ಹಲವರಲ್ಲಿ ಇಸ್ಲಾಂ ಎಂಬುದು ಅರಬ್ ಧರ್ಮ ಎಂಬ ತಪ್ಪು ಕಲ್ಪನೆ ಮನೆ ಮಾಡಿದೆ. ಪ್ರವಾದಿ ಮುಹಮ್ಮದ್ ಅರೇಬಿಯಾದಲ್ಲಿ ಜನಿಸಿದರು ಎಂಬುದು ನಿಜ, ಆದರೆ ಅದರಿಂದಾಗಿ ಇಸ್ಲಾಮಿನ ಸಿದ್ಧಾಂತ “ಅರಬಿ” ಆಗುವುದಿಲ್ಲ.
ಹಿಂದೂ ಧರ್ಮ ಭಾರತೀಯ ಸಿದ್ಧಾಂತವೇ?
ವೇದಗಳು ಮತ್ತು ಹಿಂದೂ ತತ್ವಗಳು ಭಾರತದಲ್ಲಿ ಜನಿಸಿವೆ ಎಂದು ನಮಗೆಲ್ಲರಿಗೂ ತಿಳಿದಿದೆ. ನಾವು ಈಗ “ಹಿಂದೂಯಿಸಂ” ಅನ್ನು ಭಾರತೀಯ ಸಿದ್ಧಾಂತವೆಂದು ಪರಿಗಣಿಸಬೇಕೆ ಮತ್ತು ಆದ್ದರಿಂದ ಭಾರತಕ್ಕೆ ಮಾತ್ರ ಸೀಮಿತಗೊಳಿಸಬೇಕೇ? ಸ್ವಾಮಿ ವಿವೇಕಾನಂದ ಮತ್ತು ಸ್ವಾಮಿ ಪ್ರಭುಪಾದರು ಭಾರತದ ಹೊರಗೆ ಹಿಂದೂ ಧರ್ಮವನ್ನು ಬೋಧಿಸಿದ್ದಾರೆ ಎಂಬ ಅಂಶವು ಅವರು ಹಿಂದೂ ಧರ್ಮವನ್ನು ಕೇವಲ “ಭಾರತೀಯ”ವೆಂದು ಎಂದಿಗೂ ಪರಿಗಣಿಸಲಿಲ್ಲ ಎಂಬುದನ್ನು ತೋರಿಸುತ್ತದೆ. ಹಿಂದೂ ಧರ್ಮವು ಭಾರತದಲ್ಲಿ ಜನಿಸಿದ ಕಾರಣಕ್ಕೆ “ಭಾರತೀಯ” ಆಗದಿದ್ದರೆ, ಇಸ್ಲಾಂ ಮಾತ್ರ ಏಕೆ “ಅರಬಿ” ಆಗಬೇಕು?

ಬೌದ್ಧಧರ್ಮ ಭಾರತೀಯವೇ?
ಬುದ್ಧನು ಭಾರತದಲ್ಲಿ ಜನಿಸಿದನು ಮತ್ತು ಬೌದ್ಧಧರ್ಮವೂ ಕೂಡ ಭಾರತದಲ್ಲಿಯೇ ಜನಿಸಿತು, ಆದರೆ ಪ್ರಪಂಚದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಬೌದ್ಧರಿರುವ ದೇಶ ಚೀನಾ. ಕಾಂಬೋಡಿಯಾ, ಥೈಲ್ಯಾಂಡ್, ಶ್ರೀಲಂಕಾ, ಭೂತಾನ್, ಬರ್ಮಾ, ದಕ್ಷಿಣ ಕೊರಿಯಾ, ಜಪಾನ್ ಮತ್ತು ಸಿಂಗಾಪುರದಂತಹ ಅನೇಕ ದೇಶಗಳು ಬೌದ್ಧ ದೇಶಗಳಾಗಿವೆ. ಅವರು ಬೌದ್ಧ ಧರ್ಮವನ್ನು ಭಾರತೀಯ ಸಿದ್ಧಾಂತವೆಂದೇ ನೋಡಿದರೆ, ಅವರು ಬೌದ್ಧ ಧರ್ಮವನ್ನು ಆಚರಿಸಬಹುದೇ?
ಕಮ್ಯುನಿಸಂ ಯಾರ ಸ್ವತ್ತು?
ಕಾರ್ಲ್ ಮಾರ್ಕ್ಸ್ ಪ್ರತಿಪಾದಿಸಿದ ಕಮ್ಯುನಿಸಂ ರಷ್ಯಾದಲ್ಲಿ ಜನಿಸಿತು. ನಾವು ಕಮ್ಯುನಿಸಂ ಅನ್ನು ರಷ್ಯಾದ ಸಿದ್ಧಾಂತ ಎಂದು ಕರೆಯುತ್ತೇವೆಯೇ?
ಮುಸ್ಲಿಮರ ಜನಸಂಖ್ಯೆ
ಮುಸ್ಲಿಂ ಜನಸಂಖ್ಯೆಯ 20% ಮಾತ್ರ ಅರಬ್ ಎಂದು ನಿಮಗೆ ತಿಳಿದಿದೆಯೇ? 80% ಮುಸ್ಲಿಮರು ಅರಬೇತರರು. ಈ ಅಂಕಿ ಅಂಶವು ನಿಮಗೆ ತಿಳಿಸುವುದಾದರೂ ಏನು!

ಗಮನಿಸಿ: ಇಸ್ಲಾಂ ಧರ್ಮವನ್ನು ಪ್ರವಾದಿ ಮುಹಮ್ಮದ್ ಪ್ರಾರಂಭಿಸಲಿಲ್ಲ. “ಇಸ್ಲಾಂ” ಎನ್ನುವುದು “ದೇವರಿಗೆ ಸಂಪೂರ್ಣ ಶರಣಾಗತಿ ಮತ್ತು ವಿಧೇಯತೆಯನ್ನು” ಒಳಗೊಂಡಿರುವ ಜೀವನ ವಿಧಾನವಾಗಿದೆ. ಮೊದಲ ಮಾನವನಾದ ಆಡಮ್‌ನಿಂದ ಹಿಡಿದು ದೇವರ ಎಲ್ಲಾ ಪ್ರವಾದಿಗಳು ಇದೇ ಜೀವನ ವಿಧಾನವನ್ನು ಕಲಿಸಿದ್ದಾರೆ ಎಂದು ನಾವು ನಂಬಿದ್ದೇವೆ. ಪ್ರವಾದಿಗಳ ಸುದೀರ್ಘ ಸಾಲಿನಲ್ಲಿ ಕೊನೆಯ ಪ್ರವಾದಿಯೇ ಪ್ರವಾದಿ ಮುಹಮ್ಮದ್.
ಸಿದ್ಧಾಂತದ ಸತ್ಯ ಮತ್ತು ತಾರ್ಕಿಕತೆಯನ್ನು ನೋಡಿ
ಪ್ರತಿಯೊಂದು ಸಿದ್ಧಾಂತವು ಯಾವುದೋ ಒಂದು ಜಾಗದಿಂದ ಆರಂಭವಾಗಲೇ ಬೇಕು. ಯಾವುದೇ ಸಿದ್ಧಾಂತವನ್ನು ಅದು ಹುಟ್ಟಿದ ಸ್ಥಳಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಸಿದ್ಧಾಂತದ ಹಿಂದಿನ ಸತ್ಯ ಮತ್ತು ತಾರ್ಕಿಕತೆಯನ್ನು ನಾವು ನೋಡಬೇಕೇ ಹೊರತು ಅದು ಎಲ್ಲಿಂದ ಪ್ರಾರಂಭವಾಯಿತು ಎಂದಲ್ಲ.
ಇಸ್ಲಾಮ್ ಬಗೆಗೆ ಹೆಚ್ಚು ತಿಳಿಯಲು, ಇಲ್ಲಿ ಮತ್ತು ಇಲ್ಲಿ ನೋಡಿ.