More

    Choose Your Language

    ಎಂದಾದರೂ ಭಾರತ ಮುಸ್ಲಿಂ ದೇಶವಾಗಬಹುದೆ?

    2011 ರಲ್ಲಿ ನಡೆಸಿದ ಸರ್ಕಾರಿ ಜನಸಂಖ್ಯಾ ಗಣತಿಯ ಪ್ರಕಾರ, ಮುಸ್ಲಿಂ ಜನಸಂಖ್ಯೆಯ ಬೆಳವಣಿಗೆಯು 2011 ರಲ್ಲಿ 20-ವರ್ಷದ ಕನಿಷ್ಠವನ್ನು ದಾಖಲಿಸಿದೆ, 1991 ರಲ್ಲಿ 32.8% ರಿಂದ 24.6% ಕ್ಕೆ ಇಳಿದಿದೆ. ಮುಸ್ಲಿಂ ಮಹಿಳೆಯರ ಒಟ್ಟು ಫಲವತ್ತತೆ ದರವು 2.62 ರಿಂದ 2.36 ಕ್ಕೆ ಗಮನಾರ್ಹವಾಗಿ ಕಡಿಮೆಯಾಗಿದೆ.

    ಮುಸ್ಲಿಮರ ಜನನ ಪ್ರಮಾಣದಿಂದ ಎಂದಾದರೂ ಭಾರತ ಮುಸ್ಲಿಂ ದೇಶವಾಗಬಹುದೆ?

    ಮುಸ್ಲಿಮರು ಜನನ ನಿಯಂತ್ರಣ ಅಳವಡಿಸದೆ, ತಮ್ಮ ಜನಸಂಖ್ಯೆ ಹೆಚ್ಚಿಸುತ್ತಾ ಇದ್ದು – ಒಂದು ದಿನ ಭಾರತ ಮುಸ್ಲಿಂ ದೇಶವಾಗಿ ಮಾರ್ಪಡುವುದು ಎಂದು ಹಲವರು ಭಾವಿಸಿದ್ದಾರೆ. ಆದರೆ ಇದರಲ್ಲಿನ ಸತ್ಯವೆಷ್ಟು?

    1. 2011ರ ಸರ್ಕಾರದ ಜನಗಣತಿಯಂತೆ, ಮುಸ್ಲಿಂ ಜನಸಂಖ್ಯಾ ವೃದ್ಧಿ 20 ವರ್ಷಗಳಲ್ಲಿ ಅತಿ ಕಡಿಮೆಯಾಗಿದ್ದು, 1991ರಲ್ಲಿ 32.8%ರಿಂದ 2011ರಲ್ಲಿ 24.6%ಗೆ ಇಳಿದಿದೆ.
    2. ಭಾರತೀಯ ಮುಸ್ಲಿಂ ಮಹಿಳೆಯರ ಫಲವತ್ತತೆ (ಮಕ್ಕಳನ್ನು ಹೆರುವ ಶಕ್ತಿ) 1991 ರಲ್ಲಿ 4.1ರಿಂದ 2011 ರಲ್ಲಿ 3.4ಕ್ಕೆ ಕುಸಿದಿದೆ.
    3. ದಶಮಾನವಾರು ಜನಸಂಖ್ಯೆ ಬೆಳವಣಿಗೆ ಪ್ರಮಾಣ ಹಿಂದೂ ಮತ್ತು ಮುಸ್ಲಿಮರಿಬ್ಬರಿಗೂ ಇಳಿದಿದೆ.
    199120012011
    ಹಿಂದೂ22.7%19.9%16.7%
    ಮುಸ್ಲಿಂ32.8%29.5%24.6%
    1951 ರಿಂದ 1961, ಮುಸ್ಲಿಂ ಜನಸಂಖ್ಯೆ ಭಾರತದ ಜನಸಂಖ್ಯಾ ಬೆಳವಣಿಗೆ ಪ್ರಮಾಣಕ್ಕಿಂತ 11%ರಷ್ಟು ಹೆಚ್ಚಿತ್ತು ಆದರೆ ಅದು 2001 ರಿಂದ 2011 ರಲ್ಲಿ, ಸುಮಾರು 7%ಗೆ ಇಳಿದಿದೆ.

    NFHS ಅಂಕಿ ಸಂಖ್ಯೆಗಳ ಪ್ರಕಾರ ಮುಸ್ಲಿಮರ ಫಲವತ್ತತೆಯ ಪ್ರಮಾಣದಲ್ಲಿ ಇಳಿಕೆ

    ಫಲವತ್ತತೆಯ ಪ್ರಮಾಣ – ಅಂದರೆ ಒಬ್ಬ ಮಹಿಳೆಯ ಜೀವನಮಾನದಲ್ಲಿ ಎಷ್ಟು ಮಕ್ಕಳನ್ನು ಆಕೆ ಹೆರುವಳು – ಇದು 2015-16 ರಲ್ಲಿ ನಡೆಸಿದ 4ನೇ ಮತ್ತು 2019-21 ರಲ್ಲಿನ 5ನೇ ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೇ (NFHS) ಪ್ರಕಾರ ಎಲ್ಲಾ ಸಮುದಾಯಗಳಿಗೂ ಇಳಿದಿದೆ. ಮುಸ್ಲಿಂ ಮಹಿಳೆಯರ ಫಲವತ್ತತೆಯ ಪ್ರಮಾಣ 2.62 ರಿಂದ 2.36ಕ್ಕೆ ಸೂಕ್ಷ್ಮವಾಗಿ ಇಳಿದಿದೆ.

    ಮುಸ್ಲಿಂ ಫಲವತ್ತತೆಯ ಪ್ರಮಾಣದಲ್ಲಿ ಇಳಿಕೆ ಗಮನೀಯ

    5ನೇ ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೇ (NFHS)

    2050 ರಲ್ಲಿ, ಮುಸ್ಲಿಮರು ಶೇಕಡ 18.4% ಮತ್ತು ಹಿಂದೂಗಳು 76.7%

    PEW ವರದಿಯ ಪ್ರಕಾರ, 2050ರಲ್ಲಿ ಭಾರತದ ಜನಸಂಖ್ಯೆಯಲ್ಲಿ ಮುಸ್ಲಿಮರು 18.4% ಮತ್ತು ಹಿಂದೂಗಳು 76.7%ರಷ್ಟು ಆಗಿರುವರೆಂದು ಅಂದಾಜಿಸಲಾಗಿದೆ.

    Source: PEW Research Center

    ಈ ಮೇಲಿನ ಅಂಕಿ ಅಂಶಗಳ ಪ್ರಕಾರ, ಮುಸ್ಲಿಮರ ಜನನ ಪ್ರಮಾಣ ಇಳಿಯುತ್ತಿದ್ದು, ಹಿಂದೂಗಳ ಸಂಖ್ಯೆಯನ್ನು ಬರುವ 300 ವರ್ಷಗಳಲ್ಲೂ ಮೀರುವ ಸಾಧ್ಯತೆಯಿಲ್ಲ. ಹೀಗಾಗಿ, ಮುಸ್ಲಿಮರು ತಮ್ಮ ಜನನ ಪ್ರಮಾಣದ ಮೇರೆಗೆ ಭಾರತವನ್ನು ಮುಸ್ಲಿಂ ದೇಶವನ್ನಾಗಿ ಮಾಡಲಿದ್ದಾರೆ ಎನ್ನುವುದು ಕೇವಲ ಕಟ್ಟುಕತೆ.


    ನಿಮಗೆ ಇಷ್ಟವಾಗ ಬಹುದಾದಂತಹ ಲೇಖನಗಳು

    WHAT OTHERS ARE READING

    Most Popular