More

    Choose Your Language

    ಆತ್ಮಹತ್ಯೆ

    ಸಾವನ್ನು ಬಯಸಬೇಡಿ 	ಪ್ರವಾದಿ ಮುಹಮ್ಮದ್ (ಅವರ ಮೇಲೆ ದೇವರ ವತಿಯಿಂದ ಶಾಂತಿ ಇರಲಿ) ಹೇಳಿದ್ದಾರೆ:

ನಿಮ್ಮಲ್ಲಿ ಯಾರೂ ಅವರು ಎದುರಿಸುತ್ತಿರುವ ಅತ್ಯಂತ ಕಷ್ಟದ ಕಾರಣದಿಂದ ಸಾವನ್ನು ಬಯಸಬಾರದು. ಬದಲಿಗೆ ಅವರು ಹೇಳಬೇಕು: ""ಓ ದೇವರೇ! ಎಲ್ಲಿಯವರೆಗೆ ನನಗೆ ಜೀವನವು ಉತ್ತಮವಾಗಿದೆಯೋ ಅಲ್ಲಿಯವರೆಗೆ ನನ್ನನ್ನು ಬದುಕಿಸಿ, ಮತ್ತು ಸಾವು ನನಗೆ ಉತ್ತಮವಾಗಿದ್ದರೆ ಸಾವು ಬರಲಿ. ”	ಬುಖಾರಿ # 5671
    ವಿದ್ಯಾರ್ಥಿಗಳಲ್ಲಿ ಆತ್ಮಹತ್ಯೆ "ನಿಮಗೆ ಒಳ್ಳೆಯದನ್ನು ನೀವು ಇಷ್ಟಪಡದಿರಬಹುದು ಮತ್ತು ನಿಮಗೆ ಕೆಟ್ಟದ್ದನ್ನು ನೀವು ಇಷ್ಟಪಡಬಹುದು: (ನಿಮಗೆ ಯಾವುದು ಒಳ್ಳೆಯದು ಏನೆಂದು) ದೇವರಿಗೆ ತಿಳಿದಿದೆ ಹಾಗೂ ನಿಮಗೆ ತಿಳಿದಿಲ್ಲ. ಕಳೆದ 5 ವರ್ಷಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಅತ್ಯಂತ ಹೆಚ್ಚಾಗಿದೆ. https://timesofindia.indiatimes.com/education/exams/medical/students-suicide-highest-in-the-last-5-years-many-tok-life-due-to-failure-in-exam-ncrb- data/articleshow/94154908.cms" ಕುರಾನ್ ಅಧ್ಯಾಯ 2: ಸೂಕ್ತಿ 216
    ಕಠಿಣ ಸಮಯಗಳು ನಿರಂತರವಲ್ಲ ಕಷ್ಟದ ನಂತರ, ದೇವರು ಸುಲಭ (ನೆಮ್ಮದಿ) ತರುವನು. ಕುರಾನ್ ಅಧ್ಯಾಯ 65: ಸೂಕ್ತಿ 7
    ಆತಂಕ ಮತ್ತು ದುಃಖದ ವಿರುದ್ಧ ಪ್ರಾರ್ಥನೆ	
ಪ್ರವಾದಿ ಮುಹಮ್ಮದ್ (ಅವರ ಮೇಲೆ ದೇವರ ವತಿಯಿಂದ ಶಾಂತಿ ಇರಲಿ) ನಮಗೆ ಪ್ರಾರ್ಥಿಸಲು ಕಲಿಸಿದರು:

 "ಓ ದೇವರೇ, ಆತಂಕ ಮತ್ತು ದುಃಖ, ದೌರ್ಬಲ್ಯ ಮತ್ತು ಸೋಮಾರಿತನ, ಜಿಪುಣತನ ಮತ್ತು ಹೇಡಿತನ, ಸಾಲಗಳ ಹೊರೆ ಮತ್ತು ಜನರಿಂದ ತುಳಿತಕ್ಕೊಳಗಾಗುವುದರಿಂದ ನಾನು ನಿನ್ನಲ್ಲಿ ರಕ್ಷಣೆಯನ್ನು ಬಯಸುತ್ತೇನೆ."	ಬುಖಾರಿ # 6369
    ವಿಶ್ವ ಆತ್ಮಹತ್ಯೆ ತಡೆ ದಿನ ನಾವು (ದೇವರು) ಅದನ್ನು ಅಸ್ತಿತ್ವಕ್ಕೆ ತರುವ ಮೊದಲು (ದಾಖಲೆಯಲ್ಲಿ) ಬರೆಯದೆ ಭೂಮಿಯ ಮೇಲೆ ಅಥವಾ ನಿಮ್ಮೊಳಗಾಗಲಿ ಯಾವುದೇ ವಿಪತ್ತು (ಅಥವಾ ಅನುಗ್ರಹ) ಸಂಭವಿಸುವುದಿಲ್ಲ. ಇದು ಖಂಡಿತವಾಗಿಯೂ ದೇವರಿಗೆ ಸುಲಭವಾಗಿದೆ. ಇದರಿಂದ ನೀವು ಕಳೆದುಕೊಂಡದ್ದಕ್ಕಾಗಿ ದುಃಖಿಸುವುದೂ ಬೇಡ ಅಥವಾ ಅವನು (ದೇವರು) ನಿಮಗೆ ಕೊಟ್ಟಿರುವ (ಅನುಗ್ರಹದ) ಬಗ್ಗೆ ಹೆಮ್ಮೆಪಡುವುದೂ ಬೇಡ (ಎಂದು ನಾವು ಇದನ್ನು ನಿಮಗೆ ತಿಳಿಸುತ್ತೇವೆ). ಕುರಾನ್ ಅಧ್ಯಾಯ 57: ಸೂಕ್ತಿ 22-23
    WHAT OTHERS ARE READING

    Most Popular