More

    Choose Your Language

    ನನ್ನ ಅಸ್ತಿತ್ವದ ಉದ್ದೇಶವೇನು?

    ನಿಮ್ಮ ಅಸ್ತಿತ್ವದ ಕಾರಣವದರೂ ಏನು? ನಾವು ಮಾಡಿರುವ ಪ್ರತಿಯೊಂದಕ್ಕೂ ಒಂದು ಉದ್ದೇಶ ಇರುವಾಗ, ಅದೇ ರೀತಿ ನಮ್ಮ ದೇಹದ ಅಂಗಗಳಿಗೆ ಒಂದು ಉದ್ದೇಶವಿರುವಾಗ, ಮರಗಳು, ಪರ್ವತಗಳು ಮುಂತಾದ ನೈಸರ್ಗಿಕ ವಸ್ತುಗಳಿಗೆ ಒಂದು ಉದ್ದೇಶವಿರುವಾಗ, ಇಡೀ ಮಾನವ ಜನಾಂಗವು ಯಾವುದೇ ಉದ್ದೇಶವಿಲ್ಲದೆ ಅಸ್ತಿತ್ವದಲ್ಲಿದೆ ಎಂದು ಭಾವಿಸುವುದು ಏಷ್ಟರ ಮಟ್ಟಿಗೆ ಸರಿ?

    ಪರಿಚಯ

    ಸತ್ಯವೇನೆಂದರೆ ನಾವು, ನೀವು ಇಂದು ಬದುಕಿದ್ದೇವೆ ಮತ್ತು ಒಂದು ದಿನ ಸಾಯುತ್ತೇವೆ. ಎಂದಾದರೂ ನೀವು ಈ ಭೂಮಿಯ ಮೇಲೆ ನನ್ನ ಅಸ್ತಿತ್ವದ ಉದ್ದೇಶ ಏನು ಎಂದು ಯೋಚಿಸಿದ್ದೀರಾ? ನಿಮ್ಮ ಸುತ್ತಲೂ ಒಮ್ಮೆ ನೋಡಿ. ನಾವು ನಮ್ಮ ಸ್ವಂತ ಕೈಗಳಿಂದ ಮಾಡಿದ ವಸ್ತುಗಳಿಂದ ನೀವು ಸುತ್ತುವರೆದಿರುವಿರಿ. ಈಗ, ನಾವು ಆ ವಸ್ತುಗಳನ್ನು ಮಾಡಿರುವುದಾದರೂ ಏಕೆ? ಅವುಗಳಿಗೆ ಒಂದು ಉದ್ದೇಶವಿಲ್ಲವೇ? ನಿಸ್ಸಂಶಯವಾಗಿ ಖಂಡಿತ ಇದೆ. ನಮ್ಮ ದೇಹದ ಅಂಗಾಂಗಗಳನ್ನು ನೋಡೋಣ. ಉದ್ದೇಶವಿಲ್ಲದ ಯಾವುದಾದರೂ ಅಂಗವನ್ನು ನೀವು ಕಂಡುಕೊಳ್ಳುತ್ತೀರಾ? ನಮ್ಮ ಸುತ್ತಲಿನ ಮರಗಳು, ಪರ್ವತಗಳು ಮುಂತಾದ ನೈಸರ್ಗಿಕ ವಸ್ತುಗಳನ್ನು ನೋಡೋಣ. ಅವು ಯಾವುದೇ ಉದ್ದೇಶವಿಲ್ಲದೆ ಅಸ್ತಿತ್ವದಲ್ಲಿವೆಯೇ?

    ನಮ್ಮ ಅಸ್ತಿತ್ವದ ಕಾರಣವೇನು?

    ನಾವು ಮಾಡಿರುವ ಪ್ರತಿಯೊಂದಕ್ಕೂ ಒಂದು ಉದ್ದೇಶ ಇರುವಾಗ, ಅದೇ ರೀತಿ ನಮ್ಮ ದೇಹದ ಅಂಗಗಳಿಗೆ ಒಂದು ಉದ್ದೇಶವಿರುವಾಗ, ಮರಗಳು, ಪರ್ವತಗಳು ಮುಂತಾದ ನೈಸರ್ಗಿಕ ವಸ್ತುಗಳಿಗೆ ಒಂದು ಉದ್ದೇಶವಿರುವಾಗ, ಇಡೀ ಮಾನವ ಜನಾಂಗವು ಯಾವುದೇ ಉದ್ದೇಶವಿಲ್ಲದೆ ಅಸ್ತಿತ್ವದಲ್ಲಿದೆ ಎಂದು ಭಾವಿಸುವುದು ಎಷ್ಟರ ಮಟ್ಟಿಗೆ ಸರಿ?

    ನಿಮ್ಮ ಅಭಿಪ್ರಾಯದಲ್ಲಿ, ನಿಮ್ಮ ಅಸ್ತಿತ್ವದ ಕಾರಣವೇನು? ಖ್ಯಾತಿ ಮತ್ತು ಸಂಪತ್ತು ಗಳಿಸುವುದೇ? ಮಜಾ ಮಾಡುವುದೇ? ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗುವುದೇ? ಖಂಡಿತ ಇಲ್ಲ, ಜೀವನದಲ್ಲಿ ಇದೆಲ್ಲದ್ದಕ್ಕಿಂತ ಹೆಚ್ಚೇನೋ ಇರಬೇಕು, ಆದ್ದರಿಂದ ಈ ಬಗ್ಗೆ ಸ್ವಲ್ಪ ಯೋಚಿಸೋಣ.

    ನಿಮ್ಮ ಅಸ್ತಿತ್ವದ ಉದ್ದೇಶವನ್ನು ಯಾರು ನಿರ್ಧರಿಸುತ್ತಾರೆ?

    “ನನ್ನ ಅಸ್ತಿತ್ವದ ಉದ್ದೇಶವನ್ನು ನಾನು ನಿರ್ಧರಿಸುತ್ತೇನೆ” ಎಂದು ನೀವು ಹೇಳಬಹುದು.

    ಪೆನ್ನಿನ ಉದಾಹರಣೆಯನ್ನು ತೆಗೆದುಕೊಳ್ಳೋಣ. ಪೆನ್ನಿನ ನಿಜವಾದ ಉದ್ದೇಶವೇನು? ಪೆನ್ನಿನ ನಿಜವಾದ ಉದ್ದೇಶ ಬರೆಯುವುದು. ಪೆನ್ನಿನ ನಿಜವಾದ ಉದ್ದೇಶವನ್ನು ಯಾರು ನಿರ್ಧರಿಸಿದ್ದಾರೆ – ಪೆನ್ನಿನ ಬಳಕೆದಾರನೇ ಅಥವಾ ತಯಾರಕನೇ? ಉತ್ತರ: ಇದನ್ನು ಮೊದಲು ತಯಾರಿಸಿದ ವ್ಯಕ್ತಿ. ಬಳಕೆದಾರನು ತನ್ನ ಬೆನ್ನನ್ನು ಕೆರೆಯಲು ಪೆನ್ ಬಳಸಬಹುದಾದರೂ, ಪೆನ್ನನ್ನು ಬೆನ್ನು ಕೆರೆಯಲು ತಯಾರಿಸಲಾಗಿದೆ ಎಂದು ನಾವು ಎಂದಿಗೂ ತೀರ್ಮಾನಿಸುವುದಿಲ್ಲ. ನಿಜವಾದ ಉದ್ದೇಶವನ್ನು ನಿರ್ಧರಿಸುವವರು ಸಂಶೋಧಕ ಅಥವಾ ತಯಾರಕ.

    ಹಾಗೆಯೇ, ಈ ಜಗತ್ತಿನಲ್ಲಿ ನಿಮ್ಮ ಅಸ್ತಿತ್ವಕ್ಕೆ ನಿಮ್ಮದೇ ಆದ ಕಾರಣಗಳನ್ನು ನೀವು ಹೇಳಬಹುದು, ಆದರೆ ಇದು ನಮ್ಮ ಅಸ್ತಿತ್ವದ ನಿಜವಾದ ಉದ್ದೇಶವಾಗುವುದಿಲ್ಲ. ನಿಮ್ಮ ಸೃಷ್ಟಿಕರ್ತನಿಂದ ಮಾತ್ರ ನಿಮ್ಮ ಅಸ್ತಿತ್ವದ ನಿಜವಾದ ಉದ್ದೇಶವನ್ನು ನಾವು ತಿಳಿದುಕೊಳ್ಳಬಹುದು.

    ಹಾಗಿದ್ದರೆ ನಮಗೆ ಸೃಷ್ಟಿಕರ್ತನಿದ್ದಾನೆಯೇ?

    ನೀವು ಯಾವುದೇ ಸೇತುವೆ, ಯಂತ್ರ ಅಥವಾ ಗಾಡಿ ನೋಡಿದಾಗ, ಅದರ ಅಸ್ತಿತ್ವದ ಹಿಂದೆ ಅದರ ತಯಾರಕ, ಕಂಪನಿ ಅಥವಾ ವ್ಯಕ್ತಿ ಇರಲೇಬೇಕು ಎಂದು ನಿರಾಕರಿಸುವುದಿಲ್ಲ. ಹಾಗಿದ್ದಲ್ಲಿ ಈ ಬ್ರಹ್ಮಾಂಡದ ಬಗ್ಗೆ ಏನು ಹೇಳುತ್ತೀರಿ?

    ನಾವು ವಿಶ್ವದಲ್ಲಿ ಅತ್ಯುತ್ತಮ ಕ್ರಮ, ಶಿಸ್ತು ಮತ್ತು ವಿನ್ಯಾಸವನ್ನು ಗಮನಿಸುತ್ತೇವೆ. ಒಂದು ಉದಾಹರಣೆಯನ್ನು ನೀಡುವುದಾದರೆ, ಸೂರ್ಯ ಮತ್ತು ಚಂದ್ರ ಗ್ರಹಣಗಳ ನಿಖರವಾದ ಸಮಯವನ್ನು, ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ಮುಂದಿನ ನೂರಾರು ವರ್ಷಗಳವರೆಗೆ ನಿಖರವಾಗಿ ಲೆಕ್ಕ ಹಾಕಬಹುದು. ವಿಶ್ವದಲ್ಲಿ ಗ್ರಹಗಳು ಮತ್ತು ನಕ್ಷತ್ರಗಳ ನಡುವೆ ಇರುವ ತಾಳ ಮೇಳ, ಸಮತೋಲನ ಮತ್ತು ಸಾಮರಸ್ಯದಿಂದಾಗಿ ಇದು ಸಾಧ್ಯ. ವಿಶ್ವದಲ್ಲಿ ಅತ್ಯುತ್ತಮ ವಿನ್ಯಾಸ ಮತ್ತು ಸ್ಥಾಪಿಸಲಾದ ಮಾದರಿಯ ಉಪಸ್ಥಿತಿಗೆ ಇದು ಅತ್ಯುನ್ನತ ಸಾಕ್ಷ್ಯವಾಗಿದೆ. ಹೇಗೆಂದರೆ ಹಾಗೆ ವಿವಿಧ ಬಣ್ಣಗಳನ್ನು ಗೋಡೆಯ ಮೇಲೆ ಎಸೆಯುವುದರಿಂದ ಕೈ ಅಥವಾ ಹಕ್ಕಿಯಂತಹ ಕೆಲವು ವಿನ್ಯಾಸವನ್ನು ರಚಿಸಬಹುದೇ ಹೊರತು, ಅದು ಎಂದಿಗೂ ಮೋನಾಲಿಸಾವನ್ನು ರಚಿಸಲು ಸಾಧ್ಯವಿಲ್ಲ! ನಮ್ಮ ವಿಶ್ವದಲ್ಲಿನ ವಿನ್ಯಾಸವು ಮೋನಾಲಿಸಾಗಿಂತ ಹೆಚ್ಚು ಸಂಕೀರ್ಣವಾಗಿದೆ. “ಡಿಸೈನರ್” ಇಲ್ಲದೆ ಈ ವಿನ್ಯಾಸವು ಅಸ್ತಿತ್ವಕ್ಕೆ ಬಂತು ಎಂದು ನಂಬುವುದು ಎಷ್ಟು ತರ್ಕಬದ್ಧವಾಗಿದೆ, ನೀವೇ ಹೇಳಿ?

    ಸ್ಫೋಟಗಳು ವಿನಾಶಕಾರಿ ಎಂದು ನಮಗೆಲ್ಲರಿಗೂ ತಿಳಿದಿದೆ. ಈ ಸುಂದರವಾದ ಮತ್ತು ಪರಿಪೂರ್ಣ ವಿನ್ಯಾಸವು ಕೇವಲ ಆಕಸ್ಮಿಕವಾಗಿ ಅಥವಾ ಬಿಗ್ ಬ್ಯಾಂಗ್ನಂತಹ ಸ್ಫೋಟದಿಂದ ಅಸ್ತಿತ್ವಕ್ಕೆ ಬರಬಹುದೇ? ಮರ್ಸಿಡಿಸ್ ಬೆಂಜ್ ಮತ್ತು ರೋಲ್ಸ್ ರಾಯ್ಸ್ ಕಾರುಗಳು ಯಾವುದೋ ಗುಜರಿಯಲ್ಲಿ (ಜಂಕ್ ಯಾರ್ಡ್ನಲ್ಲಿ) ಸ್ಫೋಟದಿಂದ ಸೃಷ್ಟಿಯಾದವು ಎಂದು ಯಾರಾದರೂ ಹೇಳಿದರೆ ನೀವು ನಂಬುತ್ತೀರಾ?

    ಇನ್ನಷ್ಟು ವಿವರವಾದ ಮಾಹಿತಿಗಾಗಿ, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ.

    ದೇವರು ವಿಶ್ವವನ್ನು ಸೃಷ್ಟಿಸಿದ್ದೇ ಆದರೆ ದೇವರನ್ನು ಸೃಷ್ಟಿಸಿದವರು ಯಾರು?

    ಎಲ್ಲದರ ಪ್ರಾರಂಭ ಮತ್ತು ಅಂತ್ಯವನ್ನು ಅಳೆಯಲು ನಾವು “ಸಮಯ”ದ ಪ್ರಮಾಣವನ್ನು ಬಳಸುತ್ತೇವೆ. ಬ್ರಹ್ಮಾಂಡದಂತೆಯೇ, “ಸಮಯ” ಸಹ ಅಸ್ತಿತ್ವಕ್ಕೆ ಬಂದಂತಹ ಅಂಶ. ಈ ವಿಶ್ವದಲ್ಲಿ ರಚಿಸಲಾದ ಎಲ್ಲಾ ವಸ್ತುಗಳು “ಸಮಯ”ದ ಮೇಲೆ ಅವಲಂಬಿತವಾಗಿದೆ, ಆದ್ದರಿಂದ ಅವೆಲ್ಲದಕ್ಕೂ ಪ್ರಾರಂಭ ಮತ್ತು ಅಂತ್ಯವಿದೆ. ವಿಶ್ವವನ್ನು ಸೃಷ್ಟಿಸಿದ ಸೃಷ್ಟಿಕರ್ತನು “ಸಮಯ” ಅಸ್ತಿತ್ವಕ್ಕೆ ಬರುವ ಮುಂಚೆಯೇ ಇದ್ದನು ಹಾಗಾಗಿ ಅದರಿಂದ (ಅಂದರೆ ಸಮಯದಿಂದ) ಸ್ವತಂತ್ರನಾಗಿದ್ದಾನೆ. ಸೃಷ್ಟಿಕರ್ತನು “ಸಮಯ” ದಿಂದ ಸ್ವತಂತ್ರನಾಗಿರುವುದರಿಂದ, ಸೃಷ್ಟಿಕರ್ತನಿಗೆ ಪ್ರಾರಂಭ ಅಥವಾ ಅಂತ್ಯವಿಲ್ಲ ಮತ್ತು ಯಾವಾಗಲೂ (ಅಂದರೆ ನಿರಂತರವಾಗಿ) ಅಸ್ತಿತ್ವದಲ್ಲಿದ್ದಾನೆ. ನಿರಂತರವಾಗಿ ಅಸ್ತಿತ್ವದಲ್ಲಿರುವವನಿಗೆ, ಸೃಷ್ಟಿಕರ್ತನಿರಲು ಹೇಗೆ ಸಾಧ್ಯ!!

    ದೇವರು ನಿಮ್ಮನ್ನು ಸೃಷ್ಟಿಸಿ ಮಾರ್ಗದರ್ಶನವಿಲ್ಲದೆ ಬಿಟ್ಟಿದ್ದಾನಾ?

    ದೇವರು ನಿಮ್ಮನ್ನು ಸೃಷ್ಟಿಸಿ, ನಿಮಗೆ ಮಾರ್ಗದರ್ಶನವಿಲ್ಲದೆ ಬಿಡಲಿಲ್ಲ. ಕಾರಿಗೆ ಡೆಮೊ ಕೊಡಬೇಕೆಂದರೆ ಬೈಕ್ ಅಲ್ಲ ಕಾರನ್ನು ಬಳಸಬೇಕು. ಅಂತೆಯೇ, ಉತ್ತಮ ಜೀವನವನ್ನು ಹೇಗೆ ಬದುಕಬೇಕು ಎಂಬುದರ ಕುರಿತು ಇತರ ಮಾನವರಿಗೆ “ಡೆಮೊ” ನೀಡಲು ದೇವರು ನೀತಿವಂತ ಮಾನವರನ್ನು ಆರಿಸಿಕೊಂಡನು. ಈ ಪ್ರದರ್ಶನಕಾರರೇ ದೇವರು ಕಳುಹಿಸಿದ ಪ್ರವಾದಿಗಳು.

    ಪ್ರವಾದಿಗಳು-ಮಾನವೀಯತೆಗೆ ಮಾದರಿಗಳು

    ಪ್ರವಾದಿಗಳು ಆದರ್ಶಪ್ರಾಯವಾಗಿ ಬದುಕಿದ ನೀತಿವಂತ ಮನುಷ್ಯರು. ಈ ಪ್ರವಾದಿಗಳು ಕೇವಲ ಮಾನವರಾಗಿದ್ದರು ಮತ್ತು ಅವರು ಯಾವುದೇ ದೈವಿಕ ಗುಣವನ್ನು ಹೊಂದಿರಲಿಲ್ಲ. ದೇವರು, ಭಾರತ ಸೇರಿದಂತೆ ಪ್ರತಿಯೊಂದು ದೇಶ/ನಾಡಿಗೂ ಪ್ರವಾದಿಗಳನ್ನು ಕಳುಹಿಸಿದನು. ಕೆಲವು ಪ್ರವಾದಿಗಳು: ನೋವಾ, ಅಬ್ರಹಾಂ, ಡೇವಿಡ್, ಸೊಲೊಮನ್, ಮೋಸೆಸ್ ಮತ್ತು ಏಸು.

    ಪ್ರವಾದಿಗಳ ಸರಪಳಿಯಲ್ಲಿ ಕೊನೆಯ ಮತ್ತು ಅಂತಿಮ ಪ್ರವಾದಿಯೇ, ಪ್ರವಾದಿ ಮುಹಮ್ಮದ್. ಅವರನ್ನು ಕಡೆಯ ದಿನದವರೆಗೆ ಇಡೀ ಮಾನವಕುಲಕ್ಕಾಗಿ ಕಳುಹಿಸಲಾಗಿದೆ. ದೇವರು ಹಿಂದಿನ ಎಲ್ಲಾ ಪ್ರವಾದಿಗಳನ್ನು ನಿರ್ದಿಷ್ಟ ಜನರಿಗೆ ಮತ್ತು ನಿರ್ದಿಷ್ಟ ಸಮಯಕ್ಕೆ ಮಾತ್ರ ಕಳುಹಿಸಿದ್ದನು. ಪ್ರವಾದಿ ಮುಹಮ್ಮದರ ನಂತರ ಯಾವುದೇ ಪ್ರವಾದಿ ಇಲ್ಲದಿರುವುದರಿಂದ, ಅವರು ಕಡೆಯ ದಿನದವರೆಗೂ, ಸಕಲ ಮಾನವ ಕುಲಕ್ಕೆ ಪ್ರವಾದಿಯಾಗಿರುವರು.

    ಪ್ರವಾದಿಗಳ ಬೋಧನೆಗಳು

    ದೇವರ ಎಲ್ಲಾ ಪ್ರವಾದಿಗಳು ಮೂರು ವಿಷಯಗಳನ್ನು ಕಲಿಸಿದರು. ಅವುಗಳೆಂದರೆ:

    1. ನಮ್ಮ ಅಸ್ತಿತ್ವದ ಉದ್ದೇಶ
    2. ದೇವರ ಗುಣಲಕ್ಷಣಗಳು
    3. ಸಾವಿನ ನಂತರದ ಜೀವನದಲ್ಲಿ ದೇವರಿಗೆ ಉತ್ತರ ಕೊಡಬೇಕಾಗುವುದು.

    ಅಸ್ತಿತ್ವದ ಉದ್ದೇಶ

    ನಿಮ್ಮ ಅಸ್ತಿತ್ವದ ಉದ್ದೇಶವು ನಮ್ಮೆಲ್ಲರ ಸೃಷ್ಟಿಕರ್ತನನ್ನು ಮಾತ್ರ ಪೂಜಿಸುವುದು ಹಾಗೂ ಅವನ ಆಜ್ಞೆಗಳನ್ನು ಪಾಲಿಸುವುದು, ಮತ್ತು ಬೇರೆ ಯಾವುದನ್ನೂ ಅಥವಾ ಯಾರನ್ನೂ ಅಲ್ಲ. (ಸೃಷ್ಟಿಕರ್ತನನ್ನು ಮಾತ್ರ ಪೂಜಿಸಬೇಕೇ ಹೊರತು, ವಿಗ್ರಹಗಳು, ಚಿತ್ರಗಳು, ಸೂರ್ಯ, ನಕ್ಷತ್ರ, ಗ್ರಹಗಳು ಇತ್ಯಾದಿ ಸೃಷ್ಟಿಗಳನ್ನಲ್ಲ. ಯಾರನ್ನೂ ಅಥವಾ ಯಾವುದನ್ನೂ ದೇವರ ಸ್ಥಾನಕ್ಕೆ ಏರಿಸಬೇಡಿ. ಹಾಗೆಯೇ ದೇವರ ಸ್ಥಾನವನ್ನು ಅವನ ಅಥವಾ ನಿಮ್ಮ ಸೃಷ್ಟಿಯ ಸ್ಥಾನಕ್ಕೆ ಇಳಿಸಬೇಡಿ. ದೇವರ ಅಸ್ತಿತ್ವವನ್ನು ನಿರಾಕರಿಸಬೇಡಿ).

    ದೇವರ ಗುಣಲಕ್ಷಣಗಳು

    1. ದೇವರು ಒಬ್ಬನೇ ಮತ್ತು ದೇವರಿಗೆ ಸಮಾನರು ಯಾರೂ ಇಲ್ಲ.
    2. ದೇವರಿಗೆ ಆಹಾರ, ನಿದ್ರೆ, ಕುಟುಂಬ, ಹೆಂಡತಿ, ಮಕ್ಕಳು ಇತ್ಯಾದಿ ಯಾವುದರ ಅಗತ್ಯವೂ ಇಲ್ಲ, ಆದ್ದರಿಂದ ದೇವರು ಮಲಗುವುದಿಲ್ಲ, ತಿನ್ನುವುದಿಲ್ಲ ಅಥವಾ ಪೋಷಕರು, ಹೆಂಡತಿ ಮತ್ತು ಮಕ್ಕಳನ್ನು ಹೊಂದಿರುವುದಿಲ್ಲ.
    3. ದೇವರು ಸರ್ವಶಕ್ತಿಶಾಲಿಯಾಗಿರುವುದರಿಂದ, ಅವನ ಸೃಷ್ಟಿಗಳಂತಲ್ಲ. ದೇವರು ಆಯಾಸಗೊಳ್ಳುವುದಿಲ್ಲ ಅಥವಾ ಮರೆತುಬಿಡುವುದಿಲ್ಲ ಅಥವಾ ತಪ್ಪುಗಳನ್ನು ಮಾಡುವುದಿಲ್ಲ.
    4. ದೇವರು ತನ್ನ ಸೃಷ್ಟಿಯಾದ ಎಲ್ಲಾ ಮಾನವರನ್ನು ಪ್ರೀತಿಸುತ್ತಾನೆ ಮತ್ತು ಜಾತಿ, ಬಣ್ಣ, ಜನಾಂಗ ಅಥವಾ ವಂಶದ ಆಧಾರದ ಮೇಲೆ ಭೇದಭಾವ ಮಾಡುವುದಿಲ್ಲ.

    ಸಾವಿನ ನಂತರದ ಜೀವನ – ದೇವರಿಗೆ ಉತ್ತರ ಕೊಡಬೇಕಾಗಿರುವುದು

    ಈ ಜಗತ್ತು ಒಂದಲ್ಲ ಒಂದು ದಿನ ಕೊನೆಗೊಳ್ಳಲಿದೆ. ಮೊದಲ ಮನುಷ್ಯನಿಂದ ಕೊನೆಯವರೆಗೆ ಎಲ್ಲಾ ಮಾನವರು ಮತ್ತೆ ಜೀವಂತಗೊಳಿಸಲಾಗುವುದು ಮತ್ತು ಅವರು ಮಾಡಿದ ಕೆಲಸಗಳ ಬಗ್ಗೆ ಪ್ರಶ್ನಿಸಲಾಗುವುದು, ಅದೇ ತೀರ್ಪಿನ ದಿನ. ಯಾರು ನಿಜವಾದ ಏಕೈಕ ದೇವರನ್ನು ಪೂಜಿಸಿ, ಒಳ್ಳೆಯ ಕಾರ್ಯಗಳನ್ನು ಮಾಡಿದರೋ ಅವರು ಒಳ್ಳೆಯ ಪ್ರತಿಫಲವನ್ನು ಪಡೆಯುವರು ಮತ್ತು ದೇವರಿಗೆ ಅವಿಧೇಯರಾದ ಜನರು ಶಿಕ್ಷೆಗೆ ಒಳಗಾಗುವರು. ಈ ಪ್ರತಿಫಲವೇ ಸ್ವರ್ಗ ಹಾಗೂ ಶಿಕ್ಷೆಯೇ ನರಕವಾಗಿದೆ. ಸ್ವರ್ಗ ಮತ್ತು ನರಕದಲ್ಲಿನ ಜೀವನವು ಶಾಶ್ವತವಾಗಿರಲಿದೆ ಮತ್ತು ಎಂದಿಗೂ ಅಂತ್ಯವಾಗುವುದಿಲ್ಲ.

    ನಮಗೆ ಸಾವಿನ ನಂತರ ಜೀವನ ಬೇಕೇ?

    ನಾವೆಲ್ಲರೂ ನ್ಯಾಯವನ್ನು ಬಯಸುತ್ತೇವೆ, ಆದರೆ ಈ ಜಗತ್ತು ಅನ್ಯಾಯದಿಂದ ತುಂಬಿದೆ ಮತ್ತು ಕೆಟ್ಟ ಜನರು ಆನಂದವಾಗಿದ್ದರೆ, ಒಳ್ಳೆಯ ಜನರು ಬಳಲುತ್ತಿದ್ದಾರೆ ಎಂದು ನೀವು ನೋಡುತ್ತೀರಿ. ಮತ್ತೊಂದು ಅನ್ಯಾಯವೆಂದರೆ ಹಲವಾರು ಜನರನ್ನು ಕೊಂದ ಕೊಲೆಗಾರನಿಗೆ ಸಮರ್ಪಕವಾಗಿ ಶಿಕ್ಷೆಯಾಗುವುದಿಲ್ಲ ಏಕೆಂದರೆ ಕೊಲೆಗಾರನಿಗೆ ಮರಣದಂಡನೆ ವಿಧಿಸಿದರೂ ಅದು ಒಬ್ಬರ ಹತ್ಯೆಗೆ ಮಾತ್ರ ಶಿಕ್ಷೆಯಾಗುತ್ತದೆ. ಉಳಿದವರ ಹತ್ಯೆಗೆ ಶಿಕ್ಷೆಯಿಲ್ಲವೇ?

    ಹಲವಾರು ನೀತಿವಂತರು ಹಿಂಸಿಸಲ್ಪಟ್ಟಿದ್ದಾರೆ ಮತ್ತು ಕೆಲವರು ಕೊಲ್ಲಲ್ಪಟ್ಟಿದ್ದಾರೆ. ಆ ನೀತಿವಂತರು ತಮ್ಮ ನೀತಿವಂತ ಜೀವನಕ್ಕೆ ಪ್ರತಿಫಲವನ್ನು ಪಡೆಯಬೇಕೆಂದು ನೀವು ಒಪ್ಪುತ್ತೀರಲವೇ? ಭೂಮಿಯ ಮೇಲಿನ ಈ ಜೀವನದಲ್ಲಿ ಸಂಪೂರ್ಣ ಹಾಗೂ ಪರಿಪೂರ್ಣ ನ್ಯಾಯವು ಅಸಾಧ್ಯವೆಂದು ಇದು ತೋರಿಸುತ್ತದೆ. ಅತ್ಯಂತ ನ್ಯಾಯಯುತ, ಸರ್ವಶಕ್ತ ದೇವರು, ಅನ್ಯಾಯದೊಂದಿಗೆ ಅಂತ್ಯಗೊಳಿಸಲು ಎಂದಿಗೂ ಅನುಮತಿಸುವುದಿಲ್ಲ. ಹಾಗಾಗಿಯೇ ಸಾವು ಅಂತ್ಯವಲ್ಲ, ನಿರಂತರ ಜೀವನದ ಆರಂಭ – ಮರಣಾನಂತರದ ಜೀವನದಲ್ಲಿ ದೇವರು ನಮಗೆ ಪರಿಪೂರ್ಣ ನ್ಯಾಯದ ಭರವಸೆ ನೀಡಿದ್ದಾನೆ.

    ಸಾವಿನ ನಂತರ ಜೀವನ ಸಾಧ್ಯವೇ?

    ಮೊದಲ ಬಾರಿಗೆ ಏನನ್ನಾದರೂ ಮಾಡುವುದು ಕಷ್ಟ ಆದರೆ ಅದನ್ನೇ ಪುನರಾವರ್ತಿಸುವುದು ಸುಲಭ ಎಂದು ನೀವು ಒಪ್ಪುತ್ತೀರಿ. ಮೊದಲ ಬಾರಿಗೆ (ನಮ್ಮ ಅಸ್ತಿತ್ವವಿಲ್ಲದಿರುವಾಗ) ನಮ್ಮನ್ನು ಸೃಷ್ಟಿಸಲು ದೇವರಿಗೆ ಕಷ್ಟವಾಗದಿದ್ದಾಗ, ನಾವು ಸತ್ತ ನಂತರ ನಮನ್ನು ಮತ್ತೆ ಬದುಕಿಸಲು ಏಕೆ ಕಷ್ಟಪಡುವನು? ನಮ್ಮ ಮರಣದ ನಂತರ ನಮ್ಮನ್ನು (ಮಣ್ಣಲ್ಲಿ ಮಣ್ಣಾಗಿದ್ದರೂ, ಸುಟ್ಟಿ ಬೂದಿಯಾಗಿದ್ದರೂ) ಮತ್ತೆ ಜೀವಂತಗೊಳಿಸುವುದು ದೇವರಿಗೆ ನಿಜವಾಗಿಯೂ ತುಂಬಾ ಸುಲಭ.

    ದೇವರು ಕ್ಷಮಿಸದ ಪಾಪ ಯಾವುದು?

    ಸತ್ಯವನ್ನು ತಿಳಿದ ನಂತರವೂ ಈ ಕೆಳಗಿನ ರೀತಿಯಲ್ಲಿ ನಡೆಯುವುದಕ್ಕೆ ಆಯ್ಕೆ ಮಾಡುವ ವ್ಯಕ್ತಿಯನ್ನು ದೇವರು ಕ್ಷಮಿಸುವುದಿಲ್ಲ:

    1. ಗಾಳಿ, ನೀರು, ಬೆಂಕಿ, ಗ್ರಹಗಳು (ಗ್ರಹಗಳು ಮತ್ತು ದೈವಗಳು) ಮತ್ತು ಮಾನವ ನಿರ್ಮಿತ ವಸ್ತುಗಳಾದ ಕಲ್ಲಿನ ಕೆತ್ತನೆಗಳು, ಪ್ರತಿಮೆಗಳು, ಚಿತ್ರಗಳು, ಸಂತರ ಸಮಾಧಿಗಳು ಇತ್ಯಾದಿಗಳಿಗೆ ಅಡ್ಡ ಬಿದ್ದು, ನಮಸ್ಕರಿಸುವ ಮೂಲಕ ಪೂಜೆ ಮತ್ತು ವಿಧೇಯತೆಯಲ್ಲಿ ದೇವರಿಗೆ ಸಮಾನರಾಗಿಸುವುದು
    2. ಮಾನವರನ್ನು ದೇವರ ಸಂತಾನ (ಮಗ/ಮಗಳು) ಅಥವಾ ಹೆಂಡತಿ ಅಥವಾ ಅವನ ವಂಶಸ್ಥರು ಎಂದು ಕರೆಯುವ ಮೂಲಕ ಅಥವಾ ಅವರು ದೇವರಿಗೆ ಹೋಲುವ ಗುಣಗಳನ್ನು ಹೊಂದಿದ್ದಾರೆಂದು ಹೇಳುವ ಮೂಲಕ ಅವರನ್ನು ದೇವರನ್ನಾಗಿ ಮಾಡುವುದು
    3. ದೇವರನ್ನೇ ನಿರಾಕರಿಸುವುದು

    ನಿಜ ದೇವರನ್ನು ಹೊರತುಪಡಿಸಿ ಯಾವುದನ್ನಾದರೂ/ಯಾರನ್ನಾದರೂ ಪೂಜಿಸುವುದು ಕೃತಘ್ನತೆಯ ಅತ್ಯುನ್ನತ ರೂಪವಾಗಿದೆ

    ನೀವು ಅನುಸರಿಸುವ ಧರ್ಮವನ್ನು ಲೆಕ್ಕಿಸದೆ, ನಿಮ್ಮ ಕರುಣಾಮಯಿ ದೇವರಿಂದ ನೀವು ಪಾಲಿಸಲ್ಪಡುತ್ತಿದ್ದೀರಿ. ಒಂದು ಉದಾಹರಣೆಯನ್ನು ತೆಗೆದುಕೊಳ್ಳೋಣ. ಮೂತ್ರ ವಿಸರ್ಜನೆಯ ನಂತರ ನೀವು ಯಾವಾಗಲಾದರೂ ದೇವರಿಗೆ ಧನ್ಯವಾದ ಹೇಳಿದ್ದೀರಾ? ನೀವು ಆಶ್ಚರ್ಯಪಡಬಹುದು, ಮೂತ್ರ ವಿಸರ್ಜನೆಗಾಗಿ ನಾನು ದೇವರಿಗೆ ಏಕೆ ಧನ್ಯವಾದ ಹೇಳಬೇಕು? ಹೌದು, ಒಬ್ಬ ಡಯಾಲಿಸಿಸ್ ರೋಗಿಯನ್ನು ಕೇಳಿ ಮತ್ತು ನಮ್ಮ ಮಾತು ನಿಮಗೆ ಅರ್ಥವಾಗುವುದು. ನಮ್ಮ ಜೀವನದಲ್ಲಿ, ನಾವು ದೇವರಿಂದ ಅಸಂಖ್ಯಾತ ವರಗಳನ್ನು ಮತ್ತು ಅನುಗ್ರಹಗಳನ್ನು ಆನಂದಿಸುತ್ತೇವೆ. ನಿಮ್ಮಂತಹ ಸಹ-ಮಾನವರಿಂದ ಸೃಷ್ಟಿಸಲ್ಪಟ್ಟ ವಸ್ತುಗಳನ್ನು ನೀವು ಆರಾಧಿಸುವಾಗ ನಿಮ್ಮ ಸೃಷ್ಟಿಕರ್ತನಿಗೆ ನೀವು ಎಷ್ಟು ಕೃತಘ್ನರಾಗಿರುತ್ತೀರಿ (ತಿರಸ್ಕಾರ, ಅಗೌರವ ತೋರಿಸುತ್ತಿದ್ದೀರಿ) ಎಂದು ಊಹಿಸಿ. ತರ್ಕಬದ್ಧ ಮನಸ್ಸಿಲ್ಲದ ನಾಯಿ ಕೂಡ ತನ್ನ ಯಜಮಾನನನ್ನು ಗುರುತಿಸುತ್ತದೆ ಮತ್ತು ಅವನಿಗೆ ಕೃತಜ್ಞವಾಗಿರುತ್ತದೆ. ಹಾಗಿರುವಾಗ ಮನುಷ್ಯರಾದ ನಮ್ಮ ಕಥೆ ಏನು? ನೀವು ಕೇಳಬಹುದು, ದೇವರು ಹಾಗಿದ್ದರೆ ಕೃತಜ್ಞತೆಯ ದಾರಿಯನ್ನು ನಮಗೆ ತಿಳಿಸಿದ್ದಾನೆಯೇ? ಬನ್ನಿ ತಿಳಿಯೋಣ.

    ಇಸ್ಲಾಂ ಎಂದರೇನು?

    ಇಸ್ಲಾಂ ಪ್ರವಾದಿ ಮುಹಮ್ಮದ್ ಸ್ಥಾಪಿಸಿದ ಹೊಸ ಧರ್ಮವಲ್ಲ. ಇಸ್ಲಾಂ ಎಂಬುದು ಅರಬಿಕ್ ಪದವಾಗಿದ್ದು ಇದರರ್ಥ ದೇವರಿಗೆ ವಿಧೇಯತೆ (ಶರಣಾಗತಿ). ದೇವರ ಎಲ್ಲಾ ಪ್ರವಾದಿಗಳು ಒಂದೇ ರೀತಿಯ ಜೀವನ – ದೇವರಿಗೆ ಕೃತಜ್ಞತೆ ಹಾಗೂ ವಿಧೇಯತೆಯ ದಾರಿ – ಕಲಿಸಿದರು, ಅದನ್ನು ನಾವು ಅರಬಿಕ್ ಭಾಷೆಯಲ್ಲಿ ಇಸ್ಲಾಂ ಎಂದು ಕರೆಯುತ್ತೇವೆ.

    ಮುಸ್ಲಿಂ ಎಂದರೆ ಯಾರು?

    ಯಾರಾದರೂ, ನಮ್ಮೆಲ್ಲರನ್ನೂ ಸೃಷ್ಟಿಸಿದ ಏಕೈಕ ನಿಜ ದೇವರನ್ನು ಪಾಲಿಸುವ ಮತ್ತು ಅವನನ್ನು ಮಾತ್ರ ಪೂಜಿಸುವವರನ್ನು ಅರಬಿಕ್ ಭಾಷೆಯಲ್ಲಿ ಮುಸ್ಲಿಂ ಎಂದು ಕರೆಯುತ್ತೇವೆ. ನೀವು ದೇವರನ್ನು ಪಾಲಿಸಿದರೆ ಮತ್ತು ಆತನನ್ನು ಮಾತ್ರ ಪೂಜಿಸಿದರೆ, ಅರಬಿಕ್ ಭಾಷೆಯಲ್ಲಿ ನಿಮ್ಮನ್ನು ಮುಸ್ಲಿಂ ಎಂದು ಕರೆಯಲಾಗುತ್ತದೆ.

    ಅಲ್ಲಾಹ್ ಯಾರು?

    ಅಲ್ಲಾಹ್ ಮುಸ್ಲಿಮರ ವೈಯಕ್ತಿಕ ದೇವರಲ್ಲ. ಅರಬಿಕ್ ಭಾಷೆಯಲ್ಲಿ ಅಲ್ಲಾಹ್ ಎಂದರೆ “ದೇವರು”. ಉದಾಹರಣೆಗೆ: ವಾಟರ್ ಇಂಗ್ಲೀಷಿನಲ್ಲಿ, ಪಾನಿ ಹಿಂದಿಯಲ್ಲಿ, ನೀರು ಕನ್ನಡದಲ್ಲಿ ಹಾಗೂ ಮೋಯ ಅರಬಿಕ್ ಭಾಷೆಯಲ್ಲಾಗಿದೆ. ಅದೇ ರೀತಿ ದೇವರು ಇಂಗ್ಲೀಷ್, ಈಶ್ವರ್ ಹಿಂದಿ, ದೇವರು ಕನ್ನಡ ಮತ್ತು ಅಲ್ಲಾಹ್ ಅರಬಿಕ್.

    ಕುರಾನ್ ಎಂದರೇನು?

    ಕುರಾನ್ ದೇವರ ಕೊನೆಯ ಸಂದೇಶವಾಹಕರಾದ ಪ್ರವಾದಿ ಮುಹಮ್ಮದ್ ಅವರಿಗೆ ಅವತೀರ್ಣಗೊಳಿಸಿದ ಅಂತಿಮ ನುಡಿ (ಮಾನವಕುಲಕ್ಕೆ ಸೂಚನಾ ಕೈಪಿಡಿ). ಕುರಾನ್ ಪ್ರವಾದಿ ಮುಹಮ್ಮದ್ ಅವರಿಂದ ರಚಿಸಲ್ಪಟ್ಟಿಲ್ಲ. ಇಡೀ ಕುರಾನ್ ದೇವರ ನುಡಿಯಾಗಿದ್ದು, ಕಳೆದ 14 ಶತಮಾನಗಳಿಂದ ಬದಲಾಗದೆ ಉಳಿದಿದೆ. ಶಾಂತಿ ಮತ್ತು ನೆಮ್ಮದಿಯ ಜೀವನ ನಡೆಸಲು ಕುರಾನ್ ಅಮೂಲ್ಯವಾದ ಉಪದೇಶ ಮತ್ತು ಸಮಯಾತೀತ ಮಾರ್ಗದರ್ಶನವನ್ನು ಒಳಗೊಂಡಿದೆ.

    ಕುರಾನ್ ದೇವರಿಂದ ಬಂದದ್ದು ಎಂಬುದಕ್ಕೆ ಪುರಾವೆ

    ಕುರಾನ್ ತನ್ನಲ್ಲಿ ಒಂದೇ ಒಂದು ದೋಷವನ್ನು ತೋರಿಸಲು ಎಲ್ಲರಿಗೂ ಸವಾಲು ಹಾಕುತ್ತದೆ. ಈ ಪುಸ್ತಕದ ಕರ್ತೃ (ದೇವರು) ಹೇಳುತ್ತಾರೆ:

    ಅವರು ಕುರಾನ್ ಅನ್ನು ಎಚ್ಚರಿಕೆಯಿಂದ ಪರಿಗಣಿಸುವುದಿಲ್ಲವೇ? ಅದು ದೇವರ ಹೊರತಾಗಿ ಇತರರಿಂದ ಬಂದಿದ್ದರೆ, ಅದು ಅನೇಕ ದೋಷಗಳು ಮತ್ತು ಅಸಾಮಂಜಸ್ಯಗಳನ್ನು ಒಳಗೊಂಡಿರುತ್ತಿತ್ತು

    ಕುರಾನ್ ಅಧ್ಯಾಯ 4 ಸೂಕ್ತಿ 82

    ಕುರಾನ್ ಭೂವಿಜ್ಞಾನ, ಭ್ರೂಣಶಾಸ್ತ್ರ, ಖಗೋಳಶಾಸ್ತ್ರ, ಸಮುದ್ರಶಾಸ್ತ್ರ, ಕಾನೂನು, ಮನೋವಿಜ್ಞಾನ, ಸಸ್ಯಶಾಸ್ತ್ರ, ಭೌತಶಾಸ್ತ್ರ, ಪ್ರಾಣಿಶಾಸ್ತ್ರ ಮುಂತಾದ ವಿವಿಧ ವಿಷಯಗಳ ಬಗ್ಗೆ ಮಾತನಾಡುತ್ತದೆ. ಆಶ್ಚರ್ಯಕರವಾಗಿ, ಕುರಾನ್ ವಿಜ್ಞಾನದಲ್ಲಿನ 21 ನೇ ಶತಮಾನದ ಹಲವಾರು ಸಂಶೋಧನೆಗಳ ಬಗ್ಗೆ, 1400 ವರ್ಷಗಳ ಹಿಂದೆ ನಿಖರವಾಗಿ ಮಾತನಾಡಿದೆ – ಇದು ಪ್ರವಾದಿ ಮುಹಮ್ಮದರಂತಹ ಒಬ್ಬ ಮನುಷ್ಯನಿಗೆ ತಾನಾಗಿಯೇ ತಿಳಿದಿರುವುದು ಅಸಾಧ್ಯವಾಗಿತ್ತು.


    ನಿಮಗೆ ಇಷ್ಟವಾಗ ಬಹುದಾದಂತಹ ಲೇಖನಗಳು

    WHAT OTHERS ARE READING

    Most Popular