More

  Choose Your Language

  ಮುಸ್ಲಿಮೇತರರಿಗೆ ಹಲಾಲ್ ಮಾಂಸದಿಂದ ಸಮಸ್ಯೆಯಾಗಬೇಕೇ?

  ಹಲಾಲ್ ಮಾಂಸವನ್ನು ಯಾರ ಮೇಲೂ ಬಲವಂತವಾಗಿ ಹೇರಲಾಗಿಲ್ಲ. ಮುಸ್ಲಿಮೇತರರು ಯಾವಾಗಲೂ ಝಟ್ಕಾ ಮಾಂಸವನ್ನು ಆಯ್ದುಕೊಳ್ಳ ಬಹುದಾಗಿದೆ. ವಾಸ್ತವವಾಗಿ, ಉತ್ತರ ಭಾರತದಲ್ಲಿ, ವಿಶೇಷವಾಗಿ ಪಂಜಾಬ್‌ನಲ್ಲಿ ಅನೇಕರು ಝಟ್ಕಾ ಮಾಂಸವನ್ನೇ ಆಯದುಕೊಂಡಿದ್ದಾರೆ. ಯಾವುದೇ ಕಾನೂನು ಅಥವಾ ನಿಯಮವಾಗಲಿ ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳನ್ನು ಹಲಾಲ್ ಮಾಂಸವನ್ನು ನೀಡಲು ಒತ್ತಾಯಿಸಿಲ್ಲ.

  ನಾವು ಈ ಪ್ರಶ್ನೆಯನ್ನು ಉತ್ತರಿಸುವ ಮೊದಲು, ಹಲಾಲ್ ಮಾಂಸ ಮತ್ತು ಝಟ್ಕಾ ಮಾಂಸ ಎಂದರೇನು ಎಂದು ಅರ್ಥಮಾಡಿಕೊಳ್ಳಬೇಕು.

  ಹಲಾಲ್ ಎಂಬುದು ಅರಬಿ ಪದವಾಗಿದ್ದು, ಇದರರ್ಥ “ಅನುಮತಿಸಲಾದದ್ದು”. ಒಂದು ನಿರ್ದಿಷ್ಟ ವಿಧಾನದಲ್ಲಿ ಮೇಕೆ ಅಥವಾ ಕುರಿ ಅಥವಾ ಕೋಳಿಯನ್ನು ಹತ್ಯೆ ಮಾಡಿದಾಗ ಅದನ್ನು “ಹಲಾಲ್ ಅಥವಾ ಅನುಮತಿಸಲಾದ” ಮಾಂಸ ಎಂದು ಕರೆಯಲಾಗುತ್ತದೆ.

  ಹಲಾಲ್ ಮಾಂಸ ಮತ್ತು ಝಟ್ಕಾ ಮಾಂಸ – ವ್ಯತ್ಯಾಸವೇನು?

  ಹಲಾಲ್ ಪ್ರಾಣಿ ವಧೆ

  ವಧೆ ಮಾಡುವ “ಹಲಾಲ್” ವಿಧಾನದಲ್ಲಿ, ಮೇಕೆ ಅಥವಾ ಕುರಿ ಅಥವಾ ಕೋಳಿಯ ಕಂಠನಾಳ, ಶ್ವಾಸ ನಾಳ ಮತ್ತು ಶೀರ್ಷಧಮನಿ ಅಪಧಮನಿಯನ್ನು (carotid artery – ತಲೆಗೆ ರಕ್ತವನ್ನು ಒಯ್ಯುವ ಧಮನಿಗಳೊಲ್ಲೊಂದು) ಕತ್ತರಿಸಿ ಪ್ರಾಣಿಯ ಎಲ್ಲಾ ರಕ್ತವನ್ನು ಸಂಪೂರ್ಣವಾಗಿ ಹೊರಹಾಕಲಾಗುತ್ತದೆ.

  ಝಟ್ಕಾ ವಧೆ

  ಝಟ್ಕಾ ಎಂದರೆ “ತಕ್ಷಣ”. ವಧೆ ಮಾಡುವ “ಝಟ್ಕಾ” ವಿಧಾನದಲ್ಲಿ, ಮೇಕೆ ಅಥವಾ ಕುರಿ ಅಥವಾ ಕೋಳಿಯನ್ನು ಒಂದೇ ಕಡಿತ ಅಥವಾ ವಿದ್ಯುತ್ ಆಘಾತದಿಂದ ತಕ್ಷಣವೇ ಕೊಲ್ಲಲಾಗುತ್ತದೆ.

  ಯಾವುದು ಉತ್ತಮ – ಹಲಾಲ್ ಮಾಂಸ ಅಥವಾ ಝಟ್ಕಾ ಮಾಂಸ?

  ಈ ರೀತಿಯ ಪ್ರಶ್ನೆಯನ್ನು ವಸ್ತುನಿಷ್ಠವಾಗಿ ನೋಡಬೇಕೇ ಹೊರತು ಭಾವನಾತ್ಮಕವಾಗಲ್ಲ. ತಜ್ಞರು ಏನು ಹೇಳಿದ್ದಾರೆಂದು ನೋಡೋಣ ಬನ್ನಿ.

  ಮೈಸೂರಿನಲ್ಲಿರುವ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯ (CFTRI) ಮಾಂಸ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ ವಿ ಕೆ ಮೋದಿ ಹೇಳುತ್ತಾರೆ:

  ಹತ್ಯೆ ಮಾಡಿದ ಪ್ರಾಣಿಯಿಂದ ಹೆಚ್ಚಿನ ರಕ್ತವನ್ನು ಹೊರಹಾಕುವಲ್ಲಿ ಹಲಾಲ್ ವಿಧಾನವು ಪರಿಣಾಮಕಾರಿಯಾಗಿದೆ, ಅದರ (ಪ್ರಾಣಿಯ) ಮಾಂಸವು ಮೃದುವಾಗಿರಬೇಕಾದರೆ ಇದು ಮುಖ್ಯವಾಗಿರುತ್ತದೆ. ” ಝಟ್ಕಾದಲ್ಲಿ, ರಕ್ತ ಹೆಪ್ಪುಗಟ್ಟುವಿಕೆಯ ಸಾಧ್ಯತೆಗಳು ಹೆಚ್ಚು. ಮಾಂಸವನ್ನು ಕೆಲವು ದಿನಗಳವರೆಗೆ ಬೇಯಿಸದೆ ಇಟ್ಟರೆ ಇದು ಹಾಳಾಗಬಹುದು. ಅಷ್ಟಲ್ಲದೆ ಇದು (ಝಟ್ಕಾ) ಮಾಂಸವನ್ನು ಅಗಿಯಲು ಕಠಿಣವಾಗುವಂತೆಯೂ ಮಾಡಬಹುದು.

  ಹಲಾಲ್ ಅನ್ನು ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ ಏಕೆಂದರೆ ವಧೆಯ ನಂತರ, ಪ್ರಾಣಿಗಳ ಅಪಧಮನಿಗಳಿಂದ (arteries) ರಕ್ತವು ಬರಿದಾಗುತ್ತದೆ, ಈ ಮೂಲಕ ಹೆಚ್ಚಿನ ವಿಷಕಾರಿ ವಸ್ತುಗಳನ್ನು ಹೊರಹಾಕಲಾಗುತ್ತದೆ – ಏಕೆಂದರೆ ವಧೆಯ ನಂತರ ಹೃದಯವು ಕೆಲವು ಸೆಕೆಂಡುಗಳ ಕಾಲ ಪಂಪ್ ಮಾಡುವುದನ್ನು ಮುಂದುವರೆಸುತ್ತದೆ. ಝಟ್ಕಾದಲ್ಲಿ, ಎಲ್ಲಾ ರಕ್ತವು ಬರಿದಾಗುವುದಿಲ್ಲ, ಮಾಂಸವು ಕಠೋರ ಮತ್ತು ಒಣದಾದಂತಾಗುತ್ತದೆ.

  ಹಲಾಲ್ ವಧೆ ಕ್ರೂರವೇ?

  ಕಂಠನಾಳ, ಶ್ವಾಸನಾಳ ಮತ್ತು ಶೀರ್ಷಧಮನಿ ಅಪಧಮನಿಯನ್ನು ಕತ್ತರಿಸಿದಾಗ, ಮೆದುಳಿನ ನರಕ್ಕೆ ರಕ್ತ ಪೂರೈಕೆಯು ಸ್ಥಗಿತಗೊಳ್ಳುತ್ತದೆ. ಈ ಕಾರಣದಿಂದಾಗಿ, ಪ್ರಾಣಿಯು ಯಾವುದೇ ನೋವನ್ನು ಅನುಭವಿಸುವುದಿಲ್ಲ. ಪ್ರಾಣಿಯು ಹೋರಾಡುತ್ತಾ ಒದೆಯುವಂತೆ ಕಾಣಿಸಬಹುದು ಆದರೆ ಅದು ರಕ್ತ ಕಡಿಮೆಯಿರುವ ಸ್ನಾಯುಗಳ ಸಂಕೋಚನ ಮತ್ತು ವಿಶ್ರಾಂತಿಯಿಂದಾಗಿಯೇ (contraction and relaxation) ಹೊರತು ನೋವಿನಿಂದಲ್ಲ.

  ವಿವಾದವಾಗಬೇಕೇ?

  ಮುಸ್ಲಿಮೇತರರು ಈ ಮೇಲೆ ಉಲ್ಲೇಖಿಸಿದ ತಜ್ಞರ ಅಭಿಪ್ರಾಯವನ್ನು ಒಪ್ಪದಿದ್ದರೂ, ಅವರು ಯಾವಾಗಲೂ ಝಟ್ಕಾ ಮಾಂಸವನ್ನು ಆಯ್ದುಕೊಳ್ಳ ಬಹುದಾಗಿದೆ. ವಾಸ್ತವವಾಗಿ, ಉತ್ತರ ಭಾರತದಲ್ಲಿ, ವಿಶೇಷವಾಗಿ ಪಂಜಾಬ್‌ನಲ್ಲಿ ಅನೇಕರು ಝಟ್ಕಾ ಮಾಂಸವನ್ನು ಆರಿಸಿಕೊಳ್ಳುತ್ತಾರೆ. ಹಲಾಲ್ ಮಾಂಸವನ್ನು ಬಡಿಸಲು ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳನ್ನು ಒತ್ತಾಯಿಸುವ ಯಾವುದೇ ಕಾನೂನು ಅಥವಾ ನಿಯಮವಿಲ್ಲ ಎಂಬುದನ್ನು ನಾವು ಗಮನಿಸಬೇಕು. ರೆಸ್ಟೋರೆಂಟ್‌ಗಳು ಯಾವಾಗಲೂ ಝಟ್ಕಾ ಮಾಂಸವನ್ನು ನೀಡಲು ಮುಕ್ತವಾಗಿರುವಾಗ, ಮುಸ್ಲಿಮೇತರರಿಗೆ ಏಕೆ ಸಮಸ್ಯೆಯಾಗಬೇಕು?

  ಹಲಾಲ್ ಮಾಂಸದಿಂದಾಗಿ ಹಿಂದೂಗಳಲ್ಲಿ ನಿರುದ್ಯೋಗ ಉಂತಾಗುತ್ತಿದೆಯೇ?

  ಹಲಾಲ್ ಮಾಂಸವು “ಆರ್ಥಿಕ ಜಿಹಾದ್”ನ ಒಂದು ರೂಪವಾಗಿದೆ ಎಂದು ಕೆಲವರು ಆರೋಪಿಸುತ್ತಾರೆ, ಏಕೆಂದರೆ ಇದು ಹಿಂದೂಗಳು ಮತ್ತು ಇತರ ಮುಸ್ಲಿಮೇತರರಿಗೆ ಕೆಲಸದ ಅವಕಾಶಗಳನ್ನು ನಿರ್ಬಂಧಿಸುತ್ತದೆ. ಇದರಲ್ಲಿ ಸತ್ಯದ ಒಂದೂ ಅಂಶವಿಲ್ಲ. ಮುಸ್ಲಿಮೇತರರು ಮತ್ತು ಮುಸ್ಲಿಮರು ಇಬ್ಬರೂ ಮಾಂಸದ ಅಂಗಡಿಗಳನ್ನು ಹೊಂದಿದ್ದಾರೆ. ಮಾಂಸಾಹಾರಿ ಹಿಂದೂಗಳು (75%) ಮತ್ತು ಇತರ ಮಾಂಸಾಹಾರಿ ಮುಸ್ಲಿಮೇತರರು (5%) ಮುಸ್ಲಿಮರಿಗಿಂತ (15%) ಹೆಚ್ಚು ಸಂಖ್ಯೆಯಲ್ಲಿದ್ದಾರೆ.

  ನಾವು ಈಗಾಗಲೇ ಮೇಲೆ ಹೇಳಿದಂತೆ, ಮಾಂಸಾಹಾರಿ ಹಿಂದೂಗಳು (75%) ಮುಸ್ಲಿಮೇತರ ಮಾಂಸದ ಅಂಗಡಿಗಳಿಂದ ಯಾವಾಗಲೂ ಝಟ್ಕಾ ಮಾಂಸವನ್ನು ಖರೀದಿಸಬಹುದು ಏಕೆಂದರೆ ಯಾರೂ ಹಲಾಲ್ ಮಾಂಸವನ್ನು ಖರೀದಿಸಲು ಒತ್ತಾಯಿಸುವುದಿಲ್ಲ. ಮಾಂಸಾಹಾರಿ ಹಿಂದೂಗಳ (75%) ಗ್ರಾಹಕರ ಸಂಖ್ಯೆ ತುಂಬಾ ದೊಡ್ಡದಾಗಿದೆ ಮತ್ತು ಅವರಿಗೆ ಝಟ್ಕಾ ಮಾಂಸವನ್ನು ಖರೀದಿಸುವ ಆಯ್ಕೆಯೂ ಇದೆ, ಹೀಗಾಗಿ ಇದು ಹಿಂದೂಗಳು ಮತ್ತು ಮುಸ್ಲಿಮೇತರರಿಗೆ ಕೆಲಸದ ಅವಕಾಶದ ಮೇಲೆ ಪರಿಣಾಮ ಬೀರುವುದಿಲ್ಲ.

  ಔಷಧೀಯ ಉತ್ಪನ್ನಗಳು, ವೈಯಕ್ತಿಕ ಆರೈಕೆ ಉತ್ಪನ್ನಗಳು, ಸೌಂದರ್ಯವರ್ಧಕಗಳು ಇತ್ಯಾದಿಗಳಲ್ಲಿಯೂ ಸಹ ಮುಸ್ಲಿಮೇತರ ಗ್ರಾಹಕರ ಸಂಖ್ಯೆ (ಸುಮಾರು 80%) ಕೇವಲ 15% ರಷ್ಟಿರುವ ಮುಸ್ಲಿಮರಿಗಿಂತ ದೊಡ್ಡದಾಗಿದೆ. ನೀವು ಸೌಂದರ್ಯವರ್ಧಕ ಉತ್ಪನ್ನ ಕಂಪನಿಯನ್ನು ನಡೆಸುತ್ತಿದ್ದರೆ, ನೀವು ಯಾರಿಗೆ ಹೆಚ್ಚು ಮಾನ್ಯತೆ ನೀಡುವಿರಿ – 80% ಗ್ರಾಹಕರಿಗೋ ಅಥವಾ 15% ಗ್ರಾಹಕರಿಗೋ? ನಿಸ್ಸಂಶಯವಾಗಿ, ಮುಸ್ಲಿಮೇತರ 80% ಗ್ರಾಹಕರಿಗಲ್ಲವೇ? ಹಾಗಾದರೆ, 15% ಗ್ರಾಹಕ ಮೂಲವು ತನ್ನ “ಹಲಾಲ್” ಸಿದ್ಧಾಂತವನ್ನು ಬಹುಪಾಲು (80%) ಗ್ರಾಹಕರ ಅವಶ್ಯಕತೆ ಪೂರೈಸಲು ಬಯಸುವ ಕಂಪನಿಗಳ ಮೇಲೆ ಹೇಗೆ ಜಾರಿಗೊಳಿಸಬಹುದು?

  “ಹಲಾಲ್ ಮಾಂಸ” ದ ಮೂಲಕ “ಆರ್ಥಿಕ ಜಿಹಾದ್” ಎಂಬ ಈ ಪ್ರಚಾರವು ಸುಳ್ಳು ಎಂದು ನಿಮಗೆ ಈಗ ಅತ್ಯಂತ ಸ್ಪಷ್ಟವಾಗಿರಬೇಕು ಎಂದು ಭಾವಿಸುತ್ತೇವೆ.


  ನಿಮಗೆ ಇಷ್ಟವಾಗ ಬಹುದಾದಂತಹ ಲೇಖನಗಳು

  WHAT OTHERS ARE READING

  Most Popular