ಕುರಾನ್ ಹಿಂದೂಗಳನ್ನು ಕಾಫಿರರು ಎಂದು ನಿಂದಿಸುತ್ತದೆ ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ. ಹಾಗಿದ್ದರೆ ಕಾಫಿರ್ ಪದದ ಅರ್ಥವೇನು? ಇದು ಅವಹೇಳನಕಾರಿಯೇ? ಸ್ವಲ್ಪ ವಿಶ್ಲೇಷಿಸೋಣ ಬನ್ನಿ .
“ಕಾಫಿರ್” ಎಂಬುದು “ಮುಸ್ಲಿಂ” ಪದದ ವಿರುದ್ಧಾರ್ಥಕ ಪದವಾಗಿದೆ.
ಸಾಮಾನ್ಯವಾಗಿ ಪದಗಳಿಗೆ, ಅರ್ಥದಲ್ಲಿ ವಿರುದ್ಧವಾಗಿರುವ ಇತರ ಪದಗಳಿರುತ್ತವೆ. ನಾವು ಅವುಗಳನ್ನು “ವಿರುದ್ಧ ಪದಗಳು” (‘ಆಂಟೋನಿಮ್ಸ್’) ಎಂದು ಕರೆಯುತ್ತೇವೆ. ಉದಾಹರಣೆ: ಒಳ್ಳೆಯದು ಮತ್ತು ಕೆಟ್ಟದ್ದು, ಬಲ ಮತ್ತು ಎಡ, ಶಿಷ್ಟ ಮತ್ತು ಅಸಭ್ಯ ಇತ್ಯಾದಿ. ಅದೇ ರೀತಿ, ಮುಸಲ್ಮಾನರ ವಿರುದ್ಧಾರ್ಥಕ ಪದ (ವಿರುದ್ಧ ಪದ) ಕಾಫಿರ್ ಆಗಿದೆ. “ಮುಸ್ಲಿಂ” ಮತ್ತು “ಕಾಫಿರ್” ಪದಗಳ ಅರ್ಥವನ್ನು ಈಗ ತಿಳಿಯೋಣ.
ಮುಸ್ಲಿಂ ಮತ್ತು ಕಾಫಿರ್ ಪದದ ಅರ್ಥಗಳು
“ಮುಸ್ಲಿಂ” ಎಂಬ ಪದವನ್ನು ಈ ಕೆಳಗಿನ ಅಂಶಗಳಲ್ಲಿ ಸಂಪೂರ್ಣವಾಗಿ ನಂಬುವ ವ್ಯಕ್ತಿಗೆ ಬಳಸಲಾಗುತ್ತದೆ:
- ದೇವರು ಒಬ್ಬನೇ
- ದೇವರಿಗೆ ಯಾವುದರ ಅಥವಾ ಯಾರ ಅಗತ್ಯವೂ ಇಲ್ಲ
- ದೇವರಿಗೆ ಹೆತ್ತವರಾಗಲಿ ಮಕ್ಕಳಾಗಲಿ ಇಲ್ಲ
- ದೇವರು ಹುಟ್ಟು, ಜನಾಂಗ ಅಥವಾ ಜಾತಿಯ ಆಧಾರದ ಮೇಲೆ ತಾರತಮ್ಯ ಮಾಡುವುದಿಲ್ಲ
- ದೇವರಿಗೆ ನಿದ್ರೆ, ಅನಾರೋಗ್ಯ, ಮರೆವು ಮುಂತಾದ ಯಾವುದೇ ದೌರ್ಬಲ್ಯಗಳಿಲ್ಲ
- ದೇವರಿಗೆ ಸಮಾನರು ಯಾರೂ ಇಲ್ಲ
- ಮರಣಾನಂತರದ ಜೀವನದಲ್ಲಿ ದೇವರು ಪ್ರತಿಯೊಬ್ಬ ಮನುಷ್ಯನನ್ನು ಜಗತ್ತಿನಲ್ಲಿ ಅವನ ಕ್ರಿಯೆಗಳ ಆಧಾರದ ಮೇಲೆ ಪ್ರಶ್ನಿಸಲಾಗಿ, ಒಳ್ಳೆಯವರು ಸ್ವರ್ಗಕ್ಕೆ ಮತ್ತು ದುಷ್ಟರು ನರಕಕ್ಕೆ ಹೋಗುತ್ತಾರೆ
- ಪ್ರವಾದಿಗಳು ಮನುಷ್ಯರಿಗೆ ಮಾದರಿಯಾಗಿ ಕಳುಹಿಸಲ್ಪಟ್ಟ ನೀತಿವಂತ ವ್ಯಕ್ತಿಗಳು.
- ಇಸ್ಲಾಮಿನ ಐದು ಸ್ತಂಭಗಳನ್ನು – ಮೇಲೆ ವಿವರಿಸಿದ ದೇವರೊಬ್ಬನನ್ನೇ ಆರಾಧಿಸುವ ಜೀವನ ಪ್ರಕ್ರಿಯೆಯಲ್ಲಿ ನಂಬಿಕೆಯ ಸಾಕ್ಷ್ಯ ವಹಿಸುವುದು, ದಿನದಲ್ಲಿ ಐದು ಬಾರಿ ಪ್ರಾರ್ಥನೆ, ಉಪವಾಸ, ಝಕಾತ್ ಮತ್ತು ಹಜ್ – ನಂಬಿ, ಅವುಗಳನ್ನು ಅನುಸರಿಸುವುದು.
ಈ ಮೇಲೆ ನೋಡಿದಂತೆ, “ಕಾಫಿರ್” ಪದ “ಮುಸ್ಲಿಂ” ಪದದ ವಿರುದ್ಧವಾಗಿದೆ. ಆದ್ದರಿಂದ ಸ್ವಾಭಾವಿಕವಾಗಿ, ಮೇಲಿನ ಒಂಬತ್ತು ಅಂಶಗಳನ್ನು ನಂಬದ ಯಾವುದೇ ವ್ಯಕ್ತಿಯನ್ನು “ಕಾಫಿರ್” ಎಂದು ಕರೆಯಲಾಗುತ್ತದೆ.
“ಕಾಫಿರ್” ಎಂಬುದು ಅವಹೇಳನಕಾರಿ ಪದವಲ್ಲ
ಪ್ರಪಂಚದ ಪ್ರತಿ ಧರ್ಮದಲ್ಲೂ ವಿರುದ್ಧ ಪದಗಳು ಬಳಸಲಾಗುತ್ತವೆ. ಹಿಂದೂ ಧರ್ಮವು “ಮೆಲೆಚಾಸ್” ಎಂಬ ಪದವನ್ನು ವಿದೇಶಿ ಅಥವಾ ವೈದಿಕ ಮೂಲವನ್ನು ಹೊಂದಿರದಿರುವ ಜನರನ್ನು ಅನ್ವಯಿಸಲು ಬಳಸುತ್ತದೆ. ಕ್ರೈಸ್ತ ಧರ್ಮ ಮತ್ತು ಜುದಾಯಿಸಂ, ಇಸ್ರೇಲೀಯರಲ್ಲದ ಜನರನ್ನು ಅನ್ವಯಿಸಲು “ಜೆಣಟೈಲ್ಸ್ (“ಅನ್ಯಜನರು”) ಎಂಬ ಪದವನ್ನು ಬಳಸುತ್ತದೆ.
ಹಿಂದಿಯಲ್ಲಿ, ನಾವು “ವಿದೇಶಿ” ಅನ್ನು ಉಲ್ಲೇಖಿಸಲು “ಫಿರಂಗಿ” ಪದವನ್ನು ಬಳಸುತ್ತೇವೆ. ಪ್ರತಿ ಪ್ರಮುಖ ನಗರವು “ವಿದೇಶಿಗಳ ನೋಂದಣಿ ಕಚೇರಿ” ಹೊಂದಿರುತ್ತದೆ. ಭಾರತದಲ್ಲಿ ಒಬ್ಬ ಅಮೇರಿಕನ್ ಅಥವಾ ಜರ್ಮನ್, “ವಿದೇಶಿ” ಎಂದು ಕರೆಯುವುದನ್ನು ಅವಮಾನವೆಂದು ಪರಿಗಣಿಸಬೇಕೇ? ನಿಸ್ಸಂಶಯವಾಗಿ, ಇಲ್ಲ! ಹಾಗೆಯೇ “ಕಾಫಿರ್” ಪದವೂ ಕೂಡ. ಇದು ಅವಮಾನ ಅಥವಾ ನಿಂದನೆ ಅಲ್ಲ ಆದರೆ ಮುಸ್ಲಿಂ ಪದಕ್ಕೆ ವಿರುದ್ಧವಾದ ಅರ್ಥವನ್ನು ತಿಳಿಸಲು ಬಳಸಲಾಗುತ್ತದೆ.
ಹಿಂದೂಗಳು ಸೇರಿದಂತೆ ಎಲ್ಲಾ ಮಾನವರು ಗೌರವಾರ್ಹ
ದೇವರು ಕುರಾನ್‌ನಲ್ಲಿ ಸ್ಪಷ್ಟವಾಗಿ ಹೇಳುತ್ತಾನೆ:
ನಾವು (ದೇವರು) ಆದಮನ ಮಕ್ಕಳನ್ನು ಗೌರವಿಸಿದ್ದೇವೆ.
ಅಧ್ಯಾಯ 17:70
ಇಸ್ಲಾಂ ಧರ್ಮ ಸಕಲ ಮಾನವಕುಲವನ್ನು ಆದಮನ ಮಕ್ಕಳು ಮತ್ತು ನಾವೆಲ್ಲರೂ ಒಂದೇ “ಮಾನವ ಕುಟುಂಬ” ಕ್ಕೆ ಸೇರಿದವರು ಎಂದು ತಿಳಿಸುತ್ತದೆ. ಸಕಲ ಮಾನವಕುಲ ದೇವರಿಂದ ಗೌರವಿಸಲ್ಪಟ್ಟಿದೆ. ಇದರಲ್ಲಿ ಮುಸ್ಲಿಮರು, ಕ್ರೈಸ್ತರು ಮತ್ತು ಹಿಂದೂಗಳೂ ಸೇರಿದಂತೆ ಎಲ್ಲರೂ ಇದ್ದಾರೆ. ಹೀಗಿರುವಾಗ ಹಿಂದೂಗಳನ್ನು ಅವಮಾನಿಸುವ ಪ್ರಶ್ನೆ ಎಲ್ಲಿದೆ?
“ಮುಸ್ಲಿಂ” ಕೂಡ ಕಾಫಿರ್ ಆಗಿರಬಹುದು
“ಮುಸ್ಲಿಂ” ಮತ್ತು “ಕಾಫಿರ್” ಎರಡೂ ಪದಗಳು ಜನರ ಕ್ರಿಯೆಗಳಿಗೆ ಸಂಬಂಧಿಸಿವೆ. ಆದ್ದರಿಂದ, ಆ ಕ್ರಿಯೆಗಳನ್ನು ಮಾಡುವ ವ್ಯಕ್ತಿಗೆ ಮಾತ್ರ ಅವುಗಳನ್ನು ಬಳಸಬಹುದು. ಆದ್ದರಿಂದ, ಒಬ್ಬ ವ್ಯಕ್ತಿಯು ದೇವರ ಆಜ್ಞೆಗಳನ್ನು ನಂಬುವ ಮತ್ತು ಪಾಲಿಸುವ ಮೂಲಕ ಮಾತ್ರ ಮುಸ್ಲಿಂ ಆಗುತ್ತಾನೆಯೇ ಹೊರತು ಅವನು ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಅಥವಾ ಸುಲ್ತಾನ್ ಅಥವಾ ಶೇಖ್‌ನಂತಹ ಹೆಸರನ್ನು ಹೊಂದಿರುವುದರಿಂದಲ್ಲ. ಒಬ್ಬ ವ್ಯಕ್ತಿಯು ಮುಸ್ಲಿಂ ಹೆಸರು ಹೊಂದಿರಬಹುದು ಆದರೆ ದೇವರ ಮೇಲಿನ ನಂಬಿಕೆಯಿಲ್ಲದ ಕಾರಣ ಕಾಫಿರ್ ಆಗಿರಬಹುದು.
ಪ್ರವಾದಿ ಮುಹಮ್ಮದ್ ಹೇಳಿದ್ದಾರೆ:
ಪ್ರಾರ್ಥನೆಯನ್ನು ತ್ಯಜಿಸುವವನು (ಉದ್ದೇಶಪೂರ್ವಕವಾಗಿ ಪ್ರಾರ್ಥನೆಯ ಬಾಧ್ಯತೆಯನ್ನು ತಿರಸ್ಕರಿಸುತ್ತಾನೆ ಮತ್ತು ನಂತರ ಪಶ್ಚಾತ್ತಾಪ ಪಡುವುದಿಲ್ಲ) ಕಾಫಿರ್.
ನೀವು ನೋಡು ಬಹುದಾದಂತೆ, ಸಮಾಜದಲ್ಲಿ “ಮುಸ್ಲಿಮರು” ಎಂದು ಪರಿಗಣಿಸಲ್ಪಟ್ಟವರನ್ನು ಉದ್ದೇಶಿಸಿ ಈ ನುಡಿ ಹೇಳಲಾಗಿದೆ. “ಕಾಫಿರ್” ಎಂಬ ಪದ ಹಿಂದೂಗಳಿಗೆ ಅಥವಾ ಮುಸ್ಲಿಮೇತರರಿಗೆ ಪ್ರತ್ಯೇಕವಾಗಿ ಬಳಸಲ್ಪಡುವುದಿಲ್ಲ ಮತ್ತು ಯಾರನ್ನೂ ಅವಮಾನಿಸಲು ಎಂದೂ ಬಳಸಲಾಗುವುದಿಲ್ಲ ಎಂದು ಇದು ಸ್ಪಷ್ಟಪಡಿಸಿರಬೇಕು.
ಹಿಂದೂಗಳನ್ನು “ಕಾಫಿರ್” ಎಂದು ಕರೆಯುವ ಬಗ್ಗೆ ಜಮಿಯತ್ ಉಲೇಮಾ ಇ ಹಿಂದ್ (ಒಂದು ಮುಸ್ಲಿಮ್ ಸಂಘಟನೆ) ಏನೆಂದು ಸ್ಪಷ್ಟೀಕರಿಸಿದ್ದಾರೆ ಎಂಬುದನ್ನು ನೀವು ನೋಡಬಹುದು.
ನಿಮಗೆ ಆಸಕ್ತಿ ಇರಬಹುದಾದಂತಹ ಇತರೆ ಲೇಖನಗಳು
ಎಂದಾದರೂ ಭಾರತೀಯ ಮುಸ್ಲಿಮರಿಂದ ಭಾರತದಲ್ಲಿನ ಹಿಂದೂಗಳಿಗೆ ಬೆದರಿಕೆ ಇದೆಯೇ?