More

    Choose Your Language

    ಜೇನುಗೂಡು ಹಾಗೂ ಕುರಾನಿನ ಅದ್ಭುತ

    ಜೇನುನೊಣಗಳು ಷಡ್ಭುಜಾಕೃತಿಯಲ್ಲಿ (hexagon) ಜೇನುಗೂಡುಗಳನ್ನು ನಿರ್ಮಿಸುತ್ತವೆ. ಷಡ್ಭುಜಾಕೃತಿಯೇ ಏಕೆ ಮತ್ತು ಬೇರೆ ಯಾವುದೇ ಆಕಾರವಲ್ಲ? ಜೇನುನೊಣಗಳಿಗೆ ತಮ್ಮ ಗೂಡುಗಳನ್ನು ನಿರ್ಮಿಸುವ ಬಗ್ಗೆ ದೇವರು ತಿಳಿಸಿಕೊಟ್ಟಿರುವನು ಎಂದು ಕುರಾನ್ ತಿಳಿಸುತ್ತದೆ. ಗಣಿತಜ್ಞರು 2000 ವರ್ಷಗಳಿಗೂ ಹೆಚ್ಚು ಕಾಲ ಈ ಪ್ರಶ್ನೆಯನ್ನು ಪರಿಹರಿಸಲು ಪ್ರಯತ್ನಿಸಿದ್ದಾರೆ ಹಾಗೂ ಕೇವಲ 1999 ರಲ್ಲಿ ಇದು ಸಾಬೀತಾಯಿತು. ಇದನ್ನು ಹನೀಕೋಂಬ್ ಕಂಜೆಕ್ಚರ್ ಎಂದು ಕರೆಯಲಾಗುತ್ತದೆ.

    ಜೇನುಗೂಡು ಹಾಗೂ ಕುರಾನಿನ ಅದ್ಭುತ

    ನಮ್ಮ ಸೃಷ್ಟಿಕರ್ತನನ್ನು ಗುರುತಿಸಲು ನಮಗೆ ಸಹಾಯ ಮಾಡುವ ಅದ್ಭುತ ಪವಾಡಗಳು ಮತ್ತು ಚಿಹ್ನೆಗಳಿಂದ ಪ್ರಕೃತಿ ತುಂಬಿದೆ. ಈ ಲೇಖನದಲ್ಲಿ, ನಾವು ಪ್ರಕೃತಿಯಿಂದ ಅಂತಹ ಒಂದು ಚಿಹ್ನೆಯನ್ನು ನೋಡಲಿದ್ದೇವೆ – ಜೇನುಗೂಡಿನ ಬಗೆಗಿನ ಕುರಾನಿನ ಅದ್ಭುತ .

    ಜೇನುನೊಣಗಳು ಷಡ್ಭುಜ ಆಕಾರವನ್ನೇ ಏಕೆ ಆರಿಸುತ್ತವೆ?

    ಜೇನುಗೂಡುಗಳನ್ನು ಹತ್ತಿರದಿಂದ ನೋಡಿ. ನೀವು ಸಮಾನ ಗಾತ್ರದ ಷಡ್ಭುಜಗಳನ್ನು ನೋಡುತ್ತೀರಿ. ಷಡ್ಭುಜಗಳೇ ಏಕೆಂದು ನೀವು ಎಂದಾದರೂ ಯೋಚಿಸಿದ್ದೀರಾ? ವೃತ್ತ ಅಥವಾ ಚೌಕ ಅಥವಾ ತ್ರಿಕೋನದಂತಹ ಯಾವುದೇ ಆಕಾರವನ್ನು ಏಕಲ್ಲ? ನೀವು ಯೋಚಿಸಬಹುದು, ಇದರಲ್ಲೇನಿದೆ ದೊಡ್ಡ ವಿಷಯ? ಜೇನುನೊಣಗಳಿಗೆ ಇದು ನಿಜವಾಗಿಯೂ ಒಂದು ದೊಡ್ಡ ವಿಷಯವಾಗಿದೆ. ಏಕೆ ಎಂದು ನೋಡೋಣ.

    ಮೇಣದ (wax) ಸಮಸ್ಯೆ

    ಜೇನುಗೂಡುಗಳನ್ನು ನಿರ್ಮಿಸಲು ಜೇನುನೊಣಗಳು ಮೇಣವನ್ನು ಬಳಸುತ್ತವೆ. ಜೇನುನೊಣಗಳು ತಮ್ಮ ಹೊಟ್ಟೆಯಲ್ಲಿ ಮೇಣದ ಗ್ರಂಥಿಗಳನ್ನು ಹೊಂದಿರುತ್ತವೆ. ಮೇಣದ ಗ್ರಂಥಿಗಳು ಜೇನುತುಪ್ಪವನ್ನು ಮೇಣವಾಗಿ ಪರಿವರ್ತಿಸುತ್ತವೆ – ಈ ಪ್ರಕ್ರಿಯೆಯಲ್ಲಿಯೇ ಸವಾಲೆದುರಾಗುವುದು.

    ಮೇಣದ ಉತ್ಪಾದನೆ – ಜೇನುನೊಣಗಳು

    ಜೇನುನೊಣಗಳಿಗೆ ಅರ್ಧ ಕಿಲೋಗ್ರಾಂ ಮೇಣವನ್ನು ತಯಾರಿಸಲು 2.5 ಕಿಲೋಗ್ರಾಂಗಳಿಂದ 4 ಕಿಲೋಗ್ರಾಂಗಳಷ್ಟು ಜೇನುತುಪ್ಪ ಬೇಕಾಗುತ್ತದೆ. ಜೇನುಗೂಡು ನಿರ್ಮಿಸಲು ಹೆಚ್ಚಿನ ಮೇಣವನ್ನು ಬಳಸಿದರೆ, ಹೆಚ್ಚು ಜೇನುತುಪ್ಪ ಉಪಯೋಗವಾಗಿ ಬಿಡುತ್ತದೆ. ಆದ್ದರಿಂದ, ಜೇನುಗೂಡುಗಳನ್ನು ನಿರ್ಮಿಸಲು ಅತ್ಯಂತ ಪರಿಣಾಮಕಾರಿ ಮಾರ್ಗವನ್ನು ಕಂಡುಹಿಡಿಯಲು ಜೇನುನೊಣಗಳು ಯೋಜನೆಯೊಂದನ್ನು ಒಂದುಗೂಡಿಸಬೇಕು .

    ಹಾಗಾದರೆ ಯಾವ ಆಕಾರವನ್ನು ಆರಿಸಬೇಕು?

    ಜೇನುನೊಣಗಳು ಇದೊಂದು ಕಷ್ಟಕರವಾದ ಪ್ರಶ್ನೆಯನ್ನು ಎದುರಿಸುತ್ತಿವೆ: ಯಾವ ಆಕಾರವು ಕಡಿಮೆ ಪ್ರಮಾಣದ ಮೇಣವನ್ನು ಬಳಸುವುದರೊಂದಿಗೆ ಗರಿಷ್ಠ ಜಾಗವನ್ನು ನೀಡ ಬಲ್ಲದು?

    ವೃತ್ತ

    ವೃತ್ತವನ್ನು ಆಯ್ಕೆ ಮಾಡಲು ಮನಸ್ಸಾಗಬಹುದು . ಆದರೆ, ನಾವು ವೃತ್ತದೊಂದಿಗೆ ಹೋದರೆ, ನಾವು ಬಳಸದೆ ಇರುವ ವೃತ್ತಗಳ ನಡುವಿನ ಸಣ್ಣ ಅಂತರದ ಜಾಗವು ವ್ಯರ್ಥವಾಗುತ್ತದೆ. ಆದ್ದರಿಂದ ವೃತ್ತವು ಅತ್ಯಂತ ಪರಿಣಾಮಕಾರಿ ಆಕಾರವಲ್ಲ.

    Circle - Honeycomb - Curious Hats
    ವೃತ್ತಾಕಾರ ಮತ್ತು ಜೇನುಗೂಡು

    ತ್ರಿಕೋನ ಅಥವಾ ಚೌಕಗಳು

    ನಾವು ತ್ರಿಕೋನಗಳು ಅಥವಾ ಚೌಕಗಳಂತಹ ಆಕಾರಗಳನ್ನು ಬಳಸಿದಾಗ, ಯಾವುದೇ ಅಂತರವಿರುವುದಿಲ್ಲ. ಅದ್ಭುತ! ನಾವು ಅಂತರಗಳ ಸಮಸ್ಯೆಯನ್ನು ಪರಿಹರಿಸಿದ್ದೇವೆ. ಆದರೆ, ಇವು ಕನಿಷ್ಟ ಪ್ರಮಾಣದ ಮೇಣವನ್ನು ಬಳಸುತ್ತಾ, ಗರಿಷ್ಠ ಸ್ಥಳವನ್ನು ನೀಡುವುದೇ?

    Triangles and Squares - Honeycomb - Curious Hats
    ತ್ರಿಕೋನ ಅಥವಾ ಚೌಕಗಳು – ಜೇನುಗೂಡು

    ಈ ಪ್ರಶ್ನೆ ನಮಗೆ ಸರಳವಾದ ಪ್ರಶ್ನೆಯಂತೆ ತೋರುತ್ತದೆ ಆದರೆ ಇದು 2000 ವರ್ಷಗಳಿಗೂ ಹೆಚ್ಚು ಕಾಲ ಗಣಿತಶಾಸ್ತ್ರಜ್ಞರನ್ನು ತೊಂದರೆಗೀಡು ಮಾಡಿದೆ. ನಂಬಲು ಕಷ್ಟವಾಗುತ್ತಿದೆಯೇ? ಹನಿಕೊಂಬ್ ಕಂಜೆಕ್ಚರ್ (Honeycomb Conjecture) ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.

    ಹನಿಕೊಂಬ್ ಕಂಜೆಕ್ಚರ್

    “ಏಕೆ ಷಡ್ಭುಜಗಳು” ಎಂಬ ಪ್ರಶ್ನೆಯನ್ನು ಕ್ರಿಸ್ತ ಪೂರ್ವ 36 ನೇ ಶತಮಾನದಷ್ಟು ಹಿಂದೆಯೇ ಚರ್ಚಿಸಲಾಗಿದೆ. ಅಲೆಕ್ಸಾಂಡ್ರಿಯಾದ ಪಾಪ್ಪಸ್‌ನಂತಹ ಹಲವಾರು ಗಣಿತಜ್ಞರು ಇದನ್ನು ಪರಿಹರಿಸಲು ಪ್ರಯತ್ನಿಸಿದರು. ಈ ಸಮಸ್ಯೆಯನ್ನು ಪ್ರಸಿದ್ಧವಾಗಿ “ಹನಿಕೊಂಬ್ ಕಂಜೆಕ್ಚರ್” ಎಂದು ಕರೆಯಲಾಯಿತು.

    ಕೇವಲ 1999 ರಲ್ಲಿ, ಥಾಮಸ್ ಹೇಲ್ಸ್ ಎಂಬ ಅಮೇರಿಕನ್ ಗಣಿತಜ್ಞ, ಹನಿಕೊಂಬ್ ಕಂಜೆಕ್ಚರನ್ನು ಸಾಬೀತುಪಡಿಸಿದರು. ಕೆಳಗಿನ ವೀಡಿಯೊದಲ್ಲಿ, ಥಾಮಸ್ ಹೇಲ್ಸ್ ಸ್ವತಃ ಅರ್ಥಮಾಡಿಕೊಳ್ಳಲು ಸುಲಭವಾದ ಭಾಷೆಯಲ್ಲಿ ಷಡ್ಭುಜಾಕೃತಿಯು ಹೇಗೆ ಅತ್ಯುತ್ತಮವಾದ ಆಕಾರವಾಗಿದೆ ಎಂಬುದನ್ನು ವಿವರಿಸುತ್ತಿದ್ದಾರೆ, ಇದರಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಮೇಣದ ಅಗತ್ಯವಿರುತ್ತದೆ ಹಾಗೂ ಗರಿಷ್ಠ ಸ್ಥಳವನ್ನು ನೀಡುತ್ತದೆ. ತ್ರಿಕೋನ ಮತ್ತು ಚೌಕ ಎರಡಕ್ಕಿಂತಲೂ ಹೆಚ್ಚು ಮೇಲ್ಮೈ ವಿಸ್ತೀರ್ಣವನ್ನು ಷಡ್ಭುಜಾಕೃತಿಯು ಹೇಗೆ ನೀಡುತ್ತದೆ ಎಂಬುದನ್ನು ಹೇಲ್ಸ್ ತೋರಿಸಿದ್ದಾರೆ.

    ಥಾಮಸ್ ಹೇಲ್ಸ್ ಹನಿಕೊಂಬ್ ಕಂಜೆಕ್ಚರನ್ನು ವಿವರಿಸುತ್ತಿದ್ದಾರೆ

    ಹೇಲ್ಸ್ ಒದಗಿಸಿದ ಗಣಿತದ ಪುರಾವೆಯಿಂದ ಕೆಲವು ಪುಟಗಳು

    • HoneyComb Conjecture Proof -1 Curious Hats
    • HoneyComb Conjecture Proof -2 Curious Hats
    • HoneyComb Conjecture Proof -3 Curious Hats
    • HoneyComb Conjecture Proof -4 Curious Hats

    ಭಲೇ ಜೇನುನೊಣ – ಗಣಿತದ ಮೇಧಾವಿ!

    ಜೇನುನೊಣಗಳಿಗೆ ಷಡ್ಭುಜಾಕೃತಿಯು ಅತ್ಯುತ್ತಮ ಆಕಾರ ಎಂದು ತಿಳಿದಿರುವುದಷ್ಟೇ ಅಲ್ಲದೆ, ಷಡ್ಭುಜಗಳನ್ನು ಅಪ್ಪಟ ನಿಖರತೆಯೊಂದಿಗೆ ನಿರ್ಮಿಸಿವೆ. ಮೇಣದ ವಿಭಾಗಗಳು ದಪ್ಪದಲ್ಲಿ 0.1mm ಗಿಂತ ಕಡಿಮೆಯಿರುತ್ತವೆ, ಇದು 0.002mmರಷ್ಟು ನಿಖರವಾಗಿವೆ. ಷಡ್ಭುಜಾಕೃತಿಯಲ್ಲಿನ ಎಲ್ಲಾ ಆರು ಗೋಡೆಗಳ ಅಗಲ ಒಂದೇ ಆಗಿರುತ್ತದೆ ಮತ್ತು ಗೋಡೆಗಳ ಕೋನಗಳನ್ನು ನಿಖರವಾಗಿ 120 ಡಿಗ್ರಿಗಳಲ್ಲಿ ಹೊಂದಿಸಲಾಗಿವೆ. ನೆನಪಿಡಿ, ಜೇನುಗೂಡು ನಿರ್ಮಿಸುವುದು ಒಟ್ಟಾಗಿ ಮಾಡುವ ಪ್ರಯತ್ನವಾಗಿದೆ ಮತ್ತು ಎಲ್ಲಾ ಜೇನುನೊಣಗಳು ಒಂದೇ ರೀತಿಯ ಷಡ್ಭುಜಗಳನ್ನು ಏಕಕಾಲದಲ್ಲಿ ನಿರ್ಮಿಸುತ್ತವೆ.

    ಇಲ್ಲ, ಇದನ್ನು ಸರಿಯಾಗಿ ರಚಿಸಲು ಅವು ಪೂರ್ವಾಭ್ಯಾಸ ಮಾಡಿರುವುದಿಲ್ಲ. ಅವು ಇದನ್ನು ಮಾಡುತ್ತವೆ ಮತ್ತು ಸಾವಿರಾರು ವರ್ಷಗಳಿಂದ ಅದನ್ನು ಮಾಡುತ್ತಾ ಬಂದಿವೆ. ದಿಗ್ಭ್ರಮೆಗೊಳಿಸುವಂತಹ ವಿಷಯ ಅಲ್ಲವೇ?

    ಜೇನುನೊಣಕ್ಕೆ ಇದನ್ನು ಕಲಿಸಿದವರು ಯಾರು?

    ವಿಕಸನ (evolution)

    ಇದೆಲ್ಲವೂ “ವಿಕಸನ”ದ ಕಾರಣ ಎಂದು ಕೆಲವರು ಹೇಳಬಹುದು. ಅವರು ಹೆಮ್ಮೆಯಿಂದ ಸೇರಿಸಬಹುದು, ಜೇನುನೊಣಗಳು ಲಕ್ಷಾಂತರ ವರ್ಷಗಳಿಂದ ಸಾಕಷ್ಟು ‘ಪ್ರಯತ್ನ -ದೋಷ -ಮರುಪ್ರಯತ್ನ’ಗಳನ್ನು ಮಾಡಿ ಅಂತಿಮವಾಗಿ ಷಡ್ಭುಜಾಕೃತಿಯು ಅತ್ಯುತ್ತಮ ಆಕಾರವೆಂದು ಕಂಡುಕೊಂಡವು .

    ಈ ಬಗೆಯ ಒಂದು ಹೇಳಿಕೆಗೆ ಪುರಾವೆಗಳನ್ನು ಕೇಳಬಹುದಾದರೂ, ನಾವು ಅವರ ಮೇಲೆ ಹಾವಿಯಾಗದೆ, ಅದನ್ನು ಪಕ್ಕಕ್ಕೆ ಇರಿಸಿ, ಈ ಬಗ್ಗೆ ತರ್ಕಬದ್ಧವಾಗಿ ಯೋಚಿಸೋಣ.

    ಜೇನುನೊಣದ ಮೆದುಳಿನ ಗಾತ್ರ

    ಜೇನುನೊಣಗಳ ಮೆದುಳು 2 ಘನ ಎಂಎಂ (2 cubic mm) ಗಿಂತ ಕಡಿಮೆಯಿರುತ್ತದೆ. ಇದು ಮಾನವ ಮೆದುಳಿನ ಕೇವಲ 0.0002% ಆಗಿದೆ. ನೆನಪಿಡಿ, ಅತ್ಯಾಧುನಿಕವಾದ ಮಾನವನ ಮೆದುಳಿಗೆ, ಈ ಹನಿಕೊಂಬ್ ಕಂಜೆಕ್ಚರನ್ನು ಪರಿಹರಿಸಲು 2000 ವರ್ಷಗಳಿಗಿಂತ ಹೆಚ್ಚು ಸಮಯ ಬೇಕಾಯಿತು. ಮಾನವನ ಬುದ್ಧಿಶಕ್ತಿಯ ಗಣನೀಯವಾಗಿ ಅತ್ಯಲ್ಪ ಭಾಗವನ್ನು ಹೊಂದಿರುವ ಜೀವಿಯು ಕೇವಲ ಪ್ರಯತ್ನಗಳ ಮೂಲಕ ಆಕಾರಗಳ ಜ್ಯಾಮಿತಿಯ (geometry) ಸೂಕ್ಷ್ಮ ವಿವರಗಳನ್ನು ಅರ್ಥಮಾಡಿಕೊಂಡಿದೆ ಎಂದು ನಂಬುವುದು ತರ್ಕಬದ್ಧವಾಗಿದೆಯೇ? ಸರಿಯಾಗಿ ಯೋಚಿಸಬಲ್ಲವರು ಇಲ್ಲ ಎಂದು ಹೇಳುವರು.

    ಸೃಷ್ಟಿಕರ್ತನು ಜೇನುನೊಣಕ್ಕೆ ಕಲಿಸಿದನು

    ದೇವರು ಅತ್ಯಂತ ಉನ್ನತ ಶ್ರೇಣಿಯ ಗಣಿತಜ್ಞ. ಅವನು ವಿಶ್ವವನ್ನು ನಿರ್ಮಿಸಲು ಅತ್ಯುನ್ನತ ಗಣಿತವನ್ನು ಬಳಸಿರುವನು.

    ಪಾಲ್ ಡಿರಾಕ್, 1933 ರಲ್ಲಿ ಭೌತಶಾಸ್ತ್ರಕ್ಕಾಗಿ ನೊಬೆಲ್ ಪ್ರಶಸ್ತಿ ವಿಜೇತ

    ವಿಶ್ವವನ್ನು ನಿರ್ಮಿಸುವಲ್ಲಿ ಅತ್ಯುನ್ನತ ಸುಧಾರಿತ ಗಣಿತವನ್ನು ಬಳಸಿದ ಸೃಷ್ಟಿಕರ್ತನು ಜೇನುನೊಣ ಸೇರಿದಂತೆ ಎಲ್ಲಾ ಜೀವಿಗಳಿಗೆ ಅವುಗಳ ಉಳಿವಿಗೆ ಅಗತ್ಯವಾದ ವಿಷಯಗಳನ್ನು ಕಲಿಸಿದವನು.

    ಕುರಾನ್ ಪವಾಡ ಮತ್ತು ಹನಿಕೊಂಬ್ ಕಂಜೆಕ್ಚರ್

    ದೇವರು ಕುರಾನ್‌ನಲ್ಲಿ ಹೇಳುತ್ತಾನೆ:

    ಮತ್ತು ನಿಮ್ಮ ದೇವರು ಜೇನುನೊಣಕ್ಕೆ ಬಹಿರಂಗಪಡಿಸಿದನು: “ಪರ್ವತಗಳಲ್ಲಿ ಮತ್ತು ಮರಗಳಲ್ಲಿ ಮತ್ತು ಜನರು ನಿರ್ಮಿಸುವಂತಹದರಲ್ಲಿ, ನೀವೇ ಮನೆಗಳನ್ನು ನಿರ್ಮಿಸಿಕೊಳ್ಳಿ.

    ಅಧ್ಯಾಯ 16: ಸೂಕ್ತಿ 68

    ಜೇನುನೊಣಗಳಿಗೆ ತಮ್ಮ ಮನೆಗಳನ್ನು ನಿರ್ಮಿಸುವ ಬಗ್ಗೆ ತಿಳಿಸಿದವನು ಸರ್ವಶಕ್ತ ದೇವರು ಎಂದು ಈ ಸೂಕ್ತಿ ಸ್ಪಷ್ಟವಾಗಿ ತಿಳಿಸುತ್ತದೆ. ಕುರಾನ್ ಇರುವೆಗಳು, ಸೊಳ್ಳೆಗಳು, ನೊಣಗಳು, ಜೇಡಗಳಂತಹ ಹಲವಾರು ಇತರ ಜೀವಿಗಳ ಬಗ್ಗೆ ಹೇಳುತ್ತದೆ ಆದರೆ ಜೇನುನೊಣದ ಬಗ್ಗೆ ಮಾತನಾಡುವಾಗ ಮಾತ್ರ, ಮನೆಗಳನ್ನು ನಿರ್ಮಿಸಲು ದೇವರಿಂದ ಬಹಿರಂಗಪಡಿಸಿದ ಬಗ್ಗೆ ತಿಳಿಸುತ್ತದೆ. ಹಾಗಾಗಿ ಇದು ಕೇವಲ ಕಾಕತಾಳೀಯವಾಗಿರಲು ಸಾಧ್ಯವಿಲ್ಲ.

    ಜೇನುನೊಣಗಳು ಪರ್ವತಗಳಲ್ಲಿ ಗೂಡುಗಳನ್ನು ನಿರ್ಮಿಸುತ್ತವೆಯೇ?

    ಕುರಾನ್‌ನ ಮೇಲಿನ ಸೂಕ್ತಿಯು ದೇವರು ಜೇನುನೊಣಕ್ಕೆ ಪರ್ವತಗಳಲ್ಲಿ ಮನೆಗಳನ್ನು ನಿರ್ಮಿಸಲು ತಿಳಿಸಿದನೆಂದು ಉಲ್ಲೇಖಿಸುತ್ತದೆ. ಕೀಟಶಾಸ್ತ್ರಜ್ಞರು (entomologist) ಪರ್ವತಗಳಲ್ಲಿ ಮನೆಗಳನ್ನು ನಿರ್ಮಿಸುವ “ಆಂಥೋಫೊರಾ ಪ್ಯೂಬ್ಲೊ” ಎಂಬ ಜಾತಿಯ ಜೇನುನೊಣವನ್ನು ಕಂಡು ಹಿಡಿದಿದ್ದಾರೆ.

    ಜೇನುನೊಣಗಳು ಮತ್ತು ಪರ್ವತಗಳು

    ಇತ್ತೀಚಿನ ದಿನಗಳಲ್ಲಿ ಕೀಟಶಾಸ್ತ್ರಜ್ಞರು ಕಂಡುಹಿಡಿದದ್ದನ್ನು ಕುರಾನ್ ಹೇಗೆ ಉಲ್ಲೇಖಿಸುತ್ತದೆ ಎಂಬುದು ಆಶ್ಚರ್ಯಕರವಾಗಿದೆ.

    ಕುರಾನ್ ದೇವರ ನುಡಿಯಾಗಿರಬೇಕು

    ಅರೇಬಿಯಾದ ಮರುಭೂಮಿಯಲ್ಲಿ ವಾಸಿಸುತ್ತಿದ್ದ ಅನಕ್ಷರಸ್ಥ ಪ್ರವಾದಿ ಮುಹಮ್ಮದ್ ಅವರಿಗೆ 1400 ವರ್ಷಗಳ ಹಿಂದೆ ಕುರಾನ್ ಅವತೀರ್ಣವಾಯಿತು. 1400 ವರ್ಷಗಳ ಹಿಂದೆ ಅವರಿಗೆ ಇದನ್ನು ಯಾರು ಕಲಿಸಿರಬಹುದು?

    ಯಾರಾದರೂ ಈ ಪ್ರಶ್ನೆಯನ್ನು ಮುಕ್ತ ಮನಸ್ಸಿನಿಂದ ಪರಿಶೀಲಿಸಿದರೆ, ಅವರು ಈ ಜ್ಞಾನವನ್ನು ಪ್ರವಾದಿ ಮುಹಮ್ಮದ್ ಅವರಿಗೆ ಅವ್ಯತೀರ್ಣಗೊಳಿಸಿದವರು ಸೃಷ್ಟಿಕರ್ತ ಸರ್ವಶಕ್ತ ದೇವರೇ ಅಗಿರಬೇಕು ಎಂಬ ತೀರ್ಮಾನಕ್ಕೆ ಬರುತ್ತಾರೆ.

    ಆಳವಾಗಿ ಯೋಚಿಸುವವರಿಗೆ ಖಂಡಿತವಾಗಿಯೂ ಇದರಲ್ಲಿ ಒಂದು ಚಿಹ್ನೆ ಇದೆ.

    ಕುರಾನ್ ಅಧ್ಯಾಯ 16: ಸೂಕ್ತಿ 69

    ಸಾರಾಂಶ

    1. ಜೇನುನೊಣಗಳು ಷಡ್ಭುಜಾಕೃತಿಯಲ್ಲಿ ಜೇನುಗೂಡುಗಳನ್ನು ನಿರ್ಮಿಸುತ್ತವೆ.
    2. 1999 ರಲ್ಲಿ, ಗಣಿತಜ್ಞರೊಬ್ಬರು ಷಡ್ಭುಜಾಕೃತಿಯು ಕನಿಷ್ಟ ಪ್ರಮಾಣದ ಮೇಣವನ್ನು ಬಳಸಿ ಗರಿಷ್ಠ ಜಾಗವನ್ನು ನೀಡುತ್ತದೆ ಎಂದು ಸಾಬೀತುಪಡಿಸಿದರು.
    3. ಜೇನುನೊಣಗಳಿಗೆ ಅದರ ಮನೆಗಳನ್ನು ನಿರ್ಮಿಸುವ ಬಗ್ಗೆ ದೇವರು ಬಹಿರಂಗಪಡಿಸಿದ್ದಾನೆ ಎಂದು ಕುರಾನ್ ಸ್ಪಷ್ಟವಾಗಿ ಉಲ್ಲೇಖಿಸುತ್ತದೆ.
    4. ಕುರಾನ್ ಇರುವೆಗಳು, ಸೊಳ್ಳೆಗಳು, ನೊಣಗಳು ಮತ್ತು ಜೇಡಗಳ ಬಗ್ಗೆ ಹೇಳುತ್ತದೆ. ಆದರೆ ಜೇನುನೊಣಗಳ ಬಗ್ಗೆ ಮಾತನಾಡುವಾಗ ಮಾತ್ರ ಮನೆಗಳ ನಿರ್ಮಾಣವನ್ನು ಉಲ್ಲೇಖಿಸುತ್ತದೆ.
    5. ಪರ್ವತಗಳಲ್ಲಿ ಮನೆಗಳನ್ನು ನಿರ್ಮಿಸಲು ದೇವರು ಜೇನುನೊಣಕ್ಕೆ ಬಹಿರಂಗಪಡಿಸಿದನೆಂದು ಕುರಾನ್ ಉಲ್ಲೇಖಿಸುತ್ತದೆ. ಕೀಟಶಾಸ್ತ್ರಜ್ಞರು ಇದನ್ನು ಕೇವಲ ಇತ್ತೀಚಿನ ದಿನಗಳಲ್ಲೇ ಕಂಡುಹಿಡಿಯಲಾಗಿದೆ.
    6. ಕುರಾನ್ ದೇವರ ನುಡಿಯೇ ಆಗಿರಬೇಕು ಏಕೆಂದರೆ 1400 ವರ್ಷಗಳ ಹಿಂದೆ ಬದುಕಿದ್ದ ಪ್ರವಾದಿ ಮುಹಮ್ಮದ್ ಈ ಮಾಹಿತಿಯನ್ನು ಸ್ವತಃ ತಿಳಿದುಕೊಳ್ಳಲು ಸಾಧ್ಯವಿಲ್ಲ.

    ಜೇನುನೊಣಗಳ ಬಗ್ಗೆ ಕುರಾನ್ ಏನೆಲ್ಲಾ ಉಲ್ಲೇಖಿಸುತ್ತದೆ ಎಂಬುದನ್ನು ನಾವು ಸಂಪೂರ್ಣವಾಗಿ ಇಲ್ಲಿ ತಿಳಿಸಿಲ್ಲ. ಮುಂಬರುವ ದಿನಗಳಲ್ಲಿ ಒಂದು ಪ್ರತ್ಯೇಕ ಲೇಖನದಲ್ಲಿ ಅದರ ಬಗ್ಗೆ ಇನ್ನಷ್ಟು ಬರಲಿದೆ. ಮರೆಯದೇ ವೀಕ್ಷಿಸುತ್ತಿರಿ!


    ನಿಮಗೆ ಇಷ್ಟವಾಗ ಬಹುದಾದಂತಹ ಲೇಖನಗಳು

    WHAT OTHERS ARE READING

    Most Popular