ನಿಮ್ಮ ಸ್ವಂತ ಕೈಗಳಿಂದ ಸ್ವವಿನಾಶದೆಡೆಗೆ ಹೋಗದಿರಿ…
ಕುರಾನ್ 2:195
ಸಿಗರೇಟು ಹೊಲಸು. ಇಲ್ಲಿದೆ ಪುರಾವೆ!
ಯಾರಾದರೂ ಶೌಚಾಲಯದಲ್ಲಿ ತಮ್ಮ ನೆಚ್ಚಿನ ಆಹಾರವನ್ನು ತಿನ್ನಲು ಅಥವಾ ತಮ್ಮ ನೆಚ್ಚಿನ ಪಾನೀಯವನ್ನು ಕುಡಿಯಲು ಇಷ್ಟಪಡುತ್ತಾರೆಯೇ? ನೀರಾದರೂ ಕುಡಿಯುವರೇ?
ಆಹಾರ ಮತ್ತು ಹೊಲಸು ಎಂದೂ ಒಟ್ಟಿಗಿರದ ಕಾರಣ ಯಾವುದೇ ವಿವೇಚನೆಯುಳ್ಳ ವ್ಯಕ್ತಿ ಶೌಚಾಲಯದಲ್ಲಿ ಆಹಾರ ಅಥವಾ ಪಾನೀಯವನ್ನು ಸೇವಿಸುವುದಿಲ್ಲ.
ಜನರು ಶೌಚಾಲಯದಲ್ಲಿ ಸಿಗರೇಟ್ ಸೇದುವುದನ್ನು ನಾವು ನೋಡುತ್ತೇವೆಯೇ? ಖಂಡಿತ ಹೌದು! ಅದು ನಿಮಗೆ ಏನು ಹೇಳುತ್ತದೆ? ಹೊಲಸು ಇರುವ ಜಾಗದಲ್ಲಿ ಹೊಲಸನ್ನು ಮಾತ್ರ ಸೇವಿಸುವುವರೆಂಬುದೇ, ಸಿಗರೇಟ್ ಹೊಲಸು ಎಂಬುದಕ್ಕೆ ಸಾಕ್ಷಿ.
ನೀವು ಧೂಮಪಾನ ಮಾಡಿದಾಗ ನಿಮ್ಮ ಶ್ವಾಸಕೋಶಕ್ಕೆ ಏನಾಗುತ್ತದೆ ಎಂಬುದನ್ನು ಕಂಡುಹಿಡಿಯಿರಿ
ಧೂಮಪಾನಿಗಳು ತಮ್ಮ ಮತ್ತು ಇತರ ಸಾವಿಗೆ ಕಾರಣಕರ್ತರು
WHO (ವಿಶ್ವ ಆರೋಗ್ಯ ಸಂಸ್ಥೆ) ಅಂದಾಜಿನ ಪ್ರಕಾರ ಧೂಮಪಾನವು ಪ್ರತಿ ವರ್ಷ 80 ಲಕ್ಷಕ್ಕೂ ಹೆಚ್ಚು ಜನರನ್ನು ಕೊಲ್ಲುತ್ತದೆ. ಆ ಸಾವುಗಳಲ್ಲಿ 70 ಲಕ್ಷಕ್ಕಿಂತ ಹೆಚ್ಚು ನೇರ ತಂಬಾಕು ಸೇವನೆಯ ಪರಿಣಾಮವಾಗಿದೆ ಹಾಗೂ ಸುಮಾರು 12 ಲಕ್ಷದಷ್ಟು ಪರೋಕ್ಷ ಧೂಮಪಾನಕ್ಕೆ ತುತ್ತಾದ, ಧೂಮಪಾನ ಮಾಡದವರಾಗಿದ್ದಾರೆ.
https://www.who.int/news-room/fact-sheets/detail/tobacco
ಧೂಮಪಾನಿಗಳು ಭೂಮಿಯನ್ನೂ ಕೊಲ್ಲುತ್ತಿದ್ದಾರೆ
ನೀವೇಕೆ ಧೂಮಪಾನವನ್ನು ಮುಂದುವರಿಸಬೇಕು? ಇಂದೇ ಧೂಮಪಾನವನ್ನು ತ್ಯಜಿಸಲು ಸಂಕಲ್ಪ ಮಾಡಿ ಮತ್ತು ಅದಕ್ಕಾಗಿ ಶ್ರಮ ವಹಿಸಿ. ಇಚ್ಛೆ ಇರುವಲ್ಲಿ, ದೇವರ ಸಹಾಯದೊಂದಿಗೆ, ಹಲವಾರು ಮಾರ್ಗಗಳಿವೆ!