮಾಡಬೇಕು?” ಎಂದು ಕೇಳುವ ವ್ಯಕ್ತಿಯ ಬಗ್ಗೆ ನೀವು ಏನು ಯೋಚಿಸುತ್ತೀರಿ? ನನ್ನ ಮನೆ ತೆರೆದಿರುವುದರಿಂದ ಅವರು ದರೋಡೆ ಮಾಡಬಹುದು ಎಂದರ್ಥವಲ್ಲ?” ನೀವು ಇದನ್ನು ವಿವೇಚನೆಭರಿತ ವಾದ ಎಂದು ಕರೆಯುತ್ತೀರಾ? ಇಲ್ಲ ಎಂದಾದರೆ, ಕೆಲವು ಪುರುಷರ ಕಾಮ ಮತ್ತು ಕೇಡಿನ ಕಣ್ಣುಗಳಿಂದ ಮಹಿಳೆಯರ ಗೌರವವನ್ನು ರಕ್ಷಿಸುವ ಸೂಕ್ತ ಉಡುಗೆ ಏಕಾಗಬಾರದು?

  ಇಸ್ಲಾಮಿನಲ್ಲಿ ಹಿಜಾಬ್‌ನ ಬಾಧ್ಯತೆಯು, ಹಿಜಾಬ್ ಅನ್ನು ಧರಿಸದ ಪ್ರತಿಯೊಬ್ಬ ಮಹಿಳೆಯನ್ನು ಅನೈತಿಕ ಎಂದು ಇಸ್ಲಾಮ್ ಆರೋಪಿಸುವುದರಿಂದಾಗಲೀ ಅಥವಾ ಎಲ್ಲಾ ಪುರುಷರು ತಮ್ಮ ದುಷ್ಟತನ ಮತ್ತು ಆಸೆಗಳನ್ನು ಕೇಂದ್ರೀಕರಿಸುವ ಕಾರಣದಿಂದಲ್ಲ ಎಂದು ನಾವು ನಿಮಗೆ ಭರವಸೆ ನೀಡುತ್ತೇವೆ. ಆದರೆ ಇಸ್ಲಾಮ್ ಬಹುಸಂಖ್ಯಾತ ಜನರನ್ನು ಮಾತ್ರ ನೋಡುವುದಿಲ್ಲ; ಬದಲಿಗೆ ಸಣ್ಣ ಶೇಕಡಾವಾರು ದುಷ್ಕರ್ಮಿಗಳೂ ಇದ್ದಾರೆ ಎಂಬ ಅಂಶಕ್ಕೆ ಗಮನ ಕೊಡುತ್ತದೆ. ಅಲ್ಪಸಂಖ್ಯಾತರ ದುಷ್ಟ ಕ್ರಿಯೆಗಳಿಂದ ಬಹುಸಂಖ್ಯಾತರ ಯೋಗಕ್ಷೇಮವನ್ನು ರಕ್ಷಿಸುವ ಸಲುವಾಗಿ, ಇದು ಲೈಂಗಿಕ ಅಪರಾಧಗಳ ಈ ಅನಪೇಕ್ಷಿತ ಘಟನೆಗಳನ್ನು ಗಣನೀಯವಾಗಿ ಕಡಿಮೆ ಮಾಡುವ ನೈತಿಕ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ.

  ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹೇಳಿದರು:

  “ನಾನು ಯಾವುದೇ ಹೆಂಗಸು, ನನ್ನ ಹೆಂಡತಿಯೂ ಸೇರಿದಂತೆ, ಕಲ್ಲುಗಳನ್ನು ಒಡೆಯುವುದು ಮತ್ತು ಶೌಚಾಲಯಗಳನ್ನು ಸ್ವಚ್ಛಗೊಳಿಸುವುದು ಪರವಾಗಿಲ್ಲ , ಆದರೆ ನನ್ನ ಸಹೋದರಿ ಅಥವಾ ತಾಯಿಯ ಮೇಲೆ ಯಾರೂ ಕಾಮದ ಕಣ್ಣು ಹಾಕಲು ನಾನು ಖಂಡಿತವಾಗಿಯೂ ಬಯಸುವುದಿಲ್ಲ”

  5/3/1927 ರಂದು ಪುಣೆಯಲ್ಲಿ ಸಾರ್ವಜನಿಕ ಸಭೆ

  6. ಮಹಿಳೆ ತನ್ನ ನಿಕಟ ಸಂಬಂಧಿಯಲ್ಲದ ಪುರುಷನೊಂದಿಗೆ ಏಕಾಂಗಿಯಾಗಿರಲು ನಿಷೇಧ

  ಮಹಿಳೆಯು ತನ್ನ ತಂದೆ, ಸಹೋದರ, ಚಿಕ್ಕಪ್ಪ, ಪತಿ ಮುಂತಾದ ನಿಕಟ ಸಂಬಂಧಿಗಳಲ್ಲದ ಪುರುಷರೊಂದಿಗೆ ಏಕಾಂಗಿಯಾಗಿರುವುದನ್ನು ಇಸ್ಲಾಮ್ ನಿಷೇಧಿಸುತ್ತದೆ. ಪ್ರವಾದಿ ಮುಹಮ್ಮದ್ (ಸ) ಹೇಳಿದರು:

  “ಒಬ್ಬ ಪುರುಷನು (ಸಂಬಂಧವೂ ಇಲ್ಲದ ಅಥವಾ ಮದುವೆಯೂ ಆಗಿರದ) ಮಹಿಳೆಯೊಂದಿಗೆ ಏಕಾಂಗಿಯಾಗಿರಲು, ಶೈತಾನ ಮೂರನೆಯವನು..”

  ಹದೀಸ್

  RAINN (Rape, Abuse and Incest National Network) ಸಂಸ್ಥೆಯ ಪ್ರಕಾರ, ಸುಮಾರು 2/3ರಷ್ಟು ಅತ್ಯಾಚಾರಗಳನ್ನು ಅತ್ಯಾಚಾರಕ್ಕೊಳಗಾದವರಿಗೆ ತಿಳಿದಿರುವ ಯಾರಾದರೂ ಮಾಡಿದ್ದಾರೆ. ಪ್ರತಿಯೊಬ್ಬ ಮಹಿಳೆಯು ದೇವರ ಮಾರ್ಗದರ್ಶನವನ್ನು ಅನುಸರಿಸುತ್ತಾ ಒಬ್ಬ ಪುರುಷನೊಂದಿಗೆ (ಅವಳು ಅವನನ್ನು ಚೆನ್ನಾಗಿ ತಿಳಿದಿದ್ದರೂ ಸಹ) ಏಕಾಂಗಿಯಾಗಿರುವುದನ್ನು ತಪ್ಪಿಸುವ ಮೂಲಕ, ಮಹಿಳೆಗೆ ತಿಳಿದಿರುವವರಿಂದ ಅತ್ಯಾಚಾರದ ಅಪಾಯ ಬಹಳ ಕಡಿಮೆಯಾಗುತ್ತದೆ.

  ಶಾಲೆಯಿಂದ ಹಿಡಿದು ನ್ಯಾಯಾಲಯದವರೆಗೆ ಎಲ್ಲೆಡೆ ಲೈಂಗಿಕ ಕಿರುಕುಳ ನಡೆಯುತ್ತಿದೆ. ಈ ದುಷ್ಟತನದಿಂದ ಯಾವ ಉದ್ಯಮವೂ ಹೊರತಾಗಿಲ್ಲ. ಆದ್ದರಿಂದ, ಸಹೋದ್ಯೋಗಿಗಳು, ಮೇಲಧಿಕಾರಿಗಳು, ಶಿಕ್ಷಕರು ಮತ್ತು ನ್ಯಾಯಾಧೀಶರಿಂದ ಲೈಂಗಿಕ ಕಿರುಕುಳದ ಬಗ್ಗೆ ನಾವು ಪ್ರತಿದಿನ ಓದುತ್ತೇವೆ ಮತ್ತು ಕೇಳುತ್ತೇವೆ.

  ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ “ದಿ ಇನ್ವಿಸಿಬಲ್ ವಾರ್” (ಇದನ್ನು ಆಸ್ಕರ್ ಪ್ರಶಸ್ತಿಗೆ ನೋಂದಾಯಿಸಲಾಗಿತ್ತು) ಅಮೆರಿಕದ ಮಿಲಿಟರಿಯಲ್ಲಿ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರದ ಚಿತ್ರ ಸೆರೆಹಿಡಿಯುತ್ತದೆ. ಸಾಕ್ಷ್ಯಚಿತ್ರವು ಅಮೆರಿಕ ಮಿಲಿಟರಿಯಲ್ಲಿ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರದ ಘಟನೆಗಳನ್ನು 2010 ರಲ್ಲಿ 19,000 ಎಂದು ಅಂದಾಜಿಸಿದೆ, ಆದರೆ ರಕ್ಷಣಾ ಇಲಾಖೆಯು ಕೇವಲ 3,198 ಅನ್ನು ನೋಂದಾಯಿಸಿದೆ ಮತ್ತು ಕೇವಲ 244ರಲ್ಲಿ ಶಿಕ್ಷೆಯಾಗಿದೆ. ‘ವೈಟ್ ಹೌಸ್’ ಅನ್ನು ಕಾಪಾಡುವ ಪ್ರತಿಷ್ಠಿತ ರೆಜಿಮೆಂಟ್ “ಮೆರೈನ್ ಬ್ಯಾರಕ್ಸ್” ಕೂಡ ಈ ಅತ್ಯಾಚಾರದ ದುಷ್ಟತನದಿಂದ ಪಾರಾಗಲಿಲ್ಲ.


  ಸ್ವಯಂ ಯುದ್ಧದಲ್ಲಿ ತರಬೇತಿ ಪಡೆದ ಮಹಿಳಾ ಸೈನಿಕರ ಪಾಡು ಹೀಗಾದರೆ, ಶಾಲೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ಊಹಿಸಬಹುದು. ಇಸ್ಲಾಮ್ ಧರ್ಮವು ಶಾಲೆಯಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ಮಹಿಳೆಯರು ಮತ್ತು ಪುರುಷರ ಅನಗತ್ಯ ಮಿಶ್ರಣವನ್ನು ನಿಷೇಧಿಸುತ್ತದೆ ಮತ್ತು ಇದರಿಂದಾಗಿ ಕಿರುಕುಳ ಮತ್ತು ಅತ್ಯಾಚಾರಕ್ಕೆ ಕಾರಣವಾಗುವ ಅವಕಾಶಗಳನ್ನು ಕಡಿಮೆ ಮಾಡುತ್ತದೆ.

  7. ದೇವರ ಪ್ರಜ್ಞೆ ಮತ್ತು ದೇವರಿಗೆ ಉತ್ತರ ನೀಡಬೇಕೆಂಬುದರ ಪ್ರಜ್ಞೆ

  ಈ ಜಗತ್ತಿನಲ್ಲಿ ನಮ್ಮ ಕಾರ್ಯಗಳಿಗೆ ನಾವು ಪ್ರತಿಯೊಬ್ಬರೂ ದೇವರಿಗೆ ಜವಾಬ್ದಾರರಾಗಿರುತ್ತೇವೆ ಎಂದು ಕಲಿಸುವ ಮೂಲಕ ಇಸ್ಲಾಮ್ ದೇವರ ಪ್ರಜ್ಞೆಯನ್ನು ಹುಟ್ಟುಹಾಕುತ್ತದೆ. ಜಗತ್ತು ಒಂದು ದಿನ ಅಂತ್ಯಗೊಳ್ಳುತ್ತದೆ ಎಂದು ಇಸ್ಲಾಮ್ ಕಲಿಸುತ್ತದೆ. ಮೊದಲ ಮನುಷ್ಯನಿಂದ ಕೊನೆಯವರೆಗೆ ಎಲ್ಲಾ ಮಾನವರನ್ನು ತೀರ್ಪಿನ ದಿನದಂದು ಮತ್ತೆ ಜೀವಂತಗೊಳಿಸಿ, ಅವರೆಸಗಿದ ಕಾರ್ಯಗಳ ಬಗ್ಗೆ ಪ್ರಶ್ನಿಸಲಾಗುತ್ತದೆ. ದೇವರು ನಮ್ಮ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳನ್ನು ತೂಕ ಮಾಡಿ, ಅದಕ್ಕೆ ತಕ್ಕಂತೆ ನಮ್ಮ ಮೇಲೆ ಆತನ ತೀರ್ಪು ಪ್ರಕಟಿಸುತ್ತಾನೆ. ತೀರ್ಪಿನ ದಿನದಂದು ನಮ್ಮ ಅತ್ಯಂತ ಸಣ್ಣ ಕಾರ್ಯಗಳನ್ನೂ ಸಹ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

  ಕೇವಲ ದೇವರಿಗೆ ಉತ್ತರ ನೀಡಬೇಕೆಂಬ ಭಯ ಮಾತ್ರ ಯಾರನ್ನಾದರೂ – ಪರಿಸ್ಥಿತಿ ಅವರಿಗೆ ಅನುಕೂಲಕರವಾಗಿದ್ದರೂ ಸಹ – ಎಂದಿಗೂ ಅಂತಹ ಘೋರ ಅಪರಾಧಗಳನ್ನು ಮಾಡದಂತೆ ತಡೆಯುತ್ತದೆ. ಸೈನಿಕರು, ಪೊಲೀಸರು ಮತ್ತು ಗಲಭೆಗಳ ಸಮಯದಲ್ಲಿ ಅತ್ಯಾಚಾರದಲ್ಲಿ ಪಾಲ್ಗೊಳ್ಳುವ ಜನರಿಗೆ ದೇವರಿಗೆ ಉತ್ತರಿಸಬೇಕೆಂಬ ಭಯವಿದ್ದರೆ, ಅವರು ಈ ಹೇಯ ಕೃತ್ಯವನ್ನು ಮಾಡಲು ಧೈರ್ಯ ಮಾಡುತ್ತಾರೆಯೇ? ದೇವರಿಗೆ ಉತ್ತರ ನೀಡಬೇಕೆಂಬ ಭಯವು ಅವರು ಈ ಜಗತ್ತಿನಲ್ಲಿ ತಮ್ಮ ದುಷ್ಟ ಕೃತ್ಯದಿಂದ ಪಾರಾಗಬಹುದಾದರೂ, ದೇವರು ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಾನೆ ಮತ್ತು ತೀರ್ಪಿನ ದಿನದಂದು ಅವರನ್ನು ಶಿಕ್ಷಿಸುತ್ತಾನೆ ಎಂದು ಅವರಿಗೆ ಮನವರಿಕೆಯಾಗಿರುತ್ತದೆ. ದೇವರ ಪ್ರಜ್ಞೆ ಮಾತ್ರ ಒಬ್ಬ ವ್ಯಕ್ತಿಯನ್ನು ಪೂರ್ಣವಾಗಿ ಸುಧಾರಿಸುತ್ತದೆ ಮತ್ತು ಅಧಿಕಾರ ದುರುಪಯೋಗದಿಂದಾಗುವ ಅತ್ಯಾಚಾರಗಳನ್ನು ಮಾಡದಂತೆ ತಡೆಯುತ್ತದೆ.

  8. ಘೋರ ಶಿಕ್ಷೆಗಳು

  ಮೇಲೆ ತಿಳಿಸಿದ ಎಲ್ಲಾ ಪರಿಹಾರಗಳ ಅನುಷ್ಠಾನದ ಹೊರತಾಗಿಯೂ, ಒಬ್ಬ ವ್ಯಕ್ತಿಯು ಅತ್ಯಾಚಾರದ ದುಷ್ಟ ಕೃತ್ಯವನ್ನು ಮಾಡಲು ಧೈರ್ಯಮಾಡಿದರೆ, ಇಸ್ಲಾಮಿ ಕಾನೂನು ಅತ್ಯಾಚಾರಿಗೆ ಮರಣದಂಡನೆಯನ್ನು ವಿಧಿಸುತ್ತದೆ. ಇಸ್ಲಾಮ್, ನ್ಯಾಯಾಲಯದಲ್ಲಿ ವಿಚಾರಣೆಗಳ ತ್ವರಿತತೆಯನ್ನು ಸೂಚಿಸುತ್ತದೆ, ಹೀಗಾಗಿ ಅಪರಾಧ ಸಾಬೀತಾದ ತಕ್ಷಣ ತೀರ್ಪು ಉಚ್ಚರಿಸಲಾಗುತ್ತದೆ ಮತ್ತು ಕಾರ್ಯಗತಗೊಳಿಸಲಾಗುತ್ತದೆ. ಇಷ್ಟಲ್ಲದೆ ಮರಣದಂಡನೆಯನ್ನು ಸಮಾಜದ ಜನರು ನೋಡಬೇಕು – ಇದು ದೇವರ ದೃಷ್ಟಿಯಲ್ಲಿ ಅತ್ಯಾಚಾರದ ಗಂಭೀರತೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ.

  ನಾಗರಿಕ ಸಮಾಜವು ಮರಣದಂಡನೆಯನ್ನು ಹೇಗೆ ಅನುಮತಿಸಬಹುದು?

  ಮರಣದಂಡನೆಯು ಅನಾಗರಿಕವಾದದ್ದು ಎಂದು ಕೆಲವರು ಭಾವಿಸಬಹುದು ಮತ್ತು ಮರಣದಂಡನೆಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸುವವರು ಅನೇಕರಿದ್ದಾರೆ. ಮರಣದಂಡನೆಯ ಅಗತ್ಯವನ್ನು ತಿಳಿಯಲು, ನಾವು ಶಿಕ್ಷೆಯ ಉದ್ದೇಶಗಳನ್ನು ಅರ್ಥಮಾಡಿಕೊಳ್ಳಬೇಕು. ಶಿಕ್ಷೆಯು ಅತ್ಯಾಚಾರ ಸಂತ್ರಸ್ತೆಯ ನೋವನ್ನು ನಿವಾರಿಸುವುದಿಲ್ಲ ಎಂದು ನಮಗೆಲ್ಲರಿಗೂ ತಿಳಿದಿದೆ. ಹಾಗಾದರೆ, ನಾವು ಅತ್ಯಾಚಾರಿಯನ್ನು ಏಕೆ ಶಿಕ್ಷಿಸುತ್ತೇವೆ? ಮೂರು ಮುಖ್ಯ ಕಾರಣಗಳಿಗಾಗಿ ಶಿಕ್ಷೆಯನ್ನು ಉಚ್ಚರಿಸಲಾಗುತ್ತದೆ:

  1) ಶಿಕ್ಷೆಯು ಅತ್ಯಾಚಾರಿ ಮತ್ತೆ ಅತ್ಯಾಚಾರ ಮಾಡುವುದನ್ನು ತಡೆಯಬೇಕು

  2) ಶಿಕ್ಷೆಯ ಬೆದರಿಕೆಯು ಅತ್ಯಾಚಾರದಲ್ಲಿ ತೊಡಗುವುದರಿಂದ ಜನರನ್ನು ತಡೆಯಬೇಕು

  3) ಅತ್ಯಾಚಾರಿಯ ವಿರುದ್ಧ ಪ್ರತೀಕಾರ ದೊರೆತಿದೆ ಮತ್ತು ತನಗೆ ನ್ಯಾಯ ಒದಗಿಸಲಾಗಿದೆ ಎಂದು ಸಂತ್ರಸ್ತೆ ಭಾವಿಸಬೇಕು.

  ಮರಣದಂಡನೆ (ಅತ್ಯಾಚಾರಕ್ಕೆ ಇಸ್ಲಾಮಿ ಶಿಕ್ಷೆ) ಮೇಲಿನ ಉದ್ದೇಶಗಳನ್ನು ಪೂರೈಸುತ್ತದೆಯೇ ಎಂದು ನೋಡೋಣ.

  ಶಿಕ್ಷೆಯು ಅತ್ಯಾಚಾರಿ ಮತ್ತೆ ಅತ್ಯಾಚಾರ ಮಾಡುವುದನ್ನು ತಡೆಯಬೇಕು – ಅತ್ಯಾಚಾರಿ ಮತ್ತೆ ಅತ್ಯಾಚಾರ ಮಾಡಲು ಬದುಕಿರುವುದಿಲ್ಲವಾದ್ದರಿಂದ ಇದನ್ನು ಪೂರೈಸಲಾಗುತ್ತದೆ.

  ಶಿಕ್ಷೆಯ ಬೆದರಿಕೆಯು ಅತ್ಯಾಚಾರದಲ್ಲಿ ತೊಡಗುವುದರಿಂದ ಜನರನ್ನು ತಡೆಯಬೇಕು – ಶಿಕ್ಷೆಯ ತೀವ್ರತೆ, ವಿಚಾರಣೆಯ ವೇಗ ಮತ್ತು ಮರಣದಂಡನೆಯ ವಿಧಾನವು ಖಂಡಿತವಾಗಿಯೂ ಇತರರಿಗೆ ಪ್ರತಿಬಂಧಕವಾಗಿ ಕಾರ್ಯನಿರ್ವಹಿಸುತ್ತದೆ.

  ಅತ್ಯಾಚಾರಿಯ ವಿರುದ್ಧ ಪ್ರತೀಕಾರ ದೊರೆತಿದೆ ಮತ್ತು ತನಗೆ ನ್ಯಾಯ ಒದಗಿಸಲಾಗಿದೆ ಎಂದು ಸಂತ್ರಸ್ತೆ ಭಾವಿಸಬೇಕು – ಅತ್ಯಾಚಾರ ಸಂತ್ರಸ್ತರು ತಮ್ಮ ಅತ್ಯಾಚಾರಿಗಳಿಗೆ ಮರಣದಂಡನೆಯನ್ನು ಕೇಳುವುದರಿಂದ ಇದು ಖಂಡಿತವಾಗಿಯೂ ಪೂರೈಸಲ್ಪಡುತ್ತದೆ. ಉದಾಹರಣೆ: ಮುಂಬೈ ಪತ್ರಕರ್ತೆ ಅತ್ಯಾಚಾರ ಸಂತ್ರಸ್ತೆ ಮತ್ತು ನಿರ್ಭಯಾ (ದೆಹಲಿ ಅತ್ಯಾಚಾರ ಸಂತ್ರಸ್ತೆ) ಪೋಷಕರು.

  ನಿರ್ಭಯಾ ತಂದೆ ಆರೋಪಿಗಳಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿದರು

     
  ಅತ್ಯಾಚಾರಕ್ಕೆ ಇತರೆ ಶಿಕ್ಷೆಗಳು?

  ಅತ್ಯಾಚಾರಗಳಿಗೆ ಇತರೆ ರೀತಿಯ ಶಿಕ್ಷೆಗಳು, ಈ ಮೇಲೆ ತಿಳಿಸಿದ ಉದ್ದೇಶಗಳನ್ನು ಪೂರೈಸುತ್ತವೆಯೇ ಎಂದು ಕೆಲವರು ಯೋಚಿಸಬಹುದು. ಖಚಿತವಾಗಿ, ಜೀವಾವಧಿ ಶಿಕ್ಷೆಯು ಅಪರಾಧವನ್ನು ಮಾಡುವುದರಿಂದ ಜನರನ್ನು ತಡೆಯುವುದಿಲ್ಲ ಹಾಗು ಸಂತ್ರಸ್ತರು ಶಿಕ್ಷೆಯಿಂದ ತೃಪ್ತರಾಗುವುದಿಲ್ಲ. ಒಂದು ವೇಳೆ, ಅತ್ಯಾಚಾರಕ್ಕೆ ಬಲಿಯಾದವರು ನೀವು ಅಥವಾ ನಿಮ್ಮ ತಾಯಿ ಅಥವಾ ಸಹೋದರಿ ಅಥವಾ ಹೆಂಡತಿಯಾಗಿದ್ದರೆ, ಸರ್ಕಾರವು ನಿಮ್ಮ ತೆರಿಗೆ ಹಣವನ್ನು ಬಳಸಿ, ಅತ್ಯಾಚಾರಿಗೆ ದಿನಕ್ಕೆ ಮೂರು ಬಾರಿ ಆಹಾರ ನೀಡಿ, ಅವನಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ಮತ್ತು ವಾರಕ್ಕೊಮ್ಮೆ ಚಲನಚಿತ್ರದೊಂದಿಗೆ ಮನರಂಜನೆ ನೀಡಿದರೆ ನೀವು ಸ್ವೀಕರಿಸುತ್ತೀರಾ? ನಿಮ್ಮ ಉತ್ತರ ಇಲ್ಲ ಎಂದಾದರೆ, ಜೀವಾವಧಿ ಶಿಕ್ಷೆಯನ್ನು ಅನುಭವಿಸುವ ಅತ್ಯಾಚಾರಿಗೆ ಜೈಲಿನಲ್ಲಿ ನಿಖರವಾಗಿ ಇದೇ ಸಿಗುವುದು.

  ಇದೆಲ್ಲದರ ಸಾರಾಂಶ
  ದೇವರು, ತನ್ನ ಸೃಷ್ಟಿಗಳ ಬಗ್ಗೆ ಅನಂತ, ಪರಿಪೂರ್ಣ ಜ್ಞಾನವನ್ನು ಹೊಂದಿದ್ದಾನೆ, ಅತ್ಯಾಚಾರ ಸೇರಿದಂತೆ ಮಾನವಕುಲವು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡುವ ಕಾನೂನುಗಳು ಮತ್ತು ಮಾರ್ಗಸೂಚಿಗಳನ್ನು ಸೂಚಿಸಿದ್ದಾನೆ. ಅತ್ಯಾಚಾರದ ಸಮಸ್ಯೆಗೆ ಇಸ್ಲಾಮಿ ಪರಿಹಾರವು ಯೋಗ್ಯವಾಗಿದ್ದು ಫಲಿತಾಂಶಗಳನ್ನು ನೀಡುತ್ತದೆ. ಇಸ್ಲಾಮ್ ಪ್ರಸ್ತಾಪಿಸಿದ ಪರಿಹಾರವನ್ನು ನೀವು ಒಪ್ಪದೇ ಇರಬಹುದು ಮತ್ತು ಹಾಗೆ ಮಾಡುವುದು ನಿಮ್ಮ ಹಕ್ಕು. ಹಾಗಿದ್ದಲ್ಲಿ, ನಾವು ಕೇಳುವುದೇನೆಂದರೆ, ನಿಮ್ಮ ಬಳಿ ಇದಕ್ಕಿಂತ ಉತ್ತಮವಾದ, ಪ್ರಾಯೋಗಿಕವಾದ ಮತ್ತು ಫಲಿತಾಂಶಗಳನ್ನು ನೀಡುವಂತಹ ಪರ್ಯಾಯ ಪರಿಹಾರವಿದೆಯೇ?
  ಭೀಕರ ಅತ್ಯಾಚಾರ ಘಟನೆಯೊಂದು ನಡೆದ ಕ್ಷಣ, ಅತ್ಯಾಚಾರಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸುವ ಬೇಡಿಕೆಯ ಧ್ವನಿ ನಾವು ಕೇಳಬಹುದು. ಇಸ್ಲಾಮ್ ಧರ್ಮವೂ ಅತ್ಯಾಚಾರಿಗಳಿಗೆ ಮರಣದಂಡನೆಯನ್ನು ವಿಧಿಸುತ್ತದೆ ಆದರೆ ಎರಡರ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಅತ್ಯಾಚಾರದ ಎಲ್ಲಾ ಬಾಗಿಲುಗಳನ್ನು ಮುಚ್ಚಲು ಕಾನೂನುಗಳನ್ನು ಜಾರಿಗೊಳಿಸಿದ ನಂತರ ಇಸ್ಲಾಮ್ ಅತ್ಯಾಚಾರಿಗಳಿಗೆ ಮರಣದಂಡನೆಯನ್ನು ವಿಧಿಸುತ್ತದೆ, ಆದರೆ ಜನರು ಅದರ ಮೂಲ ಕಾರಣಗಳಿಗೆ ಕಣ್ಣು ಮುಚ್ಚಿ ಅತ್ಯಾಚಾರಕ್ಕೆ ಎಲ್ಲಾ ಬಾಗಿಲುಗಳನ್ನು ತೆರೆದಿರುವ ಸಮಾಜದಲ್ಲಿ ವಾಸಿಸುವ ಅತ್ಯಾಚಾರಿಗಳಿಗೆ ಮರಣದಂಡನೆಯನ್ನು ಬಯಸುತ್ತಾರೆ. ಯಾವ ಪರಿಹಾರವು ಹೆಚ್ಚು ತರ್ಕಬದ್ಧ ಮತ್ತು ನ್ಯಾಯಯುತವಾಗಿದೆ? ನೀವೇ ನಿರ್ಧರಿಸಿ.

  “ಒಂಟಿ ಮಹಿಳೆ ಹಸಿವಿನಿಂದ ಸಾಯುತ್ತಿರುವವರೆಗೆ, ಯಾವುದೇ ಸಾಮಾನ್ಯ ವ್ಯಕ್ತಿಯಿಂದ ಅವಳ ಗೌರವವನ್ನು ಕಸಿದುಕೊಳ್ಳುವಂತಿರುವಾಗ, ಸ್ವರಾಜ್ (ಸ್ವಾತಂತ್ರ್ಯ)ನ ಅರ್ಥವಾದರೂ ಏನು?”

  ಮಹಾತ್ಮ ಗಾಂಧೀಜಿ

   

  WHAT OTHERS ARE READING

  Most Popular